Bengaluru 2nd Airport: ಆ ಜಾಗದಲ್ಲಿ ಏರ್‌ಪೋರ್ಟ್‌ ಆಗಲ್ಲ; 2 ನೇ ವಿಮಾನ ನಿಲ್ದಾಣ ಬಗ್ಗೆ ಅಪ್‌ಡೇಟ್‌ ಕೊಟ್ಟ ಎಂ ಬಿ ಪಾಟೀಲ್‌

ಬೆಂಗಳೂರು, ಮಾರ್ಚ್‌ 19: ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಸ್ಥಳವನ್ನ ರಾಜ್ಯ ಸರ್ಕಾರ ಆಯ್ಕೆ ಮಾಡಿದೆ. ವಿಮಾನ ನಿಲ್ದಾಣ ಮಾಡುವ ಸಲುವಾಗಿ ರಾಜ್ಯ ಸರ್ಕಾರ ಸ್ಥಳಗಳನ್ನು ಗುರುತು ಮಾಡಿ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಕೆ ಮಾಡಿದ್ದಾರೆ. ಇದೀಗ ಯಾವ ಜಾಗದಲ್ಲಿ ಹೊಸ ವಿಮಾನ ನಿಲ್ದಾಣವಾಗಬೇಕು ಎಂಬ ಕುರಿತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಮಹತ್ವವಾದ ಹೇಳಿಕೆ ನೀಡಿದ್ದಾರೆ.

ಕುಣಿಗಲ್ ರಸ್ತೆ, ಕನಕಪುರ ರಸ್ತೆಯಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಜಾಗ ಗುರುತಿಸಿದ್ದೇವೆ ಕೇಂದ್ರ ವಿಮಾನ ಪ್ರಾಧಿಕಾರದವರು ಸ್ಥಳ ತನಿಖೆ ಮಾಡಿ ಜಾಗ ಸೂಕ್ತವಾಗಿದೆ ಎಂದು ಪ್ರಮಾಣೀಕರಿಸುತ್ತಾರೆ. ತದನಂತರ ಸಾಧ್ಯತೆಗಳ ಬಗ್ಗೆ ರಾಜ್ಯ ಸರ್ಕಾರ ಮುಂದುವರಿಯುತ್ತದೆ ಎಂದರು. ಬೆಂಗಳೂರಿನಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ನಮ್ಮಸರಕಾರ ದ ವತಿಯಿಂದ ಕನಕಪುರ ರಸ್ತೆಗೆ ಸಮೀಪ ಹಾಗೂ ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿ ಒಂದು ಸ್ಥಳವನ್ನು ಗುರುತಿಸಿ, ಈ ಪ್ರಸ್ತಾವನೆಯನ್ನು ಕೇಂದ್ರಕ್ಕೆ ರವಾನಿಸಲಾಗಿದೆ.

MB Patil Gives Update On International Second Airport

ವಿಧಾನ ಮಂಡಲದ ಅಧಿವೇಶನದ ನಂತರ ದೆಹಲಿಗೆ ಭೇಟಿನೀಡಿ ಈ ಪ್ರಸ್ತಾಪಿತ ಸ್ಥಳಗಳ ಬಗ್ಗೆ ಕೇಂದ್ರ ಸರ್ಕಾರದ ಸಂಬಂಧಿತ ಇಲಾಖೆ ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಅಂತಿಮ ಅನುಮೋದನೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು. ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಯಾರ ಒತ್ತಡ- ಒತ್ತಾಯಕ್ಕೂ ಮಣಿಯದೆ ಬೆಂಗಳೂರಿನ ಭವಿಷ್ಯದ ಬೆಳೆವಣಿಗೆ ಮತ್ತು ಕೈಗಾರಿಕೋದ್ಯಮ, ಔದ್ಯೋಗಿಕ ಸೃಷ್ಟಿ ಎಲ್ಲವನ್ನೂ ಗಮನದಲ್ಲಿರಿಸಿಕೊಂಡು ಯೋಜಿಸಿದ್ದೇವೆ.

