ಮಳೆಗಾಲದಲ್ಲಿ ಲೈನ್‌ಮನ್‌ಗಳು ತೆಗೆದುಕೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕೆಗಳು ಇಲ್ಲಿವೆ

ಬೆಂಗಳೂರು, ಜುಲೈ. 19: ಮಳೆಗಾಲ ಆರಂಭವಾದಾಗಿನಿಂದ ವಿದ್ಯುತ್ ಅವಘಡಗಳು ನಡೆಯುತ್ತಲೆ ಇವೆ. ಮಳೆ, ಗಾಳಿಯಿಂದ ವಿದ್ಯುತ್ ಕಂಬಗಳು ಧರೆಗುರುಳುವುದು, ವಿದ್ಯುತ್ ವ್ಯತ್ಯಯ ಉಂಟಾಗುತ್ತದೆ. ಹೀಗಾಗಿಯೇ ಲೈನ್‌ಮ್ಯಾನ್‌ಗಳ ಕೆಲಸ ಹೆಚ್ಚಿರುತ್ತದೆ. ಆದರೆ, ಅವರ ಸುರಕ್ಷತೆ ಬಗ್ಗೆಯೂ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಮುಖ್ಯ.

ಗುಡುಗು, ಸಿಡಿಲಿನ ಸಮಯದಲ್ಲಿ ವಿದ್ಯುತ್‌ ಕೆಲಸ ಮಾಡುವ ಲೈನ್‌ಮನ್‌ಗಳು ಕೂಡ ತಮ್ಮ ಸುರಕ್ಷತೆ ಬಗ್ಗೆ ಗಮನ ಹರಿಸಬೇಕು. ಕೆಲಸದ ವೇಳೆ ಲೈನ್‌ಮನ್‌ಗಳು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು. ಗುಡುಗು, ಸಿಡಿಲಿನ ವೇಳೆ ವಿದ್ಯುತ್‌ ಕೆಲಸಗಳನ್ನು ಮಾಡುವಾಗ ಜಾಗ್ರತೆ ವಹಿಸಿ ಎಂದು ಸರ್ಕಾರ ತಿಳಿಸಿದೆ.

Monsoon rain Necessary safety Precautions for Lineman

ವಿದ್ಯುತ್ ಕೆಲಸದ ವೇಳೆ ಲೈನ್‌ಮನ್‌ಗಳು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳು

• ತಪ್ಪದೇ ಉತ್ತಮ ಗುಣಮಟ್ಟದ ಬೂಟ್ ಹಾಗೂ ಗೌಸ್‌ಗಳನ್ನು ಧರಿಸಿ

• ತೆರೆದ ವಿದ್ಯುತ್ ತಂತಿಗಳಿಂದ ದೂರವಿರಿ

• ಕೆಲಸದ ವೇಳೆ ಯಾವುದೇ ರೀತಿಯ ಲೋಹದ ವಸ್ತುಗಳನ್ನು ಇಟ್ಟುಕೊಳ್ಳಬೇಡಿ

• ಪರಿಣಿತರಿಂದ ಮಾತ್ರವೇ ವಿದ್ಯುತ್‌ ಕೆಲಸವನ್ನು ಮಾಡಿಸಿ

• ಗುಡುಗು ಸಿಡಿಲಿನ ವೇಳೆ ವಿದ್ಯುತ್ ಕೆಲಸಗಳನ್ನು ಮಾಡದಿರಿ

• ಅಪಘಾತ ಸಂಭವಿಸಿದ್ದಲ್ಲಿ ಕೈಗೊಳ್ಳಬೇಕಾದ ರಕ್ಷಣಾ ಕ್ರಮಗಳ ಬಗ್ಗೆ ಅರಿವಿರಲಿ

ರಾಜ್ಯದ ಹಲವು ಭಾಗಗಳಲ್ಲಿ ಈಗಾಗಲೇ ಮಳೆ ಹೆಚ್ಚಾಗುತ್ತಿದೆ. ಭಾರತದ ಹವಾಮಾನ ಇಲಾಖೆಯು ಜುಲೈ 20 ರವರೆಗೆ ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ. ಜುಲೈ 19 ಮತ್ತು 20 ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಒಳನಾಡಿನಲ್ಲಿ ರೆಡ್ ಅಲರ್ಟ್ ಘೋಷಿಸಿದೆ.

Monsoon rain Necessary safety Precautions for Lineman

24 ಗಂಟೆಗಳಲ್ಲಿ ರಾಜ್ಯದಲ್ಲಿ ರೆಡ್ ಅಲರ್ಟ್ ಘೋಷಿಸಿರುವ ಕಡೆಗಳಲ್ಲಿ 20 ಸೆಂ.ಮೀ ಗಿಂತ ಹೆಚ್ಚು ಭಾರೀ ಮಳೆಯಾಗುತ್ತದೆ ಎಂದು ಸೂಚಿಸಿದೆ. ಹವಾಮಾನ ವೈಪರೀತ್ಯದ ದೃಷ್ಟಿಯಿಂದ ಅಧಿಕಾರಿಗಳು ಕ್ರಮ ಕೈಗೊಳ್ಳಲು ಅಗತ್ಯವಿದೆ ಎಂದು ತಿಳಿಸಲಾಗಿದೆ. ಜಿಲ್ಲಾ ಅಧಿಕಾರಿಗಳು ಕರಾವಳಿ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಪ್ರವಾಹದ ಎಚ್ಚರಿಕೆಯನ್ನೂ ನೀಡಿದ್ದಾರೆ. ಕಳೆದ ಎರಡು ದಿನಗಳಿಂದ ಈ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ, ಕರಾವಳಿ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಪ್ರವಾಹದ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+