ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ಒಬ್ಬ ಬಚ್ಚಾ, ಶೋಭಾ ಕರಂದ್ಲಾಜೆ ವಾಗ್ದಾಳಿ

|
Google Oneindia Kannada News

ಬೀದರ್, ಜುಲೈ 06 : 'ದುರ್ಬಲ' ಪ್ರಧಾನಿ ಎಂದು ನರೇಂದ್ರ ಮೋದಿ ಅವರನ್ನು ಟೀಕಿಸಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ಗುರುವಾರ ಬೀದರ್ ನಲ್ಲಿ ವಾಗ್ದಾಳಿ ನಡೆಸಿದರು.

'ದುರ್ಬಲ' ಪ್ರಧಾನಿ ನರೇಂದ್ರ ಮೋದಿ ಎಂದು ರಾಹುಲ್ ಟ್ವೀಟ್ ಮಾಡಿದ್ದೇಕೆ?'ದುರ್ಬಲ' ಪ್ರಧಾನಿ ನರೇಂದ್ರ ಮೋದಿ ಎಂದು ರಾಹುಲ್ ಟ್ವೀಟ್ ಮಾಡಿದ್ದೇಕೆ?

ಅಮೆರಿಕ ಪ್ರವಾಸದ ವೇಳೆ ಎಚ್‌1ಬಿ ವೀಸಾ ವಿಚಾರವನ್ನು ಪ್ರಸ್ತಾಪ ಮಾಡದೆ ಹಿಂದಿರುಗಿದ ನರೇಂದ್ರ ಮೋದಿ ಅವರು ದುರ್ಬಲ ಪ್ರಧಾನಿ ಎಂದು ರಾಹುಲ್ ಗಾಂಧಿ ಅವರು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಶೋಭಾ, "ರಾಹುಲ್ ಗಾಂಧಿ ಒಬ್ಬ ಬಚ್ಚಾ, ಮೋದಿ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.

MP Shobha Karandlaje reacts about Rahul Gandhi statement Modi a weak pm

ಇದುವರೆಗೆ ಭಾರತದ ಯಾವುದೇ ಪ್ರಧಾನಿಯೂ ಹೋಗಲು ಧೈರ್ಯ ಮಾಡದ ಇಸ್ರೇಲ್ ಗೆ ಭೇಟಿ ಕೊಡುವ ಎದೆಗಾರಿಕೆ ತೋರಿದ ಪ್ರಧಾನಿ ಮೋದಿಯವರ ಬಗ್ಗೆ ಮಾತನಾಡುವ ಮೊದಲು ರಾಹುಲ್ ತಮ್ಮ ಪಕ್ಷದ ಹುಳುಕುಗಳನ್ನು ಸರಿಪಡಿಸಲಿ ಎಂದು ಸಲಹೆ ನೀಡಿದರು.

English summary
Udupi-Chikmagalur MP Shobha Karandlaje reacts in Bidar today, about AICC vice president Rahul Gandhi statement against PM Narendra Modi a weak pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X