Get Updates
Get notified of breaking news, exclusive insights, and must-see stories!

MLA Muniratna: ರಾಜಕೀಯ ಎದುರಾಳಿಗಳನ್ನ ಸೆದೆ ಬಡಿಯಲು ಮುನಿರತ್ನರಿಂದ ಏಡ್ಸ್‌ ಟ್ರ್ಯಾಪ್‌! FIRನಲ್ಲಿದೆ ಬೆಚ್ಚಿಬೀಳಿಸುವ ಅಂಶಗಳು

ಬೆಂಗಳೂರು, ಸೆಪ್ಟೆಂಬರ್‌ 20: ಜಾತಿ ನಿಂದನೆ ಆರೋಪದಡಿ ಜೈಲು ಸೇರಿದ್ದ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣವು ದಾಖಲಾಗಿದೆ. ಸಂತ್ರಸ್ತೆ ನೀಡಿರುವ ದೂರಿನಲ್ಲಿ ಭಯಾನಕ ಅಂಶ ಬೆಚ್ಚಿಬೀಳಿಸುವಂತಿದೆ.‌ ಸಂತ್ರಸ್ತೆಯನ್ನು ಮುಂದಿಟ್ಟುಕೊಂಡು ಮುನಿರತ್ನ ಹನಿಟ್ರ್ಯಾಪ್‌ ಮಾಡಿಸುತ್ತಿದ್ದನಂತೆ. ತನಗೆ ಆಗದವರನ್ನು ಮಟ್ಟ ಹಾಕಲು ಹನಿಟ್ರ್ಯಾಪ್‌ ಮಾಡಿ ಅವರಿಗೆ ಏಡ್ಸ್‌ ಸೋಂಕಿತರ ರಕ್ತ ಇಂಜೆಕ್ಟ್‌ ಮಾಡಿಸುತ್ತಿದ್ದ ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.

ಮುನಿರತ್ನನ ಈ ಭಯಾನಕ ಕೃತ್ಯಕ್ಕೆ ಹಲವರು ಬಲಿಯಾಗಿದ್ದಾರೆ. ತನ್ನ ಎದುರಾಳಿಗಳನ್ನ ಮಟ್ಟ ಹಾಕಲು ಈ ತಂತ್ರಗರಿಕೆಯನ್ನ ನಡೆಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹನಿಟ್ರ್ಯಾಪ್, ಏಡ್ಸ್ ಹರಡಿಸುವ ಕೃತ್ಯ, ಡ್ರಗ್ಸ್ ದಂಧೆ ಬಗ್ಗೆಯೂ ಎಫ್ಐಆರ್‌ನಲ್ಲಿದೆ.

Munirathna A complaint has been filed that MLA Muniratna is running an AIDS trap

ಎಫ್‌ಐಆರ್‌ನಲ್ಲಿ ಏನಿದೆ?

ನಾನು (ಸಂತ್ರಸ್ತೆ) ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುತ್ತೇನೆ. ಕೋವಿಡ್‌ ಸಂದರ್ಭದಲ್ಲಿ ನಮ್ಮ ಏರಿಯಾದ ಕಾರ್ಪೋರೇಟರ್ ನನಗೆ ಪರಿಚಯವಿದ್ದು, ಕೋವಿಡ್‌ನಿಂದ ಬಳಲುತ್ತಿರುವ ಜನರಿಗಾಗಿ ಮಾಸ್ ವಿತರಣೆ ಮಾಡಲು 5,000 ಕ್ಕೂ ಹೆಚ್ಚು ಮಾಸ್ಕ್‌ಗಳನ್ನುಕಾರ್ಪೋರೇಟರ್‌ರಿಗೆ ನೀಡಿದ್ದೆ. ಇದನ್ನು ತಿಳಿದ ಶಾಸಕ ಮುನಿರತ್ನಂ ನಾಯ್ದು ನನಗೆ ವಾಟ್ಸ್ ಆಪ್‌ ಮುಖಾಂತರ ಕರೆ ಮಾಡಿ ನಮಸ್ತೆ ಲೀಡರ್ ನಾನು ಈ ಭಾಗದ ಶಾಸಕ ನಮ್ಮ ಕ್ಷೇತ್ರದಲ್ಲಿ, ನೀವು ಮಾಸ್ಕ್ ವಿತರಣೆ ಮಾಡುತ್ತೀರಿ, ನಿಮ್ಮ ಬಗ್ಗೆ ಕೇಳಿದ್ದೀನಿ ನನ್ನನ್ನು ಭೇಟಿ ಮಾಡಿ ಎಂದು ತಿಳಿಸಿರುತ್ತಾರೆ.

ಅದರಂತೆ ನಾನು ಮರುದಿನ ಸಂಜೆಯವರೆಗೆ ವಾಟ್ಸ್ ಆಫ್ ಮುಖಾಂತರ ಕಾಲ್ ಮಾಡಿ ಸಿಗುವುದಾಗಿ ತಿಳಿಸಿದಾಗ, ನಾನು ಕ್ಷೇತ್ರದ ಕೆಲಸದಲ್ಲಿ ತೊಡಗಿಕೊಂಡಿರುತ್ತೇನೆ. ಇದನ್ನು ಮುಗಿಸಿ 20 ನಿಮಿಷಗಳ ನಂತರ ರಾಮಯ್ಯ ಸಮಾಧಿ ಹತ್ತಿರವಿರುವ ಅವರ ಆಫೀಸ್ ಹತ್ತಿರ ಬರಲು ತಿಳಿಸಿದರು. ಅದರಂತೆ ನಾನು ಅವರ ಹೇಳಿದ ಸಮಯಕ್ಕೆ ಅವರನ್ನು ಭೇಟಿ ಮಾಡಿ ಪರಿಚಯ ಮಾಡಿಕೊಂಡೆನು. ಆ ಸಮಯದಲ್ಲಿ, ನನಗೆ ಪರಿಚಯವಿರುವ ಕಾರ್ಪೋರೇಟರ್ ಅವರ ಗಂಡ 3-4 ಬಾರಿ ಕರೆ ಮಾಡಿರುತ್ತಾರೆ. ನಾನು ಅದನ್ನು ಸೈಲೆಂಟ್ ಮಾಡಲು ಹೋದಾಗ ಇದು ಯಾರು ಎಂದು ಮುನಿರತ್ನಂ ಪ್ರಶ್ನಿಸುತ್ತಾರೆ. ಅದಕ್ಕೆ ನಾನು ಸ್ಥಳೀಯ ಕಾರ್ಪೋರೇಟರ್ ಗಂಡ ಎಂದು ಹೇಳಿದೆ.

ಅದಕ್ಕೆ ಮುನಿರತ್ನ ಮೇಡಮ್ ನಾನು ನಿಮಗೆ ಒಂದು ಸಹಾಯ ಕೇಳುತ್ತೇನೆ, ನೀವು ಸಹಾಯ ಮಾಡುತ್ತೀರೆಂದು ನಂಬಿರುತ್ತೇನೆ, ಈಗ ಬೇಡ ಮುಂದೊಂದು ದಿನ ಕೇಳುವುದಾಗಿ ತಿಳಿಸಿರುತ್ತಾರೆ. ಹಾಗೂ ನನ್ನನ್ನು ತುಂಬಾ ಹತ್ತಿರದಿಂದ ಸ್ನೇಹ ಬಳಸಿ ಗುಡ್ ಮಾರ್ನೀಂಗ್, ಗುಡ್ ನೈಟ್ ಹಾಗೂ ಪ್ರೇಮಗೀತೆ ಕಳುಹಿಸುತ್ತಿದ್ದ, ಹಾಗೂ ವಿಡಿಯೋ ಕಾಲ್ ಮುಖಾಂತರ ನನಗೆ ಕರೆ ಮಾಡಿ ವಿಚಾರಿಸುತ್ತ ನನ್ನ ಬಳಿ ಎಲ್ಲಾ ವಿಚಾರಗಳನ್ನು ಹೇಳಿಕೊಳ್ಳುತ್ತಿದ್ದ.

ಒಂದು ದಿನ 10ಕ್ಕೂ ಹೆಚ್ಚು ಬಾರಿ ವಿಡಿಯೋ ಕಾಲ್ ಮಾಡುತ್ತಿದ್ದ. ಆಗ ನಾನು ಆ ದಿನ ಸ್ನಾನಕ್ಕೆ ಹೋಗುವ ಸಂದರ್ಭದಲ್ಲಿ ವಿಡಿಯೋ ಕಾಲ್ ಮಾಡಿದ್ದ. ಸ್ನಾನದ ನಂತರ ನನ್ನ ಮೊಬೈಲ್ ಗಮನಿಸಿದಾಗ ಮುನಿರತ್ನ ಕಾಲ್ ಮಾಡಿರುವ ಬಗ್ಗೆ ತಿಳಿದು ಮತ್ತೆ ನಾನು ವಾಟ್ಸ್ ಆಫ್ ಕಾಲ್ ಮಾಡಿದಾಗ ಮುನಿರತ್ನ ಏಕೆ ಕಾಲ್ ರಿಸೀವ್ ಮಾಡಿಲ್ಲ ಎಂದಾಗ ಸರ್ ನಾನು ಸ್ನಾನಕ್ಕೆ ಹೋಗಿದ್ದೆ. ಈಗ ನನ್ನ ಮೊಬೈಲ್ ಗಮನಿಸಿದಾಗ ನೀವು ಕಾಲ್ ಮಾಡಿರುವ ಬಗ್ಗೆ, ತಿಳಿಯಿತು. ಅದಕ್ಕೆ ಈಗ ಕಾಲ್ ಮಾಡಿದೆ ಎಂದೆ. ಆಗ ಮುನಿರತ್ನ, ಈಗ ನೀನು ಎಲ್ಲಿರುವೆ ಎಂದು ಕೇಳಿದಾಗ, ನಾನು ರೂಮ್‌ನಲ್ಲಿ ಇದ್ದೀನಿ ಎಂದು ತಿಳಿಸಿರುತ್ತೇನೆ. ಆಗ ಮುನಿರತ್ನ ನೀನು ನನಗೆ ವಿಡಿಯೋ ಕಾಲ್ ಮಾಡಿ ನನಗೆ ನಗ್ನವಾಗಿ ದೇಹವನ್ನು ತೋರಿಸು ಎಂದು ಹೇಳುತ್ತಾರೆ. ಇದಕ್ಕೆ ನಾನು ಒಪ್ಪುವುದಿಲ್ಲ.

