Salman Khan: ಛೋಟಾ ಮುಂಬೈ ಹುಬ್ಬಳ್ಳಿಗೆ ಬಡಾ ಮುಂಬೈ ಪೊಲೀಸರು, ಏನಿದೆ ನಂಟು!
ಬೆಂಗಳೂರು, ನವೆಂಬರ್ 06: ಅಪರಾಧ ಚಟುವಟಿಕೆಗಳ ಕಾರಣದಿಂದ ಲಾರೆನ್ಸ್ ಬಿಷ್ಣೋಯ್ ಜೈಲಿನಲ್ಲಿದ್ದರೂ ಸಹ ಬಾಲಿವುಡ್ ನಟ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅವರಿಗೆ ಢವ ಢವ ತಪ್ಪಿಲ್ಲ. ನಟನ ಮೇಲೆ ಒಂದೆರಡು ಭಾರಿ ಗುಂಡಿನ ದಾಳಿ ನಡೆದಿದ್ದು, ಜೀವ ಬೆದರಿಕೆಗಳು ಬಂದಿದ್ದವು. ಇದರ ಬೆನ್ನಲ್ಲೆ ಲಾರೆನ್ಸ್ ಸಹೋದರನ ಹೆಸರಿನಲ್ಲಿ ಕರ್ನಾಟಕದಿಂದ ಬೆದರಿಕೆ ಕರೆ ಹೋಗಿದ್ದರಿಂದ ಮುಂಬೈ ಪೊಲೀಸರು ವಾಣಿಜ್ಯ ನಗರದಲ್ಲಿ ಬೀಡು ಬಿಟ್ಟಿದ್ದಾರೆ.
ಬಿಷ್ಣೋಯಿ ಸಮುದಾಯದ ಖೈದಿ ಲಾರೆನ್ಸ್ ಬಿಷ್ಣೋಯ್ ಕೃಷ್ಣ ಮೃಗ ಕೊಂದ ಆರೋಪ ಹೊತ್ತಿರುವ ಸಲ್ಮಾನ್ ಅವರನ್ನು ಮುಗಿಸುವುದಾಗಿ ಹೇಳಿದ್ದಾರೆ. ಅಟ್ಯಾಕ್‌ಗಳು ಸಲ್ಮಾನ್ ಮೇಲೆ ನಡೆದಿದ್ದು, ಇದೀಗ ಅವರ ಮನೆ ಸುತ್ತಮುತ್ತ ಬೀಗಿ ಬಂದೋಬಸ್ತ್ ಕೊಡಲಾಗಿದೆ. ಇದರ ಬೆನ್ನಲ್ಲೆ ನಾಣು ಲಾರೆನ್ಸ್ ಸಹೋದರ ಎಂದು ಹೇಳಿ ಹುಬ್ಬಳ್ಳಿಯಿಂದ ಕರೆ ಮಾಡಿ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಒಡ್ಡಲಾಗಿದೆ.

ಈ ಕುರಿತು ತನಿಖೆ ಕೈಗೊಂಡಿರುವ ಮುಂಬೈ ಪೊಲೀಸರು ಆರೋಪಿಯ ಶೋಧಕ್ಕಾಗಿ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ನೆಟ್ ವರ್ಕ್ ಆಧಾರದಲ್ಲಿ ವಿವಿಧ ಕಡೆಗಳಲ್ಲಿ ಆರೋಪಿಯ ಪತ್ತೆ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.
ಹುಬ್ಬಳ್ಳಿ ವ್ಯಕ್ತಿಯಿಂದ ಬ್ಯಾಡ್‌ಬಾಯ್‌ಗೆ ಜೀವ ಬೆದರಿಕೆ
ನಟ ಸಲ್ಮಾನ್ ಖಾನ್ ಅವರಿಗೆ ಬೆದರಿಕೆಗಳು ಬರುತ್ತಿರುವುದು ಇದೇನು ಹೊಸದಲ್ಲ. ಈ ವಿಚಾರವಾಗಿ ಯಾರನ್ನು ಈವರೆಗೆ ಬಂಧಿಸಲಾಗಿಲ್ಲ. ಇದೀಗ ಸಲ್ಮಾನ್ ಖಾನ್ರನ್ನು ಕೊಲೆ ಮಾಡೋದಾಗಿ ಲಾರೆನ್ಸ್ ಬಿಷ್ಣೋಯ್ ಬ್ರದರ್ ಹೆಸರಿನಲ್ಲಿ ಹೊಸ ಬೆದರಿಕೆ ಹಾಕಲಾಗಿತ್ತು. ಬೆದರಿಸಿದ ಆರೋಪಿ ಹುಬ್ಬಳ್ಳಿಯವನು ಎಂಬುದು ಪೊಲೀಸರಿಗೆ ಗೊತ್ತಾಗಿದೆ. ಹೀಗಾಗಿ ನಿರ್ಲಕ್ಷ್ಯ ಮಾಡದೇ ಮುಂಬೈ ಪೊಲೀಸರು ಹುಬ್ಬಳ್ಳಿಗೆ ಬಂದಿದ್ದು, ಹುಬ್ಬಳ್ಳಿ ಪೊಲೀಸರ ಸಹಾಯದಿಂದ ಹುಡುಕಾಟ ನಡೆಸಿದ್ದಾರೆ.
