ರೀ ಸ್ವಾಮಿ ಅದು "ಸಿದ್ದರಾಮಯ್ಯ ಮರ್ಯಾದೆ" ಪ್ರಶ್ನೆ ಎಂದಿದ್ಯಾಕೆ ಸಚಿವ ಸಂತೋಷ ಲಾಡ್
ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಬದಲಿ ನಿವೇಶನ ಪಡೆದ ಪ್ರಕರಣ ಇದೀಗ ಸಿದ್ದರಾಮಯ್ಯ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕಿಯಾಗುವ ಹಂತಕ್ಕೆ ತಲುಪಿದೆ. ಇದೀಗ ರಾಜ್ಯ ಸರ್ಕಾರದ ಪ್ರಮುಖ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ. ಸಚಿವ ಸಂತೋಷ ಲಾಡ್ ಅವರು ಸಿದ್ದರಾಮಯ್ಯ ಅವರ ಪರವಹಿಸಿಕೊಂಡು ಮಾತನಾಡಿದ್ದು, ರೀ ಅದು ಮರ್ಯಾದೆ ಪ್ರಶ್ನೆ ಎಂದಿದ್ದಾರೆ.
ಮುಡಾದಿಂದ ನೀಡಲಾಗಿದ್ದ 14 ನಿವೇಶನಗಳನ್ನು ಸಿ.ಎಂ ಪತ್ನಿ ಅವರು ಹಿಂದಿರುಗಿಸಿದ್ದು. ಇದಕ್ಕೂ ವಿರೋಧ ಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ತಿರುಗಿ ಬಿದ್ದಿವೆ. ಇದಕ್ಕೆ ರಾಜ್ಯ ಸಚಿವ ಸಂಪುಟದ ಸದಸ್ಯರು ಟಾಂಗ್ ನೀಡಿದ್ದಾರೆ. ಸಚಿವ ಸಂತೋಷ ಲಾಡ್ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯಾ ಅವರ ಪ್ರೆಸ್ಟೆಜ್ ಇಂಪಾರ್ಟೆಂಟ್. ಅದಕ್ಕೆ ಅವರು ಸೈಟು ವಾಪಸ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರ ಪತ್ನಿ ಸೈಟ್ ಹಿಂದಿರುಗಿಸಿದ್ದಾರೆ. ಅದರಲ್ಲಿ ತಪ್ಪೇನಿದೆ. ಮರ್ಯಾದೆಗೋಸ್ಕರ ಸೈಟ್ ಮರಳಿ ಕೊಟ್ಟಿದ್ದು ಅದಕ್ಕೆ ಯೂಟರ್ನ್ ಎಂದು ಹೇಳುವುದಕ್ಕೆ ಬರುವುದಿಲ್ಲ. ಮುಡಾ ಸೈಟು ಕೊಟ್ಟಿದ್ದೇ ಬಿಜೆಪಿ ಅವರು. ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ಇದ್ದ ಸಂದರ್ಭದಲ್ಲಿ ಸೈಟ್ ಕೊಟ್ಟಿದ್ದು, ವಾಪಸ್ಸು ಕೊಡಬಾರದು ಎಂದು ಎಲ್ಲಾದರೂ ರೂಲ್ಸ್ ಇದೆಯೇ ಅವರು ಪ್ರಶ್ನೆ ಮಾಡಿದ್ದು, ಅದು ನಮ್ಮ ಇಷ್ಟ ಯಾವಾಗಲಾದರೂ ವಾಪಸ್ಸು ಕೊಡುತ್ತೆವೆ ಎಂದಿದ್ದಾರೆ.

