ಮಂಡ್ಯ ಹಳ್ಳಿಗಳಲ್ಲಿ ರಮ್ಯಾ ಮೇಡಂ ಏನ್ಮಾಡ್ತಿದ್ದಾರೆ

ಮಂಡ್ಯ, ಜ.6: ಸಾಕು ತಂದೆ ಆರ್ ಟಿ ನಾರಾಯಣರ ವಿರೋಧದ ನಡುವೆಯೂ ರಾಜಕೀಯಕ್ಕೆ ಪ್ರವೇಶಿಸಿದ ಕನ್ನಡದ ಪ್ರತಿಭಾವಂತ ನಟಿ ರಮ್ಯಾ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯೆಯಾಗಿ ಆರಿಸಿ ಬಂದಿದ್ದೇ ತಡ, ಬಹುತೇಕ ಮಂಡ್ಯದ ಹಳ್ಳಿಗಳಲ್ಲೇ ಠಿಕಾಣಿ ಹೂಡಿದ್ದಾರೆ. ಜನರ ಕಷ್ಟಸುಖ ವಿಚಾರಿಸುತ್ತಾ ಮನೆಯ ಮಗಳಾಗಿ ಗ್ರಾಮಸ್ಥರಿಂದ ಸೈ ಎನಿಸಿಕೊಂಡಿದ್ದಾರೆ.

ಯಾರಿಗೇ ಆಗಲಿ ಹೀಗೆ ಮಂಡ್ಯ ಜನರ ಕೈಯಲ್ಲಿ ಶಹಬ್ಬಾಸ್ ಅನಿಸಿಕೊಳ್ಳುವುದು ಅಷ್ಟು ಸುಲಭದ ಮಾತೇನೂ ಅಲ್ಲ. ಆದರೆ ಸಂಸದೆಯಾಗಿ ರಮ್ಯಾ ನಿಜಕ್ಕೂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ದಿಲ್ಲಿ ಮೇಡಂ ಆಗುತ್ತಿದ್ದಂತೆ ಹಳ್ಳಿಯನ್ನು ಮರೆಯುತ್ತಾರೆ ಅಂದರೆ 'ನಾನೇ ಬೇರೆ, ನನ್ನ ಗುರಿಯೇ ಬೇರೆ' ಅನ್ನುತ್ತಿದ್ದಾರೆ ರಮ್ಯಾ.

RT Narayan Charitable Trust ಹೆಸರಿನಲ್ಲಿ ಜನೋಪಕಾರಿ ಕೆಲಸ

RT Narayan Charitable Trust ಹೆಸರಿನಲ್ಲಿ ಜನೋಪಕಾರಿ ಕೆಲಸ

ಏನಿಲ್ಲ, ರಮ್ಯಾ ಮಂಡ್ಯ ಹಳ್ಳಿಯೊಂದನ್ನು ಮಾದರಿ ಹಳ್ಳಿಯಾಗಿ ಅಭಿವೃದ್ಧಿಪಡಿಸಿರುವುದು ನೋಡಿದರೆ ಅವರ ಸಾಕು ತಂದೆ ನಾರಾಯಣ್ ಅವರ ಆತ್ಮ ನಿಜಕ್ಕೂ ಸಂತೃಪ್ತಗೊಂಡಿರುತ್ತದೆ. ಹೌದು, ಸಂಸದೆಯಾಗಿ ಅಷ್ಟೇ ಅಲ್ಲದೆ, ತಮ್ಮ ತಂದೆ ಆರ್ ಟಿ ನಾರಾಯಣರ R.T. Narayan Charitable Trust ಹೆಸರಿನಲ್ಲಿ ಸಾಕಷ್ಟು ಜನೋಪಕಾರಿ ಕೆಲಸಗಳನ್ನು ಮಾಡುತ್ತಿದ್ದಾರೆ.

