ಮುನಿರತ್ನ ಒಕ್ಕಲಿಗ, ದಲಿತ ಮಹಿಳೆಯರನ್ನು ಮಂಚಕ್ಕೆ ಕರೆದು ಅಪಮಾನ ಮಾಡಿದ್ದಾರೆ: ಸ್ಟೋಟಕ ಹೇಳಿಕೆ ನೀಡಿದ ಡಿ ಕೆ ಸುರೇಶ್
ಬೆಂಗಳೂರು, ಡಿಸೆಂಬರ್ 29: ಮುನಿರತ್ನ ಒಕ್ಕಲಿಗರ ಹೆಣ್ಣು ಮಕ್ಕಳ ವಿಚಾರದಲ್ಲಿ ಹೇಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಒಕ್ಕಲಿಗ ಹಾಗೂ ದಲಿತ ಮಹಿಳೆಯರನ್ನು ಮಂಚಕ್ಕೆ ಕರೆದು ಅಪಮಾನ ಮಾಡಿದ್ದಾರೆ. ಆತನ ಅಸಭ್ಯ ವರ್ತನೆಯ ಆಡಿಯೋ ನಿಜ ಎಂದು ಎಫ್ ಎಸ್ ಎಲ್ ವರದಿಯಲ್ಲಿ ಸಾಬೀತಾಗಿದೆ. ಹೀಗಾಗಿ ಎಸ್ ಐಟಿಯು ಎಫ್ ಐಆರ್ ದಾಖಲಿಸಿದೆ. ಆತ ಹೇಗೆ ನೀಚವಾಗಿ ನಡೆದುಕೊಂಡಿದ್ದಾನೆ ಎಂಬುದನ್ನು ಮಾಧ್ಯಮಗಳು ಸರಿಯಾಗಿ ಜನರಿಗೆ ತೋರಿಸಬೇಕು ಎಂದು ಮಾಜಿ ಸಂಸದ ಡಿ ಕೆ ಸುರೇಶ್ ಹೇಳಿದ್ದಾರೆ.
ಮುನಿರತ್ನ ಅವರನ್ನು ಪರೀಕ್ಷೆ ಮಾಡಿರುವ ದೊಡ್ಡ ಡಾಕ್ಟರ್, ಕೂದಲು ಸುಟ್ಟಿದೆ ಸಿ.ಟಿ ಸ್ಕ್ಯಾನ್ ಮಾಡಬೇಕು ಎಂದಿದ್ದಾರೆ. ಆದರೆ ನಿನ್ನೆ ಸಂಜೆ ಮತ್ತೊಂದು ವಿಡಿಯೋ ನೋಡಿದ್ದು, ಅದರಲ್ಲಿ ಮುನಿರತ್ನ ಅವರು ಸಿ.ಟಿ. ರವಿ ಅವರನ್ನು ಭೇಟಿ ಮಾಡಿ ಅವರ ಮನೆಯಿಂದ ಹೊರಗೆ ಬಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲಿ ಮುನಿರತ್ನ ಅವರಿಗೆ ಸುಟ್ಟು ಹೋಗಿದ್ದ ಕೂದಲು ಮತ್ತೆ ವಾಪಸ್ ಬಂದಿವೆ. ಮುನಿರತ್ನ ತಲೆಗೆ ಟೋಕನ್ ಹಾಕಿದ್ದಾರೋ, ಅಥವಾ ನಿಜವಾದ ಕೂದಲು ಇಟ್ಟುಕೊಂಡಿದ್ದಾರೋ ಎಂದು ಮಾಧ್ಯಮಗಳೇ ಪರೀಕ್ಷೆ ಮಾಡಬೇಕು. ದೊಡ್ಡ ಡಾಕ್ಟರ್ ಕೂದಲು ಸುಟ್ಟಿದೆ ಎಂದು ಹೇಳಿದ ಮೇಲೆ ನಾವು ನಂಬಲೇ ಬೇಕಲ್ಲವೇ? ಎಂದು ಡಿ ಕೆ ಸುರೇಶ್ ವ್ಯಂಗ್ಯವಾಡಿದ್ದಾರೆ.

