Munirathna Naidu: ಮುನಿರತ್ನಂ ನಾಯ್ಡು ಮನೆ ಮುಂದೆ ‘ಏಡ್ಸ್’ ರೋಗಿಗಳು ಬಂದರೆ ಏನು ಮಾಡುತ್ತಿದ್ದರು?
ಮುನಿರತ್ನಂ ನಾಯ್ಡು ಹಲವು ಕೇಸ್‌ನಲ್ಲಿ ಲಾಕ್ ಆಗಿ ವಿಲವಿಲ ಒದ್ದಾಡುತ್ತಿದ್ದಾರೆ. ಹೀಗಾಗಿ ಜೈಲಿನಿಂದ ಹೊರಗೆ ಬರಲು ವೆರೈಟಿ ವೆರೈಟಿ ಐಡಿಯಾ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿ ಇದ್ದಾಗಲೇ, ಆರ್‌ಆರ್ ನಗರದ ಶಾಸಕರಾದ ಮುನಿರತ್ನಂ ನಾಯ್ಡು ವಿರುದ್ಧ 'ಏಡ್ಸ್ ಟ್ರ್ಯಾಪ್' ಆರೋಪ ಕೇಳಿಬಂದಿತ್ತು. ಹಾಗಾದ್ರೆ ಮುನಿರತ್ನಂ ನಾಯ್ಡು ಮನೆ ಮುಂದೆ 'ಏಡ್ಸ್' ರೋಗಿಗಳು ಬಂದರೆ ಏನು ಮಾಡುತ್ತಿದ್ದರು? ಬಿಜೆಪಿ & ಕಾಂಗ್ರೆಸ್ ಪಕ್ಷದಲ್ಲಿದ್ದ ತಮ್ಮ ರಾಜಕೀಯ ವಿರೋಧಿ ನಾಯಕರನ್ನು ಮಟ್ಟ ಹಾಕಲು ಭಯಾನಕ 'ಏಡ್ಸ್' ರೋಗಿಗಳನ್ನ ಶಾಸಕ...
ಶಾಸಕ ಮುನಿರತ್ನಂ ನಾಯ್ಡು ವಿರುದ್ಧ ಒಂದಾದ ನಂತರ ಒಂದು ಗಂಭೀರ ಆರೋಪಗಳೇ ಈಗ ಕೇಳಿ ಬರುತ್ತಿವೆ. ಅದರಲ್ಲೂ 'ಏಡ್ಸ್' ರೋಗಿಗಳ ರಕ್ತವನ್ನು ತಮ್ಮ ರಾಜಕೀಯ ವಿರೋಧಿ ನಾಯಕರಿಗೆ ಚುಚ್ಚಿಸಿ, ಅವರಿಗೆ ಎಚ್‌ಐವಿ ಬರಿಸಲು ಪ್ರಯತ್ನ ಮಾಡಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹಾಗಾದ್ರೆ ಶಾಸಕ ಮುನಿರತ್ನಂ ನಾಯ್ಡುಗೆ ಎಚ್‌ಐವಿ ಅಥವಾ ಏಡ್ಸ್ ಸೋಂಕು ತಗುಲಿದ ರಕ್ತ ಹೇಗೆ ಸಿಗುತ್ತಿತ್ತು? ಮುನಿರತ್ನಂ ನಾಯ್ಡು ಮನೆ ಮುಂದೆ 'ಏಡ್ಸ್' ರೋಗಿಗಳು ಬಂದರೆ ಏನು ಮಾಡುತ್ತಿದ್ದರು? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಮನೆ ಮುಂದೆ 'ಏಡ್ಸ್' ರೋಗಿಗಳು ಬಂದರೆ...
ಮುನಿರತ್ನಂ ನಾಯ್ಡು ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕರಾಗಿದ್ದು, ಇದೀಗ ಮುನಿರತ್ನಂ ನಾಯ್ಡು ವಿರುದ್ಧ ಭಾರಿ ಗಂಭೀರ ಆರೋಪಗಳೇ ಕೇಳಿಬರುತ್ತಿವೆ. ಅದರಲ್ಲೂ ಮುನಿರತ್ನಂ ನಾಯ್ಡು ಅವರ ಮನೆಯ ಬಳಿ 'ಏಡ್ಸ್' ಅಥವಾ 'ಎಚ್‌ಐವಿ' ಪೀಡಿತ ರೋಗಿಗಳು ಬಂದು ನಿಂತರೆ, ಅವರಿಗೆ ಒಂದಷ್ಟು ಸಾವಿರ ರೂಪಾಯಿ ಹಣದ ಸಹಾಯ ಮಾಡುತ್ತಿದ್ದರಂತೆ. ಆ ನಂತರ ಅವರ ನಂಬರ್ & ಆಧಾರ್ ನಂಬರ್ ಪಡೆದು ಅವರನ್ನ ಅಲ್ಲಿಂದ ಕಳುಹಿಸುತ್ತಿದ್ದರು. ಬಳಿಕ ಮುನಿರತ್ನಂ ನಾಯ್ಡು ಜೊತೆಗಾರರು ಸೇರಿ 'ಏಡ್ಸ್' ರೋಗ ಬಂದಿರುವ ಮಹಿಳೆಯರನ್ನ ಸಂಪರ್ಕಿಸಿ ಕರೆತರುತ್ತಿದ್ದರು ಎಂದು ಗಂಭೀರ ಆರೋಪ ಮಾಡಲಾಗಿದೆ.
ವಿಶೇಷ ತನಿಖಾ ತಂಡ ರಚನೆ?
ಮತ್ತೊಂದ್ಕಡೆ ಹೀಗೆ ಕರೆದುಕೊಂಡು ಬಂದ 'ಏಡ್ಸ್' ರೋಗಿಗಳನ್ನ ನೇರವಾಗಿ ರಹಸ್ಯವಾದ ಜಾಗದಲ್ಲಿ ಇರಿಸಿ, ಆ ನಂತರ ಅವರ ಮೂಲಕ ಲೈಂಗಿಕ ಕ್ರಿಯೆಗೆ & ಅವರ ರಕ್ತ ಸಂಗ್ರಹಿಸಿ ತಮ್ಮ ರಾಜಕೀಯ ವಿರೋಧಿಗಳಿಗೆ ಚುಚ್ಚಿಸಲು ಖರ್ತನಾಕ್ ಐಡಿಯಾ ಮಾಡುತ್ತಿದ್ದರು ಎಂಬ ಗಂಭೀರ ಆರೋಪ ಮಾಡಲಾಗಿದೆ. ಈ ಆರೋಪವು ಕರ್ನಾಟಕದ ರಾಜಕೀಯದಲ್ಲಿ ಇದೀಗ ಸಂಚಲನ ಸೃಷ್ಟಿ ಮಾಡಿದ್ದು, ಈ ಬಗ್ಗೆ ಗಂಭೀರ ತನಿಖೆ ನಡೆಸಬೇಕು. ರಾಜ್ಯ ಸರ್ಕಾರದಿಂದ ವಿಶೇಷ ತನಿಖಾ ತಂಡ ರಚನೆ ಮಾಡಿ ಮುನಿರತ್ನಂ ನಾಯ್ಡು ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಬೇಕು ಎಂಬ ಆಗ್ರಹ ಕೂಡ ಕೇಳಿಬಂದಿದೆ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications