70,000 ಕೋಟಿ ರೂ. ರೈತರ ಸಾಲವನ್ನು ಮನ್ನಾ ಮಾಡಿದ ಮನಮೋಹನ್ ಸಿಂಗ್ : ಭಾವುಕರಾದ ಡಿ ಕೆ ಶಿವಕುಮಾರ್
ಬೆಂಗಳೂರು, ಡಿಸೆಂಬರ್ 27: ಅನೇಕ ಬಾರಿ ಕೇವಲ ದೊಡ್ಡ ದೊಡ್ಡ ಉದ್ದಿಮೆದಾರರ ಸಾಲಗಳನ್ನು ಮಾತ್ರ ಮನ್ನಾ ಮಾಡಲಾಗುತ್ತಿತ್ತು. ಮನಮೋಹನ್ ಸಿಂಗ್ ಅವರು ಮೊಟ್ಟಮೊದಲ ಬಾರಿಗೆ 70,000 ಕೋಟಿ ರೂ. ರೈತರ ಸಾಲವನ್ನು ಮನ್ನಾ ಮಾಡಿದವರು ಎಂದು ಹೇಳಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಶಿವಕುಮಾರ್ ಅವರು ಮಾತನಾಡಿ, ಮನಮೋಹನ್ ಸಿಂಗ್ ಅವರು ನಮ್ಮನ್ನು ಬಿಟ್ಟು ಹೋಗಿರಬಹುದು. ಆದರೆ, ಅವರ ಕಾರ್ಯಕ್ರಮಗಳ ಮೂಲಕ ನಮ್ಮ ನಡುವೆ ಜೀವಂತವಾಗಿದ್ದಾರೆ. ನಾವೆಲ್ಲರೂ ಅವರ ಆದರ್ಶ ಗಳನ್ನು ಉಳಿಸುವ ಕೆಲಸ ಮಾಡಬೇಕು. ನಾವೆಲ್ಲರೂ ಇವರ ಹಾದಿಯಲ್ಲಿ ನಡೆಯೋಣ ಎಂದು ಆಶಿಸುತ್ತೇನೆ. ಅತ್ಯಂತ ಗೌರವ ಪೂರಕವಾಗಿ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇನೆ ಎಂದು ಭಾವುಕರಾದರು.

ಮನಮೋಹನ್ ಸಿಂಗ್ ಅವರು ಈ ದೇಶದ ಶ್ರೇಷ್ಠ ಪ್ರಧಾನ ಮಂತ್ರಿ. ದೇಶದ ಎಲ್ಲಾ ವರ್ಗದ ಜನರನ್ನು ಕಾಪಾಡಿದ ನಿಜವಾದ ಆರ್ಥಿಕ ತಜ್ಞ ಹಾಗೂ ಕ್ರಾಂತಿಕಾರಿ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮನಮೋಹನ್ ಸಿಂಗ್ ಅವರ ಹೆಸರಿನಲ್ಲಿ ಆರ್ಥಿಕ ಸಂಶೋಧನಾ ಹಾಗೂ ಅಧ್ಯಯನ ಕೇಂದ್ರವನ್ನು ಸ್ಥಾಪನೆ ಮಾಡಬೇಕು ಎಂದು ಉನ್ನತ ಶಿಕ್ಷಣ ಸಚಿವರಲ್ಲಿ ಮನವಿ ಮಾಡುತ್ತೇನೆ. ಮುಂದಿನ ಪೀಳಿಗೆಗೆ ಇವರ ಆರ್ಥಿಕ ಕ್ರಾಂತಿ ಸೇರಿದಂತೆ ದೇಶಕ್ಕೆ ನೀಡಿದ ಕೊಡುಗೆಗಳನ್ನು ತಲುಪಿಸುವುದೇ ನಿಜವಾದ ಶ್ರದ್ಧಾಂಜಲಿ. ವಿದ್ಯಾರ್ಥಿಗಳು ಇವರ ಆರ್ಥಿಕ ನೀತಿಗಳನ್ನು ಅಧ್ಯಯನ ಮಾಡುವ ಮೂಲಕ ಮನಮೋಹನ್ ಸಿಂಗ್ ಅವರ ಜ್ಞಾನವನ್ನು ಪಸರಿಸುವ ಹಾಗೂ ಉಳಿಸುವ ಕೆಲಸವಾಗುತ್ತದೆ ಎಂದು ಹೇಳಿದರು.
ಮದುವೆಗೆ ಮಸಣಕೋ ಎಂದ ಕಡೆಗೋಡು ಮಂಕುತಿಮ್ಮ ಎನ್ನುವ ಕವಿ ಡಿವಿಜಿ ಅವರ ಮಾತು ಇಂದಿಗೆ ತಾಳೆಯಾಗುತ್ತಿದೆ. ಕೊರಗಲೇಕೆ, ಮರುಗಲೇಕೆ, ಹುಟ್ಟಿ ಬಂದಿದ್ದೆ ಅಳಲೇಕೆ ಸುಖವೇ ಬರಲೀ, ದುಃಖವೇ ಬರಲಿ, ರೋಗ ಭೋಗವೆ ಇರಲಿ, ಎಲ್ಲಾ ಹೊತ್ತು ಋಣ ತೆತ್ತು, ಮುಂದೆ ಪುಣ್ಯದ ಬೀಜ ಬಿತ್ತು ಎನ್ನುವ ಮಾತಿದೆ. ಮನಮೋಹನ್ ಸಿಂಗ್ ಅವರು ಪುಣ್ಯದ ಹಾಗೂ ಅಭಿವೃದ್ಧಿಯ ಬೀಜವನ್ನು ಬಿತ್ತಿ ಹೋಗಿದ್ದಾರೆ ಅದನ್ನು ನಾವು ಬೆಳೆಸೋಣ ಉಳಿಸೋಣ ಎಂದರು.
