ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಮಹದೇವ ಪ್ರಸಾದ್‍ರಿಂದಲೇ ಗಣಿಗಾರಿಕೆ!

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಜೂನ್ 16 : ಸಹಕಾರ ಮತ್ತು ಸಕ್ಕರೆ ಖಾತೆ ಸಚಿವ, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ಹೆಸರಿನಲ್ಲಿ ಬಿಳಿಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಮಾಹಿತಿ ಹಕ್ಕಿನಡಿ ಪಡೆದ ದಾಖಲೆಗಳಿಂದ ಇದು ಬೆಳಕಿಗೆ ಬಂದಿದೆ.

ಗುಂಡ್ಲುಪೇಟೆ ತಾಲೂಕಿನ ಬೆಳಚವಾಡಿ ಗ್ರಾಮದ ಸರ್ವೆ ನಂಬರ್ 172 ರಲ್ಲಿನ 2 ಎಕರೆ ಪ್ರದೇಶದಲ್ಲಿ ಬಿಳಿಕಲ್ಲು ಗಣಿಗಾರಿಕೆಯ ಲೈಸನ್ಸ್ ಸಚಿವರ ಹೆಸರಿನಲ್ಲಿದೆ. ಈ ಕುರಿತ ದಾಖೆಲಗಳು ಈಗ ಬಹಿರಂಗವಾಗಿವೆ. ಪ್ರತಿಪಕ್ಷದವರು ಇದನ್ನು ದಾಳವಾಗಿ ಮಾಡಿಕೊಂಡು ಆರೋಪ ಮಾಡಲು ಮುಂದಾಗಿದ್ದಾರೆ. [ಕಲ್ಲು ಮುಳ್ಳು ಧೂಳಿನಲ್ಲಿ ಅರಳಿನಿಂತ ಜಿಂದಾಲ್ ಸ್ಟೀಲ್]

hs mahadeva prasad

ಬಿಳಿಕಲ್ಲು ಗಣಿಗಾರಿಕೆಯಲ್ಲಿ ಸಚಿವ ಮಹದೇವ ಪ್ರಸಾದ್ ಮಾತ್ರವಲ್ಲದೇ ಅವರ ಸಹೋದರ ಎಚ್.ಎಸ್.ನಂಜುಂಡ ಪ್ರಸಾದ್, ಭಾವ ಮೈದುನ ಮಲ್ಲಿಕಾರ್ಜುನ ಸೇರಿದಂತೆ ಹಲವರ ಹೆಸರಿದೆ. [ಗಣಿಗಾರಿಕೆ ಆರಂಭಕ್ಕೆ ಸಿದ್ದರಾಮಯ್ಯ ಸರ್ಕಾರ ಚಿಂತನೆ]

ಮಾಡ್ರಳ್ಳಿ ಮಹದೇವಪ್ಪ ಅವರು ಮಾಹಿತಿ ಹಕ್ಕಿನಡಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರಿಂದ ಮಾಹಿತಿ ಪಡೆದಿದ್ದು, ಇದರಲ್ಲಿ ಗಣಿಗಾರಿಕೆಗೆ ಲೈಸನ್ಸ್ ಪಡೆದವರ ದೊಡ್ಡಪಟ್ಟಿಯೇ ಇದೆ. ಅದರಲ್ಲಿ ಸಚಿವ ಮತ್ತು ಅವರ ಕುಟುಂಬದವರು ಲೈಸೆನ್ಸ್ ಪಡೆದಿರುವುದು ಕಂಡುಬಂದಿದೆ. [ಗಣಿಗಾರಿಕೆ ನಿಷೇಧದಿಂದ 10 ಲಕ್ಷ ಉದ್ಯೋಗ ನಷ್ಟ]

rti

ಚಾಮರಾಜನಗರದ ರಾಜಕೀಯ ಇತಿಹಾಸದಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿರುವ ಸಚಿವ ಮಹದೇವ ಪ್ರಸಾದ್ ಅವರು ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿರುವುದು ಜನರಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಆದರೆ, ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಇದು ಬೆಳಕಿಗೆ ಬಂದಿರುವುದು ಸರ್ಕಾರಕ್ಕೆ ಇರುಸುಮುರುಸು ಉಂಟುಮಾಡುವ ಸಾಧ್ಯತೆ ಇದೆ.

English summary
Minister for Co-operation and Sugar H.S. Mahadeva Prasad involved in stone mining in Gundlupet taluk Chamarajanagar district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X