ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಎಂಎಸ್ಐಎಲ್ ಬೇಡ, ಲ್ಯಾಂಡ್ ಆರ್ಮಿ ಬೇಕು'

|
Google Oneindia Kannada News

ಬೆಂಗಳೂರು, ಫೆ. 14: ನಾನು ಇಂಜನಿಯರಿಂಗ್ ಓದಿದ್ದೇನೆ, ಹೀಗಾಗಿ ನಾನು ಲ್ಯಾಂಡ್ ಆರ್ಮಿ (ಭೂಸೇನಾ ನಿಗಮ) ನಿಗಮ ಮಂಡಳಿ ಕೊಡಿ ಅಂತಾ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕೇಳಿದ್ದೇನೆ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿರುವ ಅವರು, ನನಗೆ ಎಂಎಸ್ಐಎಲ್ ಅಧ್ಯಕ್ಷಸ್ಥಾನ ಬೇಡ ಎಂದೂ ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇನೆ. ಸಿಎಂ ಯಡಿಯೂರಪ್ಪ ಅವರಿಗೆ ಈಗ ಸವಾಲಿದೆ. ಮುಂದಿನ ದಿನಗಳಲ್ಲಿ ಮಂತ್ರಿ ಮಾಡುವ ಭರವಸೆಯನ್ನು ಕೊಟ್ಟಿದ್ದಾರೆ. ಈಗ ನಾನು ಕೇಳಿರುವ ನಿಗಮ ಮಂಡಳಿ ಅಧ್ಯಕ್ಷಸ್ಥಾನ ಕೊಡುವ ಬಗ್ಗೆ ನಿರ್ಧಾರ ಮಾಡುತ್ತಾರೆ ಎಂದು ಕುಮಟಳ್ಳಿ ಹೇಳಿದ್ದಾರೆ.

ಖಾಸಗಿ ಚಾನಲ್‌ಗಳ ಕ್ಯಾಮರಾ ನಿರ್ಬಂಧ ಯಾಕೇ? ಇಲ್ಲಿದೆ ಮಾಹಿತಿ!ಖಾಸಗಿ ಚಾನಲ್‌ಗಳ ಕ್ಯಾಮರಾ ನಿರ್ಬಂಧ ಯಾಕೇ? ಇಲ್ಲಿದೆ ಮಾಹಿತಿ!

ಬೆಳಗಾವಿ ಉಸ್ತುವಾರಿ ಕೊಡಿ: ಬೆಳಗಾವಿ ಉಸ್ತುವಾರಿಯನ್ನು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಕೊಡಬೇಡು ಎಂದು ಶಾಸಕ ಮಹೇಶ್ ಕುಮಟಳ್ಳಿ ಆಗ್ರಹಿಸಿದ್ದಾರೆ. ರಮೇಶ್ ಜಾರಕಿಹೊಳಿ ಅವರಿಗೆ ಕೊಟ್ಟರೆ ಒಳ್ಳೆಯದಾಗುತ್ತದೆ. ಆದರೆ ಈ ಬಗ್ಗೆ ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೊ ನೋಡಬೇಕಿದೆ ಎಂದು ಮಹೇಶ್ ಕುಮಟಳ್ಳಿ ವಿಧಾನಸೌಧದಲ್ಲಿ ಹೇಳಿಕೆ ಕೊಟ್ಟಿದ್ದಾರೆ.