ನಂತರ ಮುನಿರತ್ನ ರವರು ನನ್ನನ್ನು ಗೋಡನ್ ಹತ್ತಿರ ಬಾ ಎಂದು ಕರೆಯುತ್ತಾನೆ. 3-4 ದಿನಗಳ ನಂತರ ಅದರಂತೆ ನಾನು ಆ ಗೋಡನ್‌ಗೆ ಭೇಟಿ ಮಾಡಲು ಹೋದ ಸಂದರ್ಭದಲ್ಲಿ ಗನ್ ಮ್ಯಾನ್ ವಿಜಯಕುಮಾರ ಮತ್ತು ಮುನಿರತ್ನ ನನಗಾಗಿ ಕಾಯುತ್ತಿರುತ್ತಾರೆ. ನಾನು ದ್ವಿಚಿಕ್ರ ವಾಹನದಲ್ಲಿ ಅವರಿರುವ ಸ್ಥಳಕ್ಕೆ ಭೇಟಿ ನೀಡಿದಾಗ ಮುನಿರತ್ನ ಸ್ವತಃ ತನ್ನ 2ನೇ ಫ್ಲೋರ್‌ಗೆ ಕರೆದುಕೊಂಡು ಹೋಗುತ್ತಾರೆ. ನಿಮ್ಮನ್ನು ನೋಡಿದರೆ ನನ್ನ ಮೈ ಜುಂ ಎನಿಸುತ್ತದೆ ಎಂದು ಕಾಮುಕನಾಗಿ ವರ್ತಿಸುತ್ತಾರೆ.

ನಿಮ್ಮನ್ನು ಒಂದು ಬಾರಿ ತಬ್ಬಿಕೊಳ್ಳಲು ಎಂದು ಕೇಳುತ್ತಾರೆ. ಅದಕ್ಕೆ ನಾನು ವಿರೋಧ ಮಾಡಿದಾಗ, ರಾಜಕೀಯಕ್ಕೆ ಬರಬೇಕಾದರೆ ಇವೆಲ್ಲ ಕಾಮನ್ ಎಂದು ನಿಧಾನಕ್ಕೆ ಹೇಳುತ್ತಾ ತನ್ನ ಗನ್ ಮ್ಯಾನ್ ವಿಜಯಕುಮಾರನನ್ನು ಹೊರಗೆ ಹೋಗಲು ಸನ್ನೆಯ ಮುಖಾಂತರ ತಿಳಿಸುತ್ತಾನೆ. ಮತ್ತು ಅವನಿಗೆ ಯಾರನ್ನು ಮೇಲಕ್ಕೆ ಬಿಡಬೇಡ ಎಂದು ಹೇಳುತ್ತಾನೆ. ನಂತರ ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು ನೀನಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ತಿಳಿಸುತ್ತಾನೆ. ಇವನ ವರ್ತನೆಯಿಂದ ಗಾಬರಿಗೊಂಡ ನಾನು ಕಿರುಚುತ್ತೇನೆಂದು ಹೇಳುತ್ತೇನೆ, ಅದಕ್ಕೆ ಮುನಿರತ್ನ ನಾನು ಶಾಸಕ ನನಗೆ ಅಪರ ಜನ ಸಮೂಹ ಬೆಂಬಲವಿದೆ. ನಿನ್ನ ವಿರುದ್ಧವೆ ಕಂಪ್ಲೇಂಟ್ ಮಾಡಿಸುತ್ತೇನೆ, ಸುಮ್ಮನಿದ್ದರೆ ಸರಿ ಎಂದು ನನ್ನ ಮೇಲೆ ಅತ್ಯಾಚಾರ ಮಾಡುತ್ತಾನೆ.

ನಂತರ ಅಳುತ್ತಿದ್ದಾಗ ಇಲ್ಲಿ ನಡೆದ ಬಗ್ಗೆ ಯಾರಿಗಾದರೂ ತಿಳಿಸಿದರೆ ಈ ಗೋಡೌನ್‌ನಲ್ಲಿ ಹಲವಾರು ಕ್ಯಾಮೆರಾಗಳನ್ನು ಫೀಟ್ ಮಾಡಿರುತ್ತೇನೆ. ಇದನ್ನೆಲ, ಕೆಲವೊಂದು ವಿಡಿಯೊ ಎಡಿಟ್‌ ಮಾಡಿ ನಿನ್ನದು ಮಾತ್ರ ನಗ್ನ ಚಿತ್ರವನ್ನು ಬಿಡುಗಡೆ ಮಾಡುತ್ತೇನೆಂದು ಬೆದರಿಸುತ್ತಾನೆ. ಇದನ್ನೇ ಬಳಸಿಕೊಂಡು ನನ್ನನ್ನು ಹಲವಾರು ಬಾರಿ ಅತ್ಯಾಚಾರ ಮಾಡುತ್ತಾನೆ. ಅದರ ವಿಡಿಯೋ ಚಿತ್ರವನ್ನು ನನಗೆ ಟಿವಿಯಲ್ಲಿ ಹಾಕಿ ತೋರಿಸುತ್ತಾನೆ. ಇದನ್ನು ನೋಡಿ ನನಗೆ ಗಾಬರಿಯಾಯಿತು. ದಯಮಾಡಿ ಇದನ್ನು ಡಿಲೀಟ್ ಮಾಡಿ ಎಂದು ಕಾಲು ಹಿಡಿದು ಪರಿಪರಿಯಾಗಿ ಕೇಳಿಕೊಳ್ಳುತ್ತೇನೆ. ನಂತರ ಮುನಿರತ್ನ ರವರು ಇದನ್ನೇ ಬಂಡವಾಳ ಮಾಡಿಕೊಂಡು ನನಗೆ ಪ್ರಾಣ ಬೆದರಿಕೆ ಒಡ್ಡಿ ಬೆದರಿಸಿದ್ದಾರೆ.

