Mangaluru Railway: ಕರಾವಳಿ ಕನ್ನಡಿಗರ ಹಕ್ಕುಗಳನ್ನು ಪ್ರಶ್ನಿಸುವುದನ್ನು ಕೇರಳ ನಿಲ್ಲಿಸಲಿ ಎಂದ ಬಿ.ವೈ ವಿಜಯೇಂದ್ರ

Mangaluru Railway: ನೈಋತ್ಯ ರೈಲ್ವೆ ವ್ಯಾಪ್ತಿಗೆ ಮಂಗಳೂರು ಸೇರಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಹೇಳಿದ್ದಾರೆ. ಈ ವಿಷಯದಲ್ಲಿ ಕೇರಳ ಸರ್ಕಾರವು ಆಕ್ಷೇಪ ವ್ಯಕ್ತಪಡಿಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ಕರಾವಳಿ ಕರ್ನಾಟಕದ ದಶಕಗಳ ನ್ಯಾಯಯುತ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು, ಮಂಗಳೂರು ರೈಲ್ವೆ ವಲಯವನ್ನು ನೈಋತ್ಯ ರೈಲ್ವೆಯೊಂದಿಗೆ ವಿಲೀನಗೊಳಿಸಿರುವ ನಿರ್ಧಾರ ಸ್ವಾಗತಾರ್ಹವಷ್ಟೆ ಅಲ್ಲದೆ ಅತ್ಯಂತ ಶ್ಲಾಘನೀಯವೂ ಹೌದು.

ಮೂರು ಬೇರೆ ಬೇರೆ ವಲಯಗಳಲ್ಲಿ ಹಂಚಿಹೋಗಿದ್ದ ಮಂಗಳೂರು ರೈಲ್ವೆಗೆ ಈ ನಿರ್ಧಾರ ಹೊಸ ಚೈತನ್ಯ ನೀಡಲಿದೆ. ಈ ನ್ಯಾಯಯುತ ಬೇಡಿಕೆಯನ್ನು ಈಡೇರಿಸಿದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ, ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ ಅವರಿಗೆ ಹಾಗೂ ಇದಕ್ಕಾಗಿ ನಿರಂತರ ಪ್ರಯತ್ನಿಸಿದ ಪಕ್ಷದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.

Mangaluru Railway

ಈ ಪ್ರಾದೇಶಿಕ ಹಿತದೃಷ್ಟಿಯ ನಿರ್ಧಾರವನ್ನು ವಿರೋಧಿಸುತ್ತಿರುವ ಕೇರಳ ಮುಖ್ಯಮಂತ್ರಿ ವಿಡಿ ಸತೀಶನ್ ಅವರು ಸೇರಿದಂತೆ ಅಲ್ಲಿನ ನಾಯಕರ ಸಂಕುಚಿತ ರಾಜಕೀಯದ ಹೇಳಿಕೆಗಳು ಖಂಡನೀಯ. ಮಂಗಳೂರಿನ ಕಡಲತೀರ, ಬಂದರು ಮತ್ತು ಒಳನಾಡಿನ ಸಂಪರ್ಕ ಕರ್ನಾಟಕದ ಆರ್ಥಿಕತೆಯ ಜೀವನಾಡಿ. ತನ್ನದೇ ರಾಜ್ಯದ ಭೂಭಾಗದಲ್ಲಿದ್ದೂ, ಇಷ್ಟು ದಿನ ಆಡಳಿತಾತ್ಮಕ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಮಂಗಳೂರಿಗೆ, ಜನರ ಅಪೇಕ್ಷೆಯಂತೆ ಸಿಕ್ಕ ನ್ಯಾಯವನ್ನು 'ದ್ರೋಹ' ಎಂದು ಕರೆಯುವುದು ಕರ್ನಾಟಕದ ಜನತೆಗೆ ಮಾಡುವ ಅಪಮಾನ, ಒಕ್ಕೂಟ ವ್ಯವಸ್ಥೆಗೆ ಕಳಂಕ ತರುವ ನಡೆ.

