Munirathna Naidu: ಮುನಿರತ್ನ ನಾಯ್ಡು ಬೆಳಗಾವಿ ಹಿಂಡಲಗಾ ಜೈ** ಶಿಫ್ಟ್? ಲಕ್ಷ್ಮೀ ಹೆಬ್ಬಾಳ್ಕರ್ ಎಂಟ್ರಿ ಆಗಿದ್ದು ಏಕೆ?
ಮುನಿರತ್ನ ನಾಯ್ಡುಗೆ, ಒಂದಾದ ನಂತರ ಒಂದು ಸಂಕಷ್ಟ ಎದುರಾಗುತ್ತಿದೆ. ಮಹಿಳೆಯರ ಬಗ್ಗೆ & ದಲಿತರ ಬಗ್ಗೆ ಬಾಯಿಗೆ ಬಂದ ರೀತಿ ಅಶ್ಲೀಲವಾಗಿ ನಿಂದನೆ ಮಾಡಿರುವ ಆರೋಪ ಇದೀಗ, ಮುನಿರತ್ನಂ ನಾಯ್ಡುಗೆ ಸಂಕಷ್ಟದ ಸುಳಿ ಸೃಷ್ಟಿ ಮಾಡಿದೆ. ಪರಿಸ್ಥಿತಿ ಹೀಗಿದ್ದಾಗಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ಕೇಸ್ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಾಗಾದ್ರೆ ಆರ್‌ಆರ್ ನಗರ ಶಾಸಕ ಮುನಿರತ್ನಂ ನಾಯ್ಡುಗೆ ಬೆಳಗಾವಿ ಜಿಲ್ಲೆಯ ಹಿಂಡಲಗಾ ಜೈಲು ಊಟ ಫಿಕ್ಸ್ ಆಯ್ತಾ? ಬನ್ನಿ ತಿಳಿಯೋಣ.
ಮುನಿರತ್ನಂ ನಾಯ್ಡುಗೆ ತನ್ನದೇ ಆಡಿಯೋ ಮುಳುವಾಗಿ ಪರಿಣಮಿಸಿದ್ದು, ಪೊಲೀಸ್ ಪಡೆ ಕೇಳುತ್ತಿರುವ ಪ್ರಶ್ನೆಗೆ ನಲುಗಿ ಹೋಗಿದ್ದಾರೆ ಮುನಿರತ್ನಂ ನಾಯ್ಡು. ಇದು ಒಂದು ಕಡೆಯಾದರೆ ಇನ್ನೊಂದು ಕಡೆ ಒಕ್ಕಲಿಗರು & ದಲಿತರು ಹಾಗೂ ಕನ್ನಡ ನಾಡಿನ ಮಹಿಳೆಯರ ಕುರಿತಾಗಿ ಮಾತನಾಡಿದ್ದಾರೆ ಎಂಬ ಕಾರಣಕ್ಕೆ, ಮುನಿರತ್ನಂ ನಾಯ್ಡುಗೆ ಪಾಠ ಕಲಿಸಲು ಸಿದ್ಧರಾಮಯ್ಯ ಸರ್ಕಾರದ ಪ್ರಭಾವಿ ಸಚಿವರೇ ಅಖಾಡಕ್ಕೆ ಇಳಿದಿದ್ದಾರೆ. ಹೀಗಿದ್ದಾಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಅಖಾಡ ಪ್ರವೇಶ ಮಾಡಿದ್ದು, ಈ ಮೂಲಕ ಮುನಿರತ್ನಂ ನಾಯ್ಡುಗೆ ಬೆಳಗಾವಿಯ ಹಿಂಡಲಗಾ ಜೈಲು....

ಬೆಳಗಾವಿಯ ಹಿಂಡಲಗಾ ಜೈಲು ಗ್ಯಾರಂಟಿ?
ದಲಿತರ ಬಗ್ಗೆ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನಂ ನಾಯ್ಡು ಅಶ್ಲೀಲ ಪದದ ಬಳಕೆ ಮಾಡಿದ್ದಾರೆ ಎಂದು ಆಡಿಯೋ ಒಂದನ್ನು ಸಾಕ್ಷ್ಯವಾಗಿ ನೀಡಲಾಗಿದೆ. ಮುನಿರತ್ನಂ ನಾಯ್ಡು ವಿರುದ್ಧ ಕೇಳಿ ಬಂದಿರುವ ಈ ಆಡಿಯೋ ಪರೀಕ್ಷೆಗೆ ಕಳುಹಿಸಲಾಗಿದೆ. ಎಫ್‌ಎಸ್‌ಎಲ್ ತನಿಖೆ ಬಳಿಕ ಆಡಿಯೋ ಯಾರದ್ದು? ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಆ ನಂತರ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನಂ ನಾಯ್ಡು ಭವಿಷ್ಯ ನಿರ್ಧಾರ ಆಗಲಿದೆ. ಈ ನಡುವೆ ಖುದ್ದಾಗಿ, ಸಂತ್ರಸ್ತ ಚಲುವರಾಜು ಮನೆಗೆ ಭೇಟಿ ನೀಡಿದ್ದ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ರಾಜ್ಯ ಸರ್ಕಾರದ ಕಡೆಯಿಂದ ರಕ್ಷಣೆ ನೀಡುವ ಭರವಸೆ ಕೊಟ್ಟಿದ್ದಾರೆ.
ಮಹಿಳೆಯರನ್ನು ಮುನಿರತ್ನಂ ನಾಯ್ಡು..?
ಒಟ್ನಲ್ಲಿ ಹೊಸಲು ಬಾಯಿ ಎಲ್ಲವನ್ನೂ ಹಾಳು ಮಾಡಿ ಹಾಕಿದೆ. ಮುನಿರತ್ನಂ ನಾಯ್ಡುಗೆ ದಲಿತರು & ಒಕ್ಕಲಿಗರ ಬಗ್ಗೆ ಇಷ್ಟೊಂದು ದ್ವೇಷ ಇದೆಯಾ? ಎಂದು ಕಾಂಗ್ರೆಸ್ ನಾಯಕರು ಪ್ರಶ್ನೆ ಕೇಳುತ್ತಿದ್ದಾರೆ. ಅಲ್ಲದೆ ಕರ್ನಾಟಕದ ಮಹಿಳೆಯರನ್ನು ಮುನಿರತ್ನಂ ನಾಯ್ಡು ಕೆಟ್ಟ, ಕೆಟ್ಟದಾಗಿ ಬೈದು ಕೆಟ್ಟದಾಗಿ ನಡೆಸಿಕೊಳ್ಳುತ್ತಾರಾ? ಎಂಬ ಪ್ರಶ್ನೆಯನ್ನ ಕೂಡ ಕೇಳಲಾಗ್ತಿದೆ. ಕ್ಷಣ ಕ್ಷಣಕ್ಕೂ ಈ ವಿಚಾರ ದೊಡ್ಡ ತಿರುವು ಪಡೆಯುತ್ತಿದ್ದು, ಮುಂದೆ ಶಾಸಕ ಮುನಿರತ್ನಂ ನಾಯ್ಡುಗೆ ಜೈಲು ಊಟ ಗ್ಯಾರಂಟಿ ಆಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications