ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ರಕ್ತಾನೇ ಕಾಂಗ್ರೆಸ್ ರೀ, ಹೌದು ನಾನು ಕಾಂಗ್ರೆಸ್ ಪಕ್ಷವನ್ನು ಸೇರುತ್ತೇನೆ ಎಂದ ಹೆಚ್.ವಿಶ್ವನಾಥ್

|
Google Oneindia Kannada News

ರಾಯಚೂರು, ಜನವರಿ 11: ನನ್ನ ರಕ್ತಾನೇ ಕಾಂಗ್ರೆಸ್ ರೀ, ಹೌದು ನಾನು ಕಾಂಗ್ರೆಸ್ ಪಕ್ಷವನ್ನು ಸೇರುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ ಹೇಳಿದ್ದಾರೆ.

ಮಕರ ಸಂಕ್ರಾಂತಿ ವಿಶೇಷ ಪುಟ

ಈ ಕುರಿತು ಬುಧವಾರ ರಾಯಚೂರಿನ ಖಾಸಗಿ ಹೊಟೇಲ್ ನಲ್ಲಿ ಮಾಧದ್ಯಗಳ ಜೊತೆಗೆ ಮಾತನಾಡಿದರು. ಉತ್ತರಾಯಣ ಪುಣ್ಯ ಕಾಲಕ್ಕೆ ಮೊದಲೇ ಬಂದು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ, ರಾಯರ ದರ್ಶನ ಪಡೆದಿದ್ದೇನೆ. ಪಥ ಬದಲಿಸುವ ಕಾಲಕ್ಕೆ ದೇವರ ದರ್ಶನ ಮಾಡುತ್ತಿದ್ದೇನೆ ಎಂದು ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಸೇರ್ಪಡೆ ಖಚಿತಪಡಿಸಿದ್ದಾರೆ.

ಕಾಂಗ್ರೆಸ್ ಕಚೇರಿ ಇರುವ ಕಟ್ಟಡ ಸೇರಿ 5 ಸ್ಥಳಗಳಲ್ಲಿ ಇಡಿ ದಾಳಿ ಕಾಂಗ್ರೆಸ್ ಕಚೇರಿ ಇರುವ ಕಟ್ಟಡ ಸೇರಿ 5 ಸ್ಥಳಗಳಲ್ಲಿ ಇಡಿ ದಾಳಿ

ಇನ್ನೂ ರಾಜಕಾರಣ ಒಂದು ಕುಟುಂಬ ಅಣ್ಣ ತಮ್ಮ ಮುನಿಸಿಕೊಂಡು ಹೊರಗಡೆ ಹೋಗುತ್ತಾರೆ, ವಾಪಾಸ್ ಬರುತ್ತಾರೆ. ವಿರೋಧ ಪಕ್ಷ ನಾಯಕರಾದ ಸಿದ್ದರಾಮಯ್ಯ ನಾನು ಒಟ್ಟಿಗೆ ಬೆಳದವರು. ಈಗ ಅವರು ಕೋಲಾರದಲ್ಲಿ ನಿಲ್ಲಬೇಕು ಅನ್ನಿಸಿದೆ. ಅಲ್ಲಿನ ಜನರ ಪ್ರೀತಿ ವಿಶ್ವಾಸಕ್ಕೆ ಅವರು ಅಲ್ಲಿಂದ ಸ್ಪರ್ಧೆ ಮಾಡುವುದಕ್ಕೆ ಮುಂದಾಗಿದ್ದಾರೆ. ಮತದಾರರ ತಿರ್ಮಾನ ಅಂತಿಮವಾಗಿರುತ್ತದೆ ಎಂದರು.

MLC H Vishwanath Announces To Returning To Congress

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಶಕ್ತಿಯನ್ನು ಯಾರೂ ಅಲ್ಲಗೆಳೆಯಲು ಆಗುವುದಿಲ್ಲ. ಬಿಎಸ್ ವೈಯವರು ಇಲ್ಲದೆ ರಾಜ್ಯದಲ್ಲಿ ಬಿಜೆಪಿಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ನಾನು ಸ್ವಾತಂತ್ರ್ಯ, ನಾನು ಸಾಹಿತ್ಯ ಕ್ಷೇತ್ರದಿಂದ ಎಂಎಲ್ ಸಿ ಯಾಗಿದ್ದಾನೆ. ಬಿಜೆಪಿಯಿಂದ ಎಂಎಲ್ ಸಿ ಆದವನು ಅಲ್ಲ. ರಾಜ್ಯಪಾಲರು ಬಿಜೆಪಿಯಿಂದ ರಾಜೀನಾಮೆ ಪಡೆದ ನಂತರದಲ್ಲಿ ನಾಮಿನೆಟ್ ಮಾಡಿದ್ದಾರೆ. ಆದರೆ ಬಹಳಷ್ಟು ಜನರಿಗೆ ಇದು ಗೊತ್ತಿಲ್ಲ ನಾನು ಯಾವ ಪಕ್ಷದಲ್ಲಿಲ್ಲ. ನಾನು ಸ್ವತಂತ್ರ್ಯವೆಂದು ಹೇಳಿದರು.

ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಹಾಗೂ ನನಗೆ ಬಿಜೆಪಿಯಿಂದ ಅನ್ಯಾಯವಾಗಿದೆ. ನನ್ನ ಸೋಲಿಸಲು ವಿಜಯೇಂದ್ರ ಬಹಳಷ್ಟು ಶ್ರಮಿಸಿದ್ದಾರೆ ಎಂದು ದೂರಿದರು. ಬಾಂಬೆ ಬಾಯ್ಸ್ ನಲ್ಲಿ ಏನಿದೆ ಅನ್ನೋದು ಪುಸ್ತಕ ಬಿಡುಗಡೆಯಾದ ಮೇಲೆ ಗೊತ್ತಾಗುತ್ತೆದೆ ಎಂದು ತಿಳಿಸಿದರು.

ಇನ್ನೂ ಸ್ಯಾಂಟ್ರೋ ರವಿ ವಿಚಾರವಾಗಿ ಮಾತನಾಡಿ, ಸ್ಯಾಂಟ್ರೋ ರವಿ ಯಾರು ಅನ್ನೋದು ಗೊತ್ತಿಲ್ಲ ಎಂದರು.

MLC H Vishwanath Announces To Returning To Congress

ಮೀಸಲಾತಿಯನ್ನು ಈ ಬಿಜೆಪಿ ಸರ್ಕಾರ ಕಲುಷಿತಗೊಳಿಸಿದೆ. ತಮಟೆ ಬಾರಿಸುವವನ ಮಗ, ಖರ್ಗೆ ಮತ್ತು ಮುನಿಯಪ್ಪರ ಮಗನಿಗೂ ಒಂದೇ ಮೀಸಲಾತಿ ಒಳ್ಳೆಯದು ಅಲ್ಲ. ಮೀಸಲಾತಿ ಸಾಮಾಜಿಕ ಆರ್ಥಿಕತೆಯ ಆಧಾರದಲ್ಲಿ ನೀಡಬೇಕು ಎಂದು ತಿಳಿಸಿದರು.

ಕಳೆದ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ತೊರೆದು ಜೆಡಿಎಸ್ ತೊರೆದು ಶಾಸಕರಾಗಿ ಆಯ್ಕೆಯಾಗಿ ಸಮ್ಮಿಶ್ರ ಸರ್ಕಾರದ ಪತನದ ಸಮಯಲ್ಲಿ ಬಿಜೆಪಿ ಸೇರ್ಪಡೆಯಾಗಿ ಎಂಎಲ್ ಸಿ ಆಗಿರುವ ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ ಮತ್ತೆ ಕಾಂಗ್ರೆಸ್ ಗೂಡಿಗೆ ಸೇರ್ಪಡೆಯಾಗುತ್ತಿದ್ದಾರೆ. ಹೌದು, ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದ ಹೆಚ್.ವಿಶ್ವನಾಥ್ ಹುಣಸೂರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಇವರನ್ನ ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಆದರೆ ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡು ಹೆಚ್.ವಿಶ್ವನಾಥ್ ಸೇರಿ 17 ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆ ಮೂಲಕ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಗಿದ್ದರು. ನಂತರ ಹೆಚ್.ವಿಶ್ವನಾಥ್ ಉಪಚುನಾವಣೆಯಲ್ಲಿ ಸೋತರೂ ಬಿಜೆಪಿ ಎಂಎಲ್ ಸಿಯನ್ನಾಗಿ ಮಾಡಲಾಗಿತ್ತು. ಆದರೆ ಇತ್ತೀಚೆಗೆ ಬಿಜೆಪಿಯ ಜೊತೆಯಲ್ಲೂ ಅಂತರ ಕಾಯ್ದುಕೊಂಡಿದ್ದ ಹೆಚ್.ವಿಶ್ವನಾಥ್ ಅವರು ಸಿದ್ಧರಾಮಯ್ಯ ಸೇರಿದಂತೆ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನ ಭೇಟಿಯಾಗಿದ್ದರು. ಈ ಮೂಲಕ ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ಖಚಿತಪಡಿಸಿದ್ದಾರೆ.

English summary
bjp mlc h vishwanath confirmed joining congress
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X