ಒಬ್ಬ ವಿಧಾನ ಪರಿಷತ್ತಿನಲ್ಲಿ ಮಹಿಳೆಗೆ ವೇ* ಎಂದು ಕರೆಯುತ್ತಾರೆ. ಮತ್ತೊಬ್ಬ ಸರ್ಕಾರದ ಆಡಳಿತ ನಡೆಸುವ ದೇವಾಲಯದಲ್ಲಿ ಮಹಿಳೆಯರ ಅತ್ಯಾಚಾರ ಮಾಡುತ್ತಾನೆ. ಬಿಜೆಪಿಯವರು ಇಂತಹವರನ್ನು ಒಪ್ಪಿಕೊಂಡು ಕೂತಿದ್ದಾರೆ. ಇಷ್ಟಾದರೂ ಪಾಪ, ಬಿಜೆಪಿಯವರು ಸಂಸ್ಕೃತಿ ಬಗ್ಗೆ ಮಾತನಾಡುತ್ತಾರೆ. ವಿಕಾಸಸೌಧದಲ್ಲಿ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳಿಕೊಂಡಿದ್ದನ್ನು ಮಾಧ್ಯಮದವರಿಗೆ ತೋರಿಸಲು ಸಾಧ್ಯವಾಗಲಿಲ್ಲ. ವಿಧಾನ ಪರಿಷತ್ತಿನಲ್ಲಿ ನಡೆದ ನೀಚ ಕೃತ್ಯವನ್ನು ಪ್ರಶ್ನೆ ಮಾಡಲಿಲ್ಲ. ಈ ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸಲಿ. ನಾನು ಇಂತಿಂತಹ ಮಾಧ್ಯಮಕ್ಕೆ ಇಷ್ಟು ಪ್ರಮಾಣದ ಸಹ ಮಾಲೀಕ ಎಂದು ಹೇಳುತ್ತಾರೆ. ಇದಕ್ಕೆ ಬೇಕಾದ ದಾಖಲೆಯನ್ನು ನಾನು ನೀಡುತ್ತೇನೆ.
ಈ ಎಲ್ಲ ವಿಚಾರಗಳ ಬಗ್ಗೆ ಮಾತನಾಡಬಾರದು ಎಂದು ನಿರ್ಧರಿಸಿದ್ದೆ. ಆದರೆ ಬಿಜೆಪಿ ಶಾಸಕರೆ ಈ ವಿಚಾರವಾಗಿ ನಾನು ಮಾತನಾಡುವಂತೆ ಉತ್ತೇಜನ ನೀಡಿದ್ದಾರೆ. ನಮ್ಮ ಬಗ್ಗೆ ನಿರ್ಧಾರ ಮಾಡಬೇಕಿರುವುದು ಜನರು. ನಿಮ್ಮ ವಿರುದ್ಧ ಏನೆಲ್ಲಾ ಹಗರಣಗಳಿವೆ ಎಂದು ಲೋಕಾಯುಕ್ತ ಸಂಸ್ಥೆ ತನಿಖೆಯಲ್ಲಿದೆ. ಮಾತೆತ್ತಿದರೆ ಡಿ.ಕೆ. ಶಿವಕುಮಾರ್, ಡಿ.ಕೆ ಸುರೇಶ್. ನಾನು ಎಂದೂ ಮುನಿರತ್ನ, ಕೊರಂಗು ಎಂದು ಹೇಳಿಲ್ಲ. ಕೊರಂಗು ನಿಮ್ಮ ಸಹೋದರ ಎಂದು ನಾನು ಎಲ್ಲಿಯೂ ಹೇಳಿರಲಿಲ್ಲ. ಕೊರಂಗು ಯಾರು? ಮಾಧ್ಯಮದ ಸ್ನೇಹಿತರು ಹೇಳಬೇಕಲ್ಲವೇ? ಕೊರಂಗು ಬಳಸಿಕೊಂಡು ಮುನಿರತ್ನ ಏನೆಲ್ಲಾ ಮಾಡಿದ್ದಾರೆ ಎಂದು ಮಾಧ್ಯಮಗಳು ಹೇಳಬೇಕಲ್ಲವೇ? ಎಂದು ಪ್ರಶ್ನಿಸಿದರು.
