Monsoon Rain Big Update: ಕರ್ನಾಟಕಕ್ಕೆ ಸಿಹಿ ಸುದ್ದಿ ಕೊಟ್ಟ ಹವಾಮಾನ ಇಲಾಖೆ
ಬೆಂಗಳೂರು, ಏಪ್ರಿಲ್ 07: ಬೆಂಗಳೂರು ಸೇರಿದಂತೆ ಕರ್ನಾಟಕ ನಾಡಿನಾದ್ಯಂತ ಕಳೆದ ವರ್ಷ ಮುಂಗಾರು ಮಳೆ ವಾಡಿಕೆಯಷ್ಟು ಸುರಿಯಲಿಲ್ಲ. ಹಿಂಗಾರು ಸಹ ಅಷ್ಟಕಷ್ಟೆ ಆದ ಪರಿಣಾಮ, ತೀವ್ರ ಬರಗಾಲ ಉಂಟಾಯಿತು. ಪ್ರಸಕ್ತ 2024ರಲ್ಲಿ ಜೂನ್ ನಿಂದ ಆರಂಭವಾಗುವ ಮುಂಗಾರು ಮಳೆ (Monsoon Rain) ಕುರಿತು ಹವಾಮಾನ ಇಲಾಖೆ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದೆ.
ಹೌದು, 2024 ಜೂನ್‌ನಿಂದ ನಾಲ್ಕು ಸುರಿಯಲಿರುವ ಮುಂಗಾರು ಮಳೆ ಈ ಭಾರಿ ವಾಡಿಕೆಯಷ್ಟು ಬರಲಿದೆ. ಮುಖ್ಯವಾಗಿ ಉತ್ತಮ ಮುಂಗಾರು ಬರಲು ಅಡ್ಡಿಯಾಗಿದ್ದ ವಾತಾವರಣ ಸದ್ಯಕ್ಕೆ ಮರೆಯಾಗಿ ಪೂರಕ ವಾತಾವರಣ ನಿರ್ಮಾಣವಾಗಿದೆ. ಈ ಬಾರಿ ರೈತರ ಆಸೆಗಳೆಲ್ಲವು ಈಡೇರಿಲಿವೆ ಎಂಬ ಮುನ್ಸೂಚನೆ ದೊರೆತಿದೆ. ಇದು ಕರ್ನಾಟಕ ಜನರಲ್ಲಿ ಕುಂದುತ್ತಿರುವ ಉತ್ಸಾಹ ಹೆಚ್ಚಳಕ್ಕೆ ಕಾರಣವಾಗಿದೆ. ಜೂನ್ ನಂತರ ಕರ್ನಾಟಕ ಸೇರಿದಂತೆ ಭಾರತಾದ್ಯಂತ ಉತ್ತಮ ಮುಂಗಾರು ಸುರಿಯಲಿದೆ.

ಮುಂಗಾರಿಗೆ ಅಡ್ಡಿಯಾಗಿದ್ದ ವಾತಾವರಣ ದೂರು
ಮುಂಗಾರು ಮಳೆ ಕುರಿತು ಸುದ್ದಿ ಸಂಸ್ಥೆ ಪಿಟಿಐ ಜೊತೆ ಭಾರತೀಯ ಹವಾಮಾನ ಇಲಾಖೆ ಮುಖ್ಯಸ್ಥರಾದ ಮೃತ್ಯುಂಜಯ್ ಮಹಾಪಾತ್ರ ಅವರು ಮಾತನಾಡಿದ್ದಾರೆ. ಮುಂಗಾರು ಮಾರುತಗಳ ಮೇಲೆ ಅಡ್ಡ ಪರಿಣಾಮ ಬೀರಬಹುದಾಗಿದ್ದ 'ಎಲ್ ನಿನೋ' ವಾತಾವರಣದ ಪರಿಣಾಮಗಳು ಕ್ರಮೇಣ ದೂರವಾಗುತ್ತಿವೆ. ಯುರೇಶ್ಯಾದಲ್ಲಿ ಹಿಮ ಆವರಿಸಿಕೊಳ್ಳುವ ಪ್ರಮಾಣವೂ ತೀವ್ರ ರೀತಿಯಲ್ಲಿ ಕಡಿಮೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.
ಈ ಮೇಲಿನ ವಾತಾವರಣವು ಸಾಮಾನ್ಯ ಮುಂಗಾರು ಮಳೆ ಸುರಿಯಲು ಅನುಕೂಲಕರವಾಗಿದೆ ಎಂಬುದನ್ನು ಹವಾಮಾನ ತಜ್ಞರು ಪತ್ತೆ ಮಾಡಿದ್ದಾರೆ. ಪ್ರಸಕ್ತ ಇರುವ 'ಎಲ್ ನಿನೋ'ದ ಪರಿಣಾಮಗಳು ಜೂನ್ ವೇಳೆಗೆ ತಟಸ್ಥವಾಗುವ ನಿರೀಕ್ಷೆಗಳು ಇವೆ.

