MUDA Scam: ಸ್ವಯಂಘೋಷಿತ ಸಂವಿಧಾನ ರಕ್ಷಕರು ಇದಕ್ಕೆ ಏನಂತಾರೆ ಎಂದ ಆರ್‌. ಅಶೋಕ್‌

ಮುಡಾ ಹಗರಣದ ವಿಚಾರವಾಗಿ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದಾರೆ. ಮುಡಾ ಹಗರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸರಿಯಾಗಿಯೇ ಇದೆ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ತೀರ್ಪು ನೀಡಿದಾಗಿನಿಂದಲೂ ವಿರೋಧ ಪಕ್ಷಗಳು ಸಿ.ಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿವೆ. ಆದರೆ, ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್‌ ಪುನರುಚ್ಚರಿಸಿದೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಆರ್‌ ಅಶೋಕ್‌ ಅವರು, ಸ್ವಯಂಘೋಷಿತ ಸಂವಿಧಾನ ರಕ್ಷಕರಾದ ಸಿಎಂ ಸಿದ್ದರಾಮಯ್ಯ ಅವರಿಗೆ ಕಳಂಕ ಹೊತ್ತ ವ್ಯಕ್ತಿಗಳು ಸಾಂವಿಧಾನಿಕ ಹುದ್ದೆಯಲ್ಲಿ ಮುಂದುವರಿಯಬಾರದು ಎಂಬ ಕನಿಷ್ಠ ನೈತಿಕತೆಯೂ ಇಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಹೈಕೋರ್ಟ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿ ನೀಡಿರುವುದು ಅವರು ಮೇಲ್ನೋಟಕ್ಕೆ ತಪ್ಪಿತಸ್ಥರು ಎಂದೇ ಅರ್ಥವಲ್ಲೇ. ಇನ್ನೂ ತನಿಖೆ ಬಾಕಿ ಇರುವಾಗ ರಾಜೀನಾಮೆ ಯಾಕೆ ಕೊಡಬೇಕು ಎನ್ನುವುದೇ ಆದರೆ, ನೀವು ಸಚಿವ ನಾಗೇಂದ್ರ ಅವರಿಂದ ರಾಜೀನಾಮೆ ಪಡೆದಿರುವುದುಕ್ಕೆ ಕಾರಣವೇನು. ಸಿದ್ದರಾಮಯ್ಯನವರ ಮೊದಲ ಅವಧಿಯಲ್ಲಿ ಆಗ ಆರೋಪ ಹೊತ್ತಿದ್ದ ಸಂತೋಷ್ ಲಾಡ್ ಹಾಗೂ ಕೆ.ಜೆ.ಜಾರ್ಜ್ ಅವರ ರಾಜೀನಾಮೆ ಪಡೆದಿದ್ದು ಯಾವ ಕಾರಣಕ್ಕಾಗಿ, ಕಾಂಗ್ರೆಸ್ ಪಕ್ಷದಲ್ಲಿ ಬೇರೆಯವರಿಗೊಂದು ನ್ಯಾಯ, ಸಿದ್ದರಾಮಯ್ಯನ ವರಿಗೊಂದು ನ್ಯಾಯಾ ಎನ್ನುವುದು ಇದೆಯೇ ಎಂದು ಅವರು ಕೇಳಿದ್ದಾರೆ.