ಬಿಜೆಪಿಯ ಒತ್ತಡಕ್ಕೆ ಸೈಟ್ ಕೊಟ್ಟಿದ್ದು, ಇದು ಮರ್ಯಾದೆಯ ವಿಷಯವಾಗಿದೆ. ಸಿಎಂ ಅವರ ಪತ್ನಿಯ ಬಗ್ಗೆ 40 ವರ್ಷದಿಂದ ನನಗೆ ಗೊತ್ತು
ಒಂದೇಒಂದು ದಿನವೂ ಅವರು ಹೊರಗೆ ಬಂದವರಲ್ಲ. ಈಗ ಲೋಕಾಯುಕ್ತ, ಇಡಿದಿಂದ ವಿಚಾರಣೆ ಆಗ್ತಿದೆ. ಕರ್ಮ ರಿಟರ್ನ್ ಎನ್ನುತ್ತಾರಲ್ಲ. ಇದೆಲ್ಲ ಮತ್ತೆ ಬಂದೇ ಬರುತ್ತೆ. ನಾನು ಅವರ ಪರವಾಗಿ ಮಾತನಾಡುತ್ತಿಲ್ಲ. ಆದರೆ, ಕಾನೂನು ಬದ್ಧವಾಗಿ ಅಣ್ಣನಾದವನು ತಂಗಿಗೆ ಗಿಫ್ಟ್ ಕೊಟ್ಟಿದ್ದು. ಆ ಜಾಗಾವನ್ನು ಮುಡಾ ಅತಿಕ್ರಮಣ (encroachment) ಮಾಡಿದ್ದು ಅದಕ್ಕೆ ಬದಲಿಗೆ ಸೈಟ್ ಕೊಟ್ಟಿದ್ದಾರೆ. ಇದಕ್ಕೆ ಇಡಿ ಎಂಟ್ರಿ ಆಗ್ತಿದೆ. ಈ ವಿಷಯದಲ್ಲಿ ದುಡ್ಡಿನ ವ್ಯವಹಾರ ಇದೆಯೇ ಹೇಳಿ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಚುನಾವಣಾ ಬಾಂಡ್ 8 ಸಾವಿರ ಕೋಟಿ ಹಗರಣ: ಚುನಾವಣಾ ಬಾಂಡ್ (ಎಲೆಕ್ಷನ್ ಬಾಂಡ್) ವಿಚಾರದಲ್ಲಿ ಬರೋಬ್ಬರಿ 8 ಸಾವಿರ ಕೋಟಿ ರೂಪಾಯಿ ಹಗರಣ ಆಗಿದ್ದು, ಈ ವಿಷಯದಲ್ಲಿ ಇ.ಡಿ ಯಾಕೆ ವಿಚಾರಣೆ ಮಾಡಿಲ್ಲ. ಸುಮೋಟೋ ಪ್ರಕರಣ ದಾಖಲು ಮಾಡಿಕ್ಕೊಂಡು ಎಲೆಕ್ಟ್ರೋ ಬಾಂಡ್ ಹಗರಣ ಮಾಡಿದವರನ್ನ ಮೊದಲು ಬಂಧಿಸಲಿ ಎಂದು ಸವಾಲು ಹಾಕಿದ್ದಾರೆ. ಹಗರಣದ ಬಗ್ಗೆ ಸುಪ್ರಿಂ ಕೋರ್ಟ್ ಹೇಳಿದೆ. ಇಡಿ ಬಳಕೆ ಮಾಡಿಕ್ಕೊಂಡು ಸಿಎಂ ರಾಜೀನಾಮೆ ಕೇಳುತ್ತಿದ್ದಾರೆ. ಬಿಜೆಪಿ ಅವರು ಕೇಂದ್ರದಲ್ಲಿ 29 ಜನ ಕ್ಯಾಬಿನೆಟ್ ಸಚಿವರ ಮೇಲೆ ಕ್ರಿಮಿನಲ್ ಕೇಸ್, ಕೊಲೆ ಕೇಸ್, ರೇಪ್ ಕೇಸ್‌ಗಳು ಇವೆ. ಅವರು ರಾಜೀನಾಮೆ ಕೊಡೋದು ಬೇಡ್ವಾ ಹಾಗಾದ್ರೆ, ಕೇಂದ್ರ ಸಚಿವ ಕುಮಾರಸ್ವಾಮಿ ಮೆಲೆ ಕೇಸ್ ಇದೆ ಅವರು ರಾಜೀನಾಮೆ ಕೊಡೋದು ಬೇಡವೇ ಎಂದು ಸಂತೋಷ ಲಾಡ್ ಅವರು ಮಾಧ್ಯಮಗಳ ಮೇಲೆ ಗರಂ ಆಗಿದ್ದಾರೆ.












Click it and Unblock the Notifications