ಕರಡಿ ಕೊಪ್ಪಲು ಗ್ರಾಮಸ್ಥರ ಕಷ್ಟ ಆ ದೇವರಿಗೇ ಪ್ರೀತಿ

ಕರಡಿ ಕೊಪ್ಪಲು ಗ್ರಾಮಸ್ಥರ ಕಷ್ಟ ಆ ದೇವರಿಗೇ ಪ್ರೀತಿ

ಮಂಡ್ಯ ತಾಲೂಕಿನ ಕರಡಿ ಕೊಪ್ಪಲು ಗ್ರಾಮವನ್ನೇ ತೆಗೆದುಕೊಳ್ಳಿ. ಅದು ಜಿಲ್ಲಾ ಕೇಂದ್ರಕ್ಕೆ ಸಮೀಪದಲ್ಲೇ ಇದ್ದರೂ ತೀರಾ ಹಿಂದುಳಿದ ಗ್ರಾಮವಾಗಿತ್ತು. ಅನೇಕ ವರ್ಷಗಳಿಂದ/ ನಾನಾ ಜನಪ್ರತಿನಿಧಿಗಳೇ ಬಂದು ಹೋದರೂ ಅದು ಕುಗ್ರಾಮವಾಗಿಯೇ ಉಳಿದಿತ್ತು. ಹಳ್ಳಿಯೊಳಗಿನ ರಸ್ತೆಗಳನ್ನೇ ತೆಗೆದುಕೊಳ್ಳಿ. ಅವು ಧೂಳು ತುಂಬಿದ ಪಾತಾಳ ಕಚ್ಚಿದ ದಾರಿಗಳಾಗಿದ್ದವು. ವಾಹನಗಳು ಹಾಗಿರಲಿ ಜನ ಓಡಾಡುವುದೇ ಕಷ್ಟವಾಗಿತ್ತು.

ಜನಮನ ಗೆಲ್ಲಲು ರೋಡಿಗಿಳಿದ ರಮ್ಯಾ ಮೇಡಂ

ಜನಮನ ಗೆಲ್ಲಲು ರೋಡಿಗಿಳಿದ ರಮ್ಯಾ ಮೇಡಂ

ಆದರೆ ಇತ್ತೀಚೆಗೆ ಮೇಡಂ ರಮ್ಯಾ ಅವರು ಸುಮ್ಮನೇ ಹಾಗೇ ಈ ಊರಿಗೆ ಬಂದಿದ್ದಾರೆ. ಅಲ್ಲಿನ ರಸ್ತೆಗಳನ್ನು ಮರುಕಗೊಂಡ ರಮ್ಯಾ ಮೇಡಂ ಇಲ್ಲಾ ಏನಾದರೂ ಮಾಡಲೇಬೇಕು ಅಂತ ಅಂದ್ಕೊಂಡವರೇ ತಕ್ಷಣ ಕಾರ್ಯಾಚರಣೆಗೆ ಇಳಿದೇ ಬಿಟ್ಟಿದ್ದಾರೆ. Narayan Charitable Trustನಿಂದ ಹಣ ಪಡೆದು, ಹಳ್ಳಿಯಲ್ಲಿ ಮೊದಲು ಸಿಮೆಂಟ್ ರಸ್ತೆ ನಿರ್ಮಾಣ ಮಾಡಿ ಎಂದು ಕೆಲಸದಾಳುಗಳಿಗೆ ಆಜ್ಞಾಪಿಸಿಯೇ ಬಿಟ್ಟರು.

ಕರಡಿ ಕೊಪ್ಪಲು ಗ್ರಾಮದ ದಿಕ್ಕು ದೆಸೆಯೇ ಬದಲಾಗಿದೆ

ಕರಡಿ ಕೊಪ್ಪಲು ಗ್ರಾಮದ ದಿಕ್ಕು ದೆಸೆಯೇ ಬದಲಾಗಿದೆ

ನೋಡನೋಡುತ್ತಿದ್ದಂತೆ ಕರಡಿ ಕೊಪ್ಪಲು ಗ್ರಾಮದ ದಿಕ್ಕು ದೆಸೆಯೇ ಬದಲಾಗಿಹೋಯಿತು. ಫಳಫಳ ಹೊಳೆಯುವ ರಸ್ತೆಗಳು ಗ್ರಾಮದಲ್ಲಿ ಎದ್ದು ಕಾಣತೊಡಗಿತು. ಗ್ರಾಮದಲ್ಲಿ ವಾಸಿಸುವ ಸುಮಾರು 600 ಜನ ಹೊಸ ಸಿಮೆಂಟ್ ರಸ್ತೆಗಳ ಮೇಲೆ ನಲಿದಾಡುತ್ತಾ, ರಮ್ಯಾಗೆ ಜೈ ಜೈ ಜೈ ಎಂದು ನೂರು ಬಾರಿ ಜೈಕಾರ ಹಾಕಿದ್ದಾರೆ. ಅದನ್ನು ಕಂಡ ರಮ್ಯಾ ನಿಂತಲ್ಲೇ ಕಣ್ಣೀರಾಗಿ ಅಪ್ಪನಿಗೆ ಒಂದು ಥ್ಯಾಂಕ್ಸ್ ಹೇಳಿದ್ದಾರೆ.

