Get Updates
Get notified of breaking news, exclusive insights, and must-see stories!

Mankala Vaidya Profile: ಕೈಹಿಡಿದ ಸಮಾಜಸೇವೆ, ಶಾಸಕರಾದ 2ನೇ ಅವಧಿಯಲ್ಲಿಯೇ ಮಂತ್ರಿ; ವೈದ್ಯರಿಗೆ ಒಲಿದ ಅದೃಷ್ಟ!

ಕಾರವಾರ: ಒಮ್ಮೆ ಶಾಸಕರಾಗಿ ಬಳಿಕ ಎದುರಾದ ಸೋಲನ್ನೇ ಪರಾಮರ್ಶೆಗೆ ಒಳಪಡಿಸಿ ಜನರೊಟ್ಟಿಗೆ ಬೆರೆತು ಎರಡನೇ ಬಾರಿ ಗೆಲುವು ದಾಖಲಿಸಿದ್ದ ಮೀನುಗಾರ ಸಮುದಾಯದ ಮಂಕಾಳು ವೈದ್ಯ ಅವರಿಗೆ ಕೊನೆಗೂ ಮಂತ್ರಿಯಾಗುವ ಭಾಗ್ಯ ಲಭಿಸಿದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮತಗಳ ಅಂತರದ ಗೆಲುವು ದಾಖಲಿಸಿದ್ದ ಮಂಕಾಳು ವೈದ್ಯ ಶಾಸಕರಾದ ಎರಡನೇ ಅವಧಿಗೆ ಸಚಿವ ಸಂಪುಟ ಸೇರಿಕೊಂಡಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೈಲೂರು ಗ್ರಾಮದ ಕೊಪ್ಪದಮಕ್ಕಿಯಲ್ಲಿ 1972 ಜೂನ್ 5 ರಂದು ಸುಬ್ಬ ವೈದ್ಯ ಮತ್ತು ಭಾಗಿರಥಿಯವರ ನಾಲ್ಕನೇಯ ಮಗನಾಗಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಬೈಲೂರು ಹಾಗೂ ಪ್ರೌಢಶಿಕ್ಷಣವನ್ನು ಜನತಾ ವಿದ್ಯಾಲಯ ಮುರ್ಡೇಶ್ವರದಲ್ಲಿ ಮುಗಿಸಿದ್ದಾರೆ. ಮಂಕಾಳು ವೈದ್ಯ ಅವರ ತಂದೆಯವರು ಮೀನುಗಾರಿಕೆ ನಡೆಸಿ ಜೀವನ ಸಾಗಿಸುತ್ತಿದ್ದರು.

Mankala Vaidya Profile: Biography of Mankala Vaidya , Minister In Siddaramaiahs Cabinet in Karnataka

ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇದ್ದ ಕಾರಣ ಶಿಕ್ಷಣವನ್ನು ಮುಂದುವರಿಸಲಾಗದೇ ಅರ್ಧಕ್ಕೆ ಮೊಟಕುಗೊಳಿಸಿ ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ಹೋದವರು, ಜೀವನ ನಿರ್ವಹಣೆಗಾಗಿ ಹೊಟೇಲೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಅಲ್ಲಿ ನಾಲೈದು ವರ್ಷ ಕೆಲಸ ಮಾಡಿಕೊಂಡಿದ್ದು ಬಳಿಕ ಊರಿಗೆ ವಾಪಸ್ಸಾಗಿ ಮುರ್ಡೇಶ್ವರದಲ್ಲಿ ಹೊಟೇಲ್ ಉದ್ಯಮದ ಜೊತೆಗೆ ಮೀನು ವ್ಯಾಪಾರವನ್ನು ಸಹ ಪ್ರಾರಂಭಿಸಿದರು.

