ಕತ್ತಲಲ್ಲಿ ಕೆಆರ್‌ಎಸ್ ವೀಕ್ಷಿಸಿದ ಬರ ಅಧ್ಯಯನ ತಂಡ!

By: ಮಂಡ್ಯ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಏಪ್ರಿಲ್ 22 : ರಾಜ್ಯದ ಹಲವು ಪಟ್ಟಣಗಳಿಗೆ ಕುಡಿಯುವ ನೀರು ಒದಗಿಸುವ ಕೆಆರ್‍ಎಸ್ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಜನರು ಆತಂಕಗೊಂಡಿದ್ದಾರೆ. ಆದರೆ, ಬರ ಅಧ್ಯಯನಕ್ಕೆ ಬಂದ ಸಚಿವರು ಮತ್ತು ಅಧಿಕಾರಿಗಳ ತಂಡ ರಾತ್ರಿ ಜಲಾಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇದೊಂದು ಕಾಟಾಚಾರದ ಪ್ರವಾಸ ಎಂದು ಜನರು ದೂರುತ್ತಿದ್ದಾರೆ.

ಕರ್ನಾಟಕದಲ್ಲಿ ತೀವ್ರ ಬರಗಾಲ ಆವರಿಸಿದೆ. ಆದರೆ, ಆ ಬಗ್ಗೆ ತಲೆ ಕೆಡಿಸಿಕೊಳ್ಳದ ಮುಖ್ಯಮಂತ್ರಿ ಮತ್ತು ಸಚಿವರು ಇದೀಗ ದಂಡು ದಂಡಾಗಿ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಆದರೆ, ಇವರ ಭೇಟಿಯನ್ನು ಗಮನಿಸಿದರೆ ಜನತೆಯ ಹಿತದೃಷ್ಠಿಯಿಂದ ಬರ ಪೀಡಿತ ಜಿಲ್ಲೆಗಳ ಪ್ರವಾಸ ಮಾಡುತ್ತಿಲ್ಲ ಎಂಬುದು ಸಾಬೀತಾಗುತ್ತಿದೆ. [ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಲಿದೆ ಸರ್ಕಾರ]

krs

ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರ ನೇತೃತ್ವದಲ್ಲಿ ಸಚಿವರಾದ ಎಚ್.ಎಸ್. ಮಹದೇವ ಪ್ರಸಾದ್. ಎಚ್.ಸಿ. ಮಹದೇವಪ್ಪ, ದಿನೇಶ್ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್, ಶಾಸಕ ಡಿ.ಸಿ. ತಮ್ಮಣ್ಣ ಅವರು ಮಂಡ್ಯ ಜಿಲ್ಲೆಯ ವಿವಿಧ ಕಡೆ ಪ್ರವಾಸ ಮಾಡಿದ್ದಾರೆ. [ಕುಡಿಯುವ ನೀರಿಗೆ 100 ಕೋಟಿ ತುರ್ತು ಹಣ]

ಇಷ್ಟು ಮಾಡೋಕೆ ಅಷ್ಟು ದೂರದಿಂದ ಇಷ್ಟೊಂದು ಜನ ಬರಬೇಕಾಗಿತ್ತೆ? ಎಂಬುದು ಜನರ ಪ್ರಶ್ನೆ. ಇನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಅವರು ಇದುವರೆಗೆ ಜಿಲ್ಲೆಗೆ ಭೇಟಿ ನೀಡದಿದ್ದವರು. ಇದೀಗ ಬಂದು ಅಧಿಕಾರಿಗಳ ಮೇಲೆ ಹರಿಹಾಯುತ್ತಿದ್ದಾರೆ. [ಮಳೆಯಿಲ್ಲ, ಬೆಳೆಯಿಲ್ಲ, ಉತ್ತರದ ಮಂದಿ ಹೊಂಟರು ಗುಳೆ]

ರಾತ್ರಿ ಪರಿಶೀಲನೆ ನಡೆಸಿದ ತಂಡ : ಮಂಡ್ಯದ ರೈತರ ಜೀವನಾಡಿ ಮತ್ತು ಬೆಂಗಳೂರು ನಗರ ಸೇರಿದಂತೆ ವಿವಿಧ ಪಟ್ಟಣಗಳಿಗೆ ಕುಡಿಯುವ ನೀರಿನ ಆಸರೆ ನೀಡುತ್ತಿರುವ ಕೆಆರ್‍ಎಸ್ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. [ಭೀಕರ ಬರ, ಜನರ ಸುಲಿಗೆ ಮಾಡುತ್ತಿರುವ ಟ್ಯಾಂಕರ್ ಮಾಫಿಯಾ]

124.80 ಅಡಿ ಜಲಾಶಯದ ನೀರಿನ ಮಟ್ಟ 80.64 ಅಡಿಗೆ ಬಂದು ನಿಂತಿದೆ. 2013ರಲ್ಲಿ ಮೇ ಅಂತ್ಯದ ವೇಳೆ ಇದೇ ಪರಿಸ್ಥಿತಿ ತಲುಪಿದಾಗ ಚರಂಡಿ ತೆಗೆದು, ಮೋಟಾರ್ ಮೂಲಕ ನೀರನ್ನು ಎತ್ತಿ ಸರಬರಾಜು ಮಾಡಲಾಗಿತ್ತು. ಈ ಬಾರಿ ಅದಕ್ಕಿಂತ ಭೀಕರ ಪರಿಸ್ಥಿತಿ ನಿರ್ಮಾಣವಾದರೂ ಅಚ್ಚರಿ ಪಡಬೇಕಿಲ್ಲ.

tb jayachandra

ಇಂಥ ಸಂದರ್ಭದಲ್ಲಿ ಕೆ.ಆರ್.ಪೇಟೆ ತಾಲೂಕಿನಲ್ಲಿ ಕಾಟಾಚಾರಕ್ಕೆ ಬರ ವೀಕ್ಷಣೆ ಮಾಡಿದ ಬರ ಅಧ್ಯಯನ ತಂಡ ಸಂಜೆ ಸುಮಾರು 6.55ಕ್ಕೆ ಆಗಮಿಸಿ ಬರಿದಾಗಿರುವ ಜಲಾಶಯವನ್ನು ಕತ್ತಲೆಯಲ್ಲೇ ವೀಕ್ಷಿಸಿದೆ. ಬಳಿಕ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಹಿಂತಿರುಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಅವರು, 'ಮೇ ತಿಂಗಳಲ್ಲಿ ಮಳೆಯಾಗದಿದ್ದರೆ ಮಂಡ್ಯ ಜಿಲ್ಲೆಯಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಆದ್ದರಿಂದ, ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಗೆ ಮನವಿ ಮಾಡಲಾಗುತ್ತದೆ' ಎಂದು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Cabinet sub-committee on drought headed by Law minister T.B.Jayachandra visited several villages in the Mandya district on Thursday evening to get a first-hand account of the prevailing situation. All seven taluks in the district had been declared drought-hit. Team visited Krishna Raja Sagar (KRS) dam on evening.
Please Wait while comments are loading...