ಹೊಸ ವರ್ಷಕ್ಕೆ ನಮ್ಮ ಹಳ್ಳಿಯ ಜನಕ್ಕೆ ಪುಟ್ಟ ಗಿಫ್ಟ್

ಹೊಸ ವರ್ಷಕ್ಕೆ ನಮ್ಮ ಹಳ್ಳಿಯ ಜನಕ್ಕೆ ಪುಟ್ಟ ಗಿಫ್ಟ್

'ಇದು ಹೊಸ ವರ್ಷಕ್ಕೆ ನನ್ನ ಕಡೆಯಿಂದ ನಮ್ಮ ಹಳ್ಳಿಯ ಜನಕ್ಕೆ ಪುಟ್ಟ ಗಿಫ್ಟ್' ಎಂದು ಮೇಡಂ ರಮ್ಯಾ ಹೇಳಿದ್ದಾರೆ. ರಮ್ಯಾ ಅವರನ್ನು ಸದ್ಯದಲ್ಲೇ ಚಿಕ್ಕದಾಗಿ ಸನ್ಮಾನಿಸಿ, ಸಂಭ್ರಮಿಸಲು ಸಜ್ಜಾಗಿದ್ದಾರೆ ಎಂದು ರಮ್ಯಾರ ಆಪ್ತ ಸಹಾಯಕಿ ಕನ್ನಿಕಾ ತಿಳಿಸಿದ್ದಾರೆ.

ಸಾಧನೆಯ ಸಂತೃಪ್ತಿಯೊಂದಿಗೆ ಕಣ್ಮಿಟಿಕಿಸಿದ ರಮ್ಯಾ

ಸಾಧನೆಯ ಸಂತೃಪ್ತಿಯೊಂದಿಗೆ ಕಣ್ಮಿಟಿಕಿಸಿದ ರಮ್ಯಾ

ಮುಖ್ಯವಾಗಿ ರಸ್ತೆಗಳು ರೆಡಿಯಾಗಿವೆ. ಮುಂದೆ ಒಂದೊಂದಾಗಿ ಎಲ್ಲ ಕೆಲಸಗಳನ್ನೂ 'ಕೈ'ಗೆತ್ತಿಕೊಳ್ಳುವೆ. ಮಾಡಬೇಕದ್ದು ಇನ್ನೂ ಬೇಕಷ್ಟಿದೆ ಎಂದು ಸಾಧನೆಯ ಸಂತೃಪ್ತಿಯೊಂದಿಗೆ ಕಣ್ಮಿಟಿಕಿಸಿದರು.

ಕರಡಿ ಕೊಪ್ಪಲು ಗ್ರಾಮಕ್ಕೆ ರಮ್ಯಾ ಭಾರಿ ಕೊಡುಗೆ

ಕರಡಿ ಕೊಪ್ಪಲು ಗ್ರಾಮಕ್ಕೆ ರಮ್ಯಾ ಭಾರಿ ಕೊಡುಗೆ

ಕರಡಿ ಕೊಪ್ಪಲು ಗ್ರಾಮದುದ್ದಕ್ಕೂ ಸಿಮೆಂಟ್ ರಸ್ತೆಗಳಲ್ಲಿ ಓಡಾಡುವುದೇ ದೊಡ್ಡ ಭಾಗ್ಯ. ಇದು ರಮ್ಯಾ ಕೊಡುಗೆ.

ಕರಡಿ ಕೊಪ್ಪಲು ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕೆ ಸ್ಥಳೀಯ

ಕರಡಿ ಕೊಪ್ಪಲು ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕೆ ಸ್ಥಳೀಯ

ರಮ್ಯಾ ಅವರ ಸಾಕು ತಂದೆ ನಾರಾಯಣ ಅವರ ಟ್ರಸ್ಟ್ ವತಿಯಿಂದ ಕೈಗೆತ್ತಿಕೊಳ್ಳಲಾಗಿದ್ದ ಕರಡಿ ಕೊಪ್ಪಲು ಗ್ರಾಮದಲ್ಲಿನ ರಸ್ತೆ ನಿರ್ಮಾಣಕ್ಕೆ ಸ್ಥಳೀಯ ಕಾರ್ಮಿಕರನ್ನು ಹೆಚ್ಚಾಗಿ ಬಳಸಿಕೊಳ್ಳಲಾಗಿದೆ.

