ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಗೆ ನಾಲ್ವಡಿ ಹೆಸರು ಸೂಚಿಸಿದ ಅಶ್ವತ್ಥ್‌ ನಾರಾಯಣ

|
Google Oneindia Kannada News

ಬೆಂಗಳೂರು, ಜನವರಿ 5: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಗೆ ಮೈಸೂರು ಒಡೆಯರಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಹೆಸರು ಇಡುವಂತೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್‌ ನಾರಾಯಣ ಅವರು ಸೂಚಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 275ರ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ಜಾರಿಗೊಳಿಸಿದ್ದಕ್ಕಾಗಿ ತಮ್ಮ ತಮ್ಮ ಪಕ್ಷಗಳಿಗೆ ಕ್ರೆಡಿಟ್ ಪಡೆದುಕೊಳ್ಳಲು ಕರ್ನಾಟಕದ ರಾಜಕೀಯ ನಾಯಕರು ಕಸರತ್ತು ಮಾಡುತ್ತಿದ್ದಾರೆ. ಆದರೆ, ಈಗ ಬಿಜೆಪಿಯೊಳಗಿನ ನಾಯಕರು 119 ಕಿಮೀ ವ್ಯಾಪ್ತಿಯ ರಸ್ತೆಗೆ ಹೆಸರಿಡುವ ಬಗ್ಗೆ ಭಿನ್ನ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 10 ಪಥಗಳ ಎಕ್ಸ್‌ಪ್ರೆಸ್‌ವೇ ಈ ವರ್ಷದ ಜನವರಿ ಅಥವಾ ಫೆಬ್ರವರಿಯಲ್ಲಿ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಕಾಮಗಾರಿ ಪರಿಶೀಲಿಸಿದ ನಿತಿನ್‌ ಗಡ್ಕರಿಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಕಾಮಗಾರಿ ಪರಿಶೀಲಿಸಿದ ನಿತಿನ್‌ ಗಡ್ಕರಿ

ಉನ್ನತ ಶಿಕ್ಷಣ ಸಚಿವ ಅಶ್ಚತ್ಥ್‌ ನಾರಾಯಣ ಅವರು ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ ಹೆಸರು ಸೂಚಿಸಿದ್ದು, ಅದಕ್ಕೂ ಮೊದಲೇ ಮಾಜಿ ವಿದೇಶಾಂಗ ಸಚಿವ, ಹಿರಿಯ ರಾಜಕಾರಣಿ ಪತ್ರ ಬರೆದು ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಗೆ ನಾಲ್ವಡಿ ಕೃಷ್ಣರಾಜ ಒಡೆಯರ ಹೆಸರನ್ನು ಇಡುವಂತೆ ಮನವಿ ಮಾಡಿದ್ದರು.

ಇದಕ್ಕೂ ಹಿಂದೆ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಇತ್ತೀಚೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಉತ್ತರ ಪ್ರದೇಶದ ಗಂಗಾ ಎಕ್ಸ್‌ಪ್ರೆಸ್‌ವೇ ಮತ್ತು ಯಮುನಾ ಎಕ್ಸ್‌ಪ್ರೆಸ್‌ವೇ ಮಾದರಿಯಲ್ಲಿ ಹೊಸ ಎಕ್ಸ್‌ಪ್ರೆಸ್‌ವೇಗೆ ಕಾವೇರಿ ಎಕ್ಸ್‌ಪ್ರೆಸ್‌ವೇ ಎಂದು ಹೆಸರಿಸುವಂತೆ ಮನವಿ ಮಾಡಿದ್ದರು. ಡಿಸೆಂಬರ್ 21, 2022 ರಂದು ಬರೆದ ಪತ್ರದಲ್ಲಿ ಅವರು, ಭಾಗಶಃ ತೆರೆಯಲಾದ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇಗೆ ಕಾವೇರಿ ಹೆಸರನ್ನು ಇಡಬಹುದು ಎಂದು ಸೂಚಿಸಿದ್ದರು.

ಮಾಜಿ ವಿದೇಶಾಂಗ ಸಚಿವ ಮತ್ತು ಬಿಜೆಪಿ ನಾಯಕ ಎಸ್ ಎಂ ಕೃಷ್ಣ ಅವರು ಗಡ್ಕರಿ ಅವರಿಗೆ ಪತ್ರದಲ್ಲಿ ಎಕ್ಸ್‌ಪ್ರೆಸ್‌ವೇಗೆ ಹಿಂದಿನ ಮೈಸೂರು ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಇಡುವಂತೆ ಮನವಿ ಮಾಡಿದ್ದಾರೆ. ನಾಲ್ವಡಿ ಅವರು ದೃಷ್ಠಿಯುಳ್ಳ ಆಡಳಿತಗಾರ ಭವಿಷ್ಯದ ಪೀಳಿಗೆಯಿಂದ ನೆನಪಿನಲ್ಲಿಟ್ಟುಕೊಳ್ಳುವುದು ಅಗತ್ಯ ಎಂದು ತಿಳಿಸಿದ್ದರು.

