ಕುಮಾರ್ ಬಂಗಾರಪ್ಪVS ಮಧು ಬಂಗಾರಪ್ಪ: 'ಧಮ್ ಇಲ್ಲ ಬಿಡಿ ಅದಕ್ಕೆ ಅವರು ಸೋತಿದ್ದಾರೆ'
ಶಿವಮೊಗ್ಗ, ಸೆಪ್ಟೆಂಬರ್ 05: ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಕ್ಕಳ ಜಟಾಪಟಿ ಮತ್ತೆ ಮುಂದುವರಿದಿದೆ. ಲೋಕಸಭಾ ಚುನಾವಣೆಯ ಬಳಿಕ ಸೈಲೆಂಟ್ ಆಗಿದ್ದ ಕುಮಾರ ಬಂಗಾರಪ್ಪ ಅವರ ವಿರುದ್ಧ ಸಚಿವ ಮಧು ಬಂಗಾರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಕಾರಣ ಕುಮಾರ ಬಂಗಾರಪ್ಪ ಮಾಡಿರುವ ಆರೋಪವಾಗಿದೆ.
ಸೊರಬ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಕಳೆದೊಂದು ವರ್ಷದಿಂದ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂಬ ಅಣ್ಣನ ಆರೋಪಕ್ಕೆ ಕೆರಳಿ ಕೆಂಡವಾಗಿದ್ದಾರೆ.ಶಾಸಕರ ಅಧ್ಯಕ್ಷತೆಯಲ್ಲಿ ಶಿಕ್ಷಣ ಕಮಿಟಿ ಅಂತಾ ಮಾಡ್ತಿದ್ದೇವೆ. ಅವರವರ ಕ್ಷೇತ್ರದಲ್ಲಿ ಅವರೇ ರಿವ್ಯೂ ಮಾಡ್ತಾರೆ, ನನ್ನ ಬಟ್ಟೆ ಯಾಕೆ ರಾಡಿ ಮಾಡಿಕೊಳ್ಳಲಿ, ಅವರ ಪಕ್ಷದಲ್ಲಿ ಅವರಿಗೆ ಬಾಗಿಲು ಎಲ್ಲಿದೆ ಗೊತ್ತಿಲ್ಲ, ಅವರೇ ಹಿಂದಿನ ಬಾಗಿಲಿನಿಂದ ಓಡಾಡ್ತಿದ್ದಾರೆ ಎಂದು ಕುಮಾರ್ ಬಂಗಾರಪ್ಪ ವಿರುದ್ಧ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.

ಕುಮಾರ್ ಬಂಗಾರಪ್ಪನಿಗೆ ಧಮ್ ಇಲ್ಲ ಬಿಡಿ ಅದಕ್ಕೆ ಸೋತಿದ್ದಾರೆ, ಹೀನಾಯವಾಗಿ ಸೋತಿದ್ದಾರೆ, ಅವರಿಗೆ ಉತ್ತರ ಕೊಡಬೇಕಾ?, ದಂಧೆ ಮಾಡಿದವರು ಯಾರು ಅಂತಾ ಜನರಿಗೆ ಗೊತ್ತಿದೆ ಎಂದು ಅಣ್ಣನ ವಿರುದ್ಧ ಸಚಿವ ಮಧು ಬಂಗಾರಪ್ಪ ಕೆಂಡಕಾರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರೆ ನಾನು ಮುಖ್ಯಮಂತ್ರಿ ಆಗ್ತೀನಿ ಎಂಬ ಆರ್.ವಿ.ದೇಶಪಾಂಡೆ ಹೇಳಿಕೆ ವಿಚಾರಕ್ಕೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಹಿರಿಯರು ಇದ್ದಾರೆ ಏನೋ ಹೇಳಿದ್ದಾರೆ, ಹಿರಿಯರು ಮಾತನಾಡ್ತಾರೆ, ನಾನು ಇನ್ನೂ ಸಣ್ಣವನು ಅವರ ರೀತಿ ಮಾತನಾಡಲ್ಲ, ಸಿದ್ದರಾಮಯ್ಯ ಒಳ್ಳೆಯ ಕೆಲಸ ಮಾಡಿದ್ದಾರೆ, ಅವರೇ ಮುಂದುವರೆಯಲಿದ್ದಾರೆ, ಸಿಎಂ ಯಾರು ಆಗಬೇಕೆಂಬುದು ನಮ್ಮ ಹೈ ಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.











Click it and Unblock the Notifications