ಪಾಸ್‌ಪೋರ್ಟ್‌ ಮಾಡಿಸುವವರಿಗೆ ಸಿಹಿ ಸುದ್ದಿ

ಬೆಂಗಳೂರು, ಆಗಸ್ಟ್ 22 : ಪಾಸ್‌ಪೋರ್ಟ್ ಮಾಡಿಸುವವರಿಗೆ ಸಿಹಿಸುದ್ದಿ. ಎಂ ಪಾಸ್‌ಪೋರ್ಟ್ ಮೊಬೈಲ್ ಅಪ್ಲಿಕೇಶನ್‌ ಸೇವೆಯನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಸದ್ಯ, ಬೆಂಗಳೂರಿನಲ್ಲಿ ಮಾತ್ರ ಇದನ್ನು ಬಳಕೆ ಮಾಡಲಾಗುತ್ತಿದೆ.

ಪ್ರಾದೇಶಿಕ ಪಾಸ್‌ ಪೋರ್ಟ್ ಅಧಿಕಾರಿ ಭರತ್ ಕುಮಾರ್ ಕುಥಾಟಿ ಈ ಕುರಿತು ಮಾಹಿತಿ ನೀಡಿದ್ದಾರೆ. "ಮೂರು ವಾರಗಳಲ್ಲಿ ಮೊಬೈಲ್ ವೆರಿಫಿಕೇಶನ್ ಸೇವೆಯನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುತ್ತದೆ. ಇದರಿಂದಾಗಿ ಪೊಲೀಸರ ಪರಿಶೀಲನೆ ಸಮಯ ಉಳಿತಾಯವಾಗಲಿದೆ" ಎಂದು ಹೇಳಿದರು.

"ಪಾಸ್‌ಪೋರ್ಟ್ ಮಾಡಿಸುವಾಗ ನಮ್ಮ ಕಚೇರಿಯಲ್ಲಿ 3 ರಿಂದ 4 ದಿನ ಸಾಕಾಗುತ್ತದೆ. ಆದರೆ, ಪೊಲೀಸರ ಪರಿಶೀಲನೆಗೆ ಹೆಚ್ಚು ಸಮಯ ವ್ಯಯವಾಗುತ್ತಿದೆ. ಮೊಬೈಲ್ ಅಪ್ಲಿಕೇಶನ್ ಸೇವೆಯನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಿದರೆ ಸಮಯ ಉಳಿಯಲಿದೆ" ಎಂದರು.

Mobile Passport Verification To Be Extended State Wide Soon

ಪಾಸ್‌ಪೋರ್ಟ್ ಕಚೇರಿಗೆ ಪೊಲೀಸರಿಂದ 2 ಮಾಹಿತಿಗಳು ಮಾತ್ರ ಸಾಕಾಗಿದೆ. ಅರ್ಜಿ ಸಲ್ಲಿಸುವವರು ಭಾರತದ ಪ್ರಜೆಯೇ, ಅವರ ಮೇಲೆ ಯಾವುದಾದರೂ ಕ್ರಿಮಿನಲ್ ಮೊಕದ್ದಮೆ ಇದೆಯೇ ಎಂಬ ಮಾಹಿತಿ ಮಾತ್ರ ಸಾಕು. ಈಗ ಈ ಪ್ರಕ್ರಿಯೆಯೇ ತಡವಾಗುತ್ತಿದೆ.

ಮೊಬೈಲ್ ಅಪ್ಲಿಕೇಶನ್ ರಾಜ್ಯಾದ್ಯಂತ ವಿಸ್ತರಣೆಯಾದರೆ ಪೊಲೀಸ್ ಠಾಣೆಗಳ ಕಾಗದ ಪತ್ರಗಳ ವ್ಯವಹಾರ ಕಡಿಮೆಯಾಗಲಿದೆ. ಪೊಲೀಸರು ಪರಿಶೀಲನೆ ಕಾರ್ಯ ಸ್ಮಾರ್ಟ್ ಫೋನ್ ಅಥವ ಟ್ಯಾಬ್ಲೆಟ್‌ಗಳ ಮೂಲಕ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+