ಪ್ರಾದೇಶಿಕ ವಲಯಗಳ ಮರುರಚನೆ, ಆಡಳಿತಾತ್ಮಕ ಮತ್ತು ಸುಲಭ, ಸುಗಮ ನಿರ್ವಹಣೆಯ ಭಾಗವೇ ಹೊರತು ಯಾವುದೇ ರಾಜ್ಯಕ್ಕೆ ಮಾಡುವ ತಾರತಮ್ಯವಲ್ಲ. ಕೇರಳದ ನಾಯಕರು ತಮ್ಮ ರಾಜಕೀಯ ಲಾಭಕ್ಕಾಗಿ ಕರಾವಳಿ ಕನ್ನಡಿಗರ ಹಕ್ಕುಗಳನ್ನು ಪ್ರಶ್ನಿಸುವುದನ್ನು ನಿಲ್ಲಿಸಲಿ ಎಂದು ಆಶಿಸುತ್ತೇನೆ ಎಂದೂ ಹೇಳಿದ್ದಾರೆ.

ನೈಋತ್ಯ ರೈಲ್ವೆ ವ್ಯಾಪ್ತಿಗೆ ಮಂಗಳೂರು ಸೇರಿದೆ. ಕರಾವಳಿ ಕರ್ನಾಟಕದ ರೈಲು ಬಳಕೆದಾರರು, ರೈಲ್ವೆ ಆಡಳಿತ ಮತ್ತು ಸೇವೆಗಳಿಗೆ ಸಂಬಂಧಿಸಿದ ಕಳವಳಗಳನ್ನು ನಿವಾರಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯು ಐತಿಹಾಸಿಕ ನಿರ್ಧಾರ ಕೈಗೊಂಡಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಹೇಳಿದ್ದಾರೆ.

ಮೂರು ವಲಯಗಳಲ್ಲಿ ಹಂಚಿಹೋಗಿದ್ದ ಮಂಗಳೂರು ರೈಲ್ವೆ ಪ್ರದೇಶವು ಇದೀಗ, ಈ ಭಾಗದ ಜನರ ಅಪೇಕ್ಷೆಯಂತೆ ನೈಋತ್ಯ ರೈಲ್ವೆಯ ಭಾಗವಾಗಲಿದೆ. (ವಿಭಾಗೀಯ ಪ್ರಧಾನ ಕಚೇರಿ ಮೈಸೂರು ಮತ್ತು ವಲಯ ಪ್ರಧಾನ ಕಚೇರಿ ಹುಬ್ಬಳ್ಳಿ ಆಗಿರುತ್ತದೆ.) ಕರ್ನಾಟಕದ ಆರ್ಥಿಕ ಅಭಿವೃದ್ಧಿಯ ಅವಿಭಾಜ್ಯ ಅಂಗವಾಗಿರುವ ಮಂಗಳೂರು ರೈಲ್ವೆ ಪ್ರದೇಶಕ್ಕೆ ಈ ಮೂಲಕ ಮತ್ತಷ್ಟು ಹೆಚ್ಚಿನ ಶಕ್ತಿ ದೊರೆತಂತಾಗಿದ್ದು, ಸಕಾಲಿವಾದ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗಲಿದೆ ಎಂದಿದ್ದಾರೆ.

ಕೇರಳ ಮುಖ್ಯಮಂತ್ರಿ ವಿ.ಡಿ ಸತೀಶನ್ ಆಕ್ಷೇಪ

ಇನ್ನು ಇದಕ್ಕೆ ಕೇರಳದ ಮುಖ್ಯಮಂತ್ರಿ ವಿ.ಡಿ ಸತೀಶನ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಾಲಕ್ಕಾಡ್ ವಿಭಾಗದಿಂದ ಮಂಗಳೂರು ರೈಲ್ವೆ ವಿಭಾಗವನ್ನು ಬೇರ್ಪಡಿಸಿ ನೈಋತ್ಯ ರೈಲ್ವೆಯೊಂದಿಗೆ ವಿಲೀನಗೊಳಿಸುವ ರೈಲ್ವೆ ಮಂಡಳಿಯ ಏಕಪಕ್ಷೀಯ ನಿರ್ಧಾರ ಸ್ವೀಕಾರಾರ್ಹವಲ್ಲ. ಇದು ದಕ್ಷಿಣ ರೈಲ್ವೆ ಮತ್ತು ಕೇರಳದ ಆದಾಯ ಮತ್ತು ಅಭಿವೃದ್ಧಿಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ನಾವು ಇದನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರೊಂದಿಗೆ ತುರ್ತಾಗಿ ಚರ್ಚಿಸುತ್ತೇವೆ ಎಂದೂ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+