ದಂಡಿಸುವ ಲಾಠಿಯಲ್ಲಿ ಸಪ್ತಸ್ವರ, ಕೊಳಲು ವಾದನಕ್ಕೆ ತಲೆದೂಗಿದ ಖಾಕಿ ಪಡೆ!
ಬೆಂಗಳೂರು, ಮೇ 28 : ಅದು ಸಮಾಜಘಾತುಕರನ್ನು ದಂಡಿಸುವ ಲಾಠಿ. ಪೊಲೀಸರು ಕೈಯಲ್ಲಿರುವ ಲಾಠಿ ಏಟಿನ ರುಚಿ ತಿಂದವರಿಗೆ ಗೊತ್ತು. ಇಂತಹ ಲಾಠಿಯಿಂದ ಕಾನೂನು ರಕ್ಷಣೆಗೆ ಮಾತ್ರವಲ್ಲ ಮನೋರಂಜನೆಯೂ ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ ಒಬ್ಬರು ಪೊಲೀಸ್ ಅಧಿಕಾರಿ.
ಕಾನೂನು ಕಾಪಾಡುವ ಲಾಠಿಯಲ್ಲಿ ಸಪ್ತಸ್ವರ ಬರುತ್ತದೆ. ಲಾಠಿಯಲ್ಲಿನ ಕೊಳಲು ವಾದನ ಕೇಳಿ ಖಾಕಿ ಪಡೆಯೇ ಬೆರಗಾಗಿದೆ. ಲಾಠಿಯನ್ನು ಕೊಳಲು ಮಾಡಿಕೊಂಡು ಇಂಪಾಗಿ ಸಂಗೀತ ನುಡಿಸುವ ಖಾಕಿಧಾರಿಯ ಪ್ರತಿಭೆಗೆ ಇಲಾಖೆಯೇ ಸೆಲ್ಯೂಟ್ ಹೊಡೆದಿದೆ.
ಚಂದ್ರಕಾಂತ ಹುಟಗಿ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಮುಖ್ಯಪೇದೆ. ಗರಿಗರಿ ಖಾಕಿ ತೊಟ್ಟು ಲಾಠಿ ಹಿಡಿದು ನಿಂತರೆ ಆರಕ್ಷಕ. ಅದೇ ಲಾಠಿಯನ್ನು ಹಿಡಿದು ಕೊಳಲು ಬಾರಿಸಿದರೆ ಕಲಾವಿದ. ಚಂದ್ರಕಾಂತ ಅವರು ಕೊಳಲು ನುಡಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಿಡುವಿನ ವೇಳೆಯಲ್ಲಿ ಲಾಠಿಯನ್ನೇ ಕೊಳಲು ಮಾಡಿಕೊಂಡು ಸಂಗೀತ ನುಡಿಸುವ ಚಂದ್ರಕಾಂತ ಅವರ ಪ್ರತಿಭೆಗೆ ಖಾಕಿ ಪಡೆಯೇ ಬೆರಗಾಗಿದೆ. ಕೆಎಸ್ಆರ್‌ಪಿ ಎಡಿಜಿಪಿ ಭಾಸ್ಕರ ರಾವ್ ಅವರು ಚಂದ್ರಕಾಂತ ಅವರು ಕೊಳಲು ನುಡಿಸುವುದನ್ನು ನೋಡಿ ಭೇಷ್ ಎಂದಿದ್ದಾರೆ.
ಲಾಠಿ ಕೊಳಲಾಗಿದ್ದು ಹೇಗೆ? : ಇತ್ತೀಚೆಗೆ ಚಂದ್ರಕಾಂತ ಅವರನ್ನು ಚುನಾವಣಾ ಕರ್ತವ್ಯಕ್ಕಾಗಿ ಚಿಕ್ಕಮಗಳೂರಿಗೆ ನಿಯೋಜನೆ ಮಾಡಲಾಗಿತ್ತು. ನಾಲ್ಕೈದು ತಾಸು ಬಿಡುವಿನಲ್ಲಿದ್ದ ಅವರು ಲಾಠಿಯನ್ನು ಏಕೆ ಕೊಳಲು ಮಾಡಬಾರದು ಎಂದು ಆಲೋಚಿಸಿದರು.
ಡ್ರಿಲ್ಲಿಂಗ್ ಮೆಷಿನ್ ಮೂಲಕ ಫೈಬರ್ ಲಾಠಿಯನ್ನು ಕೊಳಲಾಗಿ ಮಾಡಿದರು. ಈಗ ಫೈಬರ್ ಲಾಠಿ ಮೂಲಕವೇ ಅವರು ಸೊಗಸಾದ ಸಂಗೀತ ಬಾರಿಸುತ್ತಾರೆ. ಚಂದ್ರಕಾಂತ ಅವರು ಕೊಳಲು ನುಡಿಸುವ ವಿಡಿಯೋಗಳು ಈಗ ವೈರಲ್ ಆಗಿವೆ.
ಸಂಗೀತ ಕಲಿತಿದ್ದಾರೆ : ನಾಟಕ ಮತ್ತು ಸಂಗೀತದಲ್ಲಿ ಚಂದ್ರಕಾಂತ ಅವರಿಗೆ ಅಪಾರವಾದ ಆಸಕ್ತಿ ಇದೆ. ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿಯೂ ಅಭಿನಯಿಸಿದ್ದಾರೆ. ಗದಗದಲ್ಲಿ ಪಂಡಿತ್ ವೆಂಕಟೇಶ ಗೋಡ್ಬಿಂಡಿ ಅವರ ಬಳಿ ಕೊಳಲು ವಾದನ ಕಲಿತಿದ್ದಾರೆ.
ಕೀರ್ವಾಣಿ ರಾಗ, ಯಮನ್ ರಾಗ, ಜೋಗ್, ಭಾಗ್ಯಶ್ರೀ ರಾಗ, ಭೈರವರಾಗದಲ್ಲಿ ಚೆನ್ನಾಗಿ ಕೊಳಲು ನುಡಿಸುತ್ತಾರೆ. 1993ರಲ್ಲಿ ಗದಗದ ಮುಳಗುಂದ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಸೇವೆ ಆರಂಭಿಸಿದ ಚಂದ್ರಕಾಂತ ಅವರು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ.
-
ಮಾರ್ಚ್ 19ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಔಷಧಿ ಪೂರೈಸುವ ಕೆಸ್ಎಂಸಿಎಲ್ಗೆ ಐಎಎಸ್ ಅಧಿಕಾರಿ ಮುಖ್ಯಸ್ಥ, ಇ-ಔಷಧಿ ಸಾಫ್ಟವೇರ್ ಜಾರಿ: ದಿನೇಶ್ ಗುಂಡೂರಾವ್ -
Ugadi 2026: ಹಬ್ಬದ ಕಳೆ ಹೆಚ್ಚಿಸುವ ಸುಂದರ ರಂಗೋಲಿಗಳು; ಸರಳ, ಚುಕ್ಕಿ ಹಾಗೂ ಬಣ್ಣದ ರಂಗೋಲಿ ಐಡಿಯಾ ಇಲ್ಲಿದೆ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ












Click it and Unblock the Notifications