ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಕೆದಾಟು ಕುಡಿಯುವ ನೀರಿನ ಯೋಜನೆ : ಸಿಗುವುದೆ ಹಸಿರು ನಿಶಾನೆ?

By Prasad
|
Google Oneindia Kannada News

ಬೆಂಗಳೂರು, ಜುಲೈ 03 : ಕುಡಿಯುವ ನೀರಿನ ತೀವ್ರ ಅಭಾವವನ್ನು ಎದುರಿಸುತ್ತಿರುವ ಬೆಂಗಳೂರಿನ ಜನತೆಗೆ ಒದಗಿಸುವ ಉದ್ದೇಶದಿಂದ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಅಣೆಕಟ್ಟಿನ ವಿವರವನ್ನು ಅನುಮತಿಗಾಗಿ ಕೇಂದ್ರ ನೀರು ಆಯೋಗಕ್ಕೆ ಸಲ್ಲಿಸಲಾಗಿದೆ.

ತಮಿಳುನಾಡಿಗೆ ರಾತ್ರೋರಾತ್ರಿ ಕೆಆರ್‍ಎಸ್ ನಿಂದ ನೀರು, ರೈತರ ಪ್ರತಿಭಟನೆತಮಿಳುನಾಡಿಗೆ ರಾತ್ರೋರಾತ್ರಿ ಕೆಆರ್‍ಎಸ್ ನಿಂದ ನೀರು, ರೈತರ ಪ್ರತಿಭಟನೆ

ಈ ಸಂಗತಿಯನ್ನು ರಾಜ್ಯ ನೀರಾವರಿ ಸಚಿವ ಡಾ. ಎಂಬಿ ಪಾಟೀಲ ಅವರು ತಿಳಿಸಿದ್ದಾರೆ. ಒಟ್ಟು 5,912 ಕೋಟಿ ರುಪಾಯಿಯ ಈ ಕುಡಿಯುವ ನೀರಿನ ಯೋಜನೆಯ ಸಂಪೂರ್ಣ ವಿವರವನ್ನು ಕೇಂದ್ರ ನೀರು ಆಯೋಗಕ್ಕೆ ನೀಡಲಾಗಿದೆ. ಈ ಯೋಜನೆಗೆ ಅನುಮತಿ ದೊರೆತರೆ 66.50 ಟಿಎಂಸಿಯಷ್ಟು ನೀರನ್ನು ಶೇಖರಿಸಿಡಬಹುದು.

Mekedatu drinking water project : DPR submitted for clearance

ಈ ಯೋಜನೆಯಿಂದ ಬೆಂಗಳೂರು ಮಾತ್ರವಲ್ಲ ಸುತ್ತಲಿನ ಹಳ್ಳಿಗಳಿಗೂ ಕುಡಿಯುವ ನೀರನ್ನು ಒದಗಿಸುವ ಯೋಜನೆ ಇದಾಗಿದೆ. ಮೇಕೆದಾಟಿನಲ್ಲಿ ಕಾವೇರಿ ನೀರು ಪೋಲಾಗುತ್ತಿದ್ದು, ಕರ್ನಾಟಕದ ವ್ಯಾಪ್ತಿಯಲ್ಲಿ ಅಣೆಕಟ್ಟು ಕಟ್ಟಬೇಕೆಂಬುದು ಕರ್ನಾಟಕದ ಆಶಯ. ಇದಕ್ಕೆ ತಮಿಳುನಾಡಿ ಆರಂಭದಿಂದಲೇ ಕ್ಯಾತೆ ತೆಗೆದಿದೆ.

ಕೃಷ್ಣಾ-ಕಾವೇರಿ ಪೂಜೆ ಖರ್ಚು- ವೆಚ್ಚದ ಬಗ್ಗೆ ಎಂಬಿ ಪಾಟೀಲ್ ಸ್ಪಷ್ಟನೆಕೃಷ್ಣಾ-ಕಾವೇರಿ ಪೂಜೆ ಖರ್ಚು- ವೆಚ್ಚದ ಬಗ್ಗೆ ಎಂಬಿ ಪಾಟೀಲ್ ಸ್ಪಷ್ಟನೆ

ಈ ಅಣೆಕಟ್ಟಿನ ನಿರ್ಮಾಣದಿಂದ ತಮಿಳುನಾಡಿಗೆ ಹರಿಯುವ ನೀರನ್ನು ಹಿಡಿದಿಟ್ಟುಕೊಂಡಂತೆ ಆಗುವುದಿಲ್ಲ. ಅಲ್ಲದೆ, ರಾಜ್ಯ 190 ಟಿಎಂಸಿಯಷ್ಟು ಕಾವೇರಿ ನೀರನ್ನು ಬಳಸಿಕೊಳ್ಳಬಹುದು ಎಂಬ ಕಾವೇರಿ ನ್ಯಾಯಮಂಡಳಿಯ ಆದೇಶವನ್ನೂ ಉಲ್ಲಂಘಿಸಿದಂತೆ ಆಗುವುದಿಲ್ಲ. ಜೊತೆಗೆ 400 ಮೆಗಾ ವ್ಯಾಟ್ ನಷ್ಟು ವಿದ್ಯುತ್ ಕೂಡ ಉತ್ಪಾದಿಸಬಹುದು ಎಂದು ಪಾಟೀಲರು ವಿವರ ನೀಡಿದ್ದಾರೆ.

English summary
Rs. 5,912 crore Mekedatu DPR submitted to Central Water Committee for clearance. Karnataka govt committed to fight for state's rightful share of Cauvery water with Tamil Nadu. Karnataka water resources minister MB Patil informed the media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X