ಕೊರೊನಾದಿಂದ ಗುಣಮುಖರಾದರೂ 'ಮ್ಯೂಕೋರ್ಮೈಕೋಸಿಸ್' ಬದುಕಲು ಬಿಡುತ್ತಿಲ್ಲ!
ಬೆಂಗಳೂರು, ಜುಲೈ 12: ರಾಜ್ಯದಲ್ಲಿ ಕೊರೊನಾದಿಂದ ಗುಣಮುಖರಾದರೂ "ಮ್ಯೂಕೋರ್ಮೈಕೋಸಿಸ್' ಬೆಂಬಿಡದೆ ಕಾಡುತ್ತಿದೆ. ಚೇತರಿಸಿಕೊಂಡವರಲ್ಲೂ ಈ ರೋಗ ಕಾಣಿಸಿಕೊಂಡು ಸಾವಿನದವೆಡೆಗೆ ನೂಕುತ್ತಿದೆ.
ಮ್ಯೂಕೋರ್ಮೈಕೋಸಿಸ್‌ನಿಂದ ಬೆಂಗಳೂರಿನಲ್ಲಿ ನೂರಕ್ಕಿಂತಲೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಬ್ಲ್ಯಾಕ್ ಫಂಗಸ್ ಅಥವಾ ಮ್ಯೂಕೋರ್ಮೈಕೋಸಿಸ್‌ನ್ನು ಸಾಂಕ್ರಾಮಿಕ ಎಂದು ಘೋಷಿಸಲಾಗಿದೆ.
ಕಪ್ಪು ಫಂಗಸ್‌ನಿಂದ ರಾಜ್ಯದಲ್ಲಿ 303 ಮಂದಿ ಮೃತಪಟ್ಟಿದ್ದು, ಅದರಲ್ಲಿ 104 ಮಂದಿ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ 3,419 ಮಂದಿ ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್‌ನಿಂದ ಬಳಲುತ್ತಿದ್ದಾರೆ.

ಕೊರೊನಾ ಸೋಂಕಿತರ ಸಾವಿಗೆ ಕಪ್ಪು ಫಂಗಸ್ ಮಾತ್ರ ಕಾರಣವಲ್ಲ
ಕೊರೊನಾ ಸೋಂಕಿತರ ಸಾವಿಗೆ ಕೇವಲ ಕಪ್ಪು ಪಂಗಸ್ ಅಷ್ಟೇ ಕಾರಣವಲ್ಲ, ಅವರ ದೇಹದಲ್ಲಿರುವ ರಕ್ತದೊತ್ತಡ, ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಳ, ಸ್ಟೀರಾಯ್ಡ್ ಚಿಕಿತ್ಸೆಯಿಂದಲೂ ಕಪ್ಪು ಫಂಗಸ್ ಹೆಚ್ಚಳವಾಗುತ್ತಿದೆ.

ಯಾವ ಜಿಲ್ಲೆಗಳಲ್ಲಿ ಎಷ್ಟು ಪ್ರಕರಣಗಳಿವೆ
ಬೆಂಗಳೂರು ನಗರದಲ್ಲಿ 1,109 ಕೊರೊನಾ ಸೋಂಕಿತರಿದ್ದಾರೆ, ಧಾರವಾಡದಲ್ಲಿ 279, ವಿಜಯಪುರದಲ್ಲಿ 208 ಹಾಗೂ 196, ಕಲಬುರಗಿಯಲ್ಲಿ 23, ದಕ್ಷಿಣ ಕನ್ನಡದಲ್ಲಿ 20 ಪ್ರಕರಣಗಳಿವೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಕಪ್ಪು ಶಿಲೀಂಧ್ರ ಸೋಂಕು
ಇದೊಂದು ಫಂಗಲ್ ಇನ್ಫೆಕ್ಷನ್ ಕಾಯಿಲೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದ್ದಾರೆ. ಇದು ಸಾಮಾನ್ಯವಾಗಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಪೀಡಿತ ರೋಗಿಗಳ ನೈಸರ್ಗಿಕ ರೋಗಾಣುಗಳ ವಿರುದ್ಧ ಹೋರಾಡುವ ಕ್ಷಮತೆಯನ್ನು ಕಡಿಮೆ ಮಾಡುತ್ತದೆ.

