Monsoon Rain 2024: ಮನೆ ಹಾನಿಗೆ ಪರಿಹಾರ ನೀಡಲು ಮಾರ್ಗಸೂಚಿ

ಬೆಂಗಳೂರು, ಆಗಸ್ಟ್ 04: ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಮಳೆ ಅಬ್ಬರಿಸುತ್ತಿದೆ. ವಿವಿಧ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಮನೆ, ಬೆಳೆಗಳಿಗೆ ಹಾನಿಯಾಗಿದೆ. ರಾಜ್ಯ ಸರ್ಕಾರ ಈ ಹಾನಿಗೆ ಯಾವ ಮಾದರಿಯಲ್ಲಿ ಪರಿಹಾರ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ಮಾಹಿತಿ ನೀಡಿದೆ.

ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಮುಕ್ತಾರ್ ಪಾಷ, ಹೆಚ್. ಜಿ. ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ, ವಿಪತ್ತು ನಿರ್ವಹಣೆ ಮತ್ತು ಸೇವೆಗಳು-3 ಆದೇಶವನ್ನು ಹೊರಡಿಸಿದ್ದಾರೆ.

Monsoon 2024 House Damage Due To Rain Guidelines For Compensation

ಆದೇಶ 2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ (1ನೇ ಜೂನ್ ರಿಂದ 30ನೇ ಸೆಪ್ಟೆಂಬರ್ ರವರೆಗೆ) ಉಂಟಾಗುವ ಅತಿವೃಷ್ಟಿ/ ಪ್ರವಾಹದಿಂದ ಹಾನಿಯಾದ ಮನೆಗಳ ಪುನರ್ ನಿರ್ಮಾಣ/ ದುರಸ್ತಿ ಕಾರ್ಯ ಹಾಗೂ ಪ್ರವಾಹದಿಂದಾಗಿ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರವನ್ನು ನೀಡುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ.

ಭಾರತೀಯ ಹವಾಮಾನ ಇಲಾಖೆಯು ದಿನಾಂಕ 15/4/2024 ರಂದು ನೀಡಿರುವ ಮುನ್ಸೂಚನೆಯಲ್ಲಿ ನೈಋತ್ಯ ಮುಂಗಾರು-2024ರ ಮೊದಲ ಹಂತದ ಕಾರ್ಯಚರಣೆಯ ಧೀರ್ಘ ವ್ಯಾಪ್ತಿಯ ಮುನ್ಸೂಚನೆಯ (LRF) ಪ್ರಕಾರ ಒಟ್ಟಾರೆಯಾಗಿ ದೇಶದಾದ್ಯಂತ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದ್ದು, ಅದರಂತೆ ಈಗಾಗಲೇ ರಾಜ್ಯದಲ್ಲಿ 2024ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿವಿಧ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಇದರಿಂದಾಗಿ ಹಲವಾರು ಮನೆ ಹಾನಿ/ ಗೃಹೋಪಯೋಗಿ ವಸ್ತುಗಳು ಹಾನಿಯಾಗಿರುವುದು ವರದಿಯಾಗಿರುತ್ತದೆ.

ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಹಾನಿಗಳಿಗೆ ನೀಡಬಹುದಾದ ಪರಿಹಾರಗಳ ಕುರಿತು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ/ ರಾಜ್ಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿಗಳನ್ನು ಭಾರತ ಸರ್ಕಾರದ ಗೃಹ ಮಂತ್ರಾಲಯವು ಹೊರಡಿಸಿರುತ್ತದೆ. ಸದರಿ ಮಾರ್ಗಸೂಚಿಗಳಲ್ಲಿ ನಿಗದಿಪಡಿಸಿರುವ ಪರಿಹಾರ ಮೊತ್ತವನ್ನು ಮಾತ್ರ ರಾಜ್ಯ ವಿಪತ್ತು ಪರಿಹಾರ ನಿಧಿಯ ಅನುದಾನದಲ್ಲಿ ಭರಿಸಲು ಅವಕಾಶವಿರುತ್ತದೆ.

ಆದ್ದರಿಂದ ಪ್ರಸ್ತುತ 2024-25ನೇ ಸಾಲಿನ ಮುಂಗಾರು ಹಾಂಗಮಿನಲ್ಲಿ (1ನೇ ಜೂನ್ ರಿಂದ 30ನೇ ಸೆಪ್ಟೆಂಬರ್ ರವರೆಗೆ) ಭಾರಿ ಮಳೆಯಿಂದ ಉಂಟಾಗುವ ನೈಸರ್ಗಿಕ ವಿಪತ್ತುಗಳಿಗೆ, ಭಾರತ ಸರ್ಕಾರವು ದಿನಾಂಕ 11/07/2023ರಂದು ಹೊರಡಿಸಿರುವ ಮಾರ್ಗಸೂಚಿಗಳಲ್ಲಿ ನಿಗದಿಪಡಿಸಿರುವ ಪರಿಹಾರ ಮೊತ್ತದ ಜೊತೆಗೆ ರಾಜ್ಯ ಸರ್ಕಾದಿಂದ ಅರ್ಹತೆಯಂತೆ ಮನೆ/ ಹೆಚ್ಚುವರಿ ಮೊತ್ತವನ್ನು ಪಾವತಿಸಲು ನಿರ್ಧರಿಸಿ ಆದೇಶಿಸಿದೆ.

