Kodi Mutt Swamiji: ನಿಜವಾಯ್ತು ಕೋಡಿಮಠದ ಸ್ವಾಮೀಜಿಯ ಭಯಾನಕ ಭವಿಷ್ಯ
ಬೆಂಗಳೂರು, ಡಿಸೆಂಬರ್ 28: ಕೋಡಿಮಠ ಪೀಠಾಧ್ಯಕ್ಷ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಗಳು ಹಲವು ಭವಿಷ್ಯ ನುಡಿದಿದ್ದಾರೆ. ಇದೀಗ ಕೋಡಿಮಠದ ಸ್ವಾಮೀಜಿಗಳು ನುಡಿದ ಭವಿಷ್ಯ ಮತ್ತೊಮ್ಮೆ ನಿಜವಾಗಿದೆ ಎಂದು ಹೇಳಲಾಗಿದೆ.
ಜೂನ್ ತಿಂಗಳಲ್ಲಿ ಕೋಡಿಮಠ ಪೀಠಾಧ್ಯಕ್ಷ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಗಳು ಇಬ್ಬರು ಪ್ರಧಾನಿಗಳ ಸಾವಿನ ಬಗ್ಗೆ ಭವಿಷ್ಯ ನುಡಿದಿದ್ದರು. ಇದೀಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದೊಂದಿಗೆ ಕೋಡಿಮಠದ ಶ್ರೀಗಳು ನುಡಿದಿದ್ದ ಭವಿಷ್ಯ ನಿಜವಾಗಿದೆ.

ಅರ್ಥಿಕ ತಜ್ಞರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ 92 ವರ್ಷ ವಯಸ್ಸಾಗಿತ್ತು. ಗುರುವಾರ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ. ಈ ನಡುವೆ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನುಡಿದಿದ್ದ ಭವಿಷ್ಯ ಕೂಡ ನಿಜವಾಗಿದೆ.
ಈ ವರ್ಷದ ಜೂನ್ ತಿಂಗಳಲ್ಲಿ ಧಾರವಾಡದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ಶ್ರೀಗಳು, ಭಾರತೀಯ ಪರಂಪರೆಯ ಪ್ರಕಾರ ಪ್ರಸ್ತುತ ನಾವು ಕ್ರೋಧಿನಾಮ ಸಂವತ್ಸರದಲ್ಲಿದ್ದು, ಪಂಚ ಭೂತಗಳಾದ ಭೂಮಿ, ಆಕಾಶ, ನೀರು, ವಾಯು, ಬೆಂಕಿಯಿಂದ ಭಾರೀ ತೊಂದರೆ ಉಂಟಾಗಲಿದೆ ಎಂದು ಹೇಳಿದ್ದರು. ನಾನು 4 ತಿಂಗಳ ಮೊದಲೇ ಹೇಳಿದಂತೆ ವಿದೇಶದಲ್ಲಿ ಭೀಕರ ಮಳೆಯಾಗ್ತದೆ, ಇಬ್ಬರು ಪ್ರಧಾನಿಗಳು ಸಾಯುತ್ತಾರೆ, ಸಾವು ನೋವುಗಳು ಸಂಭವಿಸುತ್ತವೆ, ದೊಡ್ಡ ದೊಡ್ಡವರಿಗೆ ಭಾರಿ ದುಃಖ, ನೋವು, ತಾಪಎದುರಾಗುತ್ತದೆ ಎಂದು ಹೇಳಿದ್ದೆನು. ಅದೇ ರೀತಿ ಆಗಿದ್ದು, ಅಚ್ಚರಿಗೆ ಕಾರಣವಾಗಿದೆ.
ಕೋಡಿಮಠ ಪೀಠಾಧ್ಯಕ್ಷ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಗಳು ಇಬ್ಬರು ಪ್ರಧಾನಿಗಳ ಸಾವಿನ ಭವಿಷ್ಯ ನುಡಿದಿದ್ದರಾದರೂ, ಈ ವರ್ಷದ ಕೊನೆಯ ಹಂತದಲ್ಲಿ ಮನಮೋಹನ್ ಸಿಂಗ್ ನಿಧನದೊಂದಿಗೆ ಅವರು ನುಡಿದಿದ್ದ ಭವಿಷ್ಯ ನಿಜವಾಗಿದೆ. ಅಲ್ಲದೇ ಈ ವರ್ಷದ ಮಳೆಯಿಂದ ದೇಶದಲ್ಲಿ ಜಾಸ್ತಿ ತೊಂದರೆ ಇದೆ. ಪ್ರಾಕೃತಿಕ ದೋಷ ಇದೆ. ನಮಗೆ ಪಂಚ ಶಕ್ತಿಗಳಿಂದಲೂ ತೊಂದರೆ ಇದೆ. ಭೂಮಿ, ಅಗ್ನಿ, ವಾಯು, ಆಕಾಶ, ಪ್ರಕೃತಿ ಸೇರಿದಂತೆ ಎಲ್ಲಾ ಕಡೆ ತೊಂದರೆ ಆಗುತ್ತದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದರು.