ನಾನು ಹೇಳಿದ ಎಲ್ಲಾ ಕೆಲಸಗಳನ್ನು ಮಾಡಲೇಬೇಕೆಂದು ಬಲವಂತ ಮಾಡುತ್ತಾನೆ. ನಂತರ ನಿಮ್ಮ ಏರಿಯಾ ಕಾರ್ಪೋರೇಟರ್‌ ಪತಿ ನಿನ್ನ ಬಳಿ ಯಾವ ರೀತಿ ಇದ್ದಾನೆ ಎಂದು ಕೇಳುತ್ತಾನೆ. ಅದಕ್ಕೆ ನಾನು ಅವನು ಸಹ ನಿಮ್ಮಂತೆಯೇ ನನ್ನನ್ನು ಬಳಸಿಕೊಳ್ಳಲು ಬಲವಂತ ಮಾಡುತ್ತಾನೆ. ಅದಕ್ಕೆ ನಾನು ಒಪ್ಪದೆ ಅಂತರ ಕಾಯ್ದು ಕೊಳ್ಳುತ್ತೇನೆ ಎಂದಾಗ ಬೇಡ ಅವನು ಹೇಳಿದಂತೆ ಕೇಳು, ನೀನು ಕೇಳಿ ವಿಡಿಯೋ ಮಾಡಿಕೊಂಡು ನನಗೆ ಕೊಡಬೇಕೆಂದು ಕೇಳುತ್ತಾನೆ. ಇವರ ಬೆದರಿಕೆಗೆ ಒಡ್ಡಿ ಬೇರೆ ಯಾವ ದಾರಿಯಿಲ್ಲದೆ ನಾನು ಮಾಡಿಸಿಕೊಳ್ಳಲು ಒಪ್ಪುತ್ತೇನೆ. ಅದಕ್ಕೆ ಮುನಿರತ್ನ ರವರು ಈ ಕೆಲಸವನ್ನು ನಿನ್ನ ಕೈಯಲಿ ಆಗದಿದ್ದರೆ, ನನಗೆ ಪರಿಚಯವಿರುವ ರಾಧ ಎಂಬ ಮಹಿಳೆಯನ್ನು ಕಳುಹಿಸಿಕೊಡುತ್ತೇನೆ. ಈ ಬಗ್ಗೆ ಅವಳಿಗೆ ಎಲ್ಲವೂ ತಿಳಿದಿರುತ್ತದೆ. ಹಾಗೂ ಕ್ಯಾಮೆರಾ ಬಗ್ಗೆಯೂ ಎಲ್ಲ ಗೊತ್ತು ಅವರೊಂದಿಗೆ ನೀನು ಸಹಕರಿಸು ಸಾಕು ಎಂದು ಹೇಳುತ್ತಾನೆ.

ಅವನು ಹೇಳಿದ ನಂತರ ರಾಧ ಮತ್ತು ನಾನು ರಾಮಯ್ಯ ಸಮಾಧಿ ಬಳಿ ಇರುವ ಅಪಾರ್ಟ್‌ಮೆಂಟ್‌ನಲ್ಲಿ ಮುನಿರತ್ನ ಸಂಬಂಧಿ ಸುಧಾಕರ್ ಕ್ಯಾಮೆರಾ ಫಿಟ್ ಮಾಡಲು ನಮ್ಮಿಬ್ಬರ ಜತೆ ಕಳುಹಿಸಿಕೊಡುತ್ತಾನೆ. ನಂತರ ಕಾರ್ಪೋರೇಟರ್‌ ಪತಿಗೆ ಮುನಿರತ್ನ ಕಳುಹಿಸಿಕೊಟ್ಟ ರಾಧ ಎಂಬ ಮಹಿಳೆಯನ್ನು ಪರಿಚಯಿಸಿ ಅವರಿಬ್ಬರು ನಡೆಸಿದ ಅಶ್ಲೀಲ ಚಿತ್ರವನ್ನು ಸುಧಾಕರ್ ಫಿಕ್ಸ್ ಮಾಡಿಸಿದ ಕ್ಯಾಮೆರಾವನ್ನು ತೆಗೆದುಕೊಂಡು ಮತ್ತು ನನ್ನ ಮೊಬೈಲ್ ಕೂಡ ತೆಗೆದುಕೊಂಡು, ಲ್ಯಾಪ್ಟಾಪ್ ಗಳಲ್ಲಿ, ಸ್ಟೋರೇಜ್ ಮಾಡಿಕೊಂಡು ಮತ್ತು ಆ ವಿಡಿಯೋ ಡೈರೆಕ್ಟರ್ ಆಗಿ ನೋಡಲು ಮುನಿರತ್ನ ರವರು ACT wifi ಕೂಡ ಹಾಕಿಸಿಕೊಂಡಿರುತ್ತಾರೆ.