ನಾನು ಲಾರೆನ್ಸ್ ಬಿಷ್ಣೋಯ್ ಸಹೋದರ ಎಂದು ಹೇಳಿದ್ದ ವ್ಯಕ್ತಿಯು ಮುಂಬೈ ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಂನ ಸಹಾಯವಾಣಿ ವಾಟ್ಸ್ಆಪ್ ಸಂಖ್ಯೆಗೆ ಸಂದೇಶ ಕಳುಹಿಸಿದ್ದ. ಅದರ ಜಾಡು ಹಿಡಿದು ಪರಿಶೀಲಿಸಿದಾಗ ಹುಬ್ಬಳ್ಳಿಗೆ ನಂಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್ ಅವರು ಕ್ಷಮೆ ಕೇಳಬೇಕು ಜೊತೆಗೆ 5 ಕೋಟಿ ರೂಪಾಯಿ ನೀಡಬೇಕು ಎಂದು ಆತ ಹೇಳಿದ್ದ. ಈತ ಕರ್ನಾಟಕ ಮೂಲದವನೆಂದು ತಿಳಿದು, ಪೊಲೀಸರು ಇಲ್ಲಿಗೆ ಆಗಮಿಸಿದ್ದಾರೆ. ಸ್ಥಳೀಯ ಪೊಲೀಸರಿಂದ ತಲಾಶ್ ನಡೆಸಿದ್ದಾರೆ.
ಬೆದರಿಕೆ ಒಡ್ಡಿರುವ ವ್ಯಕ್ತಿ ನಿಜಕ್ಕೂ ಲಾರೆನ್ಸ್ ಬಿಷ್ಣೋಯ್ ಸಹೋದರನೇ? ಅಥವಾ ಪ್ರ್ಯಾಂಕ್ ಮಾಡುವ ಉದ್ದೇಶದಿಂದ ಈ ಮೆಸೇಜ್ ಬಂದಿತ್ತೇ? ಅಂಬ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ.
ಈ ಹಿಂದೊಮ್ಮೆ ಇದೇ ಮುಂಬೈ ಟ್ರಾಫಿಕ್ ಪೊಲೀಸ್ನವರಿಗೆ ಸಲ್ಮಾನ್ ಖಾನ್ ಅವರನ್ನು ಬೆದರಿಕೆ ಹಾಕಿದ್ದರು
ಅದು ತಪ್ಪಾಗಿ ಸಂದೇಶ ರವಾನೆ ಆಗಿದೆ' ಎಂದು ಹೇಳಿ, ಮತ್ತದೇ ಸಂಖ್ಯೆಯಿಂದ ಕ್ಷಮೆ ಕೇಳಿದ್ದ ಸಂದೇಶವು ಬಂದಿತ್ತು.
ಸಲ್ಮಾನ್ ಖಾನ್‌ಗೆ ಮೂರು ಹಂತದಲ್ಲಿ ಭದ್ರತೆ
ಇತ್ತೀಚೆಗೆ ಸಲ್ಮಾನ್ ಮನೆ ಮೇಲೆ ಗುಂಡಿನ ದಾಳಿ ನಡೆಸಿದ ಕಾರಣ, ಅವರ ಮನೆಗೆ ಮೂರು ಹಂತದಲ್ಲಿ ಭದ್ರತೆ ನೀಡಲಾಗಿದೆ. ಕೇಂದ್ರ ಸರ್ಕಾರದ ಸೂಚನೆ ಮೆರೆಗೆ ಒಂದು ಹಂತದಲ್ಲಿ ಭದ್ರತೆ ನೀಡಲಾಗಿದೆ. ಇನ್ನೂ ಸ್ಥಳೀಯ ಪೊಲೀಸರು ಸಹ ಅಗತ್ಯ ಸಿಬ್ಬಂದಿ ನಿಯೋಜಿಸಿ ಭದ್ರತೆ ನೀಡುತ್ತಿದ್ದಾರೆ. ಇದರೊಂದಿಗೆ ನಟ ಸಲ್ಮಾನ್ ವೈಯಕ್ತಿವಾಗಿ ಬಾಡಿ ಗಾರ್ಡ್, ಸೆಕ್ಯೂರಿಟಿಯನ್ನು ಹೆಚ್ಚಿಸಿಕೊಂಡಿದ್ದಾರೆ.
ಮೂಲಗಳ ಪ್ರಕಾರ, ಕೇಂದ್ರ ಸರ್ಕಾರ ಸಲ್ಮಾನ್‌ಗೆ ಭದ್ರತೆ ಒದಗಿಸಲು ತಿಂಗಳಿಗೆ 10 ಲಕ್ಷ ರೂಪಾಯಿ ಖರ್ಚು ಮಾಡುತ್ತಿದೆ. ಪೊಲೀಸರು ಸಲ್ಮಾನ್ ಮನೆಯ ಸುತ್ತಮುತ್ತ ಓಡಾಡುವ ಪ್ರತಿಯೊಬ್ಬರನ್ನು, ಸಾರ್ವಜನಿಕರು, ನಿವಾಸಿಗಳನ್ನು ನಿತ್ಯ ಪರಿಶೀಲಿಸುತ್ತಾರೆ. ಮನಯಿಂದ ಹೊರ ಹೋಗುವಾಗ, ಮನೆಗೆ ಬರುವಾಗ ತಪಾಸಣೆ ನಡೆಯುತ್ತದೆ. ಇದರಿಂದ ನಟನ ಮನೆಯ ಸುತ್ತಮುತ್ತಲಿನ ನಾಗರಿಕರು ಕಿರಿ ಕಿರಿ, ತೊಂದರೆ ಅನುಭವಿಸುತ್ತಿದ್ದಾರೆ ಎನ್ನಲಾಗಿದೆ.












Click it and Unblock the Notifications