ಎರಡನೇ ವಿಮಾನ ನಿಲ್ದಾಣಕ್ಕೆ ಸ್ಥಳದ ಆಯ್ಕೆಯು ಸಂಪೂರ್ಣವಾಗಿ ಅರ್ಹತೆಯ ಆಧಾರದ ಮೇಲೆ ಹಾಗೂ ನಗರ, ಅದರ ನಿವಾಸಿಗಳು, ಕೈಗಾರಿಕೆಗಳು ಮತ್ತು ಆರ್ಥಿಕತೆಯ ಹಿತಾಸಕ್ತಿಗಳನ್ನು ಪರಿಗಣಿಸಿ ನಡೆಯಲಿದೆ. ವಿಧಾನಸಭಾ ಅಧಿವೇಶನದ ಮುಗಿದ ನಂತರ ಕೇಂದ್ರ ನಾಗರಿಕ ವಿಮಾನಯಾನ ಸಚಿವರನ್ನು ಭೇಟಿ ಮಾಡಿ ಸ್ಥಳ ಅನುಮೋದನೆಗಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ತಂಡವನ್ನು ಕಳುಹಿಸುವ ಬಗ್ಗೆ ಚರ್ಚಿಸುವುದಾಗಿ ಸಚಿವರು ತಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ತಿಳಿಸಿದರು.ಇದು ಆದ ಬಳಿಕ ಸರ್ಕಾರವು ಸ್ಥಳವನ್ನು ಅಂತಿಮ ಮಾಡಲಾಗುತ್ತದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಯಾವ ಜಾಗದಲ್ಲಿ ವಿಮಾನ ನಿಲ್ದಾಣ ಆಗಬೇಕು ಅದರ ಮಾನದಂಡ ಎಲ್ಲವನ್ನ ಪರಿಶೀಲನೆ ಮಾಡುತ್ತೇವೆ. ಕುಣಿಗಲ್ ರಸ್ತೆಯಲ್ಲಿ ಜಾಗವನ್ನು ಆಯ್ಕೆ ಮಾಡಲಾಗಿದೆ ಅದು ವಿಧಾನಸೌಧದಿಂದ 30 ಕಿಲೋಮೀಟರ್ ಆಗುತ್ತದೆ. ಇನ್ನೊಂದು ಕನಕಪುರ ರಸ್ತೆಯಲ್ಲಿದೆ ಕನಕಪುರ ರಸ್ತೆಯಲ್ಲಿ 5 km ದೂರದಷ್ಟು ಮೆಟ್ರೋ ಇದೆ. ನೈಸ್ ರೋಡ್ ಬರುತ್ತದೆ. ನಾವು ಜಾಗವನ್ನು ಆಯ್ಕೆ ಮಾಡುವುದು ಮೆಟ್ರೋ ಕನೆಕ್ಟಿವಿಟಿ, ಜನರಿಗೆ ಓಡಾಡಲು ಅನುಕೂಲಕರವಾಗಿರಬೇಕು.

ಸರಿಯಾದ ಸಂಪರ್ಕ ಹಾಗೂ ವ್ಯವಸ್ಥೆ ಇಲ್ಲ ಅಂದ್ರೆ, ಬಹಳ ದೂರವಾದರೆ ಯಾರು ಬರಲ್ಲ ಶಿರಾ ಅಥವಾ ಚಿತ್ರದುರ್ಗದಲ್ಲಿ ಮಾಡಿದರೆ ಯಾರು ಬರಲ್ಲ. ಆ ಜಾಗದಲ್ಲಿ ಮಾಡಲು ಆಗಲ್ಲ. ನಾವಯ 50 ಕಿಲೋಮೀಟರ್ ಒಳಗೆ ಸೆಕೆಂಡ್ ಏರ್ ಪೋರ್ಟ್ ಅನ್ನು ಮಾಡ್ಬೇಕು ಅಂತ ಚಿಂತನೆಯನ್ನ ನಡೆಸಿದ್ದೇವೆ. ಹತ್ತಿರವಿದ್ರೆ ಪ್ಯಾಸೆಂಜರ್ಸ್ ಬರ್ತಾರೆ, ಇನ್ವೆಸ್ಟ್ ಮಾಡೋರು ಬರ್ತಾರೆ. ಎಲ್ಲವನ್ನೂ ನೋಡಿಕೊಂಡು ನಾವು ತೀರ್ಮಾನ ಮಾಡಬೇಕಾಗುತ್ತದೆ. ನಾನು ಯಾವ ಒತ್ತಡಕ್ಕೂ ಮಣಿಯಲ್ಲ, ಯಾರ ಒತ್ತಡಕ್ಕೂ ಮಣಿಯಲ್ಲ. ಬೆಂಗಳೂರಿನ ಹಿತದೃಷ್ಟಿಯಿಂದ ಜನರ ಹಿತದೃಷ್ಟಿಯಿಂದ ಆರ್ಥಿಕತೆ ಹಿತದೃಷ್ಟಿಯಿಂದ ನಾವು ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಯಾರು ಒತ್ತಡಕು ನಾವು ಮಣಿಯುವುದಿಲ್ಲ ಎಂದು ಎಂ ಬಿ ಪಾಟೀಲ್‌ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+