ತಟಸ್ಥ ಪರಿಸ್ಥಿತಿಯಲ್ಲಿ 'ಎಲ್‌ನಿನೋ'
ಎಲ್‌ನಿನೋ ದಂತಹ ವಾತಾವರಣದ ತಟಸ್ಥ ಪರಿಸ್ಥಿತಿ ಭಾರತದ ಮುಂಗಾರು ಮಾರುತಗಳಿಗೆ ಸಹಾಯವಾಗುತ್ತದೆ. ಮತ್ತೊಂದೆಡೆ ಜುಲೈ-ಸೆಪ್ಟೆಂಬರ್‌ನಲ್ಲಿ 'ಲಾ ನಿನೋ' ಕಾಣಿಸಿಕೊಳ್ಳುವ ಸಾಧ್ಯತೆಯು ಇದೆ. ಇದು ಕೂಡಾ ಉತ್ತಮ ಮಳೆಗೆ ಪೂರಕವಾದದ್ದೇ ಆಗಿದೆ. ಇದೆಲ್ಲ ಬೆಳವಣಿಗೆ ನೋಡಿದರೆ ಕರ್ನಾಟಕದಲ್ಲಿ ಈ ವರ್ಷ ಮುಂಗಾರು ಮಳೆ ನಿರಿಕ್ಷಿತ ಪ್ರಮಾಣದಲ್ಲಿ ಆಗಲಿದೆ ಎಂದು ಅವರು ಮಾಹಿತಿ ನೀಡಿದರು.
ಕಳೆದ ವರ್ಷ 2023ರಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು, ಬಿತ್ತಿದ ಮೆಕ್ಕೆ ಜೋಳ, ಹೆಸರು ಇನ್ನಿತರ ಬೆಳೆಗಳು (ಖಾರಿಫ್) ಒಣಗಿದವರು. ರೈತರೆ ಅವುಗಳನ್ನು ನಾಶ ಮಾಡಿದರು. ಪುನಃ ಹಿಂಗಾರಿಗೆ ಜೋಳ, ತೊಗರಿ ಮತ್ತಿತರ 'ರಾಬಿ' ಬೆಳೆಗಳನ್ನು ಬಿತ್ತಿದರು. ಆದರೆ ಮತ್ತೆ ಮಳೆ ಕೈಕೊಟ್ಟಿತು. ಇದರಿಂದ ಹಿಂಗಾರು ಇಳುವರಿಯಲ್ಲಿ ಕುಂಠಿತವಾಯಿತು. ರೈತರಿಗೆ ನಷ್ಟವಾಯಿತು. ಜೋಳ ಇನ್ನಿತರ ಬೆಳೆ ಮಾರುಕಟ್ಟೆತೆ ಒಯ್ಯುತ್ತಿದ್ದಂತೆ ಬೆಳೆ ದಿಢೀರ್ ಇಳಿಕೆ ಆಯಿತು.
ಜೂನ್ ನಂತರ ಬರಗಾಲಕ್ಕೆ ಮುಕ್ತಿ
ಇದು ರೈತರ ಕಷ್ಟವಾದರೆ, ಮಳೆ ಕೊರತೆಯಿಂದ ಬರಗಾಲ ಸೃಷ್ಟಿಯಾಗಿ ನದಿಗಳು ಬತ್ತಿಹೋಗಿವೆ. ಕೆರೆಗಳಲ್ಲಿ ನೀರಿಲ್ಲದಾಗಿದೆ. ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ಇತ್ತ ತಾಪಮಾನದ ಉರಿ ಹೆಚ್ಚಾಗಿದೆ. ಜನರು ನೀರಿಲ್ಲ ತತ್ತರಿಸುವಂತಾಗಿದೆ. ಆದರೆ ಈ ವರ್ಷ 2024ರ ಜೂನ್ ನಂತರ ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದಿನಿಂದ ಹೀಟ್ ವೇವ್ ಯೆಲ್ಲೋ ಅಲರ್ಟ್
ಕರ್ನಾಟಕ ಹಲವು ಜಿಲ್ಲೆಗಳಿಗೆ ಇಂದಿನಿಂದ ಹೀಟ್ ವೇವ್ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಅಂದರೆ ಇಂದಿನಿಂದ ಒಂದೆರಡು ದಿನಗಳ ಕಾಲ ಉತ್ತರ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಬಿಸಿಲಿನ ತೀವ್ರತೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದ ಪೈಕಿ ಬೆಂಗಳೂರಿನಲ್ಲಿ ಪೂರ್ವ ಮುಂಗಾರು ಮಳೆ ಇದೇ ತಿಂಗಳ ಮಧ್ಯ ಭಾಗದಲ್ಲಿ ಸಕ್ರಿಯವಾಗುವ ಲಕ್ಷಣಗಳು ಇವೆ ಎಂದು ಹವಾಮಾನ ಇಲಾಖೆ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಈ ಮೂಲಕ ಬಿಸಿಲಿಗೆ ತತ್ತರಿಸಿದ್ದ ಜನರಿಗೆ ಒಂದಷ್ಟು ತರುವ ತಂಪಿನ ದಿನಗಳು ಇನ್ನೇನು ಸಮಿಪಿಸುತ್ತಿವೆ ಎನ್ನಬಹುದು.












Click it and Unblock the Notifications