ದಿನೇಶ್ ಗೂಳಿಗೌಡರಿಂದ ಗಡ್ಕರಿಗೆ ಪತ್ರ

ದಿನೇಶ್ ಗೂಳಿಗೌಡರಿಂದ ಗಡ್ಕರಿಗೆ ಪತ್ರ

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡುವಂತೆ ಕೋರಿ ಕಾಂಗ್ರೆಸ್ ಎಂಎಲ್‌ಸಿಗಳಾದ ಮಧು ಜಿ ಮಾದೇಗೌಡ ಮತ್ತು ದಿನೇಶ್ ಗೂಳಿಗೌಡ ಅವರು ಗಡ್ಕರಿ ಅವರಿಗೆ ಪತ್ರ ಬರೆದ ಕೆಲವು ದಿನಗಳ ನಂತರ ಎಸ್‌ಎಂ ಕೃಷ್ಣ ಅವರು ಪತ್ರ ಬರೆದಿದ್ದರು. ಈ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್‌ ನಾರಾಯಾಣ ಕೂಡ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡುವಂತೆ ಕೋರಿದ್ದಾರೆ.

ಅಂದಾಜು ರೂ. 8,066 ಕೋಟಿ ವೆಚ್ಚ

ಅಂದಾಜು ರೂ. 8,066 ಕೋಟಿ ವೆಚ್ಚ

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಇದು ಭಾರತಮಾಲಾ ಉಪ ಯೋಜನೆ ಹಂತ-1 ರ ಅಡಿಯಲ್ಲಿ ಹೈಬ್ರಿಡ್ ಆನ್ಯುಟಿ ಮಾಡೆಲ್ (ಎಚ್‌ಎಎಂ) ಅಡಿಯಲ್ಲಿ ಅಂದಾಜು ರೂ. 8,066 ಕೋಟಿ ವೆಚ್ಚವಾಗಲಿದೆ. ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯಿಂದ ಬೆಂಗಳೂರು- ಮೈಸೂರು ನಡುವಿನ ಪ್ರಯಾಣದ ಅವಧಿ 150 ನಿಮಿಷದಿಂದ 90 ನಿಮಿಷಕ್ಕೆ ಕಡಿಮೆಯಾಗುತ್ತದೆ ಎಂದು ತಿಳಿಸಲಾಗಿದೆ.

ಮೋದಿ ಕಾಲದಲ್ಲಿ ಅನುಮೋದನೆ

ಮೋದಿ ಕಾಲದಲ್ಲಿ ಅನುಮೋದನೆ

ಈ ಹಿಂದೆ ಬಿಜೆಪಿಯ ನಡೆಸಿದ್ದ ಪ್ರಯತ್ನಗಳಿಂದ ಈ ಯೋಜನೆಗೆ ಮನ್ನಣೆ ಸಿಕ್ಕಿದೆ ಎಂದಿದ್ದಕ್ಕೆ ಸಂಸದ ಸಿಂಹ ಅವರು ಕಾಂಗ್ರೆಸ್ ಮತ್ತು ಬಿಜೆಪಿ ಎಂಎಲ್ಸಿ ಎ ಎಚ್ ವಿಶ್ವನಾಥ್ ಅವರಿಂದ ಟೀಕೆಗಳನ್ನು ಎದುರಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ಕಾಮಗಾರಿಗಳಿಗೆ ಅನುಮೋದನೆ ನೀಡಿ ಕಾರ್ಯಗತಗೊಳಿಸಲಾಗಿದೆ ಎಂದು ಸಂಸದರು ಹೇಳಿದ್ದರು.

ಆಸ್ಕರ್ ಫರ್ನಾಂಡಿಸ್ ಕಾಲದಲ್ಲಿ ಡಿಪಿಆರ್‌

ಆಸ್ಕರ್ ಫರ್ನಾಂಡಿಸ್ ಕಾಲದಲ್ಲಿ ಡಿಪಿಆರ್‌

ಮಾಜಿ ಪಿಡಬ್ಲ್ಯುಡಿ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಹೆಚ್ ಸಿ ಮಹದೇವಪ್ಪ ಅವರ ಹೇಳಿಕೆಯನ್ನು ತರಾಟೆಗೆ ತೆಗೆದುಕೊಂಡು ವಿಸ್ತೃತ ಯೋಜನಾ ವರದಿ (ಡಿಪಿಆರ್) ಅನ್ನು ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಅವರ ಕಾಂಗ್ರೆಸ್ ಆಡಳಿತದಲ್ಲಿ ಸಿದ್ಧಪಡಿಸಲಾಗಿದೆ ಎಂದಿದ್ದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಾಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಯೋಜನೆಯ ಹಿಂದೆ ಇದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿತ್ತು ಎಂದು ವಿಶ್ವನಾಥ್ ಹೇಳಿದ್ದರು.

English summary
Higher Education Minister Ashwath Narayana has suggested naming the Bengaluru Mysuru Expressway after Nalvadi Krishnaraja Odeyar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X