ಎರಡೆರಡು ಖಾತೆಗೆ ರೇವಣ್ಣ ಪಟ್ಟು ಎಚ್‌ಡಿಕೆಗೆ ಪೀಕಲಾಟ

Recommended Video

      ಎಚ್ ಡಿ ರೇವಣ್ಣಗೆ ಎರಡೆರಡು ಖಾತೆ ಬೇಕು ಅಂತ ಹಠ | ಎಚ್ ಡಿ ಕೆಗೆ ಪೀಕಲಾಟ | Oneindia Kannada

      ಬೆಂಗಳೂರು, ಜೂನ್ 08: ಶತಾಯಗತಾಯ ಇಂದು ಖಾತೆ ಹಂಚಿಕೆ ಆಗಲೇಬೆಂಕೆಂದು ಮೈತ್ರಿ ಸರ್ಕಾರದ ಎರಡೂ ಪಕ್ಷಗಳು ಪಟ್ಟಾಗಿ ತೀರ್ಮಾನಿಸಿವೆ ಈ ಸಮಯದಲ್ಲಿ ಜೆಡಿಎಸ್‌ನಲ್ಲಿ ಹಿರಿಯ ನಾಯಕರುಗಳಲ್ಲೇ ಖಾತೆ ವಿಚಾರದಲ್ಲಿ ಒಮ್ಮತ ಮೂಡಿಲ್ಲ.

      ಅಣ್ಣ-ತಮ್ಮಂದಿರೇ ಖಾತೆ ವಿಷಯದಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದು, ಎರಡು ಖಾತೆಗಾಗಿ ಪಟ್ಟುಹಿಡಿದು ಕೂತಿರುವ ಎಚ್‌ಡಿ ರೇವಣ್ಣ ಅವರ ಮನವೊಲಿಸುವ ಪ್ರಯತ್ನದಲ್ಲಿ ಕುಮಾರಸ್ವಾಮಿ ನಿರತರಾಗಿದ್ದಾರೆ.

      ಇಂಧನ ಹಾಗೂ ಕಂದಾಯ ಇಲಾಖೆ ಎರಡೂ ಖಾತೆ ತಮಗೇ ಬೇಕೆಂದು ರೇವಣ್ಣ ಪಟ್ಟು ಹಿಡಿದು ಕೂತಿದ್ದು, ಕುಮಾರಸ್ವಾಮಿ ಅವರು ಇದಕ್ಕೆ ಒಪ್ಪುತ್ತಿಲ್ಲ ಎನ್ನಲಾಗಿದೆ. ಒಬ್ಬರಿಗೆ ಒಂದು ಸ್ಥಾನ ಮಾತ್ರ ಎಂಬ ಕಾಂಗ್ರೆಸ್‌ ನಿಯಮವನ್ನೂ ಜೆಡಿಎಸ್ ಪಕ್ಷವೂ ಪಾಲಿಸಲು ಹೊರಟಿದ್ದು, ಎರಡೆರಡು ಖಾತೆಯನ್ನು ನೀಡಿದರೆ ಮಾಧ್ಯಮಗಳ, ಜನರ ಟೀಕೆಗೆ ಗುರಿಯಾಗಬೇಕಾಗುತ್ತದೆ ಎಂಬುದು ಕುಮಾರಸ್ವಾಮಿ ಅವರ ಆತಂಕ.

      Minister HD Revanna demanding for two portfolios

      ಇಂಧನ ಖಾತೆಯನ್ನು ಡಿಕೆ ಶಿವಕುಮಾರ್ ಅವರಿಗೆ ಬಿಟ್ಟುಕೊಡುವ ಬಗ್ಗೆಯೂ ಮಾತುಕತೆ ನಡೆದಿದೆ ಎನ್ನಲಾಗಿದೆ. ಆದರೆ ಮೊನ್ನೆಯಷ್ಟೆ ಪರಮೇಶ್ವರ್ ಅವರು ಕುಮಾರಸ್ವಾಮಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ 'ಇಂಧನ ಖಾತೆ ವಿನಿಮಯದ ಪ್ರಸ್ತಾಪವೇ ಆಗಿಲ್ಲ' ಎಂದಿದ್ದರು.

      ಮಗನಿಗೆ ಟಿಕೆಟ್ ಜೊಡಿಸಲು ಯತ್ನಿಸಿ ವಿಫಲವಾಗಿದ್ದ ರೇವಣ್ಣ ಅವರು ಇಷ್ಟದ ಖಾತೆಯನ್ನು ಪಡೆದಾದರೂ ತಮ್ಮ 'ಹಕ್ಕು' ಚಲಾಯಿಸುವ ಉಮೇದಿನಲ್ಲಿದ್ದಾರೆ.

      ರೇವಣ್ಣ ಅವರ ಮನವೊಲಿಸಲು ದೇವೇಗೌಡರ ಸಹಕಾರವನ್ನೂ ಸಹ ಕೇಳಲಾಗಿದ್ದು, ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಖಾತೆ ಹಂಚಿಕೆ ಪೂರ್ಣವಾಗುವ ಸಾಧ್ಯತೆ ಇದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+