ಚುನಾವಣಾಪೂರ್ವ ಸಮೀಕ್ಷೆ: ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಮುನ್ನಡೆ?

Written By:
Subscribe to Oneindia Kannada

ಬೆಂಗಳೂರು, ಫೆ 12: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲು ಇನ್ನೂ ಹೆಚ್ಚುಕಮ್ಮಿ ಹದಿನೈದು ತಿಂಗಳು ಬಾಕಿಯಿದೆ. ಆದರೂ, ಮೂರೂ ಪ್ರಮುಖ ಪಕ್ಷಗಳು ಪೂರ್ವ ತಯಾರಿ ಆರಂಭಿಸಿಯಾಗಿದೆ.

ಇದೇ ಬರುವ ಮೇ ತಿಂಗಳಿಗೆ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಸರಕಾರಕ್ಕೆ ನಾಲ್ಕು ವರ್ಷ ತುಂಬಲಿದೆ. ಈ ನಾಲ್ಕು ವರ್ಷಗಳಲ್ಲಿ ಸಿದ್ದರಾಮಯ್ಯ ಸರಕಾರದ ಸಾಧನೆ, ವೈಫಲ್ಯ, ಪ್ರಮುಖ ವಿಚಾರಗಳನ್ನು ನಿಭಾಯಿಸಿದ ರೀತಿ ಮುಂತಾದವುದರ ಬಗ್ಗೆ ಸರ್ವೇ ನಡೆಸಲಾಗಿದೆ.

ಈಗ ಚುನಾವಣೆ ನಡೆದರೆ ಜನರ ಒಲವು ಯಾವ ಪಕ್ಷದತ್ತ, ರಾಜ್ಯ ಮುನ್ನಡೆಸಲು ಸೂಕ್ತ ನಾಯಕನಾರು ಮುಂತಾದ ಪ್ರಶ್ನೆಗಳನ್ನು ಇಟ್ಟುಕೊಂಡು ಯುಬಿಕಾ ರಿಸರ್ಚ್ ಸಂಸ್ಥೆಯ ಸಹಯೋಗದೊಂದಿಗೆ ಪಬ್ಲಿಕ್ ಟಿವಿ ಸಮೀಕ್ಷೆ ನಡೆಸಿದೆ.

ನಗರ, ಪಟ್ಟಣ , ಗ್ರಾಮೀಣ ಭಾಗಗಳಲ್ಲಿ ಸರ್ವೇಕ್ಷಣೆ ನಡೆಸಿ, ಎಲ್ಲಾ ಸ್ಥರದ ಪ್ರಜೆಗಳ ಅಭಿಪ್ರಾಯ ಕ್ರೋಢೀಕರಿಸಿ, ಜಾತಿ, ಧರ್ಮ ಆಧಾರಿತ ವಿಷಯಗಳನ್ನು ಅಳತೆಗೋಲನ್ನಾಗಿ ಅನುಸರಿಸಿ, ಪಬ್ಲಿಕ್ ಟಿವಿ ಈ ಚುನಾವಣಾಪೂರ್ವ ಸಮೀಕ್ಷೆ ನಡೆಸಿದೆ.

ಈ ಸಮೀಕ್ಷೆಯ ಕೆಲವು ಪ್ರಮುಖ ಅಂಶಗಳನ್ನು ಕೆಳಗೆ ಮುಂದುವರಿಸಲಾಗಿದೆ..

ಸಿದ್ದು ಸರಕಾರದಲ್ಲಿ ರಾಜ್ಯದ ಅಭಿವೃದ್ಧಿಯನ್ನು ಹೇಗೆ ರೇಟ್ ಮಾಡುವಿರಿ?

ಸಿದ್ದು ಸರಕಾರದಲ್ಲಿ ರಾಜ್ಯದ ಅಭಿವೃದ್ಧಿಯನ್ನು ಹೇಗೆ ರೇಟ್ ಮಾಡುವಿರಿ?

ಅತ್ಯುತ್ತಮ - ಶೇ.17%
ಚೆನ್ನಾಗಿದೆ - ಶೇ. 31%
ಸುಮಾರು - ಶೇ. 31%
ಕಳಪೆ - ಶೇ. 19%
ತೀರಾ ಕಳಪೆ - ಶೇ. 1%

ಸರ್ಕಾರದ ಯೋಜನೆಗಳು ಜನರನ್ನು ಸರಿಯಾಗಿ ತಲುಪಿವೆಯಾ?

ಸರ್ಕಾರದ ಯೋಜನೆಗಳು ಜನರನ್ನು ಸರಿಯಾಗಿ ತಲುಪಿವೆಯಾ?

ಹೌದು - ಶೇ.57%
ಇಲ್ಲ - ಶೇ. 36%
ಹೇಳಲಾಗದು - ಶೇ. 7%

ಸರ್ಕಾರದ ಅವಧಿಯಲ್ಲಿ ವಿಪಕ್ಷಗಳು ಸರಿಯಾಗಿ ಕಾರ್ಯ ನಿರ್ವಹಿಸಿವೆಯೇ?