ನಾವು ಅವರ ನಿಧನಕ್ಕೆ ದುಃಖವನ್ನು ಪಡುವುದರ ಬದಲು ಅವರು ಹಾಕಿಕೊಟ್ಟ ಆದರ್ಶ ಮಾರ್ಗದಲ್ಲಿ ನಡೆಯುವುದೇ ಅವರಿಗೆ ನಾವು ಸಲ್ಲಿಸುವ ಕೊಡುಗೆ ಎಂದು ಹೇಳಿದರು. ಗಾಂಧಿಯವರ ಇತಿಹಾಸವನ್ನು ಮೆಲುಕು ಹಾಕಲು ಇಡೀ ದೇಶದ ಮೂಲೆ ಮೂಲೆಗಳಿಂದ ನಾಯಕರು ಬೆಳಗಾವಿಗೆ ಬಂದಿದ್ದರು. ನಮ್ಮ ಮುಂದಿನ ಪೀಳಿಗೆಗೆ ಗಾಂಧಿ ಅವರ ಆದರ್ಶಗಳನ್ನು ತಲುಪಿಸುವ ಕೆಲಸಕ್ಕೆ ನಾವು ಮುಂದಾಗಿದ್ದೆವು. ಆದರೆ ವಿಧಿಯಾಟ ಬೇರೆಯಾಗಿತ್ತು ಎಂದರು.
ಇಡೀ ಗಾಂಧಿ ಭಾರತ ಕಾರ್ಯಕ್ರಮಕ್ಕೆ ಸೋನಿಯಾ ಗಾಂಧಿ ಅವರು ಸಾಕ್ಷಿಯಾಗಲಿ ಎಂದು ಜೂಮ್ ಆಪ್ ಮುಖಾಂತರ ಅವರಿಗೆ ಕಾರ್ಯಕ್ರಮದ ಕೊಂಡಿಯನ್ನು ಕಳಿಸಲಾಗಿತ್ತು. ವೇಣುಗೋಪಾಲ್ ಅವರ ಸಲಹೆಯಂತೆ ಮನಮೋಹನ್ ಸಿಂಗ್ ಅವರನ್ನು ಕೂಡ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ನಾವು ಬಯಸಿದ್ದೆವು. ಈ ಕಾರಣಕ್ಕೆ ಅವರ ಕಚೇರಿಯನ್ನು ಸಂಪರ್ಕಿಸಿದಾಗ ಸಿಂಗ್ ಅವರ ಆರೋಗ್ಯ ಸರಿ ಇಲ್ಲ, ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ದೊರೆಯಿತು. ಅವರು ಆರೋಗ್ಯಯುತವಾಗಿ ಮರಳಿ ಬರುವ ವಿಶ್ವಾಸವಿತ್ತು. ಆದರೆ ಇಂದು ಅವರು ನಮ್ಮ ಜೊತೆಯಲ್ಲಿಲ್ಲ ಎಂದರು.
ನಾವೆಲ್ಲರೂ ಗಾಂಧಿ ಭಾರತ ಕಾರ್ಯಕ್ರಮ ಮಾಡಲು ಸಜ್ಜಾಗಿದ್ದೆವು ಆದರೆ, ಇದೇ ಚಪ್ಪರದ ಅಡಿಯಲ್ಲಿ ಆರ್ಥಿಕತೆಯ ಗಾಂಧಿ ಮನಮೋಹನ್ ಸಿಂಗ್ ಅವರ ಶ್ರದ್ಧಾಂಜಲಿ ಸಭೆಯನ್ನು ನಡೆಸುತ್ತಿದ್ದೇವೆ. ಇದನ್ನೇ ವಿಧಿಯಾಟ ಎಂದು ಕರೆಯಲಾಗುತ್ತದೆ. ಇದು ಅತ್ಯಂತ ದುಃಖದ ಸಂಗತಿ. ತಮ್ಮ ಆಡಳಿತ ಅವಧಿಯಲ್ಲಿ ಸಿಂಗ್ ಅವರು ರೂಪಿಸಿರುವ ಕಾಯ್ದೆಗಳು ಕರಾರುವಕ್ಕಾಗಿದ್ದವು. ಶಿಕ್ಷಣ ಹಕ್ಕು, ಆರೋಗ್ಯದ ಹಕ್ಕು, ಆಹಾರದ ಹಕ್ಕನ್ನು ಪ್ರತಿಪಾದಿಸಿದವರು. ಗ್ರಾಮೀಣ ಭಾಗದ ಜನರ ಆರೋಗ್ಯ ಕಾಪಾಡಲು ಆಶಾ ಕಾರ್ಯಕರ್ತರ ಯೋಜನೆಯನ್ನು ರೂಪಿಸಿದವರು ಎಂದು ಸ್ಮರಿಸಿದರು.
-
ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಎರಡೂ ಕಡೆ ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್ ಗೆಲುವು ಎಂದ ಡಿ.ಕೆ.ಶಿವಕುಮಾರ್ -
ಇಡೀ ಸರ್ಕಾರವೇ ಉಮೇಶ್ ಮೇಟಿ ಜೊತೆಗಿದೆ: ಬಾಗಲಕೋಟೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಡಿ.ಕೆ.ಶಿವಕುಮಾರ್ ಅಭಯ -
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು











Click it and Unblock the Notifications