Kolar: ಟನ್‌ಗಟ್ಟಲೆ ಟೊಮೆಟೊ ಹೊತ್ತು ಪರಾರಿಯಾಗಿದ್ದ ಲಾರಿ ಗುಜರಾತ್‌ನಲ್ಲಿ ಪತ್ತೆ, ನಡೆದಿದ್ದೇನು?
ಕೋಲಾರ, ಜುಲೈ 31: ಟೊಮೆಟೊಗೆ ಬಂಗಾರದಂತಹ ಬೆಲೆ ಸಿಗುತ್ತಿದ್ದಂತೆ ರೈತರ ಮೊಗದಲ್ಲಿ ಸಂತಸ ಬಾನೆತ್ತರ ಮುಟ್ಟಿದೆ. ಇತ್ತ ಜಮೀನಿನಲ್ಲಿರುವ ಉತ್ಪನ್ನ, ಮಾರಾಟಕಕ್ಕೆ ಲಾರಿಗಳಲ್ಲಿ ತುಂಬಿದ ಟೊಮೆಟೊ ಖದಿಯುವ ಕಳ್ಳರಿಂದ ರೈತರಲ್ಲಿ ಆತಂಕವು ಹೆಚ್ಚಾಗಿದೆ. ಇದಕ್ಕೆ ಹೋಲಿಕೆ ಎಂಬಂತೆ ಕೋಲಾರದಿಂದ 21 ಲಕ್ಷ ರೂ. ಮೌಲ್ಯದ ಟೊಮೆಟೊ ಹೊತ್ತು ನಾಪತ್ತೆಯಾಗಿದ್ದ ಲಾರಿ ಗುಜರಾತ್ ರಾಜ್ಯದಲ್ಲಿ ಪತ್ತೆಯಾಗಿದೆ. ಈ ಕುರಿತು ಪ್ರಕರಣ ದಾಖಲಿಸಲಾಗಿದೆ.
ಕೋಲಾರದ ರೈತರೊಬ್ಬರು ಅಲ್ಲಿನ ಎಪಿಎಂಸಿಯಿಂದ ಸುಮಾರು 21 ಲಕ್ಷ ರೂ. ಮೌಲ್ಯದ ಟೊಮೆಟೊ ಅನ್ನು ಲಾರಿಗೆ ತುಂಬಿ ರಾಜಸ್ಥಾನ ರಾಜ್ಯದ ಜೈಪುರಕ್ಕೆ ಕಳುಹಿಸಿದ್ದರು. ಆದರೆ ಲಾರಿ ಮಾತ್ರ ನಿಗದಿಪಡಿಸಿದ ಸ್ಥಳಕ್ಕೆ ತೆರಳದೇ ಚಾಲಕನ ಸ್ವಾರ್ಥದಿಂದಾಗಿ ನಾಪತ್ತೆಯಾಗಿತ್ತು.

ಮೆಹತ್ ಟ್ರಾನ್ಸ್ ಪೋರ್ಟ್ ಮಾಲೀಕ ಸಾಧಿಕ್ ಅವರ ಲಾರಿಯಲ್ಲಿ ಟೊಮೆಟೊ ತುಂಬಿಸಲಾಗಿತ್ತು. ಅದನ್ನು ಜೈಪುರಕ್ಕೆ ಚಾಲಕ ಅನ್ವರ್ ಒಯ್ದಿದ್ದರು. ಆದರೆ ದಾರಿ ಮಧ್ಯದಲ್ಲಿ ಲಾರಿಗೆ ಅಳವಡಿಸಲಾಗಿದ್ದ GPS ಅನ್ನು ಕಿತ್ತೆಸೆದ ಚಾಲಕ ಅಹಮದಾಬಾದ್‌ಗೆ ಲಾರಿ ತಿರುಗಿಸಿದ್ದಾನೆ. ಅಲ್ಲಿ ಹೋಗಿ ಫುಲ್ ಲೋಡ್ ಟೊಮೆಟೊ ಅನ್ನು ಅರ್ಧ ದರಕ್ಕೆ ಮಾರಾಟ ಮಾಡಿ ಲಾರಿ ಅಲ್ಲಿಯೆ ಬಿಟ್ಟು ತಲೆಮರೆಸಿಕೊಂಡಿದ್ದಾಗಿ ತಿಳಿದು ಬಂದಿದೆ.
