Transfer: ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: 33 DYSP ಸೇರಿ ಮತ್ತಷ್ಟು ಅಧಿಕಾರಿಗಳು ವರ್ಗಾವಣೆ
ಬೆಂಗಳೂರು, ಜನವರಿ 30: ರಾಜ್ಯ ಸರ್ಕಾರ ರಾತ್ರೋರಾತ್ರಿ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿದೆ. 33 ಡಿವೈಎಸ್ಪಿಗಳು, 132 ಇನ್ಸ್ಪೆಕ್ಟರ್ಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವೂ, ಯು.ಡಿ.ಕೃಷ್ಣಕುಮಾರ್-ಡಿವೈಎಸ್ಪಿ, ಬಿಡಿಎ, ಬೆಂಗಳೂರು. ಟಿ.ಎಂ.ಶಿವಕುಮಾರ್-ಎಸಿಪಿ, ಮಡಿವಾಳ ಉಪವಿಭಾಗ. ಹೆಚ್.ಬಿ.ರಮೇಶ್ ಕುಮಾರ್-ACP, ವಿವಿ ಪುರಂ ಉಪವಿಭಾಗ. ಎಂ.ಎನ್.ನಾಗರಾಜ್-ಎಸಿಪಿ, ಸಿಸಿಬಿ ಬೆಂಗಳೂರು. ಅನುಷಾರಾಣಿ-ACP, ಡಿಸಿಆರ್ಇ, ಮೈಸೂರು ಸೇರಿದಂತೆ ಒಟ್ಟು 33 DySPಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಅನೇಕ ಅಧಿಕಾರಿಗಳ ವರ್ಗಾವಣೆಯಾಗಿದೆ. ಸಂಪಂಗಿರಾಮನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರವಿಕಿರಣ್, ರಾಮನಗರ ಕುಂಬಳಗೋಡು ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್ ಜಿ ಹೂಗಾರ್. ಕಾಟನ್ಪೇಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ನರೇಂದ್ರ ಬಾಬು, ಸಿಸಿಬಿ ಬೆಂಗಳೂರು ಇನ್ಸ್ಪೆಕ್ಟರ್ ಕೆ.ಲಕ್ಷ್ಮೀ ನಾರಾಯಣ್, ಹಲಸೂರು ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಂತೋಷ್ ಕೆ, ಜಯನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ದೀಪಕ್ ಆರ್ ಸೇರಿ ಒಟ್ಟು 132 ಇನ್ಸ್ಪೆಕ್ಟರ್ಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.












Click it and Unblock the Notifications