ಒಂದು ರಾಷ್ಟ್ರ ಒಂದು ಚುನಾವಣೆಗೆ ವಿರೋಧ; ಪ್ರಧಾನಿ ಮೋದಿಗೆ ಸಂತೋಷ್ ಲಾಡ್ ಕೊಟ್ಟ ಸಲಹೆ ಏನು?
ಬೆಂಗಳೂರು, ಸೆಪ್ಟೆಂಬರ್ 07: ದೇಶದಲ್ಲಿ ರಾಜ್ಯ ಮತ್ತು ಕೇಂದ್ರಕ್ಕೆ ಒಂದೇ ಭಾರಿ ಚುನಾವಣೆ ನಡೆಲು ಒಂದು ರಾಷ್ಟ್ರ ಒಂದು ಚುನಾವಣೆ ವ್ಯವಸ್ಥೆ ಜಾರಿಯ ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದು, ಈ ಬಗ್ಗೆ ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಚಿವ ಸಂತೋಷ್ ಲಾಡ್ ಮಾತನಾಡಿ, ಪ್ರಧಾನಿ ಮೋದಿ ಅವರ ಸರ್ಕಾರ ಪ್ರಚಾರ ಮಾಡಿಕೊಳ್ಳುವುದರಲ್ಲಿ ನಂಬರ್ 1 ಆಗಿದೆ. ಚುನಾವಣೆ ಹತ್ತಿರ ಬಂದಂತೆ ತಮ್ಮದೇ ಗಿಮಿಕ್ ಮೂಲಕ ಸಮಾಜ ಹಾಗೂ ಜನರ ಕಣ್ಣು ಕಟ್ಟುವ ವಿದ್ಯೆಯನ್ನು ಕರಗತ ಮಾಡಿಕೊಂಡಿದೆ. ಕೇವಲ ಒಂದು ರಾಷ್ಟ್ರ ಒಂದು ಚುನಾವಣೆ ಎನ್ನದೇ ಒಂದು ರಾಷ್ಟ್ರ ಉಚಿತ ಶಿಕ್ಷಣವನ್ನು ನೀಡಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದ್ದಾರೆ.

ಕಳೆದ 10 ವರ್ಷದಲ್ಲಿ ಎಷ್ಟೊಂದು ಬಡ ಜನರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಹಾಗೂ ಕೇವಲ ಶ್ರೀಮಂತರ ಮಕ್ಕಳಿಗೆ ಮಾತ್ರ ಉತ್ತಮ ಶಿಕ್ಷಣ ದೊರೆಯುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಆಲೋಚನೆ ಮಾಡಲಿ ಅದು ಬಿಟ್ಟು ಇಂತಹುದರ ಬಗ್ಗೆ ಅಲ್ಲ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಅವರು ತಮ್ಮ ಪ್ರಚಾರ ಕಾರ್ಯಗಳಿಗೆ ಖರ್ಚು ಮಾಡುವ ಹಣವನ್ನು ಬಡವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಬಳಸಲಿ ಎಂದು ಲಾಡ್ ಸಲಹೆ ನೀಡಿದ್ದಾರೆ.
ವಾರಾಣಾಸಿಯಿಂದ ಮೃತದೇಹ ತರಿಸಲು ನೆರವಾದ ಸಚಿವ ಸಂತೋಷ್ ಲಾಡ್
ವಾರಾಣಸಿಯಲ್ಲಿ ಮೃತಪಟ್ಟಿದ್ದ ಕಲಘಟಗಿ ತಾಲ್ಲೂಕಿನ ಬಮ್ಮಿಗಟ್ಟಿ ಗ್ರಾಮದ ಶಿವಪ್ಪ ಮುಕ್ಕಣ್ಣವರ ಅವರ ಮೃತದೇಹವನ್ನು ಹುಬ್ಬಳ್ಳಿಗೆ ತರಿಸಲು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
ಕಾಶಿಯಾತ್ರೆಗೆ ಹೋಗಿದ್ದ ಶಿವಪ್ಪ ಮುಕ್ಕಣ್ಣವರ ಅವರು ವಾರಣಾಸಿ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತುವಾಗ ಕಾಲು ಜಾರಿ ಬಿದ್ದು ಗಾಯಗೊಂಡಿದ್ದರು. ಆಗ ಅವರನ್ನು ಅಲ್ಲಿಯೆ ಇದ್ದ ಸಾರ್ವಜನಿಕರು ಹಾಗೂ ರೈಲ್ವೆ ಪೊಲೀಸರು ವಾರಣಾಸಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇದೇ 4 ರಂದು ರಾತ್ರಿ ಶಿವಪ್ಪ ಮೃತಪಟ್ಟಿದ್ದರು.
ಶಿವಪ್ಪ ಕುಟುಂಬದವರು ಮೃತದೇಹವನ್ನು ಹುಬ್ಬಳ್ಳಿಗೆ ತರಿಸಲು ತೊಂದರೆಯಲ್ಲಿದ್ದರು. ಈ ವೇಳೆ ಸಂತೋಷ ಲಾಡ್ ಅವರ ನೆರವು ಕೋರಿದರು. ತಕ್ಷಣವೆ ವಿಮಾನದ ಟಿಕೆಟ್ ಸೇರಿದಂತೆ ಮೃತದೇಹ ತರಿಸಲು ಎಲ್ಲಾ ರೀತಿಯ ನೆರವನ್ನು ಒದಗಿಸಲು ಕ್ರಮ ಕೈಗೊಂಡಿದ್ದರು. ವಿಮಾನಕ್ಕೆ ತಗಲುವ ಸಂಪೂರ್ಣ ಖರ್ಚನ್ನು ಸಂತೋಷ್ ಲಾಡ್ ಅವರು ನೀಡಿ ನೆರವಾದರು.
ಮೃತದೇಹವನ್ನು ವಾರಣಾಸಿಯಿಂದ ವಿಮಾನದಲ್ಲಿ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ತಂದು ನಂತರ ಮೃತನ ಕುಟುಂಬಕ್ಕೆ ಹಸ್ತಾಂತರಿಸಲು ಬೇಕಾದ ಎಲ್ಲಾ ಕ್ರಮವನ್ನು ಕೈಗೊಳ್ಳಲು ಸಚಿವರು ವ್ಯವಸ್ಥೆ ಮಾಡಿದ್ದರು.












Click it and Unblock the Notifications