ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಕೇರಳದಲ್ಲಿ ವಿರೋಧ
ಬೆಂಗಳೂರು, ಏಪ್ರಿಲ್ 15: ಬೆಂಗಳೂರಿನಲ್ಲಿ ಗುಜರಾತ್‌ನ ಅಮೂಲ್ ಹಾಲಿನ ಮಾರಾಟಕ್ಕೆ ವಿರೋಧ ಉಂಟಾದಂತೆ ಕೇರಳದಲ್ಲಿ ಕೆಎಂಎಫ್ ನಂದಿನಿ ಉತ್ಪನ್ನಗಳ ಮಾರಟಕ್ಕೆ ವಿರೋಧ ವ್ಯಕ್ತವಾಗಿದೆ.
ಅಮುಲ್ ಮಾರಟದ ವಿರುದ್ಧ ಕರ್ನಾಟಕದಲ್ಲಿ ತೀವ್ರ ಪ್ರತಿರೋಧದ ಉಂಟಾದಂತೆ ಕೇರಳದ ಮಿಲ್ಮಾ ಬ್ರಾಂಡ್ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಉತ್ಪಾದಿಸುವ ಕೇರಳ ಸಹಕಾರಿ ಹಾಲು ಮಾರಾಟ ಒಕ್ಕೂಟ (ಕೆಎಂಎಂಎಫ್) ನಂದಿನಿ ಬ್ರ್ಯಾಂಡ್ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ಕೇರಳದಲ್ಲಿ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ಮಳಿಗೆಗಳನ್ನು ತೆರೆಯುವುದಕ್ಕೆ ಆಕ್ಷೇಪ ಎತ್ತಿದೆ.

ಗುಜರಾತ್ ಕೋಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್‌ನ ಅಮೂಲ್ ಹಾಲಿನ ಮಾರಟವನ್ನು ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಮಾರಾಟ ಮಾಡುವುದನ್ನು ವಿರೋಧಿತ್ತಿರುವ ಕರ್ನಾಟಕವು ಇದೇ ಸಮಯದಲ್ಲಿ ಕೇರಳದಲ್ಲಿ ನಂದಿನಿ ಮಳಿಗೆಗಳನ್ನು ತೆರೆಯಲು ಮುಂದಾಗಿರುವುದು ಎಷ್ಟು ಸರಿ ಎಂದು ಮಿಲ್ಮಾ ಅಧ್ಯಕ್ಷ ಕೆ ಎಸ್ ಮಣಿ ಪ್ರಶ್ನಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳಲ್ಲಿ ನಂದಿನಿ ಕೇರಳದಲ್ಲಿ ಎರಡು ಔಟ್‌ಲೆಟ್‌ಗಳನ್ನು ತೆರೆದಿದೆ. ಒಂದು ಮಲಪ್ಪುರಂನ ಮಂಜೇರಿಯಲ್ಲಿ ಮತ್ತು ಇನ್ನೊಂದು ಕೊಚ್ಚಿಯ ವೈಟ್ಟಿಲ್ಲಾದಲ್ಲಿ ಇದೆ. ಮುಂದುವರೆದು ಈಗ ಕೇರಳದಲ್ಲಿ ಸುಮಾರು 100 ಫ್ರಾಂಚೈಸಿಗಳಿಗೆ ಅರ್ಜಿಗಳನ್ನು ಕೆಂಎಫ್ಆಹ್ವಾನಿಸಿದೆ. ಕೇರಳದಲ್ಲಿ ನಂದಿನಿ ಮಳಿಗೆಗಳನ್ನು ತೆರೆಯುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಣಿ ಕೆಎಂಎಫ್ ಕೌಂಟರ್‌ಗೆ ಈಗಾಗಲೇ ಪತ್ರ ಬರೆದಿದ್ದೇನೆ. ಆದರೆ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದರು.

