ಕರ್ನಾಟಕದಲ್ಲಿ mobile internet ಬಳಕೆದಾರರು ಕಮ್ಮಿ
ಬೆಂಗಳೂರು, ಅಕ್ಟೋಬರ್ 24: ಜಾಗತಿಕ ಮಟ್ಟದಲ್ಲಿ ಮೊಬೈಲ್ ಮತ್ತು ಇಂಟರ್ ನೆಟ್ ಶರವೇಗದಲ್ಲಿ ಸಾಗುತ್ತಿರುವಾಗ ಕರ್ನಾಟಕದಲ್ಲಿ ಮೊಬೈಲ್ ಫೋನ್ ಮೂಲಕ ಅರ್ಥಾತ್ ಸ್ಮಾರ್ಟ್ ಫೋನುಗಳ ಮೂಲಕ ಇಂಟರ್ ನೆಟ್ ಬಳಕೆ ಮಾಡುವುದು ಅತಿ ಕಡಿಮೆಮಟ್ಟದಲ್ಲಿದೆ.
Telecom Regulatory Authority of India ಟ್ರಾಯ್ ಪ್ರಕಾರ ದೇಶದಲ್ಲಿ ಒಟ್ಟು mobile internet ಬಳಕೆದಾರರ ಪೈಕಿ ಕೇವಲ ಶೇ. 9.3ರಷ್ಟು ಮಂದಿ ಮಾತ್ರ ಕರ್ನಾಟಕದಲ್ಲಿದ್ದಾರೆ. ಅದೇ ಮಹಾರಾಷ್ಟ್ರದಲ್ಲಿ mobile internet ಬಳಕೆದಾರರ ಪ್ರಮಾಣ ಶೇ. 33.67ರಷ್ಟಿದೆ. ಇನ್ನು 2ನೆಯ ಸ್ಥಾನದಲ್ಲಿ, ಜಮ್ಮು ಕಾಶ್ಮೀರದಲ್ಲಿ ಶೇ. 26.53 ರಷ್ಟು ಮಂದಿ mobile internet ಬಳಕೆದಾರರಿದ್ದಾರೆ.

ಆದರೆ ಕರ್ನಾಟಕದಲ್ಲಿ broadband ಬಳಕೆದಾರರ ಪ್ರಮಾಣ ಉತ್ತಮವಾಗಿದೆ. ಕಳೆದೊಂದು ವರ್ಷದಲ್ಲಿ smartphoneಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದೇ mobile internet boomಗೆ ಸೋಪಾನವಾಗಿದೆ. ಹೊಸ (ಮಾಹಿತಿ) ತಂತ್ರಜ್ಞಾನವನ್ನು ಅಪ್ಪಿಮುದ್ದಾಡುವ ಕರ್ನಾಟಕದ ಮಂದಿ ಮುಂದೆಯಾದರೂ mobile internetಗೆ ಹೆಚ್ಚು ಪ್ರಾಶಸ್ತ್ಯ ನೀಡಲಿದ್ದಾರೆ ಎಂದು ಮೊಬೈಲ್ ಆಪರೇಟರುಗಳು ಆಶಿಸುತ್ತಾರೆ.
mobile internet ಬಳಕೆದಾರರು ಸಾಮಾನ್ಯವಾಗಿ ಯವಜನತೆ ಮತ್ತು ವೃತ್ತಿಪರರು. ಕರ್ನಾಟಕದಲ್ಲಿ ಶೇ. 20ರಷ್ಟು mobile internet ಬೆಳವಣಿಗೆಗೆ ಅವಕಾಶವಿದೆ. ಮೂರನೆ ಪೀಳಿಗೆಯ (3G) ಸೇವೆಗಳು 2G ದರದಲ್ಲಿ ಇತ್ತೀಚೆಗೆ ಲಭ್ಯವಾಗುತ್ತಿದ್ದು, smartphone ಮೂಲಕ mobile internet ಬಳಕೆದಾರರ ಸಂಖ್ಯೆ ಹೆಚ್ಚಾಗುವ ಆಶಯವಿದೆ ಎನ್ನುತ್ತಾರೆ Tata DOCOMO ಮುಖ್ಯಸ್ಥ ರೋಹಿತ್ ಟಂಡನ್.
ಬೆಂಗಳೂರು ಮತ್ತು ಮೈಸೂರು ಜನ ಹೆಚ್ಚಿನ ಪ್ರಮಾಣದಲ್ಲಿ mobile internet ಬಳಸುತ್ತಿದ್ದಾರೆ. ಆದರೆ ಇತರೆ ನಗರಗಳತ್ತಲೂ smartphone, mobile internet ಮುನ್ನುಗ್ಗಬೇಕು ಎನ್ನುತ್ತಾರೆ ರೋಹಿತ್ ಟಂಡನ್.
ಮುಂದುವರಿದ ಭಾಗವಾಗಿ ಜನ tablet ಬಳಕೆಗೂ ಮಣೆ ಹಾಕಿರುವುದು ಸಮಾಧಾನಕರವಾಗಿದೆ. ಕರ್ನಾಟಕದಲ್ಲಿ ಒಟ್ಟು 10,000 tablets ಮತ್ತು 1.8 ಲಕ್ಷ smartphones ಬಳಕೆದಾರರು ಇದ್ದಾರೆ ಎನ್ನುತ್ತಾರೆ Bharti Airtel ಮುಖ್ಯಸ್ಥ ರೋಹಿತ್ ಮಲ್ಹೋತ್ರಾ.
-
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Gold Rate April 9: ಚಿನ್ನ - ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ: ಬಂಗಾರ ಖರೀದಿದಾರರಿಗೆ ಸಂತೋಷದ ಸುದ್ದಿ -
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್












Click it and Unblock the Notifications