• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಎಸ್ವೈ ತನ್ನ ಮೇಲಿಟ್ಟ ನಂಬಿಕೆಗೆ ಕೋಟಿ ನಮನ ಸಲ್ಲಿಸಿದ ಸಚಿವ ಡಾ. ಸುಧಾಕರ್

|

ಬೆಂಗಳೂರು, ಏಪ್ರಿಲ್ 6: ಮಾರಣಾಂತಿಕ ಕೊರೊನಾದಿಂದ ಉಂಟಾಗಿರುವ ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಇಬ್ಬರು ಸಚಿವರುಗಳ ನಡುವೆ ಹೊಂದಾಣಿಕೆಯ ಕೊರತೆ ಇದೆ ಎನ್ನುವ ಸುದ್ದಿಯ ನಡುವೆ, ಇಬ್ಬರೂ ಸಚಿವರುಗಳಿಗೆ ಮುಖ್ಯಮಂತ್ರಿ ಶಹಬ್ಬಾಸ್ ಗಿರಿ ನೀಡಿದ್ದಾರೆ.

ಮುಖ್ಯಮಂತ್ರಿ ಹೇಳಿಕೆಗೆ ಅತೀವ ಸಂತೋಷ ವ್ಯಕ್ತ ಪಡಿಸಿ ಟ್ವೀಟ್ ಮಾಡಿರುವ ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವ ಡಾ.ಸುಧಾಕರ್, "ತಮ್ಮ ಪ್ರೀತಿ ಹಾಗು ನಂಬಿಕೆಗೆ ಕೋಟಿ ನಮನಗಳು ಸರ್. ನನ್ನ ಜನರಿಗೋಸ್ಕರ ಪ್ರಾಣವೇನಾದರೂ ಹೋದರೆ ಈ ಜನ್ಮ ಸಾರ್ಥಕ ವಾಯಿತು ಎಂದು ಆತ್ಮ ತೃಪ್ತಿ ಹೊಂದುತ್ತೇನೆ" ಎಂದಿದ್ದಾರೆ.

ಬೇಕರಿ ತೆರೆಯಲು ಕೇಂದ್ರದ ಅನುಮತಿ; ತೆರುವಾಗುತ್ತಾ ಲಾಕ್‌ಡೌನ್?

ಖಾಸಗಿ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಯಡಿಯೂರಪ್ಪ, "ಇಬ್ಬರು ಸಚಿವರುಗಳಾದ ಶ್ರೀರಾಮುಲು ಮತ್ತು ಡಾ.ಸುಧಾಕರ್ ಹಗಲುರಾತ್ರಿ ವಿರಮಿಸಿದೆ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಜನತೆಯ ಪರವಾಗಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ" ಎಂದು ಹೇಳಿದ್ದರು.

"ಇಬ್ಬರು ಸಚಿವರ ನಡುವೆ ಹೊಂದಾಣಿಕೆಯ ಕೊರತೆ ಇದೆ ಎನ್ನುವುದು ಸುಳ್ಳು. ಇಬ್ಬರ ಕೆಲಸಗಳು ಗುಲಗಂಜಿ ಕೊರತೆ ಇಲ್ಲದ ಹಾಗೇ ನಡೆಯುತ್ತಿದೆ. ಇಬ್ಬರೂ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ" ಎಂದು ಯಡಿಯೂರಪ್ಪ ಹೇಳಿದ್ದರು.

ವಿಧಾನ ಸಭೆಯ ಕಲಾಪದಲ್ಲಿ ಕೊರೊನಾ ವೈರಸ್ ಬಗ್ಗೆ ಗಂಭೀರ ಚರ್ಚೆಯ ವೇಳೆ, ಅತ್ಯಂತ ಸಮರ್ಥವಾಗಿ ಸದನಕ್ಕೆ ಡಾ. ಸುಧಾಕರ್ ಮಾಹಿತಿಯನ್ನು ನೀಡಿದ್ದರು. ಆದರೆ, ಆರೋಗ್ಯ ಸಚಿವ ಶ್ರೀರಾಮುಲು ಮತ್ತು ಸುಧಾಕರ್ ನಡುವೆ, ಎಲ್ಲವೂ ಸರಿಯಿಲ್ಲ ಎಂದೇ ಹೇಳಲಾಗುತ್ತಿದೆ.

ಸದನದಲ್ಲಿ ಕೊರೊನಾ ಚರ್ಚೆ: ಸುರಕ್ಷಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಸುಧಾಕರ್

"ನಾನು ಮತ್ತು ಶ್ರೀರಾಮುಲು ಅಣ್ಣತಮ್ಮ ಇದ್ದಂತೆ. ನಮ್ಮಿಬ್ಬರಲ್ಲಿ ಹೊಂದಾಣಿಕೆಯ ಕೊರತೆ ಇದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು" ಎಂದು ಡಾ.ಸುಧಾಕರ್ ಹಲವು ಬಾರಿ ಸ್ಪಷ್ಟನೆಯನ್ನು ನೀಡಿದ್ದರು.

English summary
Medical Education Minister Dr. Sudhakar Doing Very Good Job, Yediyurappa. Minister Thanks To CM Through Twitter,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X