ಕೇಂದ್ರ ಸರ್ಕಾರದ ನಿವೃತ್ತ ನೌಕರರಿಗೆ ನೆಮ್ಮದಿ ಜೀವನ

Subscribe to Oneindia Kannada

ನವದೆಹಲಿ, ಆಗಸ್ಟ್, 08: ನಿವೃತ್ತ ನೌಕರರ ಹಿತಕ್ಕೆ ಬದ್ಧವಾಗಿರುವ ಕೇಂದ್ರ ಸರ್ಕಾರ ಪಿಂಚಣಿಯಲ್ಲಿ ಶೇ.157.14ರಷ್ಟು ಏರಿಕೆ ಕಂಡಿದೆ. ಅಂದರೆ, ಸದ್ಯ 3500 ರೂ. ಪಿಂಚಣಿ ಪಡೆಯುತ್ತಿದ್ದ ಕೇಂದ್ರ ಸರ್ಕಾರದ ನಿವೃತ್ತ ನೌಕರರಿಗೆ ಇನ್ನು ಮುಂದೆ 9 ಸಾವಿರ ರು. ಲಭ್ಯವಾಗಲಿದೆ. 7 ನೇ ವೇತನ ಆಯೋಗದ ಶಿಫಾರಸಿನ ಅನ್ವಯ ಕೇಂದ್ರ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.

ಈ ಬಗ್ಗೆ ಸಿಬ್ಬಂದಿ, ಸಾರ್ವಜನಿಕ ದೂರು ನಿರ್ವಹಣೆ ಮತ್ತು ಪಿಂಚಣಿ ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು ಪಿಂಚಣಿ ಹೆಚ್ಚಳದ ಜತೆಗೆ ಗ್ರಾಚ್ಯುಟಿ ಮಿತಿಯನ್ನೂ 10 ಲಕ್ಷ ರೂ.ನಿಂದ 20 ಲಕ್ಷ ರೂ.ಗೆ ಏರಿಕೆ ಮಾಡಿದೆ ಹಾಗೂ ತುಟ್ಟಿಭತ್ಯೆಯನ್ನು ಶೇ.50ರಷ್ಟು ಏರಿಕೆ ಮಾಡಲು ಸಮ್ಮತಿ ನೀಡಿದೆ.[ಕೇಂದ್ರ ಸರ್ಕಾರಿ ಪಿಂಚಣಿದಾರರಿಗೆ ಒಳ್ಳೆ ಸುದ್ದಿ]

Minimum pension of retired central govt staff goes up by 157 percent

ನಿವೃತ್ತ ಕೇಂದ್ರ ಸರ್ಕಾರಿ ನೌಕರರ ಪಿಂಚಣಿ ಹೆಚ್ಚಳ ಮಾಡುತ್ತೇನೆ ಎಂದು ಕೇಂದ್ರ ಸರ್ಕಾರ ಹಿಂದೆಯೇ ಹೇಳಿತ್ತು. ವೇತನ ಆಯೋಗದ ಶಿಫಾರಸಿನಂತೆ ನಿವೃತ್ತ ನೌಕರರಿಗೆ ಕನಿಷ್ಠ 9 ಸಾವಿರ ರೂ. ಹಾಗೂ ಗರಿಷ್ಠ 1.25 ಲಕ್ಷ ರೂ. ಪಿಂಚಣಿ (ನಿವೃತ್ತ ಸಂಪುಟ ಕಾರ್ಯದರ್ಶಿ ಹುದ್ದೆಯ ಅಧಿಕಾರಿ) ಲಭ್ಯವಾಗಲಿದೆ. ಪಿಂಚಣಿ ಹೆಚ್ಚಳ ನಿರ್ಧಾರದಿಂದ ದೇಶದಲ್ಲಿರುವ 58 ಲಕ್ಷ ಕೇಂದ್ರ ಸರ್ಕಾರದ ನಿವೃತ್ತ ನೌಕರರಿಗೆ ಲಾಭವಾಗಲಿದೆ.

ಭದ್ರತಾ ಸಿಬ್ಬಂದಿಗೆ ಹೆಚ್ಚಿನ ಪರಿಹಾರ:
ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಅಪಘಾತ ಅಥವಾ ಉಗ್ರರ ದಾಳಿಗೆ ಸಿಲುಕಿ ಪ್ರಾಣ ತ್ಯಾಗ ಮಾಡುವ ಅಥವಾ ಗಾಯಗೊಳ್ಳುವ ನಾಗರಿಕ ಹಾಗೂ ರಕ್ಷಣಾ ಪಡೆಗಳ ಸಿಬಂದಿಗೆ ನೀಡಲಾಗುತ್ತಿದ್ದ ಪರಿಹಾರದ ಮೊತ್ತವನ್ನು 10ರಿಂದ 25 ಲಕ್ಷ ರೂ.ಗೆ ಹೆಚ್ಚಿಗೆ ಮಾಡಲಾಗಿದೆ.[ಏಕಶ್ರೇಣಿ ಏಕ ಪಿಂಚಣಿ ಯೋಜನೆ ಎಂದರೇನು?]

ಇನ್ನು ಗಡಿ ಕಾಯುವ ಯೋಧರಿಗೆ, ನೈಸರ್ಗಿಕ ವಿಕೋಪ, ಪ್ರತಿಕೂಲ ಹವಾಮಾನದ ವೇಳೆ ಸಾವನ್ನಪ್ಪುವ ಭದ್ರತಾ ಸಿಬಂದಿಗೆ ನೀಡುವ ಪರಿಹಾರದ ಮೊತ್ತವನ್ನು 15ರಿಂದ 35 ಲಕ್ಷ ರು, ಗೆ ಏರಿಕೆ ಮಾಡಲಾಗಿದೆ. ಯುದ್ಧಪೀಡಿತ ಸ್ಥಳಗಳಿಂದ ಭಾರತೀಯರನ್ನು ರಕ್ಷಿಸಿ, ಸ್ವದೇಶಕ್ಕೆ ಕರೆತರುವ ಕಾರ್ಯಾಚರಣೆ ವೇಳೆ ಭದ್ರತಾ ಸಿಬ್ಬಂದಿ ಸಾವಿಗೀಡಾದರೆ ನೀಡುತ್ತಿದ್ದ 20 ಲಕ್ಷ ರು. ಪರಿಹಾರವನ್ನು 45 ಲಕ್ಷ ರು. ಗೆ ಏರಿಕೆ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
This is the good news for all central government retired employees. Retired central government employees will now get a minimum pension of Rs 9,000, up 157.14 per cent from the current Rs 3,500, following the implementation of the 7th Pay Commission's recommendations.
Please Wait while comments are loading...