ಆಕಾಶದಲ್ಲಿ ಆಗುವ ದೊಡ್ಡ ಸುದ್ದಿ ಇದೆ. ಜನ ಇದ್ದಕ್ಕಿದ್ದಂತೆ ಸಾಯುತ್ತಾರೆ. ಭೂಮಿ ಬಿರುಕು ಬಿಡುತ್ತೆ ಎಂದಿದ್ದೆ. ಗುಡ್ಡ ಹೋಗುತ್ತೆ ಎಂದು ಹೇಳಿದ್ದೆ. ಪ್ರವಾಹದಲ್ಲಿ ಜಗತ್ತಿನಾದ್ಯಂತ ಹಲವು ದೇಶಗಳು ಮುಳುಗುತ್ತವೆ ಎಂದು ಹೇಳಿದ್ದೆ. ಇನ್ನೂ ಮಳೆ ಇದೆ, ಅದರಲ್ಲಿ ಇನ್ನೂ ಅನಾಹುತಗಳು ಸಂಭವಿಸಲಿವೆ ಎಂದು ಕೋಡಿಮಠ ಪೀಠಾಧ್ಯಕ್ಷ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಅವರು ಈ ಹಿಂದೆ ಅಚ್ಚರಿ ಭವಿಷ್ಯವನ್ನ ನುಡಿದಿದ್ದಾರೆ.
ರಾಜ್ಯದಲ್ಲಿಯೂ ದೊಡ್ಡವರಿಗೆ ಕಷ್ಟ ಅನುಭವಿಸುವ ರೀತಿ ಪ್ರಕರಣಗಳು ನಡೆಯುತ್ತಿವೆ. ಕರೆಯದೇ ಬರುವವನು ಕೋಪ, ಬರೆಯದೇ ಹೋದವನು ಕಣ್ಣು, ಬರಿಗಾಲಲ್ಲಿ ನಡೆಯುವವನು ಮನಸ್ಸು ಈ ಮೂರದ್ದೂ ನಿಯತ್ತು ಇಟ್ಟುಕೊಂಡವರಿಗೆ ಯಾವ ಸಮಸ್ಯೆಯೂ ಬರುವುದಿಲ್ಲ. ಆದರೆ, ದುಡ್ಡು, ಅಧಿಕಾರ ಮುಖ್ಯವೆಂದು ಹೊರಟವರು ಅಧಃಪತನ ಕಾಣುತ್ತಿದ್ದಾರೆ ಎಂದು ಕೋಡಿಮಠದ ಶ್ರೀಗಳು ಭಚಿಷ್ಯವನ್ನ ನುಡಿದಿದ್ರು.
ರಾಜಕಾರಣದಲ್ಲಿ ನಾನು ಹೇಳಿದಂತೆ ಅತಂತ್ರದಿಂದಲೇ ಕೂಡಿದೆ. ಶ್ರಾವಣದಲ್ಲಿ ನಾನು ಈ ಬಗ್ಗೆ ರಾಜಕೀಯದ ಬಗ್ಗೆ ನುಡಿಯುತ್ತೇನೆ. ಅಶುಭವನ್ನು ಈಗಲೇ ನುಡಿಯಬಾರದು. ಮಹಾಭಾರತದಲ್ಲಿ ಅಭಿಮನ್ಯುವಿನ ಬಿಲ್ಲಿನ ದಾರವನ್ನು ಕರ್ಣನ ಕೈಯಿಂದ ಕತ್ತರಿಸುತ್ತಾರೆ. ಆದರೆ, ಈಗ ಅಭಿಮನ್ಯುವಿನ ಹೆಂಡತಿ ಪಾರ್ಲಿಮೆಂಟಿಗೆ ಪ್ರವೇಶ ಮಾಡುತ್ತಾಳೆ. ಆದರೆ, ಈಗ ಪಾರ್ಲಿಮೆಂಟಿನಲ್ಲಿ ಧುರ್ಯೋಧನನ ತೊಡೆ ಮುರಿಸಿದ ಕೃಷ್ಣ ಇಲ್ಲಿಲ್ಲ. ಆದ್ದರಿಂದ ಧುರ್ಯೋಧನನೇ ಗೆಲ್ಲುತ್ತಾನೆ ಎಂದು ಶ್ರೀಗಳು ಹೇಳಿದ್ದರು.












Click it and Unblock the Notifications