2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ (1ನೇ ಜೂನ್ ರಿಂದ 30ನೇ ಸೆಪ್ಟೆಂಬರ್ ರವರೆಗೆ) ಉಂಟಾಗುವ ಅತಿವೃಷ್ಟಿ/ ಪ್ರವಾಹದಿಂದ ಹಾನಿಯಾದ ಮನೆಗಳ ಪುನರ್ ನಿರ್ಮಾಣ/ ದುರಸ್ತಿ ಕಾರ್ಯ ಹಾಗೂ ಪವಾಹದಿಂದಾಗಿ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರವನ್ನು ಪಾವತಿಸಲು ಮಂಜೂರಾತಿ ನೀಡಿದೆ.

* ಪ್ರವಾಹದಿಂದ ಹಾನಿಗೊಳಗಾದ ಮನೆಗಳನ್ನು 2 ವರ್ಗಗಳಲ್ಲಿ (ಪೂರ್ಣ ಹಾನಿಯಾದ ಮನೆಗಳ ಮರು ನಿರ್ಮಾಣ ಮತ್ತು ಭಾಗಶ: ಹಾನಿಯಾದ ಮನೆಗಳ ದುರಸ್ಥಿ) ವಿಂಗಡಿಸಿ ಪರಿಹಾರ ಪಾವತಿಸುವುದು.

* ಪೂರ್ಣಹಾನಿಯಾದ ಮನೆಗಳಿಗೆ ಭಾರತ ಸರ್ಕಾರದ ಗೃಹ ಮಂತ್ರಾಲಯವು ಹೊರಡಿಸಿರುವ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ/ ರಾಜ್ಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿಗಳನ್ವಯ ರೂ.1.20 ಲಕ್ಷಗಳ ಪರಿಹಾರದ ಜೊತೆಗೆ ಹೆಚ್ಚುವರಿಯಾಗಿ ವಸತಿ ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ದೇವರಾಜ್ ಅರಸು ವಸತಿ ಯೋಜನೆಯಡಿ ಮನೆ ನೀಡುವುದು. ದೇವರಾಜ್ ಅರಸು ವಸತಿ ಯೋಜನೆಯಡಿ ಗ್ರಾಮೀಣ ಮತ್ತು ನಗರ ಪುದೇಶಗಳಲ್ಲಿ ಸಾಮಾನ್ಯ ವರ್ಗಗಳಿಗೆ ಮಂಜೂರು ಮಾಡುವ ಮನೆಗೆ ರೂ.1.20 ಲಕ್ಷ ಮತ್ತು ಎಸ್‌ಸಿ/ ಎಸ್‌ಟಿ ವರ್ಗಗಳಿಗೆ ಮಂಜೂರು ಮಾಡುವ ಮನೆಗೆ ರೂ.1.50 ಲಕ್ಷ ಮಂಜೂರು ಮಾಡುವುದು. ಈ ಮನೆಗಳನ್ನು ಜಿಲ್ಲಾಧಿಕಾರಿಗಳು ಅನುಮೋದನೆ ಮಾಡಿ ವಿವರಗಳೊಂದಿಗೆ ಫಲಾನುಭವಿಗಳ ಪಟ್ಟಿಯನ್ನು RGRHCL ಪರಿಹಾರ ತಂತ್ರಾಂಶದಲ್ಲಿ ಜಿಲ್ಲಾಧಿಕಾರಿಗಳ ಹಂತದಲ್ಲಿಯ ವಿವರಗಳನ್ನು ದಾಖಲಿಸುವುದು.

* ಅನಧಿಕೃತ ಜಮೀನಿನಲ್ಲಿ ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ ಒಂದು ಬಾರಿ ಪರಿಹಾರವಾಗಿ ರೂ.1 ಲಕ್ಷಗಳನ್ನು ಪಾವತಿಸುವುದು ಮತ್ತು ಯಾವುದೇ ಮನೆಯನ್ನು ಮಂಜೂರು ಮಾಡುವಂತಿಲ್ಲ.