ಸುಧಾಕರ್ ಕಡೆಯಿಂದ ಡೈರೆಕ್ಟ್ ಲೈವ್ ನೋಡಲು ಮುಂದೊಂದು ದಿನ ಇದು ಯಾವ ರೀತಿ ತಿರುವು ಪಡೆಯುತ್ತದೆ ಎಂದು ಭಯಬಿದ್ದು ರೂಮ್ ನಲ್ಲಿ ಫೀಟ್ ಮಾಡಿದ್ದ ಕ್ಯಾಮಾರಗಳು ಮತ್ತು ಫೀಟ್ ಮಾಡಿದ್ದ ವ್ಯಕ್ತಿಯ ಚಿತ್ರವನ್ನು ನನ್ನ ಮೊಬೈಲ್ ನಲ್ಲಿ, ಪೋಟೋ ತಗೊಂಡು ಅಲ್ಲಿಂದ ಹೊರಟೆ, ತದನಂತರ 3-4 ದಿನ ಬಿಟ್ಟು ನನಗೆ ಮುನಿರತ್ನ ನನಗೆ ಕಾಲ್ ಮಾಡಿ ಬಹಳ ಖುಷಿಯಾಯಿತು ಲೀಡರ್ ನಿನಗೆ ಏನು ಬೇಕೆಂದು ಕೇಳಿದಾಗ ಸಾಕಪ್ಪ ನಿನ್ನ ಸಹವಾಸ ದಯವಿಟ್ಟು ನನ್ನ ವಿಡಿಯೋವನ್ನು ಡಿಲೀಟ್ ಮಾಡು ಎಂದು ಬೇಡಿದೆ. ಆಯ್ತು ನನ್ನ ಕಛೇರಿಗೆ ಬಾ ಎಂದು ಹೇಳುತ್ತಾನೆ. ನಾನು ನಿರಾಕರಿಸಿದಾಗ ನನ್ನ ಮನೆಯ ಬಳಿ ಇರುವ ಫ್ಲೈ ಓವರ್ ಮೇಲೆ ಬಂದು ಮೇಲಿಂದ ಮೇಲೆ ಕಾಲ್ ಮಾಡುತ್ತಾನೆ. ನೀನು ಬರದೆ ಇದ್ದರೆ, ನಾನು ನಿನ್ನ ಮನೆಗೆ ಬರುತ್ತೇನೆ, ನಿನ್ನ ವಿಡಿಯೋವನ್ನು ನಿನ್ನ ಗಂಡ ಮಕ್ಕಳಿಗೆ ತೋರಿಸುತ್ತೇನೆ ಎಂದು ಬೆದರಿಸಿದಾಗ ಅನಿವಾರ್ಯವಾಗಿ ಹೆದರಿ ನಾನು ಹೋಗಿ ಅವನನ್ನು ಭೇಟಿ ಮಾಡುತ್ತೇನೆ.

ಆಗ ಕಾರ್ಪೋರೇಟರ್‌ ಪತಿಗೆ ನಾನು ಕಳುಹಿದ್ದು ಏಡ್ಸ್ (ಹೆಚ್.ಐ.ವಿ) ಪೇಶೆಂಟ್ ಗೊತ್ತಾ ಎಂದು ಹೇಳಿದಾಗ ನನಗೆ ಶಾಕ್ ಆಗುತ್ತೆ, ಮತ್ತು ನೀನು ಇನ್ನೊಂದು ಕೆಲಸ ಮಾಡಬೇಕು, ಕಾರ್ಪೋರೇಟರ್‌ ಮಗ ಕರಣ್‌ (ಹೆಸರು ಬದಲಾಯಿಸಲಾಗಿದೆ) ಅವನಿಗೂ ಸಹ ಹೆಚ್.ಐ.ವಿ ಪೇಶೆಂಟ್‌ ಅನ್ನು ಕಳುಹಿಸಬೇಕು, ಇಲ್ಲ ಯಾರನ್ನಾದರೂ ಕಳುಹಿಸುತ್ತೇನೆ, ಇಂಜೆಕ್ಟ್ ಮಾಡುವುದಕ್ಕೆ ಹೆಲ್ಪ್‌ ಮಾಡು ಎಂದು ಹೇಳುತ್ತಾನೆ. ಆಗ ನಾನು ಯಾವುದೇ ಕಾರಣಕ್ಕು ಇದು ಸಾದ್ಯವಿಲ್ಲ. ಆ ಮಗು ನನ್ನ ಮಗನ ಜತೆಯವನು, ಯಾವುದೇ ಕಾರಣಕ್ಕು ಸಾಧ್ಯವಿಲ್ಲ, ಎಂದು ಹೇಳಿ ಹೊರಟು ಹೋಗಿ ಫೋನ್ ಸ್ವಿಚ್ ಆಫ್ ಮಾಡಿಕೊಂಡೆ.