ಸತೀಶ್ ಜಾರಕಿಹೊಳಿಗೆ ಕೆಲಸ ಮಾಡಿ ತೋರಿಸುತ್ತೇನೆ

ಸತೀಶ್ ಜಾರಕಿಹೊಳಿಗೆ ಕೆಲಸ ಮಾಡಿ ತೋರಿಸುತ್ತೇನೆ

ವಿಧಾನಸೌಧದಲ್ಲಿ ತಮ್ಮ ಕಚೇರಿ ಪೂಜೆ ಬಳಿಕ ಮಾತನಾಡಿರುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಸಹೋದರ, ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಸತೀಶ್ ಜಾರಕಿಹೊಳಿಗೆ ನಾನು ಕೆಲಸ ಮಾಡಿ ತೋರಿಸುತ್ತೇನೆ. ನಾನು ಬಿಜೆಪಿ ನಿಯಂತ್ರಣದಲ್ಲಿ ಇರಬೇಕು ಎಂದು ಸತೀಶ್ ಹೇಳಿದ್ದಾರೆ. ನನಗೂ ಅನುಭವವಿದೆ, 6 ಸಲ ಶಾಸಕನಾಗಿದ್ದೇನೆ. ಅವರು ಬುದ್ಧಿವಂತವಾದರೆ ಒಳ್ಳೆಯದು. ಕುಟುಂಬದ ಸದಸ್ಯನಾಗಿ ನಾನು ಗೋಕಾಕ್‌ನಲ್ಲಿ ಭಾಷಣ ಮಾಡಿ, ತಾಳ್ಮೆ, ಒಳ್ಳೆಯತನದಿಂದ ನಡೆದರೆ ಕಾಂಗ್ರೆಸ್‌ನಲ್ಲಿ ಭವಿಷ್ಯ ಇದೆ ಎಂದಿದ್ದೆ. ಸತೀಶ್ ಜಾರಕಿಹೊಳಿ ರಾಜಕೀಯ ದುರುದ್ದೇಶ ಇಟ್ಟುಕೊಂಡು ಮಾತನಾಡುವುದನ್ನು ಬಿಡಲಿ. ಇನ್ನು ಮುಂದಿನ ದಿನಗಳಲ್ಲಿ ಸತೀಶ್ ಜಾರಕಿಹೊಳಿ ಬಗ್ಗೆ ಮಾತನಾಡುವುದಿಲ್ಲ ಎಂದಿದ್ದಾರೆ.

ಉಮೇಶ್ ಕತ್ತಿ ಮಂತ್ರಿ ಆಗಬೇಕೆ ಎಂಬುದು ನನ್ನ ಆಗ್ರಹ

ಉಮೇಶ್ ಕತ್ತಿ ಮಂತ್ರಿ ಆಗಬೇಕೆ ಎಂಬುದು ನನ್ನ ಆಗ್ರಹ

ಮಾಜಿ ಸಚಿವ ಉಮೇಶ್ ಕತ್ತಿ ಅವರು ಹಿರಿಯರಿದ್ದಾರೆ. ಅವರು ಮಂತ್ರಿ ಆಗಬೇಕು ಅನ್ನುವುದು ನನ್ನ ಆಗ್ರಹವಾಗಿದೆ. ಬೆಳಗಾವಿಗೆ ಇನ್ನೊಂದು ಮಂತ್ರಿ ಸ್ಥಾನ ಸಿಗುತ್ತದೆ. ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿಯೇ ಬೇಕು ಅಂತಾ ಕೇಳಿಲ್ಲ. ಇದೇ ಕಾರು, ಇದೇ ಕೊಠಡಿ ಬೇಕು ಅಂತಾನೂ ಕೇಳಿರಲಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಯಾವುದನ್ನು ಕೊಟ್ಟಿದ್ದಾರೊ ಅದನ್ನು ತೆಗೆದುಕೊಂಡಿದ್ದೇನೆ ಅಷ್ಟೇ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಅರಣ್ಯ ಒತ್ತುವರಿ ಆರೋಪ: ಸಚಿವ ಆನಂದ್ ಸಿಂಗ್ ಧಿಮಾಕಿನ ಮಾತುಅರಣ್ಯ ಒತ್ತುವರಿ ಆರೋಪ: ಸಚಿವ ಆನಂದ್ ಸಿಂಗ್ ಧಿಮಾಕಿನ ಮಾತು