ಯಾರಿಗೆ ಕಪ್ಪು ಫಂಗಸ್ ಅಂಟಿಕೊಳ್ಳಲಿದೆ?
ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಅಥವಾ ವೆರಿಕೋಜೋನಲ್ ಥೆರಿಪಿಗೆ ಒಳಗಾಗಿರುವ, ಅನಿಯತ್ರಿತ ಮಧುಮೇಹ, ಸ್ಟೆರಾಯಿಡ್ ಗಳ ಅತಿಯಾದ ಬಳಕೆಯಿಂದ ರೋಗನಿರೋಧಕ ಶಕ್ತಿ ಕಳೆದುಕೊಂಡವರು ಅಥವಾ ಅಧಿಕ ಕಾಲ ICUನಲ್ಲಿ ಚಿಕಿತ್ಸೆ ಪಡೆದವರು ಈ ಫಂಗಲ್ ಇನ್ಫೆಕ್ಷನ್ ಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.

ಲಕ್ಷಣಗಳೇನು?
ಬ್ಲಾಕ್ ಫಂಗಸ್ ಗೆ ಗುರಿಯಾದ ವ್ಯಕ್ತಿಗಳ ಕಣ್ಣು ಅಥವಾ ಮೂಗಿನ ಬಳಿ ಕೆಂಪು ಗುರುತು ಕಾಣಿಸುವ ಸಾಧ್ಯತೆ ಇದೆ ಅಥವಾ ನೋವು ಇರಲಿದೆ. ಇದಲ್ಲದೆ, ಜ್ವರ, ತಲೆನೋವು, ಕಫ, ಉಸಿರಾಟ ತೊಂದರೆ, ರಕ್ತದ ವಾಂತಿ, ಮಾನಸಿಕ ಸೀಮಿತದಲ್ಲಿ ಬದಲಾವಣೆಯಂತಹ ಲಕ್ಷಣಗಳು ಕಾಣಿಸುವ ಸಾಧ್ಯತೆ ಇದೆ.
Recommended Video

ಕೊರೊನಾ ಸೋಂಕಿತರು ಮಾಡಬೇಕಾಗಿದ್ದೇನು?
ಈ ಕುರಿತು ಆರೋಗ್ಯ ಸಚಿವರು ಹಂಚಿಕೊಂಡಿರುವ ಮತ್ತೊಂದು ಸ್ಲೈಡ್ ನಲ್ಲಿ ಹೈಪರ್ ಗ್ಲೈಕೊಮಿಯಾ ನಿಯಂತ್ರಣದಲ್ಲಿಡಲು ಸೂಚಿಸಲಾಗಿದೆ. ಡಯಾಬಿಟಿಸ್ ನಿಂದ ಬಳಲುತ್ತಿರುವ ವ್ಯಕ್ತಿ ಒಂದು ವೇಳೆ ಕೊವಿಡ್‌ಗೆ ತುತ್ತಾದರೆ, ಅವರು ಡಿಸ್ಚಾರ್ಜ್ ಆದಬಲಿಕ ಅವರ ಬ್ಲಡ್ ಗ್ಲುಕೋಸ್ ಲೆವಲ್ ಮೇಲೆ ಕಣ್ಣಿಡಲು ಹೇಳಲಾಗಿದೆ. ಸ್ಟೇರಾಯಿಡ್ ಗಳ ಬಳಕೆ ಎಚ್ಚರಿಕೆಯಿಂದ ಮಾಡಬೇಕು. ಆಕ್ಸಿಜನ್ ಥೆರಪಿಯ ವೇಳೆ ಶುದ್ಧ ಹಾಗೂ ಸ್ಟೆರಾಯಿಲ್ ನೀರಿನ ಬಳಕೆ ಮಾಡಬೇಕು. ಆಂಟಿ ಬಯೋಟಿಕ್ ಹಾಗೂ ಆಂಟಿ ಫಂಗಲ್ ಔಷಧಿಗಳ ಬಳಕೆ ವಿವೇಚನೆಯಿಂದ ಮಾಡಬೇಕು ಎಂದು ಆರೋಗ್ಯ ಸಚಿವರು ಸಲಹೆ ನೀಡಿದ್ದಾರೆ.












Click it and Unblock the Notifications