ರಾಜ್ಯದಲ್ಲಿ ಡೆಂಗ್ಯೂ ಆತಂಕ; ಮಲೇರಿಯಾ ಪ್ರಕರಣಗಳು ಎಷ್ಟು ಗೊತ್ತಾ? ಮಲೇರಿಯಾ ಮುಕ್ತದತ್ತ ಗುರಿ!
ಬೆಂಗಳೂರು,ಅಕ್ಟೋಬರ್ 10: ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದ್ದು, ಬೆಂಗಳೂರುನಲ್ಲೇ 4979 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಆದರೆ, ಖುಷಿಯ ವಿಚಾರ ಎಂದರೇ ರಾಜ್ಯದಲ್ಲಿ ಮಲೇರಿಯಾ ಪ್ರಕರಣಗಳು ಸ್ಥಿರವಾಗಿ ಇಳಿಕೆ ಕಂಡಿವೆ.
ಹೌದು, ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿ ಕಳೆದ ಕೆಲವು ವರ್ಷಗಳಿಂದ ಮಲೇರಿಯಾ ಪ್ರಕರಣಗಳು ಸ್ಥಿರವಾಗಿ ಇಳಿಮುಖವಾಗಿವೆ. ರಾಜ್ಯದಲ್ಲಿ 2018 ರಲ್ಲಿ 5,289 ಪ್ರಕರಣಗಳನ್ನು ವರದಿಯಾಗಿದೆ. 2019 ಮತ್ತು 2020 ರಲ್ಲಿ, ಕ್ರಮವಾಗಿ 3,499 ಮತ್ತು 1,701 ಪ್ರಕರಣಗಳಿಗೆ ಇಳಿದಿವೆ. 2021 ರಿಂದ, ವಾರ್ಷಿಕ ಸಂಖ್ಯೆ 1,000 ಕ್ಕಿಂತ ಕಡಿಮೆಯಾಗಿದೆ. ಇನ್ನೂ 2021 ಮತ್ತು 2022 ರಲ್ಲಿ ಕ್ರಮವಾಗಿ 913 ಮತ್ತು 279 ಪ್ರಕರಣಗಳು ವರದಿಯಾಗಿವೆ.

ಈ ವರ್ಷ ಜನವರಿ ಮತ್ತು ಆಗಸ್ಟ್ ನಡುವೆ ಕೇವಲ 64 ಪ್ರಕರಣಗಳು ವರದಿಯಾಗಿವೆ. ಇದು 2022 ರ ಅನುಗುಣವಾದ ಅವಧಿಯಲ್ಲಿ ವರದಿಯಾದ 144 ರ ಅಂಕಿ ಅಂಶಕ್ಕಿಂತ ಕಡಿಮೆಯಾಗಿದೆ. ಇನ್ನೂ ದಿನೇ ದಿನೇ ರಾಜ್ಯದಲ್ಲಿ ಮಲೇರಿಯಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ 2025ರ ವೇಳೆಗೆ ರಾಜ್ಯವನ್ನು ಮಲೇರಿಯಾ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ.
ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ (ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗ ನಿಯಂತ್ರಣ ಕಾರ್ಯಕ್ರಮ) ಡಾ ಷರೀಫ್ ಮಾತನಾಡಿ, ಸುಧಾರಿತ ಕಣ್ಗಾವಲು, ವಿಶೇಷವಾಗಿ ವಲಸೆ ತಾಣಗಳು ಮತ್ತು ದೂರದ ಪ್ರದೇಶಗಳಂತಹ ಪ್ರದೇಶಗಳಲ್ಲಿ ಮಲೇರಿಯಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಲಾರ್ವಿಡಲ್ ಚಟುವಟಿಕೆಗಳ ಜೊತೆಗೆ, ಲ್ಯಾಬ್ ಅಧಿಕಾರಿಗಳಿಗೆ ಮಲೇರಿಯಾ ಮೈಕ್ರೋಸ್ಕೋಪಿಯಲ್ಲಿ ತರಬೇತಿ ನೀಡಲಾಗುತ್ತಿದೆ. ಅಲ್ಲದೇ ವಲಸೆ ಕಾರ್ಮಿಕರಿಗೆ ಮಲೇರಿಯಾವನ್ನು ಪರೀಕ್ಷಿಸಲಾಗುತ್ತಿದೆ ಎಂದು ತಿಳಿಸಿದರು.
2019 ರಿಂದ 2022 ರವರೆಗಿನ ಜಿಲ್ಲಾವಾರು ಮಾಹಿತಿ ಪ್ರಕಾರ, ರಾಜ್ಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಮಲೇರಿಯಾ ಪ್ರಕರಣಗಳ ಹಾಟ್‌ಸ್ಪಾಟ್‌ಗಳಾಗಿವೆ ಎಂದು ಗುರುತಿಸಲಾಗಿತ್ತು.
ಈ ನಾಲ್ಕು ವರ್ಷಗಳಲ್ಲಿ, ದಕ್ಷಿಣ ಕನ್ನಡವು ಅತಿ ಹೆಚ್ಚು ವಾರ್ಷಿಕ ಪ್ರಕರಣಗಳನ್ನು 58% ರಿಂದ 82% ವರೆಗೆ ಹೊಂದಿದೆ. ನಂತರದ ಸ್ಥಾನದಲ್ಲಿ ಉಡುಪಿ, ವಾರ್ಷಿಕ ಪ್ರಕರಣಗಳ ಸಂಖ್ಯೆಯಲ್ಲಿ ಶೇ.4-12ರಷ್ಟು ದಾಖಲಾಗಿದೆ. ಈ ಎರಡು ಜಿಲ್ಲೆಗಳನ್ನು ಹೊರತುಪಡಿಸಿ, 2022 ರಲ್ಲಿ 10 ಅಥವಾ ಅದಕ್ಕಿಂತ ಕಡಿಮೆ ಪ್ರಕರಣಗಳು ಕಂಡು ಬಂದಿವೆ.
ಇನ್ನೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಅಧಿಕಾರಿಯೊಬ್ಬರು, ಮಲೇರಿಯಾವನ್ನು ಉಂಟುಮಾಡುವ ಅನಾಫಿಲಿಸ್ ಸೊಳ್ಳೆಗಳು ಸಾಮಾನ್ಯವಾಗಿ ಕೃಷಿ ಭೂಮಿಯಂತಹ ಕೊಳಕು ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ, ಆದ್ದರಿಂದ ಅವು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಹರಡುತ್ತವೆ ಎಂದು ತಿಳಿಸಿದ್ದಾರೆ.
-
ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಕರಿದ ತಿಂಡಿ, ಟೀ-ಕಾಫಿ ಬ್ಯಾನ್: ಸಿರಿಧಾನ್ಯಗಳಿಗೆ ಆದ್ಯತೆ ನೀಡುವಂತೆ ಆರೋಗ್ಯ ಇಲಾಖೆ ಸೂಚನೆ -
Buttermilk Summer Benefits: ಪ್ರತಿದಿನ ಮಜ್ಜಿಗೆ ಕುಡಿಯುವವರು ತಪ್ಪದೇ ತಿಳಿದುಕೊಳ್ಳಬೇಕಾದ ವಿಷಯಗಳು -
Summer Heat Alert: ಮಕ್ಕಳ ಆರೋಗ್ಯ ಕಾಪಾಡಲು ಪೋಷಕರಿಗೆ 7 ಮುಖ್ಯ ಸಲಹೆಗಳು -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು












Click it and Unblock the Notifications