MUDA Scam What R Ashok said about Siddaramaiah s decision

ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಮಹಾ ತಪ್ಪು, ರಾಜ್ಯಪಾಲರು ಪಕ್ಷಪಾತಿ, ಬಿಜೆಪಿ ಏಜೆಂಟ್ ಎಂದೆಲ್ಲಾ ಮನಸೋಇಚ್ಛೆ ನಿಂದನೆ ಮಾಡಿದ್ದರು. ಇದೀಗ ಹೈಕೋರ್ಟ್‌ ರಾಜ್ಯಪಾಲರ ನಿರ್ಧಾರ ಸರಿ ಇದೆ ಎಂದು ಹೇಳಿದೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಸಚಿವರು ರಾಜ್ಯಪಾಲರ ಕ್ಷಮೆ ಕೇಳಬೇಕಲ್ಲವೇ ಎಂದೂ ಅವರು ಒತ್ತಾಯಿಸಿದ್ದಾರೆ. ಮುಂದುವರಿದು, ಹೈಕೋರ್ಟ್‌ನ ತೀರ್ಪಿನ ನಂತರವೂ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯದೆ ಮೊಂಡಾಟ ಮಾಡುತ್ತಿರುವ ಡೋಂಗಿ ಸಂವಿಧಾನ ರಕ್ಷಕ ರಾಹುಲ್‌ ಗಾಂಧಿ ಅವರ ಗೋಮುಖ ವ್ಯಾಘ್ರ ಮುಖವಾಡ ಈಗ ಕಳಚಿ ಬಿದ್ದಿದೆ ಎಂದು ಅವರು ಕಿಡಿಕಾರಿದ್ದಾರೆ.

ವ್ಯಂಗ್ಯ ಪೋಸ್ಟ್‌ ಹಂಚಿಕೊಂಡ ಬಿಜೆಪಿ

ಇನ್ನು ಮಾಜಿ ಸಚಿವ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಬಿ. ನಾಗೇಂದ್ರ ಹಾಗೂ ಮುಡಾ ಹಗರಣದಲ್ಲಿ ಮುಜುಗರಕ್ಕೆ ಒಳಪಟ್ಟಿರುವ ಸಿದ್ದರಾಮಯ್ಯ ಇಬ್ಬರ ಕುರಿತು ಸಹ ಬಿಜೆಪಿ ವ್ಯಂಗ್ಯವಾದ ಪೋಸ್ಟ್‌ವೊಂದನ್ನು ಮಾಡಿದೆ. ಅದರಲ್ಲಿ ಜೈಲಿನಲ್ಲಿ ಒಬ್ಬಂಟಿಯಾಗಿರುವ ನಮ್ಮ ನಾಗೇಂದ್ರ ಅವರನ್ನು ಶೀಘ್ರದಲ್ಲಿಯೇ ಕೂಡಿಕೊಳ್ಳಲಿರುವ ಸಿದ್ದರಾಮಯ್ಯ ಅವರಿಗೆ ಹಾರ್ದಿಕ ಸ್ವಾಗತ ಎಂದು ಹೇಳಲಾಗಿದೆ.

ಅಲ್ಲದೇ ಪರಪ್ಪನ ಅಗ್ರಹಾರದಲ್ಲಿರುವ ನಾಗೇಂದ್ರ ಅವರನ್ನು ಶೀಘ್ರದಲ್ಲಿಯೇ ಕೂಡಿಕೊಳ್ಳಲಿದ್ದಾರೆ ಕಡುಭ್ರಷ್ಟ ಸಿದ್ದರಾಮಯ್ಯ ಅವರು ಎಂದು ಟ್ವೀಟ್‌ ಮಾಡಲಾಗಿದೆ.

ಸಿದ್ದರಾಮಯ್ಯ ರಾಜೀನಾಮೆ ಪ್ರಶ್ನೆಯೇ ಇಲ್ಲ: ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಈಗಾಗಲೇ ಕಾಂಗ್ರೆಸ್‌ನ ಹಲವು ನಾಯಕರು ಹೇಳಿದ್ದಾರೆ. ಹೈಕಮಾಂಡ್‌ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ನಿಂತಿದೆ. ಈಗ ತನಿಖೆಗೆ ಮಾತ್ರ ಆದೇಶ ನೀಡಲಾಗಿದೆ. ಆರೋಪ ಸಾಬೀತಾಗಿಲ್ಲ ಎನ್ನುವುದು ಕಾಂಗ್ರೆಸ್‌ನ ವಾದವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+