* ಭಾರತ ಸರ್ಕಾರದ ಗ್ರಹ ಮಂತ್ರಾಲಯ ಹೊರಡಿಸಿರುವ ಮಾರ್ಗಸೂಚಿಗಳನ್ವಯ ಭಾಗಶಃ ಹಾನಿಗೊಳಗಾದ ಮನೆಗಳ ದುರಸ್ತಿಗೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ರೂ. 6,500ಗಳ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ರೂ.43,500 ಗಳು ಸೇರಿದಂತೆ ಒಟ್ಟು ರೂ.50,000 ಗಳನ್ನು ಪಾವತಿಸುವುದು.

* ನೈಸರ್ಗಿಕ ತುರ್ತು ಕಾರ್ಯಗಳಿಗೆ ಜಿಲ್ಲಾಧಿಕಾರಿಗಳ ಪಿಡಿ ಖಾತೆಗೆ ಒದಗಿಸಿರುವ ಅನುದಾನವನ್ನು ನಂತರ ಲೆಕ್ಕ ಹೊಂದಾಣಿಕೆ ಮಾಡಿಕೊಳ್ಳಲಾಗುವುದು.

* ಭಾರತ ಸರ್ಕಾರದ ಗೃಹ ಮಂತ್ರಾಲಯ ಹೊರಡಿಸಿರುವ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ/ ರಾಜ್ಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿಗಳನ್ವಯ ಪ್ರವಾಹದಿಂದ ಬಟ್ಟೆ ಕಳೆದುಕೊಂಡರೆ ರೂ. 2,500 ಹಾಗೂ ಗೃಹೋಪಯೋಗಿ ವಸ್ತುಗಳನ್ನು ಹಾನಿಯಾದರೆ ರೂ. 2,500ಗಳ ಪರಿಹಾರ ಪಾವತಿಸಲು ನಿಗದಿಯಾಗಿದ್ದು, ಅದರಂತೆ ರೂ. 5,000 ಗಳನ್ನು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಪಾವತಿಸುವುದು.

* ಅತಿವೃಷ್ಟಿ/ ಪ್ರವಾಹದಿಂದ ಹಾನಿಯಾದ ಮನೆಗಳ ಪುನರ್ ನಿರ್ಮಾಣ/ ದುರಸ್ತಿ ಕಾರ್ಯ ಹಾಗೂ ಪ್ರವಾಹದಿಂದಾಗಿ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರವನ್ನು ಷರತ್ತುಗಳ ಪಾಲನೆಗೆ ಒಳಪಟ್ಟು ಪಾವತಿಸಲು ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಿದೆ.

ಯಾವ-ಯಾವ ಷರತ್ತುಗಳು

* ಜಿಲ್ಲಾಧಿಕಾರಿಗಳು ಪರಿಹಾರ ಮೊತ್ತವನ್ನು ನಿಯಮಾನುಸಾರ ಅರ್ಹ ಸಂತ್ರಸ್ತರುಗಳಿಗೆ ನೇರವಾಗಿ ಅವರ ಆಧಾರ್ ಜೋಡಣೆಯಾಗಿರುವ ಬ್ಯಾಂಕ್‌ ಖಾತೆಗಳಿಗೆ ಡಿಬಿಟಿ ಮೂಲಕ ಪಾವತಿಸಲು ಕ್ರಮವಹಿಸುವುದು.

* ಅತಿವೃಷ್ಟಿ/ ಪ್ರವಾಹದಿಂದ ಮನೆ ಹಾನಿಯ ಬಗ್ಗೆ ಘಟನೆ ನಡೆದ ತಕ್ಷಣ (ಗರಿಷ್ಟ 2 ದಿನಗಳೊಳಗಾಗಿ ವರದಿಯಾದ 5 ದಿನಗಳ ಒಳಗಾಗಿ ಗ್ರಾಮ ಆಡಳಿತಾಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಹಾಯಕ ಅಭಿಯಂತರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಇವರುಗಳು ಜಂಟಿಯಾಗಿ ಸ್ಥಳ ಭೇಟಿ ನೀಡಿ, ಸರ್ವೆ ನಡೆಸಿ, ಹಾನಿ ವಿವರಗಳ ಕುರಿತು ವರದಿಯನ್ನು ತಹಶೀಲ್ದಾರ್‌ ಅವರಿಗೆ ನೀಡುವುದು.

* ಮನೆಹಾನಿಯ ಜಂಟಿ ಸಮೀಕ್ಷೆ ವರದಿ ಸ್ವೀಕೃತವಾದ 3 ಕರ್ತವ್ಯದ ದಿನಗಳ ಒಳಗಾಗಿ ತಹಶೀಲ್ದಾರ್‌ ಅವರು ನಿಯಮಾನುಸಾರ ಪರಿಶೀಲಿಸಿ, ಸದರಿ ವರದಿಯ ಕುರಿತು
ಪ್ರಸ್ತಾವನೆಯನ್ನು ಉಪ ವಿಭಾಗಾಧಿಕಾರಿ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವುದು.