ಸದ್ಯ ಕೋಲಾರದಿಂದ ಹೊರಟ ಲಾರಿ ಗುಜರಾತ್ ರಾಜ್ಯದ ಅಹಮದಾಬಾದ್‌ನಲ್ಲಿ ಪತ್ತೆ ಆಗಿದೆ. ಲಾರಿ ಚಾಲಕನಿಗೆ ಅರ್ಧ ಬೆಲೆಗೆ ಮಾರಾಟ ಮಾಡಿರುವುದು ಅಲ್ಲಿನವರು ತಿಳಿಸಿದ್ದಾರೆ. ಲಾರಿ ಚಾಲಕನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ದುಡ್ಡ ಸಮೇತ ಚಾಲಕ ನಾಪತ್ತೆ
ಮೆಹತ್ ಟ್ರಾನ್ಸ್ ಪೋರ್ಟ್ ಮಾಲೀಕ ಸಾಧಿಕ್ ಅವರು ಭಾನುವಾರ ಲಾರಿ ಸಿಕ್ಕ ಅಹಮದಾಬಾದ್‌ಗೆ ಪ್ರಯಾಣ ಬೆಳೆಸಿದ್ದಾರೆ. ಟೊಮೆಟೊ ಅನ್ನು ಅರ್ಧಬೆಲೆ ಗೆ ಮಾರಾಟ ಮಾಡಿ ಅದರ ಹಣದ ಸಮೇತ ಚಾಲಕ ನಾಪತ್ತೆಯಾಗಿದ್ದಾನೆ. ಅಹಮದಾಬಾದ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಲು ಲಾರಿ ಮಾಲೀಕರು ನಿರ್ಧರಿಸಿದ್ದಾರೆ.

ಟೊಮೆಟೊ ದರ ಭಾರೀ ಏರಿಕೆ ಆಗುತ್ತಿದ್ದಂತೆ ಇಂತಹ ಪ್ರಕರಣಗಳು ಹೆಚ್ಚಾಗಿವೆ. ಹೋಲದಲ್ಲಿ ಕಳ್ಳತನವಾಗಿವೆ. ಬೊಲೆರೋ ವಾಹನಗಳನ್ನು ಖದೀಮರು ಕದ್ದೊಯ್ದಿದ್ದರು. ರೈತರಿಗೆ ಆದಾಯ ಹೆಚ್ಚಾಗುವ ಸಮಯದಲ್ಲಿ ಇಂಹತ ಘಟನೆಗಳು ನಿಜಕ್ಕೂ ಖಂಡನೀಯ.
ಕೋಲಾರ ಎಪಿಎಂಸಿಯ ಮುನಿರೆಡ್ಡಿ ಎಂಬುವರು ಸುಮಾರು 21ಲಕ್ಷ ರೂಪಾಯಿ ಮೌಲ್ಯದ ಸುಮಾರು 11 ಟನ್ ಟೊಮೆಟೊ ಅನ್ನು ಜುಲೈ 27 ರಂದು ಲಾರಿಗೆ ಲೋಡ್ ಮಾಡಿದ್ದರು. ರಾಜಸ್ಥಾನದ ಜೈಪುರಕ್ಕೆ ಹೋಗಬೇಕಿತ್ತು. ಅಷ್ಟರಲ್ಲಿ ಚಾಲಕ ಸ್ವಾರ್ಥದಿಂದಾಗಿ ಲಕ್ಷಾಂತರ ರೂ. ಟೊಮೆಟೊ ಅರ್ಧ ಬೆಲೆಗೆ ಮಾರಾಟವಾಗಿದೆ. ಸದ್ಯ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications