ಎಚ್ಡಿಕೆ 'ಯುಗಪುರುಷ' ಎಂದ ಈಶ್ವರಪ್ಪ: ಅದಕ್ಕೆ ಭಯಂಕರ ತಿರುಗೇಟು ನೀಡಿದ ಕುಮಾರಸ್ವಾಮಿ

ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ನಡುವಿನ ಟ್ವೀಟ್ ಸಮರ ಮುಂದುವರಿದಿದೆ. "ಕುಮಾರಸ್ವಾಮಿ ಸಿನಿಮಾ ನೋಡಿಕೊಂಡು ಇರುವುದು ಒಳ್ಳೆಯದು. ಅವರಿಗೆ ಅಧಿಕಾರದಿಂದ ಇಳಿದ ಮೇಲೆ ಉದ್ಯೋಗ ಏನಿದೆ" ಎಂದು ಈಶ್ವರಪ್ಪ ಲೇವಡಿ ಮಾಡಿದ್ದರು.

"ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲೆಬೆಲೆ ದೇಶಾದ್ಯಂತ ಜನ ಜಾಗೃತಿ ಮಾಡುತ್ತಿದ್ದಾರೆ. ಅಂಥವರ ವಿರುದ್ಧವೂ ಹಗುರವಾಗಿ ಮಾತನಾಡುವುದು ಒಳ್ಳೆಯದ್ದಲ್ಲ" ಎಂದು ಈಶ್ವರಪ್ಪ, ಕುಮಾರಸ್ವಾಮಿಗೆ ಬುದ್ದಿಮಾತನ್ನು ಹೇಳಿದ್ದರು.

ಮುಸ್ಲಿಂ ಮುಖಂಡರ ಸಭೆಯ ನಂತರ ಮಾತನಾಡುತ್ತಿದ್ದ ಕುಮಾರಸ್ವಾಮಿ, "ತೇಜಸ್ವಿ ಸೂರ್ಯ ಮತ್ತು ಚಕ್ರವರ್ತಿ ಸೂಲಿಬೆಲೆ ಯುಗಪುರುಷರೇ" ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದರು.

ಇದಕ್ಕೆ, ಈಶ್ವರಪ್ಪ, "ಇಂತಹ ಯುಗ ಪುರುಷರನ್ನು ಪಡೆದ ಕರ್ನಾಟಕವೇ ಧನ್ಯ" ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಕುಮಾರಸ್ವಾಮಿ, ಸಾಲುಸಾಲು ಟ್ವೀಟ್ ಮೂಲಕ ಪ್ರತ್ಯುತ್ತರ ನೀಡಿದ್ದು ಹೀಗೆ:

ತಿನ್ನಲು ಗತಿ ಇಲ್ಲದವರು ಮಾತ್ರ ಸೈನ್ಯಕ್ಕೆ ಸೇರುತ್ತಾರೆ ಎಂದು ಹೇಳಿದ ಈ ಯುಗಪುರುಷ

ತಿನ್ನಲು ಗತಿ ಇಲ್ಲದವರು ಮಾತ್ರ ಸೈನ್ಯಕ್ಕೆ ಸೇರುತ್ತಾರೆ ಎಂದು ಹೇಳಿದ ಈ ಯುಗಪುರುಷ

"ಅಂದು ತಿನ್ನಲು ಗತಿ ಇಲ್ಲದವರು ಮಾತ್ರ ಸೈನ್ಯಕ್ಕೆ ಸೇರುತ್ತಾರೆ ಎಂದು ಹೇಳಿದ ಈ ಯುಗಪುರುಷ, ಪುಲ್ವಾಮ ದಾಳಿಗೆ ಭಾರತೀಯ ಸೈನ್ಯ ಪ್ರತ್ಯುತ್ತರ ನೀಡಿದಾಗ ಸಂಭ್ರಮಾಚರಣೆ ಮಾಡಬೇಡಿ ಒಂದು ಕೋಮಿಗೆ ಬೇಜಾರಾಗುತ್ತದೆ ಎಂದೂ ತಮ್ಮ ಅಣಿಮುತ್ತುಗಳನ್ನು ಉದುರಿಸಿ ಅತ್ತಿದ್ದರು. ಇಂತಹ ಯುಗಪುರುಷನನ್ನು ಪಡೆದ ಕರ್ನಾಟಕವೇ ಧನ್ಯ. ಅವರ ಯೋಗ್ಯತೆಗೆ ತಕ್ಕ ಮಾತು" ಇದು ಈಶ್ವರಪ್ಪ ಮಾಡಿದ್ದ ಟ್ವೀಟ್.

