PM Modi Karnataka Visit: 6 ದಿನ, 23 ಕ್ಷೇತ್ರಗಳಲ್ಲಿ ಮೋದಿ ಮತಬೇಟೆ: ಯಾವ ಯಾವ ಕ್ಷೇತ್ರಗಳಲ್ಲಿ ನಮೋ ರೋಡ್‌ಶೋಗಳು?

ಬೆಂಗಳೂರು, ಏಪ್ರಿಲ್. 25: ವಿಧಾನಸಭಾ ಚುನಾವಣಾ ಆಖಾಡಕ್ಕೆ ಇಳಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಆರು ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಮತ್ತೆ ಪಕ್ಷಕ್ಕೆ ಅಧಿಕಾರಕ್ಕೆ ತರಬೇಕು ಎಂದು ಜನರಲ್ಲಿ ಪ್ರಧಾನಿ ಮೋದಿ ಮನವಿ ಮಾಡಲಿದ್ದಾರೆ.

ಮೇ 10 ರಂದು ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಏಣಿಕೆ ನಡೆಯಲಿದೆ. ಯಾವ ಪಕ್ಷಕ್ಕೆ ಜಜಾದೇಶ ಸಿಕ್ಕಿದೆ ಎಂಬ ಬಗ್ಗೆ ತಿಳಿಯಲಿದೆ. ಆದರೆ, ಜನರು ತಮ್ಮ ಪಕ್ಷಕ್ಕೆ ಮತ ಹಾಕಬೇಕೆಂದರೇ ತಾವು ಮಾಡಿರುವ ಮತ್ತು ಮಾಡಲಿರುವ ಕೆಲಸಗಳ ಬಗ್ಗೆ ಮತದಾರನಿಗೆ ತಿಳಿಸುವುದು ಅತೀ ಮುಖ್ಯ. ಈದೇ ಕಾರಣಕ್ಕೆ ಕೇಂದ್ರ ಬಿಜೆಪಿ ನಾಯಕರ ದಂಡು ಕರ್ನಾಟಕಕ್ಕೆ ಬರುತ್ತಿದೆ.

Modi visit to Karnataka: PM Modi will hold 20 roadshows, rallies in 6 days

ಡಬಲ್ ಇಂಜಿನ್ ಸರ್ಕಾರ ಎಂದು ಹೆಸರು ಪಡೆದಿರುವ ಬಿಜೆಪಿ ಸರ್ಕಾರ, ತಾನು ಜನರಿಗಾಗಿ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಮನವರಿಕೆ ಮಾಡಬೇಕಿದೆ. ಕಳೆದ ಬಾರಿ ಮೋದಿ ಅಲೆಯಿಂದ ಅಧಿಕಾರಕ್ಕೆ ಬಂದಿರುವ ಪಕ್ಷಕ್ಕೆ ರಾಜ್ಯದಲ್ಲಿಯೂ ಅವರನ್ನೇ ಪಕ್ಷದ ಮುಖವನ್ನಾಗಿಸುವ ಯೋಜನೆಯಲ್ಲಿದೆ. ಇದೆ ಕಾರಣಕ್ಕೆ ಪ್ರಧಾನಿ ಮೋದಿ ಕಳೆದ ನಾಲ್ಕು ತಿಂಗಳಲ್ಲಿ ಅನೇಕ ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ.

ಈ ತಿಂಗಳು ಚುನಾವಣಾ ಪ್ರಚಾರ ಕಣಕ್ಕೆ ಇಳಿಯಲಿರುವ ಪ್ರಧಾನಿ ಮೋದಿ ಏಪ್ರಿಲ್‌ 29 ರಿಂದ ಮೇ 7ರ ವರೆಗೆ ರಾಜ್ಯದ ಹಲವು ಭಾಗಗಳಲ್ಲಿ ರೋಡ್ ಶೋಗಳು ಮತ್ತು ರ‍್ಯಾಲಿಗಳ ಮೂಲಕ ಬಿಜೆಪಿ ಪರ ಪ್ರಚಾರ ನಡೆಸಲಿದ್ದಾರೆ. ಈ ಆರು ದಿನಗಳ ಅಂತರದಲ್ಲಿ 20 ಕ್ಕೂ ಹೆಚ್ಚು ರೋಡ್ ಶೋಗಳು, ಸಮಾವೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.

Modi visit to Karnataka: PM Modi will hold 20 roadshows, rallies in 6 days

ಈ ಪ್ರಚಾರದ ವಿಶೇಷತೆಯೆಂದರೇ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಪ್ರಭಾವ ಜಾಸ್ತಿಯಿರುವ, ಬಿಜೆಪಿ ಪ್ರಾಬಲ್ಯ ಕಡಿಮೆ ಇರುವ ಹಳೇ ಮೈಸೂರು ಭಾಗದಲ್ಲಿಯೂ ಈ ಬಾರಿ ಮೋದಿ ಸಮಾವೇಶ ಆಯೋಜನೆಯಾಗಿದೆ. ರಾಜ್ಯದ ಬೆಂಗಳೂರು ಬಿಟ್ಟರೆ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಿಂದದ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಪ್ರಾರಂಭಿಸಲಿದ್ದಾರೆ.

*ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಡೆಸುವ ಸ್ಥಳ ಮತ್ತು ದಿನಗಳ ಮಾಹಿತಿ ಇಲ್ಲಿದೆ*

  • ಏಪ್ರಿಲ್ 29 : ಹುಮ್ನಾಬಾದ್, ವಿಜಯಪುರ, ಕುಡಚಿ, ಬೆಂಗಳೂರು ಉತ್ತರ
  • ಏಪ್ರಿಲ್ 30: ಕೋಲಾರ, ಚನ್ನಪಟ್ಟಣ, ಬೇಲೂರು, ಮೈಸೂರು
  • ಮೇ 2: ಚಿತ್ರದುರ್ಗ, ವಿಜಯನಗರ, ಸಿಂಧನೂರು, ಕಲಬುರಗಿ
  • ಮೇ 3: ಮೂಡುಬಿದಿರೆ, ಹಾವೇರಿ, ಶಿವಮೊಗ್ಗ ಗ್ರಾಮಾಂತರ, ಬೆಂಗಳೂರು ಸೆಂಟ್ರಲ್
  • ಮೇ 6: ಚಿತ್ತಾಪುರ, ನಂಜನಗೂಡು, ತುಮಕೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ
  • ಮೇ 7: ಬಾದಾಮಿ, ಹಾವೇರಿ, ಶಿವಮೊಗ್ಗ ಗ್ರಾಮಾಂತರ, ಬೆಂಗಳೂರು ಕೇಂದ್ರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+