ಮುನಿರತ್ನ ನಾಯ್ಡು ಗುತ್ತಿಗೆದಾರರಿಗೆ ಕಾಟ ಕೊಟ್ಟು, ಹಲ್ಲೆ ಮಾಡುತ್ತಿದ್ದ: ಹಿಂಗೆ ಆರೋಪ ಮಾಡಿದ್ದು ಯಾರು?
ಮುನಿರತ್ನ ನಾಯ್ಡು ಪೊಲೀಸರ ಕಸ್ಟಡಿಯಲ್ಲಿ ನರಳುವ ಪರಿಸ್ಥಿತಿ ಬಂದಿದೆ. ಬಿಜೆಪಿ ಶಾಸಕ ಹಾಗೂ ಕಳೆದ ಸರ್ಕಾರದಲ್ಲಿ ಸಚಿವರಾಗಿದ್ದ ಮುನಿರತ್ನ ನಾಯ್ಡುಗೆ ಇಂತಹ ಸ್ಥಿತಿ ಬಂದಿದ್ದು ಅವರ ಬೆಂಬಲಿಗರಿಗೆ ಭಾರಿ ಬೇಸರ ತರಿಸಿದೆ. ಇದೇ ಸಮಯದಲ್ಲಿ ಮುನಿರತ್ನ ನಾಯ್ಡು ಬಗ್ಗೆ ಮಾಜಿ ಕಾರ್ಪೊರೇಟರ್ & ಬಿಬಿಎಂಪಿ ಕಸದ ಗುತ್ತಿಗೆದಾರ ಗಂಭೀರ ಆರೋಪ ಮಾಡಿದ್ದಾರೆ. ಹಾಗಾದ್ರೆ ಮುನಿರತ್ನ ನಾಯ್ಡು ಗುತ್ತಿಗೆದಾರರಿಗೆ ಕಾಟ ಕೊಟ್ಟು, ಹಲ್ಲೆ ಮಾಡುತ್ತಿದ್ದರಾ? ಈ ಆರೋಪ ಮಾಡಿದ್ದು ಯಾರು?
ಮುನಿರತ್ನ ನಾಯ್ಡು ತಾನೇ ಮಾಡಿಕೊಂಡ ಎಡವಟ್ಟಿನ ಪರಿಣಾಮ ಈಗ ಪರದಾಡುವಂತೆ ಆಗಿದ್ದು, ದಲಿತರ ಬಗ್ಗೆ & ಹೆಣ್ಣು ಮಕ್ಕಳ ಬಗ್ಗೆ ಕೆಟ್ಟ ಕೆಟ್ಟದಾಗಿ ಮಾತನಾಡಿದ್ದಾರೆ ಎಂಬ ಆರೋಪದ ಕಾರಣ ಕಂಬಿ ಎಣಿಸುವ ಪರಿಸ್ಥಿತಿ ಬಂದಿದೆ. ಇದೇ ಸಮಯದಲ್ಲಿ, ಮುನಿರತ್ನ ನಾಯ್ಡು ಬಿಬಿಎಂಪಿ ಗುತ್ತಿಗೆದಾರರ ಬಳಿ ಲಂಚಕ್ಕೆ ಬೇಡಿಕೆ ಇಟ್ಟು ಯಾವ ರೀತಿ ಟಾರ್ಚರ್ ಕೊಡುತ್ತಿದ್ದರು? ಎಂಬುದನ್ನ ಸ್ವತಃ ಮುನಿರತ್ನ ನಾಯ್ಡು ಜೊತೆ ಇದ್ದ ಮಾಜಿ ಕಾರ್ಪೊರೇಟರ್ ಬಿಡಿಸಿಟ್ಟಿದ್ದಾರೆ. ಹಾಗಾದರೆ ಕೆಲವೇ ವರ್ಷದಲ್ಲಿ ಸಾವಿರಾರು ಕೋಟಿ ರೂಪಾಯಿ ಸಂಪಾದನೆ ಮಾಡಿರುವ ಮುನಿರತ್ನ ನಾಯ್ಡು, ಗುತ್ತಿಗೆದಾರರಿಗೆ ಟಾರ್ಚರ್ ಕೊಡುತ್ತಿದ್ರಾ? ಮುಂದೆ ಓದಿ.

ಮುನಿರತ್ನ ನಾಯ್ಡು ಭ್ರಷ್ಟ ರಾಜಕಾರಣಿ?
