ಟಿಪ್ಪು ಟೋಪಿ ಧರಿಸಿ ಖಡ್ಗ ಹಿಡಿದಿದ್ದ ಯಡಿಯೂರಪ್ಪ ಉತ್ತರಿಸುತ್ತಾರೋ?- ಬಿಜೆಪಿಗೆ ಪ್ರಿಯಾಂಕ್‌ ಖರ್ಗೆ ಪ್ರಶ್ನೆ

ಬೆಂಗಳೂರು, ನವೆಂಬರ್‌ 25: ಸುಳ್ಳಿನ ಮೆರವಣಿಗಾಗಿ ಸತ್ಯದ ಕೊಲೆ ಮಾಡಿ ಸಮಾಧಿ ಮಾಡುವ ಪ್ರಯತ್ನ ಭ್ರಷ್ಟ ಜನತಾ ಪಾರ್ಟಿಯವರದ್ದು. ಆದರೆ ಸತ್ಯಕ್ಕೆ ಸಾವಿಲ್ಲ ಎಂಬ ಅರಿವು ಅವರಿಗೆ ಇದ್ದಂತಿಲ್ಲ. ಕೂಸನ್ನು ಚಿವುಟುವುದೂ ಬಿಜೆಪಿಯವರೇ, ತೊಟ್ಟಿಲು ತೂಗುವುದೂ ಬಿಜೆಪಿಯವರೇ, ಬಿಜೆಪಿಯವರ ಈ ಕಳ್ಳಾಟ ವಕ್ಫ್ ವಿಚಾರದಲ್ಲಿ ಬಟಾಬಯಲಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ಅಂದ ಹಾಗೆ ಬಿಜೆಪಿಗರು ನಡೆಸುತ್ತಿರುವುದು ರೈತರ ಪರವಾದ ಹೋರಾಟವಲ್ಲ, ವಿಜಯೇಂದ್ರ ಹಠಾವೋ ಹೋರಾಟ. ಈ ಸತ್ಯ ಜಗನ್ನಾಥ ಭವನದ ಪ್ರತಿ ಕಿಟಕಿ ಬಾಗಿಲುಗಳಿಗೂ ತಿಳಿದಿದೆ ಎಂದು ಕೆಲವು ಅಂಶಗಳನ್ನು ಉಲ್ಲೇಖಿಸಿದ್ದಾರೆ.

Minister Priyank Kharge Lashes Out At BJP On Waqf Property Dispute

* 2018 - 2023ರ ನಡುವೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಮಿತಿಯು ಜಿಲ್ಲಾಧಿಕಾರಿಗಳೊಂದಿಗೆ ಹಲವಾರು ಸಭೆ ನಡೆಸಿ ವಕ್ಫ್ ಆಸ್ತಿ ಗುರುತಿಸಿ, ತೆರವುಗೊಳಿಸಲು ಸೂಚನೆ ನೀಡಿದ್ದು ಏಕೆ?.

* 2019ರಿಂದ 2020ರ ಅವಧಿಯಲ್ಲಿ ಬಿಜೆಪಿ ಸರ್ಕಾರ 2,865 ಎಕರೆ ವಿಸ್ತೀರ್ಣದ ಜಮೀನಿಗೆ ವಕ್ಫ್ ಆಸ್ತಿ ಎಂದು ಅಧಿಸೂಚನೆ ಹೊರಡಿಸಿದ್ದು ಏಕೆ?

* ಹಿಂದಿನ ಬಿಜೆಪಿ ಸರ್ಕಾರ 1,735 ರೈತರಿಗೆ ವಕ್ಫ್ ಅಸ್ತಿಗೆ ಸಂಬಂಧಿಸಿದಂತೆ ನೋಟಿಸ್ ನೀಡಿದ್ದು ಏಕೆ?

Minister Priyank Kharge Lashes Out At BJP On Waqf Property Dispute

* ಹಿಂದಿನ ಬಿಜೆಪಿ ಸರ್ಕಾರ 4,720 ಎಕರೆಯಷ್ಟು ಜಮೀನನ್ನು ಪರಬಾರೆಯಾಗದಂತೆ ವಕ್ಫ್ ಆಸ್ತಿ ಎಂದು ಫ್ಲಾಗ್ ಆಫ್ ಮಾಡಿದ್ದು ಏಕೆ?

* ರೈತರ ಹೆಸರಲ್ಲಿರುವ ಆಸ್ತಿಗಳ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೋದಿಸಬೇಕು ಎಂದು ಕುಮಾರ್ ಬಂಗಾರಪ್ಪ ಸಮಿತಿ ಸೂಚಿಸಿದ್ದು ಏಕೆ?

* ರಾಜ್ಯದಾದ್ಯಂತ ತಾಲೂಕುವಾರು ವಕ್ಫ್ ಆಸ್ತಿಗಳನ್ನು ಪರಿಶೀಲಿಸಿ ಭೂಮಿ ಸಾಫ್ಟ್ ವೇರ್ ನಲ್ಲಿ ವಕ್ಫ್ ಆಸ್ತಿ ಎಂದು ನಮೋದಿಸಬೇಕು ಎಂದು ಸೂಚಿಸಿದ್ದು ಏಕೆ?

* ಬಿಜೆಪಿ ಸರ್ಕಾರದ ಅವಧಿಯ ಕುಮಾರ್ ಬಂಗಾರಪ್ಪ ಸಮಿತಿ ಬೆಂಗಳೂರಿನ ಕೆ.ಆರ್ ಮಾರುಕಟ್ಟೆಯನ್ನು ವಕ್ಫ್ ಆಸ್ತಿ ಎಂದು ನೀಡಿದ್ದ ವರದಿಯನ್ನು ಸದನದಲ್ಲಿ ಅಂಗೀಕರಿಸಲಾಗಿತ್ತು, ಆಗ ಬಿಜೆಪಿಯವರ ಪ್ರಜ್ಞೆ ಎಲ್ಲಿ ಉದುರಿ ಬಿದ್ದಿತ್ತು? ಎಂದು ಪ್ರಶ್ನಿಸಿರುವ ಸಚಿವರು, ಈ ಎಲ್ಲಾ ಪ್ರಶ್ನೆಗಳಿಗೆ ವಕ್ಫ್ ಆಸ್ತಿ ಅಲ್ಲಾನ ಆಸ್ತಿ ಎಂದಿದ್ದ ಬೊಮ್ಮಾಯಿಯವರು ಉತ್ತರಿಸುತ್ತಾರೋ? ಟಿಪ್ಪು ಟೋಪಿ ಧರಿಸಿ ಖಡ್ಗ ಹಿಡಿದಿದ್ದ ಯಡಿಯೂರಪ್ಪನವರು ಉತ್ತರಿಸುತ್ತಾರೋ? ಅಥವಾ ವಕ್ಫ್ ವಿಚಾರಕ್ಕಾಗಿ ರಾಜ್ಯ ಪ್ರವಾಸಕ್ಕೆ ಹೊರಡುತ್ತಿರುವ ಬಿಜೆಪಿಯ A ಟೀಮ್, B ಟೀಮ್ ನಾಯಕರು ಜನತೆಗೆ ಈ ಸತ್ಯಗಳನ್ನು ತಿಳಿಸಿ ಬರುತ್ತಾರೆಯೇ? ಎಂದು ಬಿಜೆಪಿ ನಾಯಕರಿಗೆ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+