Bigg Boss: ಬಿಗ್‌ಬಾಸ್‌ ಮನೆಗೆ ಪ್ರದೀಪ್‌ ಈಶ್ವರ್‌; ಸ್ಪೀಕರ್‌ ಗೆ ದೂರು ನೀಡಿದ ವಂದೇ ಮಾತರಂ ಸಂಸ್ಥೆ!

ಬೆಂಗಳೂರು, ಅಕ್ಟೋಬರ್‌ 10: ಕನ್ನಡ ಕಿರುತೆರೆಯ ಬೃಹತ್‌ ರಿಯಾಲಿಟಿ ಶೋ ಎಂಬ ಖ್ಯಾತಿಯ ಬಿಗ್‌ಬಾಸ್‌ ಕನ್ನಡದಲ್ಲಿ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ಕಾಣಿಸಿಕೊಂಡಿದ್ದು,ಈ ಕುರಿತು ವಂದೇ ಮಾತರಂ ಸಮಾಜ ಸೇವಾ ಸಂಸ್ಥೆ ವಿಧಾನಸಭೆ ಸ್ಪೀಕರ್​ಗೆ ಯು ಟಿ ಖಾದರ್‌ ಅವರಿಗೆ ದೂರು ನೀಡಿದೆ.

ಚಿಕ್ಕಬಳ್ಳಾಪುರ ಕಾಂಗ್ರೆಸ್‌ ಶಾಸಕರಾಗಿರುವ ಪ್ರದೀಪ್‌ ಈಶ್ವರ್‌ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಯು ಟಿ ಖಾದರ್‌ ದೂರು ನೀಡುವ ಮೂಲಕ ಸೇವಾ ಸಂಸ್ಥೆಯು ಆಗ್ರಹಿಸಿದೆ.

mla-pradeep-eshwar-bigg-boss-visit

ಇನ್ನು ಚಿಕ್ಕಬಳ್ಳಾಪುರ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ಬಿಗ್‌ ಬಾಸ್‌ ಮನೆಗೆ ಹೋಗಿರುವುದನ್ನ ಪ್ರಶ್ನಿಸಿ ವಿಧಾನಸಭೆ ಸ್ವೀಕರ್‌ ಯು ಟಿ ಖಾದರ್‌ ಅವರಿಗೆ ದೂರು ಸಲ್ಲಿಸಿದ್ದಾರೆ. ರಾಜ್ಯ ಸರಕಾರದಿಂದ ಸಂಬಳ ಪಡೆಯುತ್ತಿರುವ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಾದ ಪ್ರದೀಪ್‌ ಈಶ್ವರ್‌ ಅವರು ಜವಾಬ್ದಾರಿಯುತ ಪ್ರಜೆಯಾಗಿದ್ದಾರೆ.

ತಮ್ಮ ಕ್ಷೇತ್ರದ ಜನರಿಗೆ ಏನಾದರೂ ಸಮಸ್ಯೆಯಾದಗ ಸ್ಪಂದಿಸುವುದು ಇವರ ಕರ್ತವ್ಯ. ಆದರೆ, ಈ ಜವಾಬ್ದಾರಿ ಮರೆತು ಇವರು ಬಿಗ್‌ಬಾಸ್‌ ಮನರಂಜನೆ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಇಂತಹ ತಪ್ಪು ಮಾಡಿರುವ ಇವರನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕು ಎಂದು ವಂದೇ ಮಾತರಂ ಸಮಾಜ ಸೇವಾ ಸಂಸ್ಥೆ ದೂರು ನೀಡಿದೆ.

ಶಾಸಕರಾಗಿ ಜನರ ಸಮಸ್ಯೆ ಆಲಿಸುವುದನ್ನ ಬಿಟ್ಟು ಬಿಗ್‌ ಬಾಸ್‌ ಮನೆಗೆ ಹೋಗಿದ್ದಾರೆ. ಹೀಗಾಗಿ ಇವರನ್ನ ಶಾಸಕ ಸ್ಥಾನದಿಂದ ವಜಾ ಮಾಡಬೇಕು. ಇವರಿಗೆ ಯಾವುದೇ ಶಾಸಕ ಭತ್ಯೆ ನೀಡಬಾರದು. ತಕ್ಷಣದಿಂದಲೇ ಇವರನ್ನು ಅಮಾನತ್ತು ಮಾಡಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ವರದಿಯಾಗಿದೆ.

