ಅತ್ಯುತ್ತಮ ಜಿಲ್ಲಾಪತ್ರಿಕೆ-ಆಂದೋಲನ ಪ್ರಶಸ್ತಿ
ಬೆಂಗಳೂರು, ಫೆ.6: ಕರ್ನಾಟಕ ಮಾಧ್ಯಮ ಕ್ಷೇತ್ರದಲ್ಲಿ ಮಾಡಿರುವ ಗಣನೀಯ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿ 2012 ಮತ್ತು 2013ನೇ ಸಾಲಿನ ವಿಶೇಷ ಹಾಗೂ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಈ ಪ್ರಶಸ್ತಿಗೆ ನಾಡಿನ ವಿವಿಧ ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪುರಸ್ಕೃತರಿಗೆ 20 ಸಾವಿರ ರೂ ನಗದು, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಫೆಬ್ರವರಿ ತಿಂಗಳ ಎರಡು ಅಥವಾ ಮೂರನೇ ವಾರದಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಎಂ ಎ ಪೊನ್ನಪ್ಪ ತಿಳಿಸಿದರು.

ಪ್ರಶಸ್ತಿ ಪ್ರದಾನ ನೆರವೇರಿಸಲು ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ, ವಾರ್ತಾ, ಹಜ್ ಹಾಗೂ ಮೂಲಭೂತ ಸೌಕರ್ಯ ಸಚಿವರಾದ ಆರ್. ರೋಷನ್ ಬೇಗ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಇತರ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಎಂ.ಎ. ಪೊನ್ನಪ್ಪ ತಿಳಿಸಿದ್ದಾರೆ.
ಆಂದೋಲನ ಪ್ರಶಸ್ತಿ-2012 ನಮ್ಮ ನಾಡು-ಶಿವಮೊಗ್ಗ
ಆಂದೋಲನ ಪ್ರಶಸ್ತಿ-2013 ಕಿತ್ತೂರ ಕರ್ನಾಟಕ-ಗದಗ
‘ಸಾಮಾಜಿಕ ಸಮಸ್ಯೆ' ಲೇಖನಕ್ಕೆ ನೀಡುವ "ಅಭಿಮಾನಿ ಪ್ರಶಸ್ತಿ"
ಅಭಿಮಾನಿ ಪ್ರಶಸ್ತಿ 2012: ಉಗಮ ಶ್ರೀನಿವಾಸ್ - ಕನ್ನಡ ಪ್ರಭ:
ಶೀರ್ಷಿಕೆ- ಬತ್ತಿದ ಅಂತರ್ಜಲ ಎದೆಹಾಲು ಹಾಲಾಹಲ.
ಅಭಿಮಾನಿ ಪ್ರಶಸ್ತಿ-2013 ಸಚ್ಚಿದಾನಂದ ಕುರಗುಂದ-ಪ್ರಜಾವಾಣಿ
ಶೀರ್ಷಿಕೆ: ಬಾರದ ಮಳೆ ಎಳೆದಿದೆ ಬರೆ
‘ಮಾನವೀಯ ಸಮಸ್ಯೆ' ಲೇಖನಕ್ಕೆ ನೀಡುವ "ಮೈಸೂರು ದಿಗಂತ" ಪ್ರಶಸ್ತಿ
ಮೈಸೂರು ದಿಗಂತ ಪ್ರಶಸ್ತಿ-2012 - ಚೇತನ್ ಪಡುಬಿದ್ರಿ-ಉದಯವಾಣಿ:
ಶೀರ್ಷಿಕೆ- ಅಂಗವೈಕಲ್ಯ ಅಡ್ಡಿಯಾಯಿತೆ?
ಮೈಸೂರು ದಿಗಂತ ಪ್ರಶಸ್ತಿ-2013 : ರಾಜ ಮನ್ನಾರ್- ಈ ಸಂಜೆ
ಶೀರ್ಷಿಕೆ: ಸರ್ಕಾರಗಳನ್ನು ಗಡಗಡ ನಡುಗಿಸುವ ಈರುಳ್ಳಿ ಕಣ್ಣೀರಿನಿಂದಲೇ ಕೋಟ್ಯಾಧಿಪತಿಗಳು












Click it and Unblock the Notifications