ಕೊಲ್ಲಾಪುರ ಮಹಾಲಕ್ಷ್ಮಿ ಪೂಜೆ ಮಾಡಿ ಕಚೇರಿ ಪ್ರವೇಶ

ಕೊಲ್ಲಾಪುರ ಮಹಾಲಕ್ಷ್ಮಿ ಪೂಜೆ ಮಾಡಿ ಕಚೇರಿ ಪ್ರವೇಶ

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ವಿಧಾನಸೌಧದ ತಮ್ಮ ಕಚೇರಿ ಪೂಜೆಯನ್ನು ಮಾಡಿದ್ದಾರೆ. ಆ ಬಳಿಕ ಮಾತನಾಡಿ, ಶುಕ್ರವಾರ ನಮ್ಮ ಮನೆ ದೇವರು ಕೊಲ್ಲಾಪುರ ಮಹಾಲಕ್ಷ್ಮಿ ಪೂಜೆ ಮಾಡಿ ಕಚೇರಿ ಪ್ರವೇಶ ಮಾಡಿದ್ದೇನೆ. ನಮ್ಮ ಅಧಿಕಾರಿಗಳ ಜತೆ ಸಭೆ ನಡೆಸಿ ಇಲಾಖೆ ಅಧ್ಯಯನ ನಡೆಸುತ್ತೇನೆ. ಬಳಿಕ ಇಲಾಖೆ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಹೇಳಿದ್ದಾರೆ. ವಿಧಾನಸೌಧದ ಮೂರನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 342, 342 ಎ ಕೊಠಡಿಗಳು ಜಲಸಂಪನ್ಮೂಲ ಇಲಾಖೆ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಹಂಚಿಕೆ ಆಗಿದೆ.

ಕಳ್ಳನ ಕೈಯಲ್ಲಿ ಕೀಲಿಕೈ ಕೊಟ್ಟಂತೆ ಎಂದು ರೇವಣ್ಣ ಹೇಳಿದ್ದು ಯಾರಿಗೆ?ಕಳ್ಳನ ಕೈಯಲ್ಲಿ ಕೀಲಿಕೈ ಕೊಟ್ಟಂತೆ ಎಂದು ರೇವಣ್ಣ ಹೇಳಿದ್ದು ಯಾರಿಗೆ?

ಆಪ್ತನಿಗೆ ಲ್ಯಾಂಡ್ ಆರ್ಮಿ ನಿಗಮ ಕೊಡಿಸಲು ಕಸರತ್ತು

ಆಪ್ತನಿಗೆ ಲ್ಯಾಂಡ್ ಆರ್ಮಿ ನಿಗಮ ಕೊಡಿಸಲು ಕಸರತ್ತು

ಆಪ್ತ, ಅಥಣಿ ಕ್ಷೇತ್ರದ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಲ್ಯಾಂಡ್ ಆರ್ಮಿ ನಿಗಮ ಕೊಡಿಸಲು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಈಗಾಗಲೇ ಸಚಿವ ಸ್ಥಾನ ಸಿಗದೇ ಇರುವುದು ಮಹೇಶ್ ಕುಮಟಳ್ಳಿ ಹಾಗೂ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಅಸಾಧಾನ ಮೂಡಿಸಿದೆ. ಜೊತೆಗೆ ಡಿಸಿಎಂ ಹುದ್ದೆಗೆ ಬೇಡಿಕೆ ಇಟ್ಟಿದ್ದ ರಮೇಶ್ ಜಾರಕಿಹೊಳಿ ಕೂಡ ಸಧ್ಯ ಸುಮ್ಮನಾಗಿದ್ದಾರೆ. ಸಚಿವಸ್ಥಾನ ಕೈತಪ್ಪಿರುವ ಮಹೇಶ್ ಕುಮಟಳ್ಳಿ ಅವರಿಗೆ ಲ್ಯಾಂಡ್ ಆರ್ಮಿ ಕೊಡಿಸಲು ಮುಂದಾಗಿದ್ದಾರೆ.

English summary
MLA Mahesh Kumaratalli has demanded that Water Resources Minister Ramesh Jarkiholi be made Belgaum District minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X