ಕರಡಿ ಕೊಪ್ಪಲು ಗ್ರಾಮದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ

ಕರಡಿ ಕೊಪ್ಪಲು ಗ್ರಾಮದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ

ಮಂಡ್ಯ ಸಂಸದೆ, ನಟಿ ರಮ್ಯಾ ಅವರು ತಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕರಡಿ ಕೊಪ್ಪಲು ಗ್ರಾಮದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ ಮಾಡುವುದರ ಜತೆಗೆ ಗ್ರಾಮದ ಸರ್ವತೋಮುಖ ಪ್ರಗತಿಗೂ ಯೋಜನೆಗಳನ್ನು ಕೈಗೊಂಡಿದ್ದಾರೆ.

ಕರಡಿ ಕೊಪ್ಪಲು ಗ್ರಾಮದಲ್ಲಿ ಜಗಲಿ ರಿಪೇರಿಯೂ ಆಯ್ತು

ಕರಡಿ ಕೊಪ್ಪಲು ಗ್ರಾಮದಲ್ಲಿ ಜಗಲಿ ರಿಪೇರಿಯೂ ಆಯ್ತು

ಕರಡಿ ಕೊಪ್ಪಲು ಗ್ರಾಮದಲ್ಲಿ ಸಂಸದೆ ರಮ್ಯಾ ರಸ್ತೆ ರಿಪೇರಿಗೆ ಕೈಹಾಕಿದ್ದೇ ತಡ, ಅದೇ ಹಾದಿಯಲ್ಲಿ ಮನೆಗಳ ಮುಂದಿನ ಜಗಲಿಗಳೂ ರಿಪೇರಿಯಾಗಿವೆ.

ಕರಡಿ ಕೊಪ್ಪಲು ಗ್ರಾಮದಲ್ಲಿ ಮನೆ ಮನೆಗೂ ರಮ್ಯಾ ಪರಿಚಿತ

ಕರಡಿ ಕೊಪ್ಪಲು ಗ್ರಾಮದಲ್ಲಿ ಮನೆ ಮನೆಗೂ ರಮ್ಯಾ ಪರಿಚಿತ

ಕರಡಿ ಕೊಪ್ಪಲು ಗ್ರಾಮದಲ್ಲಿ ಸಂಸದೆ ರಮ್ಯಾ ಮನೆ ಮನೆಗೂ ಪರಿಚಿತ.

ಕರಡಿ ಕೊಪ್ಪಲು ಗ್ರಾಮದಲ್ಲಿ ಟ್ರ್ಯಾಕ್ಟರ್ ಬಳಿ ರಮ್ಯಾ

ಕರಡಿ ಕೊಪ್ಪಲು ಗ್ರಾಮದಲ್ಲಿ ಟ್ರ್ಯಾಕ್ಟರ್ ಬಳಿ ರಮ್ಯಾ

ಕರಡಿ ಕೊಪ್ಪಲು ಗ್ರಾಮದಲ್ಲಿ ಟ್ರ್ಯಾಕ್ಟರ್ ಬಳಿ ರಮ್ಯಾ

ಸಾಧನೆಯ ಸಂತೃಪ್ತಿಯೊಂದಿಗೆ ಕಣ್ಮಿಟಿಕಿಸಿದ ರಮ್ಯಾ

ಮುಖ್ಯವಾಗಿ ರಸ್ತೆಗಳು ರೆಡಿಯಾಗಿವೆ. ಮುಂದೆ ಒಂದೊಂದಾಗಿ ಎಲ್ಲ ಕೆಲಸಗಳನ್ನೂ 'ಕೈ'ಗೆತ್ತಿಕೊಳ್ಳುವೆ. ಮಾಡಬೇಕದ್ದು ಇನ್ನೂ ಬೇಕಷ್ಟಿದೆ ಎಂದು ಸಾಧನೆಯ ಸಂತೃಪ್ತಿಯೊಂದಿಗೆ ಕಣ್ಮಿಟಿಕಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+