ಬಿಗ್‌ ಬಾಸ್‌ ಗೆ ಪ್ರದೀಪ್‌ ಈಶ್ವರ್‌; ಸುಧಾಕರ್‌ ಹೇಳಿದ್ದೇನು?

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಬಿಗ್‌ ಬಾಸ್‌ ಮನೆಗೆ ಎಂಟ್ರಿಯಾಗಿದ್ದು, ಒಬ್ಬ ರಾಜಕಾರಣಿ ಈ ರೀತಿಯ ಶೋಗೆ ಹೋಗಿದ್ದು ಇದೆ ಮೊದಲು, ಬಿಗ್ ಬಾಸ್‌ಗೆ ಹೋಗುವ ಮೂಲಕ ನಗೆಪಾಟೀಲಿಗೆ ಈಡಾಗಿದ್ದಾರೆ ಎಂದು ಮಾಜಿ ಸಚಿವ ಕೆ ಸುಧಾಕರ್‌ ಲೇವಡಿ ಮಾಡಿದ್ದಾರೆ.

ಇಡೀ ರಾಜ್ಯದಲ್ಲಿ ಎಲ್ಲೂ ಇಲ್ಲ ಒಬ್ಬ ಎಂಎಲ್‌ಎ ಬಿಗ್ ಬಾಸ್ ಗೆ ಹೋಗಿ ಕುಣಿದಾಡಿರುವುದು ಇದೇ ಮೊದಲು. ಇದೊಂದು ನಾಚಿಕೆಗೇಡಿನ ಸಂಗತಿ. ಬಿಗ್ ಬಾಸ್‌ನಲ್ಲಿ ಭಾಗಿಯಾಗುವ ಮೂಲಕ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಾನ ಮರ್ಯಾದೆ ಕಳೆದಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದ ಹೆಸರನ್ನ ಹಾಳು ಮಾಡಿದ್ದಾರೆ.

ಇಂತಹ ವ್ಯಕ್ತಿಯನ್ನು ಆಯ್ಕೆ‌ ಮಾಡಿದ ಜನರಿಗೆ ಆಗಲೇ ಮನವರಿಕೆಯಾಗಿದೆ.‌ ನಾವು ತಪ್ಪು ಮಾಡಿದ್ದೇವೆ ಎಂದು ಅರಿವಾಗಿದೆ. ಮುಂದಿನ ದಿನಗಳಲ್ಲಿ ಅವರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು ಹೇಳಿದರು.

ಬಿಗ್‌ ಬಾಸ್‌ ಗೆ ಪ್ರದೀಪ್‌ ಈಶ್ವರ್‌;ಬಿಜೆಪಿ ಹೇಳಿದ್ದೇನು?

ರಾಜ್ಯದ ಅಭಿವೃದ್ಧಿ ಸಂಪೂರ್ಣ ನಿಂತು ವಿಧಾನಸೌಧವೇ ಮನರಂಜನೆಗಷ್ಟೇ ಮೀಸಲಾದ ಬಿಗ್‌‌ ಬಾಸ್‌ ಮನೆಯಂತಾಗಿದೆ. ಅದಕ್ಕೆ ಸಂಪೂರ್ಣ ನ್ಯಾಯ ಒದಗಿಸುವ ಸಲುವಾಗಿ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅವರ ಸಂಪುಟ ಸಹೋದ್ಯೋಗಿಗಳನ್ನು ಬಿಗ್‌‌ ಬಾಸ್‌ ಮನೆಗೇ ಕಳಿಸಿಕೊಟ್ಟು ಕೃತಾರ್ಥರಾಗಿದ್ದಾರೆ ಎಂದು ರಾಜ್ಯ ಬಿಜೆಪಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+