* ಜಿಲ್ಲಾಧಿಕಾರಿಗಳು ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ, 7 ಕರ್ತವ್ಯದ ದಿನಗಳ ಒಳಗಾಗಿ ನಿರ್ಧಾರ ಕೈಗೊಂಡು, ಅರ್ಹ ಫಲಾನುಭವಿಗಳಿಗೆ ನಿಯಮಾನುಸಾರ ನೇರವಾಗಿ ಅವರ ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ಪರಿಹಾರವನ್ನು ಪಾವತಿಸಲು ಕ್ರಮವಹಿಸುವುದು.

* ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿರುವ ರಾಜ್ಯ ವಿಪತ್ತು ಪರಿಹಾರ ನಿಧಿ ಅನುದಾನವನ್ನು ಮೇಲೆ ತಿಳಿಸಿರುವ ನೈಸರ್ಗಿಕ ವಿಕೋಪಗಳಿಂದ ಉಂಟಾದ ಹಾನಿ ಪ್ರಕರಣಗಳಲ್ಲಿ ಪರಿಹಾರ ಪಾವತಿಸಲು ಬಳಸತಕ್ಕದ್ದು. ಜಿಲ್ಲಾಧಿಕಾರಿಗಳು ಆರ್ಥಿಕ ವರ್ಷದ ಅಂತ್ಯಕ್ಕೆ ನಿಗದಿತ ನಮೂನೆಯಲ್ಲಿ ಹಣ ಬಳಕೆ ಪ್ರಮಾಣ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸುವುದು.

* ಸಂತ್ರಸ್ತರ ಗುರುತಿಸುವಿಕೆಯಲ್ಲಿ ಯಾವುದೇ ರೀತಿಯ ಪುನರಾವರ್ತನೆಯಾಗದಂತೆ ನೋಡಿಕೊಳ್ಳತಕ್ಕದ್ದು.

* ಪ್ರತಿ ತಿಂಗಳು ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮವಾರು ಫಲಾನುಭವಿಗಳ ವಿವರ, ಪಾವತಿಸಲಾಗದ ಪರಿಹಾರದ ಮೊತ್ತದ ವಿವರಗಳ ಮಾಹಿತಿಯನ್ನು ತಯಾರಿಸಿ, ಸಂಬಂಧಪಟ್ಟ ಜಿಲ್ಲಾ ಕಛೇರಿಗಳಲ್ಲಿ, ತಾಲ್ಲೂಕು ಕಛೇರಿಗಳಲ್ಲಿ, ಗ್ರಾಮ ಪಂಚಾಯತಿಗಳಲ್ಲಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸತಕ್ಕದ್ದು ಮತ್ತು ಸದರಿ ವಿವರಗಳನ್ನು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ತಮ್ಮ ಜಾಲತಾಣದಲ್ಲಿ ಪಾರದರ್ಶಕತೆಗಾಗಿ ಹಾಗೂ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸುವುದು.

* ಮನೆಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಅರ್ಹತೆಯನ್ನು ಹಾಗೂ ಮಾಹಿತಿಯನ್ನು ನಮೂದಿಸುವುದರಲ್ಲಿ ಮತ್ತು ಹಣ ಬಳಕೆಯಲ್ಲಿ ಯಾವುದೇ ಲೋಪವಾದಲ್ಲಿ ಸಂಬಂಧಪಟ್ಟ ಅಧಿಕಾರಿ/ ನೌಕರರನ್ನು ನೇರವಾಗಿ ಜವಾಬ್ದಾರರನ್ನಾಗಿ ಮಾಡಲಾಗುವುದು.

* ಅತಿವೃಷ್ಟಿ/ ಪ್ರವಾಹದಿಂದ ಹಾನಿಯಾದ ಮನೆಗಳ ವಿವರಗಳನ್ನು ಜಿಲ್ಲಾಧಿಕಾರಿಗಳು RGRHCL ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲು ಅನುವಾಗುವಂತೆ, ಸದರಿ ತಂತ್ರಾಂಶವನ್ನು ಈ ಕೂಡಲೇ ಹಾಗೂ ದಿನಾಂಕ 30/09/2024ರವರೆಗೆ ಸಕ್ರಿಯಗೊಳಿಸಲು ವ್ಯವಸ್ಥಾಪಕ ನಿರ್ದೇಶಕರು, ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಕ್ರಮವಹಿಸುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+