Mallikarjun Kharge: ಸಾಲು ಸಾಲು ಚುನಾವಣೆಯಲ್ಲಿ ಸೋಲು: ಮಹತ್ವದ ನಿರ್ಧಾರಕ್ಕೆ ಮುಂದಾದ ಮಲ್ಲಿಕಾರ್ಜುನ್ ಖರ್ಗೆ
ಕಲಬುರ್ಗಿ, ಫೆಬ್ರವರಿ 12: ಪಂಜಾಬ್, ಒಡಿಶಾ, ಹರಿಯಾಣ, ದೆಹಲಿ ಹಾಗೂ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರು ವಿಶ್ವಾಸವನ್ನ ವ್ಯಕ್ತಪಡಿಸಿದ್ದರು. ಆದರೆ, ಸಾಲು ಸಾಲು ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಕಂಡ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರು ಮಹತ್ವದ ನಿರ್ಧಾರಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಕಲಬುರಗಿಯಲ್ಲಿ ಮಾಧ್ಯಮಗಳ ಜೊತೆಗೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರು ಮಾತನಾಡಿ, ಒಡಿಶಾ ಅಧ್ಯಕ್ಷರ ಬದಲಾವಣೆ ಮಾಡಿ ಬಂದಿದ್ದಿನಿ. ಅಲ್ಲಿ ಹಿಂದುಳಿದ ವರ್ಗದವರು ಅಧ್ಯಕ್ಷರಾಗಿದ್ದಾರೆ. ಬಾಕಿ ಉಳಿದ ರಾಜ್ಯಗಳಲ್ಲೂ ಕೆಲವೇ ದಿನಗಳಲ್ಲಿ ಬದಲಾವಣೆ ಆಗುತ್ತವೆ. ಈ ಬಗ್ಗೆ ನಾನು ನಿರ್ಧಿಷ್ಟವಾಗಿ ನಾನು ಹೇಳಲು ಆಗುವುದಿಲ್ಲ. ನಾವು ಒಂದೊಂದು ರಾಜ್ಯಗಳಲ್ಲಿ ಬದಲಾವಣೆ ಮಾಡುತ್ತಿದ್ದೇವೆ, ಇನ್ನೂ ಒಂದು ಎರಡು ದಿನದಲ್ಲಿ ಮತ್ತೆ ಒಂದೆರಡು ಸ್ಟೇಟ್‌ನಲ್ಲಿ ಬದಲವಾಣೆ ಮಾಡುತ್ತೇವೆ. ಎಂಟು ದಿನದಲ್ಲಿ ಎಲ್ಲಾ ಬದಲಾವಣೆ ಮುಗಿಯುತ್ತದೆ ಎಂದು ತಿಳಿಸಿದ್ದಾರೆ.

ಈಗ ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಮೆರಿಕ ಭೇಟಿಗೆ ಅಧಿಕೃತ ಆಹ್ವಾನ ಇರಲಿಲ್ಲ. ವಿದೇಶಾಂಗ ವ್ಯವಹಾರಗಳ ಸಚಿವರಾದ ಜೈಶಂಕರ್ ಅವರು ಅಲ್ಲಿಗೆ ಹೋಗಿ ವ್ಯವಸ್ಥೆ ಮಾಡಿದ್ದಾರೆ. ಅನಂತರವೇ ಆಹ್ವಾನ ಬಂದಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನನ್ನ ಆತ್ಮೀಯ ಸ್ನೇಹಿತ ಎನ್ನುತ್ತಾರೆ. ಸ್ನೇಹಿತನಾಗಿದ್ದರೆ ಭಾರತೀಯರನ್ನು ಸರಕು ಸಾಗಿಸುವ ವಿಮಾನದಲ್ಲಿ ಕಳುಹಿಸುತ್ತಿರಲಿಲ್ಲ. ಅವರಿಗೆ ಕೊನೆಯ ಪಕ್ಷ ನಾಗರಿಕ ವಿಮಾನವನ್ನು ಮಾಡಿಕೊಡಬೇಕಿತ್ತು ಅಥವಾ ನಮ್ಮ ವಿಮಾನವು ಅಲ್ಲಿಗೆ ತಲುಪುವವರೆಗೂ ಕಾಯಬೇಕಿತ್ತು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರಿಗೆ ಸುಳ್ಳು ಹೇಳುವ ಛಾಳಿ ಇದೆ. ಟ್ರಂಪ್ ಈಗಾಗಲೇ ಹೆದರಿಸುತ್ತಿದ್ದಾರೆ. ಅವರಿಂದ ನಮ್ಮ ದೇಶಕ್ಕೆ ಒಳ್ಳೆಯದಾಗುತ್ತೆ ಅಂತ ಹೇಗೆ ಹೇಳೋದು? ನಮ್ಮ ಎಂಜಿನಿಯರ್‌ಗಳು, ವೈದ್ಯರು ಹಾಗೂ ಕಂಪ್ಯೂಟರ್ ತಜ್ಞರಿಗೆ ನಿರ್ಬಂಧ ಹೇರುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ತಿಳಿಸಿದರು.
ನಾನು ಈ ರಾಜ್ಯದವನು ಎಐಸಿಸಿ ಅಧ್ಯಕ್ಷನಾಗಿದ್ದೆನೆ. ಹೀಗಾಗಿ ನಮ್ಮ ರಾಜ್ಯದ ನಾಯಕರು ನನ್ನ ಭೇಟಿಯಾಗೋಕೆ ಬರುತ್ತಾರೆ. ನಮ್ಮ ಜೊತೆ ಆತ್ಮೀಯರಿದ್ದೋರು ಪೋನ್ ಮಾಡಿ ಬರ್ತಾರೆ.
ಬೇಡ ಅನ್ನೋಕ್ಕಾಗುತ್ತಾ..? ಅದರೆಲ್ಲೇನು ವಿಶೇಷ ಇಲ್ಲ. ರಾಜ್ಯ ಗೃಹ ಸಚಿವ ಪರಮೇಶ್ವರ, ಸತೀಶ್ ಜಾರಕಿಹೊಳಿ ಭೇಟಿ ಬಗ್ಗೆ ಗೊಂದಲ ಸೃಷ್ಟಿ ಬೇಡ. ಮಾಧ್ಯಮದವರು ಗೊಂದಲ ಸೃಷ್ಟಿ ಮಾಡಬೇಡಿ ಎಂದು ಮಲ್ಲಿಕಾರ್ಜುನ್ ಖರ್ಗೆ ಅವರು ತಿಳಿಸಿದರು.
ಇನ್ನೂ ಕೆಪಿಸಿಸಿ ಅಧ್ಯಕ್ಷ ಬದಲಾವಣೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಇವಾಗ ಮೂರು ರಾಜ್ಯ ಮಾಡಿದ್ದೆವೆ. ಇನ್ನು ಕೆಲವೇ ದಿನಗಳಲ್ಲಿ ಉಳಿದ ರಾಜ್ಯಗಳು ಮಾಡ್ತೆವೆ. ಹಂತ ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡುತ್ತೇವೆ. ಇದರಲ್ಲಿ ಉಹಾಪೋಹ ಸೃಷ್ಟಿಸಿ ಗೊಂದಲ ಸೃಷ್ಟಿ ಮಾಡಬೇಡಿ, ಬೇಡವಾದ ಗೊಂದಲ ಸೃಷ್ಟಿಸಿ ಸರ್ಕಾರವನ್ನ ಅಸ್ಥಿರಗೊಳಿಸಲು ಯತ್ನ ನಡೆಯುತ್ತಿದೆ. ಇದರಿಂದ ನಮ್ಮ ನಾಯಕರೂ ಗೊಂದಲಕ್ಕೆ ಒಳಗಾಗುತ್ತಿದ್ದಾರೆ ಎಂದು ತಿಳಿಸಿದರು.












Click it and Unblock the Notifications