ನಂತರ ಇನ್ನೂ 3-4 ಹುಡುಗಿಯರನ್ನು ಬಿಟ್ಟು ಕಾರ್ಪೋರೇಟರ್‌ ಪತಿಯ ವಿಡಿಯೋ ಮಾಡಿಸಿಕೊಂಡು ಈ ಎಲ್ಲ ವಿಡಿಯೋಗಳನ್ನು ತನ್ನ ಸಂಜಯ್ ನಗರ ಆಫೀಸ್‌ನಲ್ಲಿ ಟಿ.ವಿ ಗೆ ಕನೆಕ್ಟ್ ಮಾಡಿ ನನ್ನನ್ನು ಕೂರಿಸಿಕೊಂಡು ತೋರಿಸಿ ವಿಕೃತಿ ಮೆರೆಯುತ್ತಿದ್ದ, ಮತ್ತು ಗಂಗಣ್ಣ ಎಂಬ ವ್ಯಕ್ತಿಯ ವಿಡಿಯೋ ಮಾಡಬೇಕು ಎಂದು ಬಲವಂತದಿಂದ ನನ್ನ ಬಳಿ ಮಾಡಿಸಿ ಎಲೆಕ್ಷನ್ ಟೈಮ್ ನಲ್ಲಿ ಅದನ್ನು ತೋರಿಸಿ ಬೆದರಿಸಿದ. ಹಾಗೂ ಪೊಲೀಸರ ವಿಡಿಯೋಗಳನ್ನು ಕೂಡ ಅವರ ಬಳಿ ಇರಿಸಿಕೊಂಡು ಅವರಿಗೆಲ್ಲ, ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ. ನನಗೂ ಸಹ ತೋರಿಸುತ್ತಾನೆ. ಮತ್ತು ಮಾಗಡಿ ಎಂ.ಎಲ್.ಎ ನನ್ನ ಜೊತೆ ಸಲುಗೆಯಿಂದ ಮಾತನಾಡುವ ಹಾಗೇ ಮಾಡಿ ಅದನ್ನು ಕೂಡ ಇಟ್ಟುಕೊಂಡು ಬೆದರಿಸಿದ್ದ. ನನ್ನ ಮಗ ಕಾಲೇಜಿಗೆ ಹೋಗುವಾಗ ನನ್ನ ಮಗನನ್ನು ಕಿಡ್ಡಾಫ್ ಮಾಡುತ್ತೇನೆಂದು ಅವರ ಗನ್ ಮಾನ್ ಶ್ರೀನಿವಾಸ ರವರಿಂದ ಹೇಳಿಸಿದ.

ಇದೆಲ್ಲದರ ನಂತರ ಒಂದು ವಾರ ನನಗೆ ಕಾಲ್ ಮಾಡಿರುವುದಿಲ್ಲ. ಒಂದು ದಿನ ರಾತ್ರಿ ನನಗೆ ಕಾಲ್ ಮಾಡಿ ಅಜೇಂಟ್ ಆಗಿ ನನಗೆ ಮನೆಯ ಹತ್ತಿರ ಬರಲು ಹೇಳುತ್ತಾರೆ. ನಾನು ನನ್ನ ಯಜಮಾನರನ್ನು ಕರೆದುಕೊಂಡು ರಾತ್ರಿ 9.30 ಕ್ಕೆ ಅವರ ಮನೆಯ ಹತ್ತಿರ ಹೋಗುತ್ತೇನೆ. ಆಗ ಅವರು ಊಟ ಮಾಡುತ್ತಿರುತ್ತಾರೆ, ನಂತರ ನನ್ನನ್ನು ಲಾನ್ ನಲ್ಲಿ ಕರೆದುಕೊಂಡು ಹೋಗಿ ಇದೊಂದು ನನಗೆ ಕೆಲಸ ಮಾಡಿಕೊಡು ಇನ್ನು ಲೈಫ್‌ನಲ್ಲಿ, ನಿನ್ನ ಹತ್ತಿರ ಏನೂ ಕೇಳುವುದಿಲ್ಲ ಎಂದು ಪ್ರಾಮೀಸ್ ಮಾಡಿದ ಆಗ ನಾನು ಏನೂ ಎಂತ ಕೇಳಿದಾಗ ಒಂದು ಹೆಂಗಸು ನನ್ನ ರಿಲೇಟೀವ್ ಮಗು 8 ವರ್ಷ, ಅವಳಿಗೆ ರೇಪ್ ಮಾಡಿಸುತ್ತೇನೆಂದು ಹೇಳುತ್ತಿದ್ದಾಳೆ ಅದಕ್ಕೆ ಅವಳನ್ನು ಕೆಟ್ಟವಳು ಎಂದು ಬಿಂಬಿಸಬೇಕು ಅಷ್ಟೆ ಎಂದರು.

ಆಗ ನೀವು ಒಬ್ಬರೇ ಆಗುವುದಿಲ್ಲ... ಇದಕ್ಕೆ ಒಂದು ಟೀಮ್ ಸೆಟ್ ಆಫ್ ಮಾಡಬೇಕು ಎಂದು ಕಿರಣ್ ಕುಮಾರ್ ಎಂಬ ಅವರ ರಿಲೇಟೀವ್ ಹುಡುಗನನ್ನು ಕರೆಸಿಕೊಂಡ. ಆತ ನನಗೂ ಫ್ಯಾಮಿಲಿ ಫ್ರೆಂಡ್ ಆಗಿರುತ್ತಾನೆ. ನೀವೆಲ್ಲ, ಒಂದು ಟೀಮ್ ಮಾಡಿಕೊಂಡು ಈ ಕೆಲಸ ಮಾಡಿಕೊಡಿ ಎಂದು ಕಣ್ಣೀರು ಹಾಕುತ್ತಾನೆ. ಸರಿ ಎಂದಾಗ ಸ್ವಾತಿ ಹೊಟೇಲ್ ರಾಜಾಜಿನಗರ ಅಲ್ಲಿ, ಒಂದು ಬರ್ತಾಡೆ ಪಾರ್ಟಿ ಆರೇಂಜ್ ಮಾಡುತ್ತಾರೆ.