ಆಂಧ್ರ ಮೂಲದಿಂದ ಬಂದು ಬೆಂಗಳೂರಿನ ರಾಜರಾಜೇಶ್ವರಿ ನಗರ ಮಾತ್ರವಲ್ಲ, ರಾಜಧಾನಿ ಬೆಂಗಳೂರಿನ ಬಹುತೇಕ ಎಲ್ಲಾ ಪ್ರದೇಶದಲ್ಲಿ ಆಸ್ತಿ ಮಾಡಿರುವ ಮುನಿರತ್ನ ನಾಯ್ಡು ಬಗ್ಗೆ ಇದೀಗ ಬೆಂಬಲಿಗರೇ ತಿರುಗಿ ಬಿದ್ದಿದ್ದಾರೆ. ಅಷ್ಟಕ್ಕೂ ಆಂಧ್ರ ಮೂಲದ ಮುನಿರತ್ನ ನಾಯ್ಡು ಕರ್ನಾಟಕದಲ್ಲಿ ಗುತ್ತಿಗೆದಾರರಿಗೆ ಟಾರ್ಚರ್ ಕೊಡುತ್ತಿದ್ದರು. ಅಲ್ಲದೆ, ಹಿಂದುಳಿದ ಜಾತಿಗಳ ಗುತ್ತಿಗೆದಾರರನ್ನ ಕರೆಸಿಕೊಂಡು ಹಲ್ಲೆ ಮಾಡುತ್ತಿದ್ದರು ಎಂದು ಮಾಜಿ ಕಾರ್ಪೊರೇಟರ್ ವೇಲು ನಾಯ್ಕರ್ ಆರೋಪಿಸಿದ್ದಾರೆ.
ಮುನಿರತ್ನ ನಾಯ್ಡು ಕೇಳಿದ ದುಡ್ಡು ಕೊಡುವುದಕ್ಕೆ ಒಂದು ನಿಮಿಷ ತಡ ಮಾಡಿ ಹೋದರೂ ಟಾರ್ಚರ್ ಕೊಡುತ್ತಿದ್ದರು ಎಂದು, ಬಿಬಿಎಂಪಿ ಮಾಜಿ ಸದಸ್ಯ ಅಂದ್ರೆ ಮಾಜಿ ಕಾರ್ಪೊರೇಟರ್ & ಸ್ವತಃ ಇದೇ ಮುನಿರತ್ನ ನಾಯ್ಡು ಜೊತೆಗಾರನಾಗಿದ್ದ, ವೇಲು ನಾಯ್ಕರ್ ಇಂತಹ ಗಂಭೀರ ಆರೋಪ ಮಾಡಿದ್ದಾರೆ. ಈ ಮೂಲಕ, ಮುನಿರತ್ನ ನಾಯ್ಡು ವಿರುದ್ಧ ಇದೀಗ ಕಾನೂನಿನ ಕುಣಿಕೆ ಮತ್ತಷ್ಟು ಬಿಗಿ ಆಗುತ್ತಿದೆ. ಅಲ್ಲದೆ ದಲಿತರ ಬಗ್ಗೆ ಜಾತಿ ನಿಂದನೆ ಮಾಡಿದ ಆರೋಪ ಇದೀಗ ಮುನಿರತ್ನ ನಾಯ್ಡುಗೆ ಸೆಂಟ್ರಲ್ ಜೈಲಿನ ಕೋಣೆಗಳನ್ನ ತೋರಿಸುವ ಮುನ್ಸೂಚನೆಯ ನೀಡುತ್ತಿದೆ.
ದಲಿತರ ಬಗ್ಗೆ ನಾಯ್ಡು ಅಶ್ಲೀಲವಾಗಿ ನಿಂದನೆ?
ಮುನಿರತ್ನ ನಾಯ್ಡು ಸುತ್ತಮುತ್ತ ಇದ್ದವರೆಲ್ಲಾ ಅವರ ಜೊತೆಗಾರರೇ ಆಗಿದ್ದರು, ಅಲ್ಲದೆ ಈ ವ್ಯಕ್ತಿ ಜಾತಿ ನಿಂದನೆ ಮಾಡುತ್ತಿದ್ದರು. ದಲಿತರ ಬಗ್ಗೆ ಕೆಟ್ಟ ಕೆಟ್ಟ ಮಾತುಗಳಿಂದ ನಿಂದನೆ, ಬೈಗುಳ ಬಳಸುತ್ತಿದ್ದರು. ಅಲ್ಲದೆ ದಲಿತರ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನೂ ಬಿಬಿಎಂಪಿ ಮಾಜಿ ಸದಸ್ಯ ಅಂದ್ರೆ ಮಾಜಿ ಕಾರ್ಪೊರೇಟರ್ ವೇಲು ನಾಯ್ಕರ್ ಈಗ ಮಾಡಿದ್ದಾರೆ. ಹೀಗಾಗಿ ಆಂಧ್ರ ಮೂಲದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ವಿರುದ್ಧ ಮತ್ತಷ್ಟು ಕೇಸ್ ದಾಖಲು ಆಗಲಿದೆ ಎಂದು ವೇಲು ನಾಯ್ಕರ್ ಆರೋಪಿಸಿದ್ದಾರೆ.
ಜಾತಿ ನಿಂದನೆ ಕೇಸ್ ಸಂಕಷ್ಟ?
