Hebbalkar Car Accident: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ಮಾಡಿದ್ದ ಲಾರಿ ಚಾಲಕನ ಬಂಧನ
Lakshmi Hebbalkar Accident: ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತವಾಗಿತ್ತು. ಈ ಅಪಘಾತ ನಡೆಸಿ ಪರಾರಿ ಆಗಿದ್ದ ಲಾರಿ ಚಾಲಕನನ್ನು ಇಂದು (ಏಪ್ರಿಲ್ 16) ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಬೆಳಗಾವಿಯ ಕಿತ್ತೂರು ಠಾಣೆ ಪೊಲೀಸರು, ತನಿಖೆ ಮುಂದುವರೆಸಿದ್ದರು. ಇದೀಗ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ಗ್ರಾಮದ ನಿವಾಸಿ, ಲಾರಿ ಚಾಲಕ ಮಧುಕರ್ ಸೂರ್ಯವಂಶಿ ಎಂಬಾತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿವಲ್ಲಿ ಕೊನೆ ಯಶಸ್ವಿಯಾಗಿದ್ದಾರೆ. ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಅಪಘಾತ ಎಸಗಿದ ಲಾರಿ ಚಾಲಕ ತಲೆಮರೆಸಿಕೊಂಡಿದ್ದ. ಇದೀಗ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ಗ್ರಾಮದ ಮಧುಕರ ಸೋಮವಂಶಿ ಎಂಬಾತನನ್ನು ಕಿತ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಅಪಘಾತ ಎಸಗಿದ ಲಾರಿಯನ್ನೂ ವಶಪಡಿಸಿಕೊಂಡಿದ್ದಾರೆ.
ಜನವರಿ 14, 2025ರಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ಆಗಿತ್ತು. ಬೆಂಗಳೂರಿನಿಂದ ಬೆಳಗಾವಿಗೆ ಬರುವ ವೇಳೆ ಕಿತ್ತೂರು ಸಮೀಪದ ಅಂಬಡಗಟ್ಟಿಯಲ್ಲಿ ಕಾರು ಅಪಘಾತ ಆಗಿತ್ತು. ಘಟನೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆನ್ನಿಗೆ ಗಂಭೀರ ಗಾಯವಾಗಿತ್ತು. ಬಳಿಕ ಆಸ್ಪತ್ರೆಗೆ ದಾಖಲಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಚಿಕಿತ್ಸೆ ಪಡೆದಿದ್ದರು.
ಈ ಬಗ್ಗೆ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಚಾಲಕ ಶಿವಪ್ರಸಾದ್ ಎಂಬುವರು ದೂರು ದಾಖಲಿಸಿದ್ದಾರೆ. ಈ ದೂರಿನ ಮೇರೆಗೆ ಕಿತ್ತೂರು ಠಾಣೆ ಪೊಲೀಸರು ಸಚಿವೆ ಕಾರು ಅಪಘಾತ ಪ್ರಕರಣದ ವಿಚಾರಣೆ ಆರಂಭಿಸಿದ್ದರು. ಹಿರೇಬಾಗೇವಾಡಿ ಟೋಲ್ ಬಳಿಯ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಬರೋಬ್ಬರಿ 69 ಲಾರಿ ಚಾಲಕರನ್ನು ವಿಚಾರಣೆ ಮಾಡಿದ್ದರು.
ಈ ವೇಳೆ ಮಹಾರಾಷ್ಟ್ರ ಮೂಲದ ಲಾರಿ ಚಾಲಕ ಮಧುಕರ ಸೋಮವಂಶಿಯನ್ನೂ ಪೊಲೀಸರು ವಿಚಾರಣೆ ನಡೆಸಿದ್ದರು. ಆದರೆ ಈ ವೇಳೆ ಆತ ತಾನು ಅಪಘಾತ ಎಸಗಿಲ್ಲ ಎಂದು ಹೇಳಿದ್ದ. ಬಳಿಕ ಅಪಘಾತದಲ್ಲಿ ಭಾಗಿಯಾದ ವಾಹನದ ಬಣ್ಣ ಎಫ್ಎಸ್‌ಎಲ್‌ಗೆ ರವಾನೆ ಮಾಡಲಾಗಿತ್ತು. ಈ ವಾಹನ ಆತನದ್ದೇ ಎಂದು ತಿಳಿದುಬಂದಿದೆ. ಘಟನೆ ವೇಳೆ ಫೋನ್ ಕಾಲ್ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಾರು 2025ರ ಜನವರಿ 14ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿತ್ತು. ಬೆಂಗಳೂರಿನಿಂದ ಕಾಂಗ್ರೆಸ್ ಶಾಸಕಾಂಗ ಸಭೆ ಮುಗಿಸಿ ಬೆಳಗಾವಿಗೆ ಹಿಂದಿರುಗುತ್ತಿದ್ದಾಗ ಮುಂಜಾನೆ ಅಪಘಾತ ಸಂಭವಿಸಿತ್ತು.












Click it and Unblock the Notifications