ನಾನು ನನ್ನ ಸ್ನೇಹಿತೆ ಯಶೋಧರವರನ್ನು ಕರೆದುಕೊಂಡು ಹೋಗುತ್ತೇನೆ. ಅಲ್ಲಿಗೆ ಕಿರಣ್ ಕೂಡ ಬಂದಿರುತ್ತಾನೆ. ಗನ್ ಮ್ಯಾನ್ ವಿಜಯ ಕುಮಾರ ನಮ್ಮನ್ನು ರಿಸೀವ್ ಮಾಡುತ್ತಾರೆ, ಲಕ್ಷ್ಮೀ ರವರ ಬರ್ತಾಡೆ ಪಾರ್ಟಿ ಆದಾಗಿರುತ್ತದೆ, ಲಗ್ಗೆರೆ ವಾರ್ಡ್‌(ಗೊರಗುಂಟೆಪಾಳ್ಯ). ಅವಳನ್ನು ವರ್ಕರ್, ಅಲ್ಲಿ ನಮಗೆ ವಿದ್ಯಾ ಹಿರೇಮಠ ಎಂಬುವವರನ್ನು ಎಲ್ಲಾರು ಪರಿಚಯ ಮಾಡಿಕೊಂಡು ಡಿನ್ನರ್ ಮುಗಿಸಿ ಪೋನ್ ನಂಬರ್ ಎಕೆಂಜ್ ಮಾಡಿಕೊಂಡು ಹೊರಡುತ್ತೇವೆ.

ಇನ್ನು ಕಾಲ್ ಮೆಸೇಜ್ ಎಲ್ಲವೂ ಸ್ಮಾರ್ಟ್ ಆಗುತ್ತೆ, ಎಲ್ಲರೂ ಒಂದು ಗ್ರೂಪ್ ಮಾಡಿಕೊಂಡು ಮಾತನಾಡುತ್ತಿರುತ್ತೇವೆ. ಎಲ್ಲವನ್ನೂ ರೆಕಾರ್ಡ್ ಮಾಡಿಕೊಂಡು ಮುನಿರತ್ನ ರವರಿಗೆ ಕಳುಹಿಸಿಕೊಟ್ಟಿರುತ್ತೇವೆ. ನಂತರ ಒನ್‌ ಡೇ ಟ್ರಿಪ್ ಅಂತ ಗುಹಾಂತರ ರೆಸಾರ್ಟ್ ಗೆ ಎಲ್ಲರೂ ಹೋಗುತ್ತೇವೆ. ಅಲ್ಲಿ ಕಿರಣ್ ಫ್ರೆಂಡ್ಸ್‌ ಆದ ಲೋಹಿತ್ ಗೌಡ(ಲೋಕಿ) ಮತ್ತು ಮಂಜುನಾಥ್ ಇವರು ಜಾಯಿನ್‌ ಆಗುತ್ತಾರೆ. ಎಲ್ಲರೂ ಕಪಲ್ಸ್ ಅಂತೇಳಿ ಹೋಗುತ್ತೇವೆ.

ರೂಮ್‌ನಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿಸಿ, ಎಲ್ಲರೂ ಸ್ವಿಮ್ಮಿಂಗ್ ಮಾಡಿ ಡ್ರೆಸ್ ಚೆಂಜ್ ಮಾಡುವ ದೃಶ್ಯಾಗಳನ್ನು ಚಿತ್ರೀಸಿಕೊಳ್ಳುತ್ತಾರೆ. ಲಕ್ಷ್ಮೀ, ಯಶೋಧದು ಕೂಡ, ಇದು ಸಾಕಾಗಲ್ಲ, ಅಂತ ಹೇಳಿ ನೆಕ್ಸ್ ಚಿಕ್ಕಬಳ್ಳಾಪುರದ ರೆಸಾರ್ಟ್ ಗೆ ಹೋಗುತ್ತೇವೆ. ನಾನು ಲೋಕಿ, ಕಿರಣ್, ಯಶೋಧ, ಮಂಜು, ಲಕ್ಷ್ಮಿ, ವಿದ್ಯಾ, ಹಿರೇಮಠ್‌ ಎಲ್ಲರೂ ಅಲ್ಲಿ ಅವಳಿಗೆ ಸ್ಲೀಪಿಂಗ್ ಟಾಬ್ಲೆಟ್ ಹಾಕಿರುವ ಓ.ಆರ್.ಎಸ್ ಅನ್ನು ಕುಡಿಸಿ ಲೋಕಿ, ಕಿರಣ್, ಮಂಜು ಅವಳೊಂದಿಗೆ ಕೆಟ್ಟ ವಿಡಿಯೋಸ್, ಪೋಟೋಸ್ ತೆಗೆದುಕೊಂಡು. ನಂತರ ಇದು ಸಾಕಾಗಲ್ಲ ಅಂತ ಹೇಳಿ 3 ದಿನ ಟ್ರಿಪ್ ಹೋಗಿ ಅಲ್ಲಿ, ಅವಳಿಗೆ ನ್ಯೂಡಲ್ಸ್ ,, ಡ್ರಿಂಕ್ಸ್ ಎಲ್ಲಾ ಕೊಟ್ಟು ಡ್ಯಾನ್ಸ್ ಮಾಡಿಸಿ ವಿಡಿಯೋ ಮಾಡಿಕೊಳ್ಳುತ್ತಾನೆ.