ಮನೆಯಲ್ಲಿ ಕಿತ್ತು ತಿನ್ನುವ ಬಡತನ

ಇದಲ್ಲದೆ ಸಮಾಜಸೇವೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಅವರು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಾ ಜನಸಾಮಾನ್ಯರಿಗೆ ಹತ್ತಿರವಾಗಿದ್ದರು. ಇದೇ ಸಮಾಜಸೇವೆ ಇದೀಗ ಇವರನ್ನ ರಾಜಕೀಯಕ್ಕೆ ಕರೆತಂದಿತು. 2005 ರಲ್ಲಿ ಮೊದಲ ಬಾರಿಗೆ ಮಾವಳ್ಳಿ ಜಿಲ್ಲಾ ಪಂಚಾಯತಿಯಿಂದ ಪಕ್ಷೇತರರಾಗಿ ಸ್ಪರ್ಧಿಸಿ ವೈದ್ಯ ಅವರು ಗೆಲುವು ಸಾಧಿಸಿದರು. ಇದೇ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯತಿಗೆ ಎರಡೂವರೆ ವರ್ಷದ ಅವಧಿಗೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ಪಕ್ಷೇತರರಾಗಿ ಸ್ಪರ್ಧಿಸಿ ಜಯ

2010ರಲ್ಲಿ ಜಾಲಿ ಜಿಲ್ಲಾ ಪಂಚಾಯಿತಿಯಿಂದ ಎರಡನೇ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ ಜಯಗಳಿಸಿದರು. ಜಾಲಿ ಜಿಲ್ಲಾ ಪಂಚಾಯತ ಸದಸ್ಯರಾಗಿರುವಾಗಲೇ ಕರ್ನಾಟಕ ವಿಧಾನಸಭೆಗೆ ಚುನಾವಣೆ ಘೋಷಣೆಯಾಯಿತು. ಆ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಭಟ್ಕಳ ಕ್ಷೇತ್ರಕ್ಕೆ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದರು. ಆದರೆ ಚುನಾವಣೆಗೆ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್ ಸಿಗದ ಕಾರಣ ಜನರ ಒತ್ತಾಸೆಯಂತೆ 2013ರಲ್ಲಿ ಪಕ್ಷೇತರರಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ 10,000ಕ್ಕೂ ಅಧಿಕ ಮತಗಳಿಂದ ಜಯ ಸಾಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.

ಪಕ್ಷೇತರರೊಬ್ಬರು ಜಯಗಳಿಸಿದ್ದು ಇದೇ ಮೊದಲು

ಭಟ್ಕಳ ಇತಿಹಾಸದಲ್ಲಿಯೇ ಪಕ್ಷೇತರರೊಬ್ಬರು ಜಯಗಳಿಸಿದ್ದು ಇದೇ ಮೊದಲಾಗಿತ್ತು. ಚುನಾವಣೆಯಲ್ಲಿ ಗೆದ್ದ ನಂತರ ಕಾಂಗ್ರೆಸ್‌ಗೆ ಬೆಂಬಲಿಸಿದ್ದು ತಮ್ಮ ಶಾಸಕತ್ವದ ಮೊದಲ ಅವಧಿಯಲ್ಲಿ ತಮಗೆ ಸರಕಾರದಿಂದ ಬಂದಂತಹ ವೇತನ ಹಾಗೂ ಭತ್ಯೆಗಳನ್ನು ಬಡಮಕ್ಕಳ ಮತ್ತು ಬುದ್ಧಿಮಾಂದ್ಯ ಮಕ್ಕಳ ಶಿಕ್ಷಣಕ್ಕಾಗಿ ಮೀಸಲಿಟ್ಟಿದ್ದರು. 2018ರಲ್ಲಿ ಎರಡನೇ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋಲನುಭವಿಸಿದರು.

ಜನರೊಂದಿಗಿನ ಒಡನಾಟ

ಆದರೆ ಸೋತರೂ ಸಹ ಕ್ಷೇತ್ರದಲ್ಲಿ ಓಡಾಟ ನಡೆಸಿಕೊಂಡು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಾ ಜನರೊಂದಿಗಿನ ಒಡನಾಟ ಇರಿಸಿಕೊಂಡಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 1 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ಸುನೀಲ್ ನಾಯ್ಕ ವಿರುದ್ಧ 32 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಅಭೂತಪೂರ್ವ ಗೆಲುವು ದಾಖಲಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+