ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ದೈವ ಭಕ್ತರಾಗದಿದ್ದರೆ ಕೋತಿ ಎಂಬ ಹೆಸರಿರುತ್ತಿತ್ತು'

|
Google Oneindia Kannada News

ಬೆಂಗಳೂರು, ಡಿ. 25 : 'ಬಿಜೆಪಿಯವರನ್ನು ಸುಮ್ನೆ ಬಿಟ್ರೆ, ಮುಂದೊಂದು ದಿನ ನಾಥೂರಾಮ್‌ ಗೋಡ್ಸೆಗೂ ಭಾರತ ರತ್ನ ಕೊಡ್ತಾರೆ' ಎಂಬ ಸಮಾಜಕಲ್ಯಾಣ ಸಚಿವ ಎಚ್‌.ಆಂಜನೇಯ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ಕೊಟ್ಟಿದ್ದು, . 'ಆಂಜನೇಯವರಿಗೆ ಕೋತಿ ಎಂಬ ಹೆಸರಿಡುತ್ತಿದ್ದರು' ಎಂದು ವ್ಯಂಗ್ಯವಾಡಿದ್ದಾರೆ.

ಬುಧವಾರ ಕೊಪ್ಪಳದಲ್ಲಿ ಮಾತನಾಡಿದ್ದ ಸಚಿವ ಆಂಜನೇಯ ಅವರು, ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಮದನ್‌ ಮೋಹನ್‌ ಮಾಳವೀಯ ಅವರಿಗೆ ಕೇಂದ್ರ ಸರ್ಕಾರ ಭಾರತರತ್ನ ಪ್ರಶಸ್ತಿ ನೀಡುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿ, ದೇಶಕ್ಕಾಗಿ ಶ್ರಮಿಸಿದವರಿಗೆ ಪ್ರದಾನ ಮಾಡಲಾಗುತ್ತಿದ್ದ ಭಾರತರತ್ನ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಪಕ್ಷನಿಷ್ಠೆ ತೋರಿದವರಿಗೆ ಘೋಷಿಸಿದೆ ಎಂದು ಟೀಕಿಸಿದ್ದರು.

H Anjaneya

'ಬಿಜೆಪಿಯವರನ್ನು ಸುಮ್ನೆ ಬಿಟ್ರೆ, ಮುಂದೊಂದು ದಿನ ನಾಥೂರಾಮ್‌ ಗೋಡ್ಸೆಗೂ ಭಾರತರತ್ನ ಕೊಡ್ತಾರೆ' ಎಂದು ವ್ಯಂಗ್ಯವಾಡಿದರು. ಆಂಜನೇಯ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. [ವಾಜಪೇಯಿ, ಮಾಳವೀಯರಿಗೆ 'ಭಾರತರತ್ನ' ಘೋಷಣೆ]

ಗುರುವಾರ ಮೈಸೂರಿನಲ್ಲಿ ಮಾತನಾಡಿದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು, 'ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯರವರ ತಂದೆ-ತಾಯಿ ದೈವ ಭಕ್ತರಾಗಿದ್ದರೆಂದೆನಿಸುತ್ತದೆ ಹಾಗಾಗಿ ಅವರಿಗೆ ಆಂಜನೇಯ ಎಂದು ಹೆಸರಿಟ್ಟಿದ್ದಾರೆ. ಇಲ್ಲದಿದ್ದರೆ ಅವರಿಗೆ 'ಕೋತಿ' ಎಂಬ ಹೆಸರಿಡುತ್ತಿದ್ದರೇನೋ?' ಎಂದು ಹೇಳಿದ್ದಾರೆ.

ಸುರೇಶ್ ಕುಮಾರ್ ತಿರುಗೇಟು : ಸಚಿವ ಆಂಜನೇಯ ಹೇಳಿಕೆಗೆ ಮಾಜಿ ಸಚಿವ ಸುರೇಶ್ ಕುಮಾರ್ ಅವರು ತಿರುಗೇಟು ಕೊಟ್ಟಿದ್ದರು, ಭಾರತ ರತ್ನ ಪಡೆದ ಇಬ್ಬರೂ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಆಂಜನೇಯಗೆ ರಾಜಕೀಯ ಇತಿಹಾಸ ಗೊತ್ತಿಲ್ಲ ಎಂದು ಸುರೇಶ್ ಕುಮಾರ್ ಕಿಡಿಕಾರಿದ್ದರು.

'ಸಚಿವ ಆಂಜನೇಯ ಮತಾಂಧರ ರೀತಿಯಲ್ಲೇ ಒಬ್ಬ ಪಕ್ಷಾಂಧ. ಕುಹಕಗಳ ಮೂಲಕ ಅಜ್ಞಾನ ಪ್ರದರ್ಶಿಸಿದ್ದಾರೆ. ಸೇವೆ ಎಂದರೆ ಸರ್ಕಾರಿ ಹಣದಲ್ಲಿ ಹಾಸ್ಟೆಲ್‌ ನಿರ್ಮಿಸಿದಂತಲ್ಲ' ಎಂದು ಸುರೇಶ್ ಕುಮಾರ್ ಲೇವಡಿ ಮಾಡಿದ್ದರು.

English summary
Mysore-Kodagu MP Pratap Simha reacted sharply to Social Welfare Minister H.Anjaneya’s comments on the Centers decision to confer Bharat Ratna to Madan Mohan Malaviya and former prime minister Atal Bihari Vajpayee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X