ವಿವಿಧ ರಾಜ್ಯಗಳ ಹಾಲು ಸಹಕಾರ ಸಂಘಗಳಲ್ಲಿ ಅನಾರೋಗ್ಯಕರ ಪೈಪೋಟಿಗೆ ಕಾರಣವಾಗುವ ಕಾರಣ ಇತರ ರಾಜ್ಯಗಳಿಗೆ ಪ್ರವೇಶಿಸದಂತೆ ನಿಯಮವಿದೆ. ಮಿಲ್ಮಾ ಇದನ್ನು ಅನುಸರಿಸುತ್ತಿದೆ ಮತ್ತು ಆದ್ದರಿಂದ ಹೆಚ್ಚುವರಿ ಹಾಲು ಹೊಂದಿದ್ದರೂ ಸಹ ಇತರ ರಾಜ್ಯಗಳಿಗೆ ಪ್ರವೇಶಿಸಲಿಲ್ಲ. ಆದ್ದರಿಂದ ಕೆಎಂಎಫ್ ನಿರ್ಧಾರ ಕೇರಳದಲ್ಲಿ ತೆರೆದ ಮಳಿಗೆಗಳು ಅನೈತಿಕ ಮತ್ತು ಸಹಕಾರಿ ತತ್ವಗಳಿಗೆ ವಿರುದ್ಧವಾಗಿದೆ ಎಂದು ಮಣಿ ಹೇಳಿದರು.
ಕೇರಳದಲ್ಲಿ ಇತರ ರಾಜ್ಯಗಳ ಹಾಲನ್ನು ಮಾರಾಟ ಮಾಡುವುದರಿಂದ ಗ್ರಾಹಕರಿಗೆ ತಾಜಾ ಹಾಲು ಪಡೆಯುವ ಅವಕಾಶವನ್ನು ನಿರಾಕರಿಸುತ್ತದೆ. ರಾಜ್ಯದಲ್ಲಿ ಕೆಲ ದಿನಗಳಿಂದ ನಡೆಯುತ್ತಿರುವ ಅಮುಲ್ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ಮಿಲ್ಮಾ ವಿರೋಧಿಸುತ್ತಿಲ್ಲ ಎಂದರು.
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಗುಜರಾತ್ ಮೂಲದ ಅಮುಲ್ ಕರ್ನಾಟಕ ಪ್ರವೇಶಿಸುವ ನಿರ್ಧಾರಕ್ಕೆ ರಾಜಕೀಯ ಬಣ್ಣ ಕೂಡ ಸಿಕ್ಕಿತ್ತು. ಕರ್ನಾಟಕಕ್ಕೆ ಅಮುಲ್‌ನ ಪ್ರವೇಶವು ರಾಜ್ಯವನ್ನು ಲೂಟಿ ಮಾಡಲು ಮತ್ತು ರಾಜ್ಯದ ಹಾಲು ಒಕ್ಕೂಟವನ್ನು ನಾಶ ಮಾಡಲು ಬಿಜೆಪಿ ನಡೆಸಿದ ಸಂಚು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ (ಎಸ್) ಆರೋಪಗಳನ್ನು ಮಾಡಿದ್ದವು. ಇದು ಸಾಮಾಜಿಕ ಮಾಧ್ಯಮದಲ್ಲಿ '#ಅಮುಲ್ ಗೋ ಬ್ಯಾಕ್' ಮತ್ತು '#ಸೇವ್ ಕೆಎಂಎಫ್' ಅಭಿಯಾನಗಳನ್ನು ಸಹ ಆರಂಭವಾಗುವಂತೆ ಮಾಡಿತ್ತು.
ವಿವಾದ ತಾರಕಕ್ಕೆ ಹೋದಾಗ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕೆಎಂಎಫ್ ಅನ್ನು ಅಮುಲ್ ಜೊತೆ ವಿಲೀನಗೊಳಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಮಾರುಕಟ್ಟೆಯನ್ನು ವಿಸ್ತರಿಸಲು ಕೆಎಂಎಫ್ ಮತ್ತು ಅಮುಲ್ ಕೈಜೋಡಿಸಬಹುದು ಎಂದು ಮಾತ್ರ ಅಭಿಪ್ರಾಯಪಟ್ಟಿದ್ದಾರೆ. ಎರಡು ಸಹಕಾರಿ ಸಂಘಗಳ ವಿಲೀನಕ್ಕೆ ಅವರು ಸಲಹೆ ನೀಡಿಲ್ಲ. ವಿರೋಧ ಪಕ್ಷಗಳು ಚುನಾವಣಾ ಸಮಯದಲ್ಲಿ ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿವೆ ಎಂದು ಹೇಳಿದ್ದರು.












Click it and Unblock the Notifications