ಡಿಸಿಎಂ ಹುದ್ದೆಯ ಬಗ್ಗೆ ಕೀಳು ಅಭಿರುಚಿ ಮಾತನಾಡಿದವನು ನಾನಲ್ಲ

ಡಿಸಿಎಂ ಹುದ್ದೆಯ ಬಗ್ಗೆ ಕೀಳು ಅಭಿರುಚಿ ಮಾತನಾಡಿದವನು ನಾನಲ್ಲ

ಇದಕ್ಕೆ ಕುಮಾರಸ್ವಾಮಿ ನೀಡಿದ ಪ್ರತ್ಯುತ್ತರ, "ಮನೆಯಲ್ಲಿ ನೋಟು ಎಣಿಸುವ ಯಂತ್ರ ಇಟ್ಟುಕೊಂಡವನು ನಾನಲ್ಲ. ನಿಮ್ಮ ಮೇಲೆ ಅತ್ಯಾಚಾರ ನಡೆದರೆ ಸರ್ಕಾರ ಏನು ಮಾಡೋಕಾಗುತ್ತೆ ಎಂದು ವರದಿಗಾರ್ತಿಗೆ ಪೆಕರನಂತೆ ಪ್ರಶ್ನಿಸಿದವನು ನಾನಲ್ಲ". "ಉಪ ಮುಖ್ಯಮಂತ್ರಿ ಹುದ್ದೆ ಯಾರಿಗೆ ಇಷ್ಟವಿಲ್ಲ? ವಯಸ್ಸಿಗೆ ಬಂದವರಿಗೆಲ್ಲರಿಗೂ ನಟಿ ಐಶ್ವರ್ಯ ರೈ ಬೇಕೆಂದು ಬಯಸುತ್ತಾರೆ. ಇರುವುದು ಒಬ್ಬಳೇ ಐಶ್ವರ್ಯ ರೈ ತಾನೇ? ಎಂದು ಡಿಸಿಎಂ ಹುದ್ದೆಯ ಬಗ್ಗೆ ಕೀಳು ಅಭಿರುಚಿ ಮಾತನಾಡಿದವನು ನಾನಲ್ಲ".

ನನ್ನ ಕ್ಷೇತ್ರದಲ್ಲಿ 55 ರಿಂದ 60 ಸಾವಿರ ಮುಸ್ಲಿಂರ ವೋಟ್ ಗಳಿವೆ

ನನ್ನ ಕ್ಷೇತ್ರದಲ್ಲಿ 55 ರಿಂದ 60 ಸಾವಿರ ಮುಸ್ಲಿಂರ ವೋಟ್ ಗಳಿವೆ

"ನನ್ನ ಕ್ಷೇತ್ರದಲ್ಲಿ 55 ರಿಂದ 60 ಸಾವಿರ ಮುಸ್ಲಿಂರ ವೋಟ್ ಗಳಿವೆ.ಇದೂವರೆಗೂ ಒಬ್ಬ ಮುಸ್ಲಿಂಮನಿಗೂ ನಮಸ್ಕಾರ ಹೊಡೆದು ವೋಟ್ ಕೇಳಿಲ್ಲ.ಆದ್ರೂ 47ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇನೆ. ರಾಷ್ಟ್ರಭಕ್ತ ಮುಸ್ಲಿಂ ಬಿಜೆಪಿಗೆ ವೋಟ್ ಹಾಕ್ತಾನೆ ಪಾಕಿಸ್ತಾನ ಪರ ಇರೋ ಮುಸ್ಲಿಂ ಬಿಜೆಪಿಗೆ ವೋಟ್ ಹಾಕಲು ಹಿಂದೆ ಮುಂದೆ ನೋಡ್ತಾರೆ‌ ಎಂದವನು ನಾನಲ್ಲ" - ಎಚ್ಡಿಕೆ ಟ್ವೀಟ್

ಸಿದ್ದರಾಮಯ್ಯ

ಸಿದ್ದರಾಮಯ್ಯ

"ಕುಂದಗೋಳ ವಿಧಾನಸಭೆ ಉಪಚುನಾವಣೆ ಪ್ರಚಾರದ ಸಂದರ್ಭದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ, ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವಾಗಿತ್ತು,ಈ ಬಗ್ಗೆ ಸಿದ್ದರಾಮಯ್ಯ ನಾನು ಏನು ಮಾಡಬೇಕು ಎಂದಿದ್ದರು. ಒಂದು ವೇಳೆ ಸಿದ್ದರಾಮಯ್ಯ ಅವರ ಮೊಮ್ಮಗಳ ಮೇಲೆ ಅತ್ಯಾಚಾರ ನಡೆದರೆ ಏನು ಮಾಡುತ್ತಾರೆ ಎಂಬ ಕೀಳು ಮಟ್ಟದ ಹೇಳಿಕೆ ನೀಡಿದವನು ನಾನಲ್ಲ" ಇದು ಕುಮಾರಸ್ವಾಮಿ ಮಾಡಿದ ಇನ್ನೊಂದು ಟ್ವೀಟ್.

ಯುಗಪುರುಷ ಎಂಬ ಸರ್ಟಿಫಿಕೇಟ್ ಪಡೆಯುವ

ಯುಗಪುರುಷ ಎಂಬ ಸರ್ಟಿಫಿಕೇಟ್ ಪಡೆಯುವ "ಮೂರ್ಖ ಪುರುಷ" ನಾನಲ್ಲ

"ಎಂತೆಂತಹ ಅದ್ಭುತವಾದ ಅಣಿಮುತ್ತುಗಳನ್ನು ಉದುರಿಸಿದ ತಮ್ಮಿಂದ ಯುಗಪುರುಷ ಎಂಬ ಸರ್ಟಿಫಿಕೇಟ್ ಪಡೆಯುವ "ಮೂರ್ಖ ಪುರುಷ" ನಾನಲ್ಲ. ದಿಢೀರ್ ನಿದ್ದೆಯಿಂದ ಎದ್ದಂತೆ ಹಳೆಯ ಹೇಳಿಕೆಗೆ ಟ್ವೀಟ್ ಮಾಡುವವನು ನಾನಲ್ಲ" ಹೀಗೆ ಕುಮಾರಸ್ವಾಮಿ, ಸಾಲುಸಾಲು ಟ್ವೀಟ್ ಮೂಲಕ, ಈಶ್ವರಪ್ಪಗೆ ಪ್ರತ್ಯುತ್ತರ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+