ಆ ನಂತರ 3ನೇ ದಿನ ರಾತ್ರಿ ಮುನಿರತ್ನ ಗನ್ ಮ್ಯಾನ್ ವಿಜಿಯ ಕುಮಾರ ಬಂದು ಬ್ಯಾಗ್ ಅಲ್ಲಿ ಡ್ರಗ್ಸ್ ಎಲ್ಲವನ್ನು ಕಿರಣ್ ಕೈಯಲ್ಲಿ ತಂದುಕೊಟ್ಟು ಅದನ್ನು ವಿದ್ಯಾ ಹಿರೇಮ‌ಠ ರೂಮ್ ಅಲ್ಲಿ ಇಡುವಂತೆ ಹೇಳುತ್ತಾರೆ, ಮತ್ತು ನಮ್ಮನ್ನೆಲ್ಲ ಅವಳೊಂದಿಗೆ ಜಗಳ ಮಾಡಿ ಅವಳನ್ನು ಅಲ್ಲಿಯೇ ಬಿಟ್ಟು ಹೊರಡಲು ಮುನಿರತ್ನ ಹೇಳುತ್ತಾರೆ, ನಾವು ಹೊರಡಲು ನಮಗೆ ಹೊಯ್ಸಳದಲ್ಲಿ ಎಸ್ಮಾರ್ಟ್ ಮಾಡುತ್ತಾರೆ ಪೊಲೀಸ್‌ನವರು, ನಾವು ಹೊರಡುತ್ತೇವೆ ಬೆಂಗಳೂರಿಗೆ ನಂತರ ಲೋಕಿಯಿಂದ ಅನ್ನಪೂರ್ಣೇಶ್ವರಿ ಲೇಔಟ್ ಪೊಲೀಸ್ ಸ್ಟೇಷನ್ ನಲ್ಲಿ ವಿದ್ಯಾ ಮೇಲೆ ಬ್ಲ್ಯಾಕ್ ಮೇಲ್ ಮಾಡಿದ್ದಾರೆಂದು ಕಂಪ್ಲೆಂಟ್ ಕೊಡಿಸಿ ಅವಳನ್ನು ಅರೆಸ್ಟ್ ಮಾಡಿಸಿ ರೇಡ್ ಮಾಡಿ ನಂತರ ಕಂಪ್ಲೇಂಟ್ ವಾಪಸ್ ತಗೋತಾರೆ, ಈ ವಿಷಯವಾಗಿ ರಾಮನಗರ ಕಮಿಷಿನರ್ ಆಫೀಸ್‌ನಲ್ಲಿ, ದೂರು ಸಹ ಸಲ್ಲಿಸಿರುತ್ತೇನೆ.

ಇದನ್ನು ತಿಳಿದ ಮುನಿರತ್ನ ರವರು ನನಗೆ ನೀನು ಇದನ್ನು ಮುಂದುವರಿಸಿದರೆ, ನಿನಗೂ ಮತ್ತು ಕುಟುಂಬದವರ ಜೀವ ಹಾಗೂ ಮಾನ ಮಾರ್ಯದೆ ಕಳೆಯುವುದಾಗಿ ಹಾಗೂ ನನ್ನ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುತ್ತೇನೆಂದು ಬೆದರಿಕೆ ಹಾಕಿದರು. ಅದರಿಂದ ನಾನು ನಿಮ್ಮ ನೊಟೀಸ್ ಗೆ ಹಾಜರು ಆಗಿರುವುದಿಲ್ಲ,. ಈಗ ಮುನಿರತ್ನ ಕಾನೂನಿನ ಬಂಧನದಲ್ಲಿರುವುದರಿಂದ ಮತ್ತೆ ಹೊರಗೆ ಬಂದು ನನಗೆ ಮತ್ತು ನನ್ನ ಕುಟುಂಬಕ್ಕೆ ತೊಂದರೆ ಮಾಡಬಹುದೆಂದು ತಿಳಿದು ನಿಮಗೆ ಈ ಮೂಲಕ ನನ್ನನ್ನು ಅನೇಕ ಬಾರಿ ಗೋಡನ್, ಕಾರ್ ಗಳಲ್ಲಿ, ಅತ್ಯಾಚಾರಗೈದು ಅವನ ದುಷ್ಟಾತ್ಮಗಳಿಗೆ ಜೀವ ಬೆದರಿಕೆ ಹಾಕಿ ನನ್ನನ್ನು ಬಳಸಿಕೊಂಡಿರುತ್ತಾನೆ. ತಾವು ನನಗೆ ಮುನಿರತ್ನರಿಂದ ಆದ ಅನ್ಯಾಯಕ್ಕೆ ಕಾನೂನಿನ ಮೂಲಕ ನ್ಯಾಯ ಮತ್ತು ರಕ್ಷಣೆ ಕೊಡಬೇಕೆಂದು ಮನವಿ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+