ಶಾಮನೂರು ಶಿವಶಂಕರಪ್ಪ ಕ್ಷೇತ್ರದಲ್ಲಿ ಬೈ ಎಲೆಕ್ಷನ್: ಕಾಂಗ್ರೆಸ್ ಟಿಕೆಟ್ ಯಾರಿಗೆ?
ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅವರು ವಯೋ ಸಹಜ ಅನಾರೋಗ್ಯದಿಂದ ನಿಧನರಾದರು. ಇದೀಗ ಶಾಮನೂರು ಶಿವಶಂಕರಪ್ಪ ಅವರು ಗೆದ್ದ ಕ್ಷೇತ್ರವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ತೆರವಾಗಿದ್ದು, ಇದೀಗ ಆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಈಗಾಗಲೇ ಶಾಮನೂರು ಶಿವಶಂಕರಪ್ಪ ಅವರ ಕುಟುಂಬಸ್ಥರು ಹೈಕಮಾಂಡ್ ನಿರ್ಧಾರದಂತೆ ನಾವೂ ನಡೆಯುತ್ತೇವೆ. ನಮ್ಮದೇ ಕುಟುಂಬಕ್ಕೆ ಕೊಟ್ಟರು ಖುಷಿ. ಅವರಿಗೂ ಜನರ ನಾಡಿ ಮಿಡಿತ ಗೊತ್ತಿದೆ ಅಂತ ಪರೋಕ್ಷವಾಗಿ ಹೇಳಿದ್ದರು. ಇದೀಗ ಸಚಿವ ಜಮೀರ್ ಅಹ್ಮದ್ ಖಾನ್ ಹೊಸ ಬಾಂಬ್ ಸಿಡಿಸಿದ್ದು, ಟಿಕೆಟ್ ಕುರಿತು ಬಹಿರಂಗವಾಗಿ ಮಾತನಾಡಿದ್ದಾರೆ.
ದಾವಣಗೆರೆಯಲ್ಲಿ ಇಂದು(ಗುರುವಾರ) ಮಾಧ್ಯಮಗಳ ಜೊತೆಗೆ ಮಾತನಾಡಿ, ಈ ಹಿಂದೆ ಶಾಮನೂರು ಶಿವಶಂಕರಪ್ಪ ಅವರು ನನ್ನ ಬಳಿ ಹೇಳಿದ್ದರು. 2023 ರ ಚುನಾವಣೆ ನನ್ನ ಕೊನೆಯ ಚುನಾವಣೆ. ಮುಂದಿನ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟು, ಗೆಲ್ಲಿಸಿಕೊಂಡು ಬರ್ತೇನೆ ಅಂತ ಅವರೇ ಹೇಳಿದ್ದರು. ಬಹಳ ಹಿರಿಯ ಮುಖಂಡರು ನನ್ನತ್ರ ಬಂದಿದ್ದರು. ಶಾಮನೂರು ಶಿವಶಂಕರಪ್ಪ ಅವರೇ ಈ ಬಗ್ಗೆ ಹೇಳಿದ್ದರು ಎಂಬ ಮಾತನ್ನ ಹೇಳಿದ್ದಾರೆ.

ಶಾಮನೂರು ಶಿವಶಂಕರಪ್ಪ ಅವರು ಹೇಳಿರುವ ಹೇಳಿಕೆಯ ವಿಡಿಯೋ ಕ್ಲಿಪ್ ಕೂಡ ಇದೆ. ಈ ಸಂಬಂಧ ಹೈಕಮಾಂಡ್ ನಿರ್ಧಾರ ಮಾಡಬೇಕಿದೆ ಎಂದು ಇದೇ ವೇಳೆ ಬಳ್ಳಾರಿ ಬ್ಯಾನರ್ ಗಲಾಟೆಯ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಬಳ್ಳಾರಿ ಬ್ಯಾನರ್ ಘಟನೆ ಆಗುವುದಕ್ಕೆ ಬಿಜೆಪಿಯವರೇ ಚಾಲನೆ ಕೊಟ್ಟಿದ್ದು. ಆ ಬ್ಯಾನರ್ ಕಿತ್ತಾಕಿದ್ರೆ ಏನೇನು ಸಮಸ್ಯೆ ಆಗ್ತಾ ಇರಲಿಲ್ಲ. ಆ ಬ್ಯಾನರ್ ಕಟ್ಟಿದವರ ಮನೆ ಮುಂದೆ ಅಲ್ಲ ಸಾರ್ವಜನಿಕ ಸ್ಥಳದಲ್ಲಿ ಕಟ್ಟಿದ್ದಿದ್ದು. ಅವರದ್ದೇ ಸರ್ಕಾರ ಇದೆಯಲ್ಲ ಸಿಬಿಐ ತನಿಖೆಯನ್ನೇ ಮಾಡಿಸಲಿ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ಕೋಗಿಲು ಲೇಔಟ್ ನಲ್ಲಿ ಅಕ್ರಮ ಮನೆಗಳನ್ನು ತೆರವುಗೊಳಿಸಿದ ಬಳಿಕ ನಿರಾಶ್ರಿತರಿಗೆ ಮನೆ ನೀಡುವ ಸಂಬಂಧ ಪ್ರತಿಕ್ರಿಯಿಸಿರುವ ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಅಕ್ರಮ ಮನೆ ತೆರವಾಗಿರುವವರ ಪೈಕಿ 26 ಜನರಿಗೆ ಮನೆ ಕೊಡಲು ಅವಕಾಶವಿದೆ. ಪರಿಶೀಲನೆ ವೇಳೆ 26 ನಿವಾಸಿಗಳ ದಾಖಲೆಗಳು ಮಾತ್ರ ಸರಿಯಾಗಿದೆ. ಇನ್ನೂ ಹಲವರ ಕಾರ್ಯ ನಡೆಯುತ್ತಿದೆ ಎಂದರು. ಒಟ್ಟು 161 ಮನೆಗಳನ್ನು ತೆರವು ಮಾಡಲಾಗಿದೆ.
ಹೊರಗಿನವರಿಗೆ ಯಾವುದೇ ಕಾರಣಕ್ಕೂ ಮನೆ ನೀಡಲ್ಲ. 26 ಜನರ ದಾಖಲೆಗಳು ಸೂಕ್ತವಾಗಿದ್ದು ಅವರಿಗೆ ಮನೆ ಹಂಚಿಕೆ ಮಾಡುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಸಭೆ ಮಾಡಿ ಮನೆ ನೀಡಲು ಸೂಚಿಸಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು. ಕ್ಯಾಬಿನೆಟ್‌ನಲ್ಲಿ ಯಾವುದೇ ಚರ್ಚೆ ಮಾಡಲ್ಲ, ಸಿಎಂ ಈಗಾಗಲೇ ಮೀಟಿಂಗ್ ಮಾಡಿ ಸೂಚನೆ ಕೊಟ್ಟಿದ್ದಾರೆ. 26 ಜನರ ದಾಖಲೆಗಳು ಕ್ಲಿಯರ್ ಆಗಿದೆ ಅವರಿಗೆ ಇವತ್ತು ಮನೆ ಕೊಡಬಹುದು ಎಂದು ತಿಳಿಸಿದರು.












Click it and Unblock the Notifications