Get Updates
Get notified of breaking news, exclusive insights, and must-see stories!

ಎಂ.ಕೆ ಗಣಪತಿ ಪ್ರಕರಣ: ಮಾಜಿ ಗೃಹ ಸಚಿವ ಕೆ.ಜೆ ಜಾರ್ಜ್‌ಗೆ ರಿಲೀಫ್

ಬೆಂಗಳೂರು, ನ 4: ಡಿವೈಎಸ್ಪಿ ಎಂ.ಕೆ ಗಣಪತಿ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿದ್ದ ಅಂತಿಮ ತನಿಖಾ ವರದಿಯನ್ನು ಕರ್ನಾಟಕ ಹೈಕೋರ್ಟ್ ಪರಿಗಣಿಸಿ ಇಂದು ಮಾಜಿ ಗೃಹ ಸಚಿವ ಕೆ.ಜ್ ಜಾರ್ಜ್ ಹಾಗೂ ಇತರರಿಗೆ ದೊಡ್ಡ ರಿಲೀಫ್ ನೀಡಿದೆ.

ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಜೆ ಜಾರ್ಜ್ ಹಾಗೂ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಜನ ಪ್ರತಿನಿಧಿಗಳ ನ್ಯಾಯಾಲಯದಿಂದ ಸೆಪ್ಟೆಂಬರ್ ತಿಂಗಳಿನಲ್ಲಿ ಸಮನ್ಸ್ ಜಾರಿಯಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರಲ್ಲಿ ಸಿಬಿಐ ತಂಡವು ಅಂತಿಮ ತನಿಖಾ ವರದಿಯನ್ನು ಮಡಿಕೇರಿಗೆ ಜೆಎಂಎಫ್ ಸಿಗೆ ಸಲ್ಲಿಸಿತ್ತು. ಹಿಂದೆ ಅಂದಿನ ಗೃಹ ಸಚಿವ ಕೆ.ಜೆ ಜಾರ್ಜ್ ವಿರುದ್ಧ ಎಫ್ಐಆರ್ ದಾಖಲಿಸಿದ್ದ ಸಿಬಿಐ ತಂಡವು ವಿಸ್ತೃತವಾಗಿ ದೋಷಾರೋಪಣ ಪಟ್ಟಿ ಸಲ್ಲಿಸಿತ್ತು.

ಗಣಪತಿ ಅವರ ಆತ್ಮಹತ್ಯೆಗೆ ಯಾವುದೇ ಪ್ರಚೋದನೆ ಇರಲಿಲ್ಲ ಎಂದು ಸಿಬಿಐ ತಂಡ ಬಿ ರಿಪೋರ್ಟ್ ನಲ್ಲಿ ನೀಡಿದ್ದಕ್ಕೆ ಪುತ್ರ ನಿಹಾಲ್ ಆಕ್ಷೇಪ ವ್ಯಕ್ತಪಡಿಸಿ, ತನ್ನ ತಂದೆ ಆತ್ಮಹತ್ಯೆಗೆ ಕೆಲವರ ಪ್ರಚೋದನೆ ಇದೆ ಎಂದು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ಹಾ ಅವರಿದ್ದ ಪೀಠವು ತೀರ್ಪು ಪ್ರಕಟಿಸಿ, ಸಿಬಿಐ ಸಲ್ಲಿಸಿದ್ದ ಬಿ ರಿಪೋರ್ಟ್​ನ್ನೇ ಎತ್ತಿಹಿಡಿದಿದೆ. ಜೊತೆಗೆ ವಿಶೇಷ ನ್ಯಾಯಾಲಯ ನೀಡಿದ್ದ ಸಮನ್ಸ್ ಹಾಗೂ ಪ್ರಕರಣವನ್ನು ರದ್ದುಗೊಳಿಸಿ ತೀರ್ಪು ನೀಡಿದೆ

 ಜಾರ್ಜ್ ವಿರುದ್ಧ ಎಫ್ಐಆರ್ ದಾಖಲಿಸಿದ್ದ ಸಿಬಿಐ

ಜಾರ್ಜ್ ವಿರುದ್ಧ ಎಫ್ಐಆರ್ ದಾಖಲಿಸಿದ್ದ ಸಿಬಿಐ

2017ರ ಅಕ್ಟೋಬರ್ ನಲ್ಲಿ ಸಚಿವ ಕೆಜೆ ಜಾರ್ಜ್ ವಿರುದ್ಧ ಎಫ್ಐಆರ್ ದಾಖಲಿಸಿದ್ದ ಸಿಬಿಐ ನಂತರ ತನಿಖೆಗೆ ಕಾಲಾವಕಾಶ ಕೋರಿತ್ತು. ಹೀಗಾಗಿ, ನ್ಯಾಯಾಂಗ ಆಯೋಗದ ವರದಿ ಯಾವುದೇ ಬೆಲೆ ಸಿಕ್ಕಿರಲಿಲ್ಲ. ನಂತರ ಮಡಿಕೇರಿ ಜೆಎಂಎಫ್‌ ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ 260 ಪುಟಗಳ ವರದಿಯನ್ನು ಸಿ.ಬಿ.ಐ ಅಧಿಕಾರಿಗಳು ಸಲ್ಲಿಸಿದ್ದರು. ಸರ್ಕಾರ ನೇಮಿಸಿದ್ದ ನ್ಯಾಯಾಂಗ ಆಯೋಗವು ತನ್ನ ವರದಿಯನ್ನು ಸಲ್ಲಿಸಿ ಎರಡು ವರ್ಷ ವಾಗಿದೆ. ಸಿಐಡಿ ವರದಿಯಂತೆ ಈ ವರದಿ ಪ್ರಕಾರವು ಎಂಕೆ ಗಣಪತಿ ಸಾವಿಗೆ ಮಾನಸಿಕ ಒತ್ತಡವೇ ಕಾರಣ ಎಂದು ಷರಾ ಹಾಕಲಾಗಿತ್ತು.

 ನ್ಯಾಯಾಂಗ ವರದಿಗೆ ಬೆಲೆ ಸಿಗಲಿಲ್ಲ

ನ್ಯಾಯಾಂಗ ವರದಿಗೆ ಬೆಲೆ ಸಿಗಲಿಲ್ಲ

ನಿವೃತ್ತ ನ್ಯಾಯಾಧೀಶ ಕೆ.ಎನ್ ಕೇಶವನಾರಾಯಣ ಅವರ ನೇತೃತ್ವದ ನ್ಯಾಯಾಂಗ ಆಯೋಗವು ಅಂದಿನ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ತನ್ನ ವರದಿಯನ್ನು ಸಲ್ಲಿಸಿತ್ತು. ಸುಮಾರು ಒಂದೂವರೆ ವರ್ಷಗಳ ತನಿಖೆ, ವಿಚಾರಣೆ ಬಳಿಕ ತನ್ನ ವರದಿಯನ್ನು ಸಲ್ಲಿಸಿತ್ತು. ಸದ್ಯ ವರದಿಯನ್ನು ಪರಿಶೀಲಿಸಲು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಭಾಶ್ ಚಂದ್ರ ಅವರಿಗೆ ಹಸ್ತಾಂತರಿಸಲಾಗಿತ್ತು.

50 ಸಾಕ್ಷ್ಯಗಳ ವಿಚಾರಣೆ ನಡೆಸಿ, ಸತ್ಯ ಶೋಧನಾ ಸಮಿತಿ ಮಾದರಿಯ ವರದಿಯನ್ನು ತಯಾರಿಸಿ, 320 ಪುಟಗಳ ವರದಿ ಇದಾಗಿತ್ತು. ಎಂಕೆ ಗಣಪತಿ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಯಾವುದೇ ವ್ಯಕ್ತಿಯ ಕೈವಾಡ ಕಂಡು ಬಂದಿಲ್ಲ. ಮಾನಸಿಕ ಒತ್ತಡವೇ ಗಣಪತಿ ಅವರ ಆತ್ಮಹತ್ಯೆಗೆ ಕಾರಣ ಎಂದು ನ್ಯಾಯಾಂಗ ವರದಿಯಲ್ಲಿ ಹೇಳಲಾಗಿತ್ತು

 ಪ್ರಮುಖ ಆರೋಪಿಗಳು ಯಾರು?

ಪ್ರಮುಖ ಆರೋಪಿಗಳು ಯಾರು?

ಕೊಡಗಿನ ಮಡಿಕೇರಿಯ ಲಾಡ್ಜ್ ವೊಂದರಲ್ಲಿ ಮಂಗಳೂರಿನ ಡಿವೈಎಸ್ಪಿಯಾಗಿದ್ದ ಎಂ.ಕೆ ಗಣಪತಿ ಅವರು ಜುಲೈ 7, 2016ರಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಸಂದರ್ಭದಲ್ಲಿ ಅವರು ಮಂಗಳೂರಿನಲ್ಲಿ ಡಿವೈಎಸ್ಪಿಯಾಗಿದ್ದರು. ಸಾಯುವುದಕ್ಕೂ ಮೊದಲು ನೀಡಿದ್ದ ಸಂದರ್ಶನದಲ್ಲಿ ಗಣಪತಿ ತಮ್ಮ ಸಾವಿಗೆ ಕೆ.ಜೆ ಜಾರ್ಜ್, ಪೊಲೀಸ್ ಅಧಿಕಾರಿಗಳಾದ ಪ್ರಣವ್ ಮೊಹಾಂತಿ, ಎ.ಎಂ ಪ್ರಸಾದ್ ಕಾರಣ ಎಂದು ಹೇಳಿದ್ದರು. ಆದರೆ, ಪ್ರಮುಖ ಆರೋಪಿಗಳಾದ ಅಂದಿನ ಗೃಹ ಸಚಿವ ಕೆಜೆ ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಎ.ಎಂ ಪ್ರಸಾದ್, ಪ್ರಣವ್ ಮೊಹಾಂತಿ ಅವರನ್ನು ನ್ಯಾಯಾಂಗ ಆಯೋಗ ವಿಚಾರಣೆಗೊಳಪಡಿಸಿರಲಿಲ್ಲ.

Recommended Video

    US Election ನಾನು ಸುಪ್ರೀಂ ಕೋರ್ಟ್ ಹೋಗ್ತೀನಿ !! | Oneindia Kannada
     ಎಲ್ಲಾ ಆರೋಪಿಗಳಿಗೂ ರಿಲೀಫ್

    ಎಲ್ಲಾ ಆರೋಪಿಗಳಿಗೂ ರಿಲೀಫ್

    ವಿಡಿಯೋ ಸಾಕ್ಷ್ಯದ ಮೇಲೆ ಆರಂಭವಾದ ಪೊಲೀಸರ ತನಿಖೆ 'ಅಸಹಜ ಸಾವು' ಎಂದಷ್ಟೇ ಪ್ರಕರಣದ ತನಿಖೆ ನಡೆದು ನಂತರ ಸಿಐಡಿ ಪಾಲಾಯಿತು. ಸಿಐಡಿ ತನಿಖೆ ನಡೆಸಿ, ಕೆಜೆ ಜಾರ್ಜ್ ಸೇರಿದಂತೆ ಮೂವರಿಗೂ ಕ್ಲೀನ್ ಚಿಟ್ ನೀಡಿ, ಕೋರ್ಟಿಗೆ ಬಿ ರಿಪೋರ್ಟ್ ಸಲ್ಲಿಸಿತು. ರಾಜೀನಾಮೆ ನೀಡಿದ್ದ ಜಾರ್ಜ್ ಮತ್ತೆ ಸಂಪುಟ ಸೇರಿದರು. ಗಣಪತಿ ಕುಟುಂಬದವರ ಅರ್ಜಿ ಪುರಸ್ಕರಿಸಿದ ಸುಪ್ರೀಂಕೋರ್ಟ್, ಪ್ರಕರಣವನ್ನು ಸಿಬಿಐಗೆ ವಹಿಸಿತು, ತನಿಖೆ ನಿಧಾನಗತಿಯಿಂದ ಸಾಗಿ, ಈಗ ಚಾರ್ಜ್ ಶೀಟ್ ಸಲ್ಲಿಕೆಯಾಯಿತು. ಸಿಬಿಐ ಡಿವೈಎಸ್ಪಿ ರವಿ, ಸಿಬಿಐ ಪಬ್ಲಿಕ್ ಪ್ರಾಸಿಕ್ಯೂಟರ್ ಸುಬೋಧ್ ಅವರು ತನಿಖಾ ವರದಿ ಸಲ್ಲಿಸಿದ್ದರು. ಜಾರ್ಜ್ ವಿರುದ್ಧದ ಪ್ರಕರಣ ಜನಪ್ರತಿನಿಧಿಗಳ ಕೋರ್ಟಿಗೆ ವರ್ಗವಾಯಿತು. ವಿಚಾರಣೆಗೆ ಹಾಜರಾಗುವಂತೆ 2020ರ ಸೆಪ್ಟೆಂಬರ್ 22ರಂದು ಕೋರ್ಟ್ ಸಮನ್ಸ್ ನೀಡಿತ್ತು. ಈಗ ವಿಶೇಷ ನ್ಯಾಯಾಲಯದ ಸಮನ್ಸ್, ಪ್ರಕರಣ ಎಲ್ಲವನ್ನು ಹೈಕೋರ್ಟ್ ರದ್ದುಗೊಳಿಸಿದೆ.

    More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+