ಸರ್ಕಾರದ ಅವಧಿಯಲ್ಲಿ ವಿಪಕ್ಷಗಳು ಸರಿಯಾಗಿ ಕಾರ್ಯ ನಿರ್ವಹಿಸಿವೆಯೇ?

ಹೌದು - ಶೇ. 54%
ಇಲ್ಲ - ಶೇ. 36%
ಹೇಳಲಾಗದು -ಶೇ. 10%

ಕರ್ನಾಟಕದ ಮುಂದಿನ ಸಿಎಂ ಯಾರಾಗಬೇಕು?

ಕರ್ನಾಟಕದ ಮುಂದಿನ ಸಿಎಂ ಯಾರಾಗಬೇಕು?

ಸಿದ್ದರಾಮಯ್ಯ - ಶೇ. 37%
ಮಲ್ಲಿಕಾರ್ಜುನ ಖರ್ಗೆ -ಶೇ. 8%
ಬಿ ಎಸ್ ಯಡಿಯೂರಪ್ಪ -ಶೇ. 33%
ಜಗದೀಶ್ ಶೆಟ್ಟರ್ - ಶೇ. 1%
ಎಚ್‍ ಡಿ ಕುಮಾರಸ್ವಾಮಿ - ಶೇ. 19%

ಈಗಿನ ಕಾಂಗ್ರೆಸ್ ಸರ್ಕಾರವು ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಭ್ರಷ್ಟವೇ?

ಈಗಿನ ಕಾಂಗ್ರೆಸ್ ಸರ್ಕಾರವು ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಭ್ರಷ್ಟವೇ?

ಹೌದು ಹೆಚ್ಚು ಭ್ರಷ್ಟ - ಶೇ. 55%
ಇಲ್ಲ ಕಡಿಮೆ ಭ್ರಷ್ಟ - ಶೇ.40%
ಹೇಳಲಾಗದು - ಶೇ. 4%

ಮೋದಿ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ತೋರುತ್ತಿದೆಯೇ?

ಮೋದಿ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ತೋರುತ್ತಿದೆಯೇ?

ಹೌದು - ಶೇ. 50%
ಇಲ್ಲ - ಶೇ.43%
ಹೇಳಲಾಗದು -ಶೇ. 7%

ಸಿದ್ದರಾಮಯ್ಯ ಮತ್ತೆ ಸಿಎಂ ಆಗಲು ಓಟು ಹಾಕುತ್ತೀರಾ?

ಸಿದ್ದರಾಮಯ್ಯ ಮತ್ತೆ ಸಿಎಂ ಆಗಲು ಓಟು ಹಾಕುತ್ತೀರಾ?

ಹೌದು - ಶೇ. 37%
ಇಲ್ಲ - ಶೇ. 57%
ಹೇಳಲಾಗದು - ಶೇ. 5%

ಇಂದೇ ಚುನಾವಣೆ ನಡೆದರೆ ನಿಮ್ಮ ಮತ ಯಾವ ಪಕ್ಷಕ್ಕೆ?

ಇಂದೇ ಚುನಾವಣೆ ನಡೆದರೆ ನಿಮ್ಮ ಮತ ಯಾವ ಪಕ್ಷಕ್ಕೆ?

ಕಾಂಗ್ರೆಸ್ - ಶೇ. 30%
ಬಿಜೆಪಿ - ಶೇ. 37%
ಜೆಡಿಎಸ್ -ಶೇ. 28%
ಇತರೆ - ಶೇ. 5%

ಇಂದೇ ಚುನಾವಣೆ ನಡೆದರೆ ಪಕ್ಷಗಳ ಬಲಾಬಲ

ಇಂದೇ ಚುನಾವಣೆ ನಡೆದರೆ ಪಕ್ಷಗಳ ಬಲಾಬಲ

ಕಾಂಗ್ರೆಸ್: 67-87
ಬಿಜೆಪಿ : 75-95
ಜೆಡಿಎಸ್ : 43-63
ಇತರರು: 5-15

ನೋಟ್ ಬ್ಯಾನ್ ಮಾಡಿದ್ದು ಭ್ರಷ್ಟಾಚಾರವನ್ನು ಕಿತ್ತೊಗೆಯಲು ಸಹಕಾರಿಯಾಗುತ್ತಾ?

ನೋಟ್ ಬ್ಯಾನ್ ಮಾಡಿದ್ದು ಭ್ರಷ್ಟಾಚಾರವನ್ನು ಕಿತ್ತೊಗೆಯಲು ಸಹಕಾರಿಯಾಗುತ್ತಾ?

ಹೌದು - ಶೇ. 73%
ಇಲ್ಲ - ಶೇ.22%
ಹೇಳಲಾಗದು - ಶೇ. 5%

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mood of Karnataka: Joint survey by Public TV and Ubika research. Various questions asked in this survey including who is suitable for CM, which party is better to rule next time.
Please Wait while comments are loading...