ಮುನಿರತ್ನಂ ನಾಯ್ಡು ಹಾಗೂ ಚಲುವರಾಜು ನಡುವೆ ನಡೆದ ಸಂಭಾಷಣೆ ಒಂದರಲ್ಲಿ, ಈ ಪ್ರಕರಣದ ಪ್ರಮುಖ ಆರೋಪಿ ಮುನಿರತ್ನಂ ನಾಯ್ಡು ದಲಿತರ ಬಗ್ಗೆ ಕೆಟ್ಟ ಕೆಟ್ಟ ಪದಗಳನ್ನ ಬಳಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರ ಜೊತೆಗೆ ಒಕ್ಕಲಿಗರ ಮನೆ ಮಹಿಳೆ & ತಾಯಿ ಬಗ್ಗೆ ಕೂಡ ಕೆಟ್ಟದಾಗಿ ಮಾತನಾಡಿದ್ದಾರೆ ಮುನಿರತ್ನಂ ನಾಯ್ಡು, ಎಂಬ ಆರೋಪ ಕೂಡ ಕೇಳಿ ಬಂದಿದೆ. ಕರ್ನಾಟಕದ ಮೂಲೆ ಮೂಲೆಯಲ್ಲೂ ಮುನಿರತ್ನಂ ನಾಯ್ಡು ಬಗ್ಗೆ ಆಕ್ರೋಶ ಮೊಳಗಿ, ಪ್ರತಿಭಟನೆ ಆರಂಭ ಆಗಿವೆ.
ಪರಿಸ್ಥಿತಿ ಹೀಗಿದ್ದಾಗ ಇದೀಗ ಎಫ್‌ಎಸ್‌ಎಲ್ (FSL) ಪರೀಕ್ಷೆ ನಂತರ ಮುನಿರತ್ನಂ ನಾಯ್ಡು ದಲಿತ ಸಮುದಾಯದ ಬಗ್ಗೆ ಜಾತಿ ನಿಂದನೆ ಮಾಡಿರುವುದು ಸತ್ಯ & ಈ ಆಡಿಯೋ ಅಸಲಿ ಎಂಬುದು ಸಾಬೀತು ಆದರೆ ಸಂಕಷ್ಟ ಗ್ಯಾರಂಟಿ. ಹೀಗೆ ಮುನಿರತ್ನಂ ನಾಯ್ಡುಗೆ ಜೈಲು ಶಿಕ್ಷೆ ಆಗುವುದು ಕೂಡ ಗ್ಯಾರಂಟಿ ಎನ್ನಲಾಗಿದೆ. ಮತ್ತೊಂದು ಕಡೆಯಲ್ಲಿ ಮುನಿರತ್ನಂ ನಾಯ್ಡು ಶಾಸಕ ಸ್ಥಾನ ಕೂಡ ತೂಗುಯ್ಯಾಲೆ ಆಗಿದ್ದು, ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡುತ್ತಾರಾ? ಎಂಬ ಪ್ರಶ್ನೆ ಮೂಡಿದೆ.
ಒಕ್ಕಲಿಗ ಸಮುದಾಯ VS ಮುನಿರತ್ನಂ?
ಒಟ್ನಲ್ಲಿ ಶಾಸಕ ಮುನಿರತ್ನಂ ನಾಯ್ಡು ಮೇಲೆ ಒಂದಾದ ನಂತರ ಒಂದು ಸಂಕಷ್ಟ ಇದೀಗ ಎದುರಾಗುತ್ತಿದೆ. ಅದರಲ್ಲೂ ಮುನಿರತ್ನಂ ನಾಯ್ಡು ಅಶ್ಲೀಲವಾಗಿ ಮಾತನಾಡಿದ್ದಾರೆ ಎಂಬ ಆರೋಪ ಇರುವ, ಆಡಿಯೋ ಒಂದು ಸಂಚಲನ ಸೃಷ್ಟಿ ಮಾಡಿದೆ. ಹೀಗಾಗಿ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ? ದಲಿತರನ್ನು ನಿಂದಿಸಿರುವ ಆರೋಪ ಹೊತ್ತಿರುವ ಮುನಿರತ್ನಂ ನಾಯ್ಡು ಜೈಲಿಗೆ ಶಿಫ್ಟ್ ಆಗುತ್ತಾರಾ? ಅನ್ನೋದನ್ನ ಕಾದು ನೋಡಬೇಕಿದೆ. ಮತ್ತೊಂದು ಕಡೆ ಶಾಸಕ ಮುನಿರತ್ನಂ ನಾಯ್ಡು ವಿರುದ್ಧ ಒಕ್ಕಲಿಗ ಸಮುದಾಯ ಕೂಡ ಆಕ್ರೋಶ ಹೊರ ಹಾಕಿದ್ದು, ತೀವ್ರ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದೆ.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಏಪ್ರಿಲ್ 11ರ ದರಪಟ್ಟಿ












Click it and Unblock the Notifications