Gold Price: ಗಗನ ಕುಸುಮವಾದ ಬಂಗಾರ: ಮಾರ್ಚ್ 28ರ ಚಿನ್ನ ಮತ್ತು ಬೆಳ್ಳಿ ದರ ವಿವರ
ಬೆಂಗಳೂರು, ಮಾರ್ಚ್ 28: ಇನ್ನೇನು ಯುಗಾದಿ ಹಬ್ಬ ಸಮೀಪಿಸುತ್ತಿದ್ದು, ನಿಶ್ಚಿತಾರ್ಥ-ಮದುವೆಯಂತಹ ಸಮಾರಂಭಗಳ ಸಂಖ್ಯೆ ಹೆಚ್ಚಾಗಿದೆ. ಶುಭಕಾರ್ಯಗಳು ಕೂಡ ಭರದಿಂದ ಸಾಗುತ್ತಿದ್ದು, ಶುಭ ಸಮಾರಂಭಗಳಿಗೆ ಚಿನ್ನಾಭರಣಕೊಳ್ಳುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.
ಶುಭ ಸಮಾರಂಭಗಳು ಹೆಚ್ಚಿರುವ ಈ ಸಮಯದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಹಿಂದಿಗಿಂತ ದುಬಾರಿಯೇ ಇದೆ. ಕಳೆದ ಆರು ತಿಂಗಳಿಗೆ ಹೋಲಿಸಿದರೆ ಚಿನ್ನ ಸದ್ಯ ಗಗನ ಕುಸುಮವಾಗಿದ್ದು, ಬಂಗಾರದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಬೆಳ್ಳಿ ದರವೂ ಕೂಡ ದಾಖಲೆ ಮಟ್ಟದಲ್ಲಿದ್ದು, ಇಂದು ಬೆಳ್ಳಿಯ ದರ ತುಸು ಕಡಿಮೆಯಾಗಿದೆ.

ಸದ್ಯ ಭಾರತದಲ್ಲಿ 22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ 61,350 ರೂಪಾಯಿ ಇದ್ದು, 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂ ಬೆಲೆ 66,930 ರೂಪಾಯಿ ಇದೆ. ಇನ್ನು 100 ಗ್ರಾಂ ಬೆಳ್ಳಿಯ ಬೆಲೆ 7,600 ರೂಪಾಯಿ ಇದೆ. ಹಾಗಾದರೆ ಇಂದು (ಮಾರ್ಚ್ 28) ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ದರಗಳ ವಿವರವನ್ನು ಇಲ್ಲಿ ತಿಳಿಯಿರಿ.
ಒಂದು ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಚಿನ್ನದ ದರ - 6,135 ರೂಪಾಯಿ
* 24 ಕ್ಯಾರೆಟ್ ಚಿನ್ನದ ದರ - 6,693 ರೂಪಾಯಿ
10 ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಆಭರಣ ಚಿನ್ನದ ದರ - 61,350 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 66,930 ರೂಪಾಯಿ
8 ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಆಭರಣ ಚಿನ್ನದ ದರ - 49,080 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 53,544 ರೂಪಾಯಿ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (10 ಗ್ರಾಂ)ನ ಬೆಲೆ
* ಬೆಂಗಳೂರು- 61,350 ರೂಪಾಯಿ
* ಚೆನ್ನೈ - 62,150 ರೂಪಾಯಿ
*ಮುಂಬೈ - 61,350 ರೂಪಾಯಿ
* ಕೇರಳ - 61,350 ರೂಪಾಯಿ
* ಕೋಲ್ಕತ್ತಾ - 61,350 ರೂಪಾಯಿ
* ಜೈಪುರ್ -61,500 ರೂಪಾಯಿ
* ಭುವನೇಶ್ವರ್- 61,350 ರೂಪಾಯಿ
*ಅಹ್ಮದಾಬಾದ್- 61,400 ರೂಪಾಯಿ
*ಲಕ್ನೋ - 61,500 ರೂಪಾಯಿ
* ನವದೆಹಲಿ - 61,500 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)
* ಬೆಂಗಳೂರಲ್ಲಿ-7,600 ರೂಪಾಯಿ
* ಚೆನ್ನೈ- 8,020 ರೂಪಾಯಿ
* ಮುಂಬೈ-7,720 ರೂಪಾಯಿ
* ಕೋಲ್ಕತ್ತಾ-7,720 ರೂಪಾಯಿ
* ನವದೆಹಲಿ-7,720 ರೂಪಾಯಿ












Click it and Unblock the Notifications