ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ.ಕೆ ಶಿವಕುಮಾರ್‌ಗೆ ಆಮಿಷವೊಡ್ಡಿದ್ದ ಅಮಿತ್ ಶಾ: ಸ್ಫೋಟಕ ಮಾಹಿತಿ

|
Google Oneindia Kannada News

Recommended Video

ಡಿ ಕೆ ಶಿವಕುಮಾರ್ ಗೆ ಆಮಿಷವೊಡ್ಡಿದ್ರಂತೆ ಅಮಿತ್ ಶಾ | ಇದು ನಿಜಾನಾ? | Oneindia Kannada

ಬೆಂಗಳೂರು, ಮೇ 31: ಗುಜರಾತ್ ಶಾಸಕರಿಗೆ ರಕ್ಷಣೆ ನೀಡಿದ್ದ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಆಮಿಷವೊಡ್ಡಿದ್ದರು ಎಂಬ ಸ್ಫೋಟಕ ಮಾಹಿತಿಯನ್ನು ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಬಹಿರಂಗಪಡಿಸಿದ್ದಾರೆ.

ಗುಜರಾತ್‌ನಲ್ಲಿ ರಾಜ್ಯಸಭೆ ಚುನಾವಣೆ ವೇಳೆ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಾಗ ಕಾಂಗ್ರೆಸ್ ತನ್ನ ಶಾಸಕರನ್ನು ಉಳಿಸಿಕೊಳ್ಳಲು ಕರ್ನಾಟಕಕ್ಕೆ ರವಾನಿಸಿತ್ತು. ಆಗ ಡಿ.ಕೆ. ಶಿವಕುಮಾರ್ ಅವರು ಈಗಲ್‌ಟನ್ ರೆಸಾರ್ಟ್‌ನಲ್ಲಿ 42 ಕಾಂಗ್ರೆಸ್‌ ಶಾಸಕರಿಗೆ ಆಶ್ರಯ ಕಲ್ಪಿಸಿದ್ದರು.

 ಡಿ.ಕೆ. ಶಿವಕುಮಾರ್ ಆಪ್ತರ ಮನೆ ಮೇಲೆ 5 ಕಡೆ ಸಿಬಿಐ ದಾಳಿ ಡಿ.ಕೆ. ಶಿವಕುಮಾರ್ ಆಪ್ತರ ಮನೆ ಮೇಲೆ 5 ಕಡೆ ಸಿಬಿಐ ದಾಳಿ

ಆಗ ರಾತ್ರಿ 11 ಗಂಟೆ ಸುಮಾರಿಗೆ ಡಿ.ಕೆ. ಶಿವಕುಮಾರ್ ಅವರಿಗೆ ಫೋನ್ ಕರೆ ಮಾಡಿದ್ದ ಅಮಿತ್ ಶಾ, ಕಾಂಗ್ರೆಸ್‌ನ ಶಾಸಕರನ್ನು ತಮಗೆ ಒಪ್ಪಿಸುವಂತೆ. ಅದಕ್ಕೆ ಪ್ರತಿಯಾಗಿ ದೊಡ್ಡ ಸಹಾಯ ಮಾಡುವುದಾಗಿ ಆಮಿಷ ಒಡ್ಡಿದ್ದರು ಎಂದು ಲಿಂಗಪ್ಪ ತಿಳಿಸಿದ್ದಾರೆ.

mlc lingappa accused amit shah lured dk shivakumar to help him

ಅಮಿತ್ ಶಾ ಅವರು ಕರೆ ಮಾಡಿದ್ದ ಸಂದರ್ಭದಲ್ಲಿ ತಾವು ಡಿ.ಕೆ. ಶಿವಕುಮಾರ್ ಅವರ ಪಕ್ಕದಲ್ಲೇ ಇದ್ದಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಆ ಕಡೆಯಿಂದ ಕರೆ ಮಾಡಿದ ಧ್ವನಿ ಹಿಂದಿಯಲ್ಲಿ ಮಾತನಾಡುತ್ತಿದ್ದರೆ, ಡಿ.ಕೆ. ಶಿವಕುಮಾರ್ ಅವರು ಇಂಗ್ಲಿಷ್‌ನಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದರು.

38 ಶಾಸಕರನ್ನು ನೀವೇ ಇಟ್ಟುಕೊಳ್ಳಿ. ನಾಲ್ವರು ಶಾಸಕರನ್ನು ನಮಗೆ ನೀಡಿ. ನಾನನು ನಿಮಗೆ ಬಹುದೊಡ್ಡ ಸಹಾಯ ಮಾಡ್ತೀನಿ ಎಂದು ಅಮಿತ್ ಶಾ ಹೇಳಿದ್ದರು. ಆದರೆ, ಅದಕ್ಕೆ ಸಾಧ್ಯವಿಲ್ಲ ಎಂದಿದ್ದ ಶಿವಕುಮಾರ್, ನಾನು ಕಾಂಗ್ರೆಸ್ಸಿಗ. ನನ್ನ ರಕ್ತದಲ್ಲಿಯೂ ಕಾಂಗ್ರೆಸ್ ಇದೆ ಎಂದು ಪ್ರತಿಕ್ರಿಯೆ ನೀಡಿದ್ದರು.

ಆಗಿನ ಪರಿಸ್ಥಿತಿ ಹಾಗಿತ್ತು. ನಮಗೆ ಟೆನ್ಷನ್ ಆಗಿತ್ತು. ಯಾವಾಗ ಶಾಸಕರನ್ನು ಹೊತ್ತೊಯ್ಯುತ್ತಾರೆಯೋ ಎಂದು ಗೊತ್ತಿರಲಿಲ್ಲ. ಈ ಮಾಹಿತಿಯನ್ನು ಬಹಿರಂಗಪಡಿಸಲು ಸಂದರ್ಭ ಬಂದಿರಲಿಲ್ಲ ಎಂದು ಲಿಂಗಪ್ಪ ಹೇಳಿದ್ದಾರೆ.

English summary
Congress MLC CM Lingappa accused that BJP president Amit Shah lured Congress leader DK Shivakumar to support him while Rajyasabha election in Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X