ಚಿನ್ನಾಭರಣ ವಂಚನೆ ಪ್ರಕರಣದಲ್ಲಿ ನಿಮ್ಮ ಹೆಸರು ಬಳಸಿಕೊಂಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಕೂಡ ನಾಲ್ಕೈದು ದಿನಗಳ ಹಿಂದೆ ಇದನ್ನು ಗಮನಿಸಿದೆ. ಯಾರೇ ನನ್ನ ಹೆಸರು ದುರ್ಬಳಕೆ ಮಾಡಿಕೊಂಡಿದ್ದರೂ ತನಿಖೆ ಮಾಡಲಿ. ನಾನು ಇದನ್ನು ಪರಿಶೀಲಿಸಿ, ಸಂಬಂಧಪಟ್ಟ ಪೊಲೀಸರಿಂದ ಮಾಹಿತಿ ಪಡೆದು, ಎರಡು ಮೂರು ದಿನಗಳಲ್ಲಿ ಪೊಲೀಸ್ ಆಯುಕ್ತರಿಗೆ ಈ ಬಗ್ಗೆ ದೂರು ನೀಡುತ್ತೇನೆ. ಯಾರೇ ಈ ತಪ್ಪು ಮಾಡಿದ್ದರೂ ಸಮಗ್ರ ತನಿಖೆ ಮಾಡಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು. ಅನ್ಯಾಯ ಆಗಿರುವವರಿಗೆ ನ್ಯಾಯ ಸಿಗಬೇಕು ಎಂದು ತಿಳಿಸಿದರು.
ಶ್ವೇತಾ ಗೌಡ ಅವರ ಪ್ರಕರಣದಲ್ಲಿ ಬಿಜೆಪಿ ನಾಯಕನ ಹೆಸರು ಕೇಳಿಬಂದಾಗ ಬಂಧನ ಆಗಿ ವಿಚಾರಣೆ ನಡೆಯುತ್ತಿದೆ, ಈ ಪ್ರಕರಣದಲ್ಲಿ ಆ ರೀತಿ ಆಗಿಲ್ಲ. ಈ ತಾರತಮ್ಯ ಏಕೆ ಎಂಬ ಪ್ರಶ್ನೆಗೆ ಉತ್ತರಿಸಿ, ನನಗೆ ಈ ವಿಚಾರ ಗೊತ್ತಿಲ್ಲ. ನಾನು ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ಕೇಳುತ್ತೇನೆ ಎಂದು ತಿಳಿಸಿದರು.
ನಟ ಧರ್ಮ ಅವರು ನಿಮ್ಮ ಧ್ವನಿಯಲ್ಲಿ ಮಾತನಾಡಿದ್ದಾರೆ ಎಂದು ಕೇಳಿದಾಗ, ಕೆಲವು ಸಿನಿಮಾದವರು ಸೇರಿ ಈ ರೀತಿ ಮಾಡುತ್ತಿದ್ದಾರೆ. ನಾನು ಏನು ಮಾಡಲಿ. ಈ ಪ್ರಕರಣದ ಬಗ್ಗೆ ನಾನು ಪೊಲೀಸ್ ಆಯುಕ್ತರಿಗೆ ಪತ್ರ ಬರೆಯುತ್ತಿದ್ದೇನೆ. ನಿಮಗೂ ಆ ದೂರಿನ ಪತ್ರ ಕಳುಹಿಸಿಕೊಡುತ್ತೇನೆ ಎಂದು ತಿಳಿಸಿದರು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications